Guava Fruit Benefit: ಸೀಬೆ ಹಣ್ಣಿನಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿವೆ ನೀವೇ ಓದಿ ನೋಡಿ

 ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸೂಪರ್‌ ಫುಡ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯ (Doctor) ರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು(Guava)  ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣು ಸಾಮಾನ್ಯವಾಗಿ ಒಣ ಉಷ್ಣಾಂಶ ( Dry weather) ವಿರುವ ಹಾಗೂ ತಂಪು ಪ್ರದೇಶ (Cold Weather) ಗಳಲ್ಲಿ ಬೆಳೆಯುತ್ತದೆ. ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸೂಪರ್‌ ಫುಡ್ ಆಗಿದೆ. ಇದರ ಸಿಪ್ಪೆ, ತಿರುಳು, ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಇನ್ನು ಇದರ ಎಲೆಯನ್ನು ಕೂಡ ಮನೆಮದ್ದಾಗಿ ಬಳಸುತ್ತಾರೆ ಇಲ್ಲಿ ಸೀಬೆಹಣ್ಣಿನಲ್ಲಿರುವ ಅದ್ಭುತ ಆರೋಗ್ಯ (Health) ಕರ ಗುಣಗಳ ಬಗ್ಗೆ ಹೇಳಲಾಗಿದೆ ನೋಡಿ:

     ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು

    ಸೀಬೆಕಾಯಿಯನ್ನು ಕೆಲವರು ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಅದನ್ನು ಸಿಪ್ಪೆ ಸಹಿತ ತಿಂದರೆ ಹೆಚ್ಚು ಆರೋಗ್ಯಕರ. ಇದನ್ನು ಹಲ್ಲಿನಿಂದ ಕಚ್ಚಿ ತಿಂದರೆ ಸೀಬೆ ಕಾಯಿಯನ್ನು ಹಲ್ಲಿನಿಂದ ಕಚ್ಚಿ ತಿಂದರೆ ದಂತಕ್ಷಯ ಬಾಧೆ ಕಾಣಿಸುವುದಿಲ್ಲ. ಆದ್ದರಿಂದ ಹಲ್ಲುಗಳ ಆರೋಗ್ಯಕ್ಕೆ ಸಿಬೆಕಾಯಿ ತಿನ್ನಿ.

    ಇದನ್ನೂ ಓದಿ: Dates Benefits: ದಿನಕ್ಕೊಂದು ಖರ್ಜೂರ ತಿಂದ್ರೆ ಮೂಳೆ ಆರೋಗ್ಯಕ್ಕೆ ಒಳ್ಳೆಯದಂತೆ

    ಸೀಬೆಕಾಯಿ ಚರ್ಮದ ಕಾಂತಿಗೆ ತುಂಬಾ ಒಳ್ಳೆಯದು

    ಸೀಬೆಕಾಯಿಯಲ್ಲಿ ಅಗತ್ಯವಾದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ನಾರಿನಂಶ, ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಎ, ಬಿ ಮತ್ತು ಸಿ ಎಲ್ಲವೂ ಇರುವುದರಿಂದ ತ್ವಚೆ ರಕ್ಷಣೆಯನ್ನು ಮಾಡುತ್ತದೆ. ದಿನಾ ಒಂದು ಸೀಬೆಕಾಯಿ ತಿಂದು ನೋಡಿ, ನಿಮ್ಮ ತ್ವಚೆಯಲ್ಲಿ ಅಕಾಲಿಕ ನೆರಿಗೆ ಸಮಸ್ಯೆ ಕಾಣಿಸುವುದೇ ಇಲ್ಲ. ಇನ್ನು ಇದನ್ನು ತಿನ್ನುವ ಮೂಲಕ ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ.

    ಇದನ್ನೂ ಓದಿ: Cooking Oil: ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

    ರೋಗ ನಿರೋಧಕ ಶಕ್ತಿ ಹೆಚ್ಚುವುದು

    ಕಿತ್ತಳೆ ಹಣ್ಣಿಗಿಂತ ಅತಿ ಹೆಚ್ಚು ವಿಟಮಿನ್‌ ಸಿ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಅಲ್ಜೈಮರ್ಸ್(ಮರೆವಿನ ಕಾಯಿಲೆ), ಸಂಧಿವಾತ ಹಾಗೂ ಕಣ್ಣಿನ ಪೂರೆಯುಂಟಾಗುವಂತಹ ಕಾಯಿಲೆಗಳನ್ನು ದೂರವಾಗಿಸುತ್ತದೆ.

    ಮೊಡವೆ ಸಮಸ್ಯೆ ಇಲ್ಲವಾಗುವುದು

    ಇನ್ನು ಸೀಬೆಕಾಯಿ ಎಲೆಯನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ಮುಖ ತೊಳೆದರೆ ಮುಖ ಕಾಂತಿಯುತವಾಗುವುದಲ್ಲದೆ, ಮೊಡವೆಗಳೂ ಮಾಯವಾಗುತ್ತವೆ. ಹದಿಹರೆಯದ ಪ್ರಾಯದಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗಿ ಕಮಡು ಬರುತ್ತದೆ. ಮೊಡವೆ ಬಂದರೆ ಇದು ಆತ್ಮವಿಶ್ವಾಸವನ್ನು ಕೂಡ ಕಡಿಮೆ ಮಾಡುವುದು. ಎಣ್ಣೆ ತ್ವಚೆಯವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ, ಇನ್ನು ಹಾರ್ಮೋನ್‌ಗಳ ವ್ಯತ್ಯಾಸದಿಂದ ಕೂಡ ಮೊಡವೆ ಸಮಸ್ಯೆ ಕಂಡು ಬರುವುದು. ಈ ಸಮಸ್ಯೆ ಇಲ್ಲವಾಗಿಸಲು ಸೀಬೆಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

    ಮಲಬದ್ಧತೆ ನಿವಾರಣೆ

    ಮಲಬದ್ಧತೆ ಸಮಸ್ಯೆ ಇರುವವರು ನಿಮ್ಮ ಆಹಾರ ಕ್ರಮದಲ್ಲಿ ಸೀಬೆಹಣ್ಣು ಸೇರಿಸಿ. ಸೀಬೆ ಹಣ್ಣಿನಲ್ಲಿ ಅಧಿಕವಾಗಿ ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇಷ್ಟೇ ಅಲ್ಲ, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು, ಮಂದ ದೃಷ್ಟಿ ಮತ್ತು ಸಂಧಿವಾತ ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿ.

    ಸೀಬೆ ಮರದ ಎಲೆ ಕಾಮಾಲೆಗೆ ಅತ್ಯಂತ ಕಾಮಾಲೆ ಮಾಯ

    ಸೀಬೆ ಮರದ ಎಲೆ ಕಾಮಾಲೆಗೆ ಅತ್ಯಂತ ಪರಿಣಾಮಕಾರಿ. ಮೂರು ದಿನಗಳ ಕಾಲ ಸೀಬೆ ಎಲೆಯಿಂದ ಕಷಾಯ ಮಾಡಿ ಕುಡಿದರೆ ಕಾಮಾಲೆ ಮಾಯವಾಗುತ್ತದೆ. ಸೀಬೆ ಮರದ ಎಲೆಯಿಂದ ತಯಾರಿಸುವ ಔಷಧ ಯಕೃತ್ತು ಹಾನಿ ತಡೆಯುತ್ತದೆ. ಇದು ಕಾಮಾಲೆ ರೋಗಕ್ಕೆ ಅತ್ಯಂತ ಕಡಿಮೆ ಖರ್ಚಿನ ಔಷಧ ಕೂಡ ಆಗಿದೆ.
    Published by:Swathi Nayak
    First published: