Brahmi Benefits: ಹಲವು ಕಾಯಿಲೆಗಳಿಗೆ ಬ್ರಾಹ್ಮಿ ಸುಲಭ ಮದ್ದು, ಇದು ನಿಮಗೆ ತಿಳಿದಿರಲಿ

ಭಾರತದಲ್ಲಿ ವಿಶೇಷವಾಗಿ ಸಿಗುವಂತಹ ಒಂದೆಲಗ ಎನ್ನುವ ತುಂಬಾ ಸಣ್ಣ ಗಿಡಮೂಲಿಕೆಯು ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ ವಿಶೇಷವಾಗಿ ಸಿಗುವಂತಹ ಒಂದೆಲಗ (Brahmi)  ಎನ್ನುವ ತುಂಬಾ ಸಣ್ಣ ಗಿಡಮೂಲಿಕೆಯು ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು. ಇದನ್ನು ತರಕಾರಿ (Vegetable) ಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಆರೋಗ್ಯ(Health) ದಿಂದ ಹಿಡಿದು, ಚರ್ಮ ಮತ್ತು ಕೂದಲಿನ ಚಿಕಿತ್ಸೆಗೆ ಲಕ್ಷಾಂತರ ಜನರು ಆಯುರ್ವೇ (Ayurveda) ದವನ್ನು ನಂಬುತ್ತಾರೆ. ವಿಶೇಷವಾಗಿ ಕೂದಲಿನ ಬಗ್ಗೆ ಮಾತನಾಡುವುದಾದರೆ, ಆಯುರ್ವೇದವು ಅವುಗಳನ್ನು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಇವುಗಳಲ್ಲಿ ಒಂದು ಬ್ರಾಹ್ಮಿಯ ಬಳಕೆ.

    ಕೂದಲು ಉದುರುವಿಕೆ ಕಡಿಮೆ ಮಾಡುವುದು

    ಬ್ರಾಹ್ಮಿ ಎಣ್ಣೆಯು ಒಣ ನೆತ್ತಿಯನ್ನು ತೇವಾಂಶವನ್ನು ಒದಗಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ನೆತ್ತಿಯನ್ನು ಬ್ಯಾಕ್ಟೀರಿಯಾಗಳಿಂದ ಕಾಪಾಡುವುದು ಮಾತ್ರವಲ್ಲದೇ, ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ. ಆದ್ದರಿಂದ ಕೂದಲುರುವಿಕೆ ಸಮಸ್ಯೆ ಇರುವವರು, ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಪ್ರಯೋಜನಕಾರಿಯಾಗಲಿದೆ.

    ತಲೆಹೊಟ್ಟು ನಿವಾರಣೆ

    ಬ್ರಾಹ್ಮಿಯ ಬಳಕೆಯು ತಲೆಹೊಟ್ಟು ಅಥವಾ ಡ್ಯಾಂಡ್ರಫ್ ಸಮಸಗಯೆಗೆ ತುಂಬಾ ಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ತಲೆಹೊಟ್ಟು ಸಮಸ್ಯೆಯು ಸಾಕಷ್ಟು ನಿವಾರಣೆಯಾಗುವುದು.

    ಇದನ್ನೂ ಓದಿ: Fennel Seed Benefits: ಘಮ ಘಮಿಸೋ ಸೋಂಪು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಆಯ್ಕೆ, ಮಿಸ್ ಮಾಡಬೇಡಿ

    ಚರ್ಮಕ್ಕೆ ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು

    ವಯಸ್ಸಾಗುವ ಚರ್ಮಕ್ಕೆ ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು. ಈ ಗಿಡಮೂಲಿಕೆಯು ಕಾಲಜನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ವಯಸ್ಸಾಗುವ ಚರ್ಮ, ನೆರಿಗೆ ಮತ್ತು ಗೆರೆಗಳನ್ನು ನಿವಾರಿಸುವುದು. ಕಾಲಜನ್ ಉತ್ಪತ್ತಿಯು ಕಡಿಮೆಯಾದರೆ ಅದರಿಂದ ನೆರಿಗೆ, ವಯಸ್ಸಾಗುವಾಗ ಮೂಡುವ ಗೆರೆಗಳು ಮೂಡುವುದು. ಒಂದೆಲಗ ಕಾಲಜನ್ ಉತ್ಪತ್ತಿ ಹೆಚ್ಚಿಸುವ ಕಾರಣದಿಂದಾಗಿ ಇದನ್ನು ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಗಳಲ್ಲಿ ಬಳಸುವರು.

    ಸೆಲ್ಯೂಲೈಟ್ ವಿರುದ್ಧ ಹೋರಾಡುವುದು

    ಸೆಲ್ಯೂಲೈಟ್ ವಿರುದ್ಧ ಹೋರಾಡುವುದು ಒಂದೆಲಗ ಚರ್ಮದಲ್ಲಿ ಸೆಲ್ಯೂಲೈಟ್ ವಿರುದ್ಧ ಹೋರಾಡಲು ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಸೆಲ್ಯೂಲೈಟ್ ಬೊಕ್ಕೆ, ಮೊಡವೆ ಉಂಟು ಮಾಡುವುದು. ಸೆಲ್ಯೂಲೈಟ್ ಕೈಯ ಮೇಲ್ಭಾಗ, ತೊಡೆ ಹಾಗೂ ಪೃಷ್ಠದದಲ್ಲಿ ಕಾಣಿಸಿಕೊಳ್ಳುವುದು. ಒಂದೆಲೆಗ ಈ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಉರಿಯೂತ ಕಡಿಮೆ ಮಾಡುವುದು.

    ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್

    ಸರಿಯಾಗಿ ನಿದ್ದೆ ಬರದಿದ್ದರೆ ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ ನಿದ್ರಾರಾಹಿತ್ಯದ ಕಾರಣ ಮನೋವಿಕಲ್ಪ, ಖಿನ್ನತೆ, ಒತ್ತಡ ಮೊದಲಾದವುಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಅಷ್ಟೇ ಅಲ್ಲ, ಕೆಲವು ಮಕ್ಕಳು ಅಗತ್ಯಕ್ಕಿಂತಲೂ ಹೆಚ್ಚು ಚುರುಕಾಗಿರುವುದು ಅಪಾಯಕ್ಕೆ ಎದುರಾಗ ಬಹುದಾದುದರಿಂದ ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯ.

    ಇದನ್ನೂ ಓದಿ: Ginger Side Effects: ಶುಂಠಿಯ ಅತಿಯಾದ ಸೇವನೆಯಿಂದ ಏನಾಗುತ್ತದೆ ಗೊತ್ತಾ? ಒಳ್ಳೆಯದು ಎಂದು ತಿನ್ನುವ ಮೊದಲು ಇದನ್ನೊಮ್ಮೆ ಓದಿ

    ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ನಿವಾರಿಸುವುದು

    ಒಂದೆಲಗದ ಆರೋಗ್ಯ ಲಾಭಗಳು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ನಿವಾರಿಸುವುದು ಈ ಗಿಡಮೂಲಿಕೆಯನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದು. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿಗೆ ಇದನ್ನು ಬಳಸಲಾಗುವುದು.
    Published by:Swathi Nayak
    First published: