Neem Leaves Benefits: ಗುಣದಲ್ಲಿ ಕಹಿಯಿದ್ದರೂ ಸರ್ವರೋಗಕ್ಕೂ ಕಲ್ಪವೃಕ್ಷ ಬೇವಿನ ಎಲೆಗಳು

ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು (Neem) ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು.ಆರೋಗ್ಯ (Health) ರಕ್ಷಣೆಯಂತೆ ಪರಿಸರ ಸಂರಕ್ಷಣೆ ಇಂದು ದೊಡ್ಡ ಸವಾಲಾಗಿ ಪರಿಣಿಮಿಸಿದೆ. ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು (Headache), ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ನೋವು (Pain) ನಿವಾರಣೆಯಾಗಬೇಕೆಂಬ ಕಾರಣಕ್ಕೆ ಮಾರುಕಟ್ಟೆ (Market) ಯಲ್ಲಿ ಸಿಗುವ ನೋವು ನಿವಾರಕ ಮಾತ್ರೆಗಳ ಮೊರೆ ಹೋಗ್ತಾರೆ ಜನರು. ಮಾತ್ರೆ ಬದಲು ಮನೆ ಮದ್ದಿನ ಮೂಲಕವೇ ಎಲ್ಲ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

  ಬೇವಿನ ಎಲೆಯಲ್ಲಿ ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಪ್ರಮಾಣವು ತುಂಬಾ ಹೆಚ್ಚಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತಗಳ ವಿರುದ್ಧ ದೇಹವನ್ನು ರಕ್ಷಿಸುವ ಶಕ್ತಿ ಇದಕ್ಕಿದೆ.

  ಗುಣದಿಂದ ಬೇವು ಕಲ್ಪವೃಕ್ಷ 

  ದೈವಿಕ ಕಾರ್ಯಗಳೇ ಆಗಲಿ, ವೈದ್ಯಕೀಯ ಕಾರ್ಯಗಳೇ ಬೇವು ಮುಂದಿರುತ್ತದೆ. ವೇದ ಸಾಹಿತ್ಯದಲ್ಲಿ ಬಹುವಾಗಿ ಉಲ್ಲೇಕಿತವಾಗಿರುವ ಬೇವಿನ ಮರದ ಪ್ರತಿ ಭಾಗಕೂಡ ಉಪಯೋಗಕಾರಿ. ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ ! ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಪಾರಮಾರ್ಥಿಕ ವಿಷಯಗಳ ಸಧಾರಣೆಯಲ್ಲಿ ಬೇವು ಆದ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು. ಬೇವು ಪರಿಸರವನ್ನು ನಿರ್ಮಲವಾಗಿಟ್ಟು ಶುದ್ಧ ಗಾಳಿಯನ್ನು ಕಲ್ಪಿಸುತ್ತದೆ. ಬೇವು ಕಹಿಯಾದದರೂ ಉಪಯೋಗದ ಕಾರಣದಿಂದ ಕಲ್ಪವೃಕ್ಷವೇ ಸರಿ.

  ಇದನ್ನೂ ಓದಿ: Coriander Seeds: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು -ಕೊತ್ತಂಬರಿ ಬೀಜದ ಪ್ರಯೋಜನಗಳೆಷ್ಟು ನೋಡಿ

  ಬೇವಿನ ಎಲೆ ಎಲ್ಲರ ಮನೆಯಲ್ಲೂ ಇರುತ್ತದೆ. ಬೇವಿನ ಎಲೆ ಬಳಕೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈ ಎಲೆಯಲ್ಲಿ ಎಲ್ಲ ನೋವುಗಳನ್ನು ನಿವಾರಿಸುವ ಶಕ್ತಿಯಿದೆ. ನೋವಿನ ಔಷಧಿ ತಯಾರಿಸುವ ವಿಧಾನಕ್ಕೆ ಬೇಕಾಗುವ ವಸ್ತು. ಮೂರು ಬೇವಿನ ಎಲೆ, 2 ನಿಂಬು, ಅರ್ಧ ಲೀಟರ್ ನೀರು. ಒಂದು ಪಾತ್ರೆಗೆ ಮೂರು ಬೇವಿನ ಎಲೆ ಹಾಗೂ ನಿಂಬೆ ಹಣ್ಣನ್ನು ಕತ್ತರಿಸಿ. ಅರ್ಧ ಲೀಟರ್ ನೀರಿನಲ್ಲಿ ಬೇವಿನ ಎಲೆ ಹಾಗೂ ನಿಂಬೆ ಹಣ್ಣನ್ನು ಹಾಕಿ ಕುದಿಸಿ. ನೀರು ತಣ್ಣಗಾದ ಮೇಲೆ ಅದನ್ನು ಕುಡಿಯಿರಿ. ಉರಿಯೂತ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿ ಇದಕ್ಕಿದೆ.

  ದಾಲ್ಚಿನಿ, ಲವಂಗದ ಜೊತೆ ಬೇವಿನ ಎಲೆಯನ್ನು ಹಾಕಿ ಲೇಪ ಮಾಡಿ ನೋವಾದ ಜಾಗಕ್ಕೆ ಹಚ್ಚಿಕೊಳ್ಳಿ. ಇದ್ರಿಂದ ನೋವು ನಿವಾರಣೆಯಾಗುತ್ತದೆ.

  ಹಲವು ರೋಗಗಳಿಗೆ ಮದ್ದು ಬೇವು 

  ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು.ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕಿಮಿನಾಶಕ ಗುಣವಿದೆ. ಎಳೆಯ ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.

  ಬೇವಿನ ಮರಗಳ ಮೇಲಿಂದ ಬೀಸುವಗಾಳಿಯು ಬಿಸಿಲಿನ ತಾಪಂದಿಂದ ಬಳಲಿದ ದೇಹಕ್ಕೆ ತಂಪು ನೀಡುತ್ತದೆ. ಇದು ಆರೋಗ್ಯಕರ ಕೂಡ ಹೌದು. ಕಡಿಮೆ ಮಳೆ ಬೀಲುವ ಮತ್ತು ಬಿಸಿಲಿನ ತಾಪ ಅಧಿವಾಗಿರುವ ಪ್ರದೇಶದಲ್ಲಿ ಬೇವಿನ ಮರ ಹುಸುಸಾಗಿ ಬೆಳೆಯುತ್ತವೆ. ಇಂದು ಪ್ರಕೃತಿ ವಿಶೇಷ.

  ಇದನ್ನೂ ಓದಿ: Testosterone Level: ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಲು, ಫಲವತ್ತತೆ ಮಟ್ಟ ಕಾಪಾಡಲು ಇದನ್ನು ಸೇವಿಸಿ!

  ತ್ವಚೆಗೆ ಲಭಿಸುವ ಪ್ರಯೋಜನಗಳು

  ಬೇವಿನ ಎಲೆಗಳಲ್ಲಿ ಪ್ರಬಲ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿವೆ. ಇದು ಸೋಂಕುಗಳು, ಉರಿಯೂತ ಮತ್ತು ಯಾವುದೇ ರೀತಿಯ ಚರ್ಮದ ಸಮಸ್ಯೆಗಳಿಗೆ ಅದ್ಭುತವಾದ ಶಮನ ನೀಡುತ್ತದೆ. ಕೀಟಗಳ ಕಡಿತ, ತುರಿಕೆ, ಎಕ್ಸಿಮಾ, ಹುಳಕಡ್ಡಿ ಮತ್ತು ಕೆಲವು ಸೌಮ್ಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬೇವಿನ ಎಲೆಗಳು ಮತ್ತು ಅರಿಶಿನ ಅರೆದ ಲೇಪವನ್ನು ಬಳಸಬಹುದಾದರೂ, ಎಲೆಗಳನ್ನು ಅಗಿಯುವುದರಿಂದ ನಿಮಗೆ ಹೆಚ್ಚಿನ ಪೋಷಣೆ, ಶುದ್ಧೀಕರಿಸಿದ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು ನೀಡುತ್ತದೆ.
  Published by:Swathi Nayak
  First published: