Cafes In Whitefield: ವೈಟ್‌ಫೀಲ್ಡ್​ನಲ್ಲೂ ಇದೆ ಡಿಫರೆಂಟ್​ ಕೆಫೆಗಳು - ಇಲ್ಲಿಗೆ ಹೋದ್ರೆ ಪಕ್ಕಾ ಎಂಜಾಯ್ ಮಾಡ್ತೀರ

Near Me Cafes: ಇಲ್ಲಿರುವ ಕೆಲವು ಕೆಫೆಗಳು ಪಾಕೆಟ್​ ಸ್ನೇಹಿ ಮಾತ್ರವಲ್ಲದೇ, ರುಚಿಯಲ್ಲಿ ಸಹ ಅದ್ಭುತವಾಗಿದೆ. ನೀವು ಸಹ ವೈಟ್​ ಫೀಲ್ಡ್​ನಲ್ಲಿ ಬೆಸ್ಟ್​ ಕೆಫೆಗಳನ್ನು ಹುಡುಕುತ್ತಿದ್ರೆ ನಾವು ಆ ಲಿಸ್ಟ್​ ಇಲ್ಲಿ ಕೊಟ್ಟಿದ್ದೇವೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವರು ವೈಟ್‌ಫೀಲ್ಡ್‌ಗೆ (Whitefield) ಹೋಗಬೇಕು  ಎಮದರೆ ಸ್ವಲ್ಪ ಭಯಪಡುತ್ತಾರೆ. ಅನಿವಾರ್ಯವಾಗಿ ಅಲ್ಲಿಗೆ ಹೋಗುವ ಹಲವಾರು ಸನ್ನಿವೇಶಗಳು ಬರುತ್ತದೆ. ಆದರೆ ಇದು ಕೆಲವರಿಗೆ ಇಷ್ಟವಿಲ್ಲದ ಸ್ಥಳ ಎನ್ನಲಾಗುತ್ತದೆ. ಇದಕ್ಕೂ ಹಲವಾರು ಕಾರಣವಿದೆ. ಜನಜಂಗುಳಿಯಿಂದ ತುಂಬಿರುವ ಈ ದೊಡ್ಡ ಏರಿಯಾ ವಿಭಿನ್ನ ಕೂಡ. ಈ ಏರಿಯಾ ಹೆಸರನ್ನು ಕೇಳಿದ್ರೆ ಇಲ್ಲಿ ಆಹಾರಗಳು , ವಸ್ತುಗಳು ದುಬಾರಿ ಎಂಬ ಯೋಚನೆ ಬರುತ್ತದೆ. ಆದರೆ ಇಲ್ಲಿರುವ ಕೆಲವು ಕೆಫೆಗಳು (Cafes) ಪಾಕೆಟ್​ ಸ್ನೇಹಿ ಮಾತ್ರವಲ್ಲದೇ, ರುಚಿಯಲ್ಲಿ ಸಹ ಅದ್ಭುತವಾಗಿದೆ. ನೀವು ಸಹ ವೈಟ್​ ಫೀಲ್ಡ್​ನಲ್ಲಿ ಬೆಸ್ಟ್​ ಕೆಫೆಗಳನ್ನು ಹುಡುಕುತ್ತಿದ್ರೆ ನಾವು ಆ ಲಿಸ್ಟ್​ ಇಲ್ಲಿ ಕೊಟ್ಟಿದ್ದೇವೆ.  

ಕೆಫೆ ನಾಯರ್  (Cafe Noir) 

ವೈಟ್‌ಫೀಲ್ಡ್​ಗೆ ಕೆಲಸದ ನಿಮಿತ್ತ ಹೋಗಿದ್ರೆ, ಕೇಳೋದೇ ಬೇಡ. ಸುಸ್ತಾಗಿರುತ್ತದೆ. ತಲೆ ಸಿಡಿಯುತ್ತದೆ. ಇಂತಹ ಸಂದರ್ಭದಲ್ಲಿ ಶಾಂತಾ ವಾತಾವರಣ ಇರುವ ಕೆಫೆ ಸಿಕ್ರೆ ಹೇಗಿರುತ್ತ ಯೋಚನೆ ಮಾಡಿ. ಆಹಾ ಅದರ ಅನುಭವವೇ ಚೆಂದ. ಕೆಫೆ ನಾಯರ್ ನೀವು ಹೋಗಬೇಕಾದ ಒಂದು ಅದ್ಭುತ ಸ್ಥಳವಾಗಿದೆ. ಮಾಲ್‌ನಲ್ಲಿದೆ ಆದರೆ ಆಕರ್ಷಕ ಫ್ರೆಂಚ್-ಕೆಫೆಯಂತಹ ವೈಬ್‌ ನೀಡುತ್ತದೆ. ಇಲ್ಲಿ ಒಂದು ಕಪ್ ಬಿಸಿ ಕೆಫೆ ಔ ಲೈಟ್ ಅಥವಾ ಕೆಫೆ ಕ್ಯಾಪುಚಿನೊ ಕುಡಿದರೆ ನಿಮ್ಮ ಟೆನ್ಷನ್ ಮಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಬೇಸಿಗೆಯ ಸಮಯದಲ್ಲಿ ಎಸ್ಪ್ರೆಸೊ, ಐಸ್ ಕ್ರೀಂ, ಅಫೊಗಾಟೊ ಜೊತೆಗೆ ಸ್ಯಾಂಡ್‌ವಿಚ್‌ಗಳಿಂದ ಹಿಡಿದು ಪಿಜ್ಜಾಗಳು ಮತ್ತು ರುಚಿಕರವಾದ ಲೆಮನ್ ಮಫಿನ್‌ಗಳು, ಪೇನ್ ಔ ಚಾಕೊಲೇಟ್ ಮತ್ತು ಕ್ರೀಮ್ ಬ್ರೂಲಿ ಆಹಾ, ಇಲ್ಲಿನ ಸೂಪರ್ ಆಹಾರಗಳ ಲಿಸ್ಟ್ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಇಲ್ಲಿಗೆ ಒಮ್ಮೆಯಾದರು ನೀವು ಭೇಟಿ ನೀಡಲೇಬೇಕು.

ವಿಳಾಸ: ವಿಆರ್ ಬೆಂಗಳೂರು, ನೆಲ ಮಹಡಿ, ಕೃಷ್ಣರಾಜಪುರ, ಬೆಂಗಳೂರು

ಮೊಬೈಲ್ ನಂಬರ್: +918067266099

ಕುಪ್ಪ (Cuppa) 

ಸೋಮಾರಿ ವಾರಾಂತ್ಯದ ಸಂಜೆಗಳಿಗೆ ಅಥವಾ ನಿಮ್ಮ ಸ್ನೇಹಿತರ  ಜೊತೆ ಉತ್ತಮ ಸಮಯ ಕಳೆಯಲು ಇದು ಪರಿಪೂರ್ಣವಾದ ಸಮಯ ಎಂದರೆ ತಪ್ಪಾಗಲಾರದು. , ಕಪ್ಪಾದಲ್ಲಿ ಬಿಸಿ ಮತ್ತು ತಂಪು ಪಾನೀಯಗಳು, ಸ್ಯಾಂಡ್‌ವಿಚ್‌ಗಳು, ಬೈಟ್ಸ್ ಮತ್ತು ಕೇಕ್‌ಗಳನ್ನು ಒಮ್ಮೆಯಾದರೂ ಟ್ರಯ ಮಾಡಲೇಬೇಕು. ಅವರ ಲಿಚಿ ಕೊಲೊಡಾ ಮತ್ತು ಬ್ರೆಜಿಲ್ ಮೊಗಿಯಾನಾ ಕಾಫಿಯಂತಹ ಹೆಚ್ಚು ಅಸಾಂಪ್ರದಾಯಿಕ ಪಾನೀಯಗಳನ್ನು ಮಿಸ್​ ಮಾಡಬೇಡಿ. ಇದು ಪಾಕೆಟ್​ ಸ್ನೇಹಿ ಕೂಡ ಆಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಸಹ ಬೆಸ್ಟ್ ಎನ್ನಬಹುದು.

ವಿಳಾಸ: ನೆಲಮಹಡಿ, ಸಿಗ್ಮಾ ಟೆಕ್ ಪಾರ್ಕ್, ವರ್ತೂರು ಲೇಕ್ ಹತ್ತಿರ, ವರ್ತೂರು ಮುಖ್ಯ ರಸ್ತೆ, ವೈಟ್‌ಫೀಲ್ಡ್, ಬೆಂಗಳೂರು

ಮೊಬೈಲ್ ನಂಬರ್: +919739202105

ಥರ್‌ಪಪ್, ಎ ಡಾಗ್ ಕೆಫೆ (TherPup, A Dog Cafe)

ನಗರದ ಮೊದಲ ನಾಯಿ ಕೆಫೆ ಎಂದು ಪ್ರಸಿದ್ದವಾಗಿರುವ ಈ, TherPup ನಿಮ್ಮನ್ನು ಮತ್ತು ನಿಮ್ಮ ನಾಯಿಯನ್ನು ಸ್ವಾಗತಿಸುತ್ತದೆ. ನಾಯಿಮರಿಗಳಿಗೆ ಓಡಲು ಸಾಕಷ್ಟು ಸ್ಥಳಾವಕಾಶವಿದೆ ಮತ್ತು ನಿಮ್ಮೊಂದಿಗೆ ಕಾಲ ಕಳೆಯಲು ಅವರ ಸ್ವಂತ ಐದು ನಾಯಿಗಳು ಸಹ ಇದೆ. ನಾಯಿಯನ್ನು ಮನುಷ್ಯನ ಒಳ್ಲೆಯ ಸ್ನೇಹಿತ ಎನ್ನುತ್ತೇವೆಮ ಅವುಗಲ ಜೊತೆ ನಿಮ್ಮ ದಿನವನ್ನು ವಿನೋದ ಮತ್ತು ಉಲ್ಲಾಸದಲ್ಲಿ ಕಳೆಯಬಹುದು. ಪಿಜ್ಜಾಗಳು, ಸ್ಯಾಂಡ್‌ವಿಚ್‌ಗಳು ಮತ್ತು ಆರೋಗ್ಯಕರ ಡಾಗ್ಗಿ ಪ್ಲ್ಯಾಟರ್‌ಗಳು ಸಹ ಇದ್ದು, ನಿಮಗೆ ಮತ್ತು ನಿಮ್ಮ ಮುದ್ದಿನ ನಾಯಿ ಇಬ್ಬರಿಗೂ ಒಳ್ಳೆಯ ಟ್ರೀಟ್​ ಸಿಗುತ್ತದೆ.

ವಿಳಾಸ: 1269/243/113, ವೈಟ್ ರೋಸ್ ಲೇಔಟ್ ರಸ್ತೆ, ವೈಟ್‌ಫೀಲ್ಡ್, ಬೆಂಗಳೂರು

ಮೊಬೈಲ್ ನಂಬರ್: +919686520315

ಬ್ಲೂಮ್ಸ್ಬರಿ ಬೊಟಿಕ್ ಕೆಫೆ ಮತ್ತು ಆರ್ಟಿಶಿಯನ್ ಬೇಕರಿ (Bloomsbury Boutique Cafe & Artisan Bakery) 

ಈ ಹಳೆಯ ಕೆಫೆಯು ಫಿಶ್ ಎನ್ ಚಿಪ್ಸ್ ಮತ್ತು ಲೀಕ್ ಮತ್ತು ಮಶ್ರೂಮ್ ಸೂಪ್‌ನಂತಹ ರುಚಿಕರ ಆಹಾರವನ್ನು ಹೊಂದಿದ್ದು, ಕೆಲವು ಹಳೆಯ ಇಂಗ್ಲೆಂಡ್ ವೈಬ್‌ಗಳನ್ನು ನೀಡುತ್ತದೆ. ತೆರೆದ ಇಟ್ಟಿಗೆ ಗೋಡೆಗಳ ಜೊತೆಗೆ ಅದರ ಆಕರ್ಷಕ ಲಂಡನ್ ಸೌಂದರ್ಯ ಮತ್ತು ಲಂಡನ್‌ನ ಸ್ಕೈಲೈನ್, ಟವರ್ ಬ್ರಿಡ್ಜ್, ಘರ್ಕಿನ್ ಮತ್ತು ಲಂಡನ್ ಐ, ಆಹಾ ಇದರ ಬಗ್ಗೆ ವರ್ಣಿಸಲು ಸಾಧ್ಯವಿಲ್ಲ. ಸ್ನೇಹಿತರನ್ನು ಭೇಟಿಯಾಗಲು ಅಥವಾ ಉತ್ತಮ ಪುಸ್ತಕದೊಂದಿಗೆ ಹೆಚ್ಚು ಉತ್ತಮ ಸಮಯವನ್ನು ಕಳೆಯಲು ಪರಿಪೂರ್ಣ ಸ್ಥಳ ಎಂದರೆ, ಬ್ಲೂಮ್ಸ್‌ಬರಿ ಎನ್ನಬಹುದು.

ಇದನ್ನೂ ಓದಿ: ಡಿಫ್ರೆಂಟ್ ವೈಬ್ ಕೊಡುವ ಈ ಕೋರಮಂಗಲದ ಕೆಫೆಗಳಿಗೆ ಒಮ್ಮೆ ವಿಸಿಟ್ ಮಾಡಿ

ವಿಳಾಸ: ವೈಟ್​ಫೀಲ್ಡ್​, ಬೆಂಗಳೂರು

ಆರ್ಡರ್ ಮಾಡಿ: ಇಲ್ಲಿ ಕ್ಲಿಕ್ ಮಾಡಿ 

ಲಾಟ್​ ಲೈಕ್ ಕ್ರೀಪ್ಸ್ ಆ್ಯಂಡ್​ ಕೆಫೆ(Lot Like Crepes And Café) 

ಲಾಟ್ ಲೈಕ್ ಕ್ರೆಪ್ಸ್ ಮತ್ತು ಕೆಫೆಯು ಖಾರದ ಮತ್ತು ಸಿಹಿಯಾದ ಕ್ರೆಪ್‌ಗಳ ಆಯ್ಕೆಯನ್ನು ನೀಡುತ್ತದೆ. ಪ್ರಕೃತಿಯ ಸೌಂದರ್ಯದ ನಡುವೆ ಹೊರಾಂಗಣದಲ್ಲಿ ಕುಳಿತುಕೊಂಡು ಆಹಾರವನ್ನು ಸವಿಯುವುದು ಒಂದು ಅದ್ಭುತ ಅನುಭವವನ್ನು ನೀಡುತ್ತದೆ ಈ ಕೆಫೆಗೆ ಭೇಟಿ ನೀಡುವುದು ಆಹ್ಲಾದಕರವಾಗಿರುತ್ತದೆ.

ಇದನ್ನೂ ಓದಿ: ರಾಜರಾಜೇಶ್ವರಿ ನಗರದ ಕಡೆ ಹೋದ್ರೆ ಈ ರೆಸ್ಟೋರೆಂಟ್ ಗಳಿಗೆ ಹೋಗೋದು ಮಿಸ್ ಮಾಡ್ಬೇಡಿ

ವಿಳಾಸ: ಅವಲೋನ್, 5, 1ನೇ ಮುಖ್ಯ ರಸ್ತೆ, ವೈಟ್‌ಫೀಲ್ಡ್, ಬೆಂಗಳೂರು

ಮೊಬೈಲ್ ನಂಬರ್: +918553037898
Published by:Sandhya M
First published: