Chinese Restaurants Near Me: ಕೋರಮಂಗಲದ ಬಜೆಟ್​ ಫ್ರೆಂಡ್ಲಿ ಚೈನೀಸ್​ ರೆಸ್ಟೊರೆಂಟ್​ಗಳಿವು, ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ

ಕೋರಮಂಗಲದಲ್ಲಿರುವ ಕೆಲವೊಂದು ಚೈನೀಸ್ ರೆಸ್ಟೋರೆಂಟ್‌ಗಳು ಬಜೆಟ್ ಫ್ರೆಂಡ್ಲಿಯಾದ ರುಚಿಕರ ತಿನಿಸುಗಳಿಗೆ ಹೆಸರುವಾಸಿಯಾಗಿದ್ದು ಚೈನೀಸ್ ತಿನಿಸುಗಳನ್ನು ಟ್ರೈ ಮಾಡಬೇಕೆಂಬ ನಿಮ್ಮ ಚಪಲವನ್ನು ಈಡೇರಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ರೆಸ್ಟೋರೆಂಟ್‌ಗಳು ಯಾವುವು? ಅಲ್ಲಿ ದೊರೆಯುವ ಚೈನೀಸ್ ಫುಡ್‌ಗಳ ವಿ‍‍ಶೇಷತೆಗಳೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬಾಯಿಗೆ ರುಚಿಕರ ಹೊಟ್ಟೆಗೆ ಆಹ್ಲಾದಕರವಾಗಿರುವ ಆಹಾರವೆಂದೇ (Food) ಚೈನೀಸ್ ಫುಡ್ ಅನ್ನು (Chinese food) ಉಲ್ಲೇಖಿಸಲಾಗುತ್ತದೆ. ಹಾಗಾಗಿಯೇ ಇದನ್ನು ಕಂಫರ್ಟ್ ಫುಡ್ ಎಂಬುದಾಗಿಯೂ ಕರೆಯುತ್ತಾರೆ. ಬಿಸಿ ಬಿಸಿಯಾದ ಹುಳಿಮಿಶ್ರಿತ ಚಿಕನ್ ಸೂಪ್ ಅನ್ನು ಸವಿಯಬೇಕೆಂಬ ಬಯಕೆಯಾದಲ್ಲಿ ಇಲ್ಲದಿದ್ದರೆ ಚಾಪ್ಸೂಯಿ, ಗ್ರೀಸಿ ಸ್ಟಾರ್ಟರ್ಸ್, ಡಂಪ್ಲಿಂಗ್ಸ್ ಟ್ರೈ ಮಾಡಬೇಕೆಂಬ ಇಚ್ಛೆ ನಿಮ್ಮದಾಗಿದ್ದರೆ ಬೆಂಗಳೂರಿನಲ್ಲಿರುವ (Bengaluru) ಇಂಡೋ ಚೈನೀಸ್ ರೆಸ್ಟೋರೆಂಟ್‌ಗಳು (Restaurant) ಈ ಸವಿಯಾದ ತಿನಿಸುಗಳನ್ನು ನಿಮಗೆ ಉಣಬಡಿಸುತ್ತವೆ. ಕ್ಲಬ್, ಪಬ್‌ಗಳಿಂದ ಸದಾ ಗಿಜಿಗುಡುವ ಕೋರಮಂಗಲದಲ್ಲಿ (Koramangala) ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಚೈನೀಸ್ ತಿನಿಸುಗಳನ್ನು ಚಪ್ಪರಿಸಬಹುದಾಗಿದೆ.

ಹೌದು ಕೋರಮಂಗಲದಲ್ಲಿರುವ ಕೆಲವೊಂದು ಚೈನೀಸ್ ರೆಸ್ಟೋರೆಂಟ್‌ಗಳು ಬಜೆಟ್ ಫ್ರೆಂಡ್ಲಿಯಾದ ರುಚಿಕರ ತಿನಿಸುಗಳಿಗೆ ಹೆಸರುವಾಸಿಯಾಗಿದ್ದು ಚೈನೀಸ್ ತಿನಿಸುಗಳನ್ನು ಟ್ರೈ ಮಾಡಬೇಕೆಂಬ ನಿಮ್ಮ ಚಪಲವನ್ನು ಈಡೇರಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ರೆಸ್ಟೋರೆಂಟ್‌ಗಳು ಯಾವುವು? ಅಲ್ಲಿ ದೊರೆಯುವ ಚೈನೀಸ್ ಫುಡ್‌ಗಳ ವಿ‍‍ಶೇಷತೆಗಳೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಡೆಲಿಕಸಿ ಕೋರಮಂಗಲ ಬೆಂಗಳೂರು (Delicacy, Koramangala, Bengaluru):
ನಿಮಗೆ ಚೈನೀಸ್ ತಿನಿಸುಗಳನ್ನು ಸವಿಯಬೇಕೆಂಬ ಬಯಕೆ ಇದ್ದಲ್ಲಿ ಡೆಲಿಕಸಿಗೆ ಭೇಟಿ ನೀಡಬಹುದು. ದಪ್ಪನೆಯ ಮಾಂಚೋವ್ ಸೂಪ್ ಜೊತೆಗೆ ಹುನನ್ ಚಿಕನ್ ಅಂತೆಯೇ ಬಟರ್ ಗಾರ್ಲಿಕ್ ನೂಡಲ್ಸ್‌ಗಳನ್ನು ಟ್ರೈ ಮಾಡಬಹುದು. ಇದಿಷ್ಟಲ್ಲದೆ ವಾಂಟನ್ಸ್ ಅಥವಾ ಸುಗಂದಭರಿತ ರುಚಿಯಾದ ಸ್ಟಾರ್ಟರ್ಸ್‌ಗಳನ್ನು ಸವಿಯಬಹುದು. ಇನ್ನು ಕೂಡಲೇ ಸವಿಯಬಹುದಾದ ಸಣ್ಣ ಊಟ ಬೇಕು ಎಂದಾದಲ್ಲಿ ಡ್ರ್ಯಾಗನ್ ಚೋಪ್ಸಿಯನ್ನು ನೀವು ಆರಿಸಿಕೊಳ್ಳಬಹುದು. ನೀವಿಲ್ಲಿ ಮೃದುವಾದ ಗರಿಗರಿಯಾದ ನೂಡಲ್ಸ್‌ಗಳನ್ನು ಸವಿಯಬಹುದು. ಇನ್ನು ಹೋಮ್ ಡೆಲಿವರಿ ಸೇವೆ ಕೂಡ ಈ ರೆಸ್ಟೋರೆಂಟ್ ಒದಗಿಸುತ್ತದೆ.

ಇದನ್ನೂ ಓದಿ: Famous Food: ಈ ಸ್ಥಳಕ್ಕೆ ಭೇಟಿ ನೀಡಿದ್ರೆ ಅಲ್ಲಿಯ ಈ ರುಚಿಕರವಾದ ಆಹಾರವನ್ನು ಮಾತ್ರ ಸವಿಯದೆ ಬರಬೇಡಿ

ನೂಡಲ್ ಪಾಂಡ ಕೋರಮಂಗಲ ಬೆಂಗಳೂರು (Noodle Panda, Koramangala, Bengaluru):
ಪಾಂಡ-ಥೀಮ್ ಉಳ್ಳ ಒಳಾಂಗಣ ವಿನ್ಯಾಸವಿರುವ ಈ ರೆಸ್ಟೋರೆಂಟ್ ಸೆಲ್ಫ್ ಸರ್ವೀಸ್ ಸೇವೆಯನ್ನು ಒದಗಿಸುತ್ತದೆ. ಗ್ರಿಲ್ ಮಾಡಿದ ತೆರಿಯಾಕಿ ಬಾವೊ ಹಾಗೂ ಸುಯಿ ಮಯಿ ಡಿಮ್ ಸಮ್ಸ್ ಅನ್ನು ಆರಂಭದಲ್ಲಿ ಸವಿಯಬಹುದು. ಕಸ್ಟಮ್ ನೂಡಲ್ಸ್ ಬಾಕ್ಸ್‌ಗೆ ಕೂಡ ನೂಡಲ್ ಪಾಂಡ ಹೆಸರುವಾಸಿಯಾಗಿದೆ. ಇವರು ಪಾಂಡ ಶೈಲಿಯಲ್ಲಿ ಅನ್ನ ಹಾಗೂ ಸಾಕಷ್ಟು ಕರಿಯೊಂದಿಗೆ ನಿಮ್ಮನ್ನು ಸಂತೃಪ್ತಿಗೊಳಿಸುತ್ತಾರೆ. ಒರಿಯೊ ಐಸ್‌ಕ್ರೀಮ್ ಅನ್ನು ಕೊನೆಯಲ್ಲಿ ಸವಿಯಬಹುದು.

ಪೀಸ್ ರೆಸ್ಟೋರೆಂಟ್ ಬೆಂಗಳೂರು (Peace Restaurant, Bengaluru):
ಫ್ರೈ ಮಾಡಿದ ಕುರಿಮಾಂಸ, ಹುನಾನ್ ಚಿಕನ್, ಹಾಟ್ ಗಾರ್ಲಿಕ್ ಸಾಸ್‌ನೊಂದಿಗೆ ಉಣಬಡಿಸುವ ಸಣ್ಣಗೆ ಹೆಚ್ಚಿದ ಚಿಕನ್ ಅನ್ನು ಆಸ್ವಾದಿಸಲೇಬೇಕು. ಚೈನೀಸ್ ತಿನಿಸುಗಳ ಅಪ್ಪಟ ಸ್ವಾದವನ್ನು ಈ ರೆಸ್ಟೋರೆಂಟ್‌ನಲ್ಲಿ ಸವಿಯಬಹುದು. ಶೆಜ್ವಾನ್ ಪೋರ್ಕ್ ಫ್ರೈಡ್ ರೈಸ್ ಮತ್ತು ಚಿಕನ್ ಪ್ಯಾನ್ ಫ್ರೈ ನೂಡಲ್ಸ್‌ ಕೂಡ ನಿಮ್ಮ ಹೊಟ್ಟೆಯ ತಾಳಕ್ಕೆ ಸಾಥ್ ನೀಡುತ್ತವೆ. ಇನ್ನು ಸಿಹಿ ಹಾಗೂ ಹುಳಿ ಮಿಶ್ರಿತ ಸೂಪ್ ಇಲ್ಲಿನ ವಿಶೇಷತೆಯಾಗಿದೆ.

ಕಾವಾ ಕಾರ್ಪೊ ಕೋರಮಂಗಲ ಬೆಂಗಳೂರು (Khawa Karpo, Koramangala, Bengaluru):
ಈ ಪ್ರದೇಶದಲ್ಲಿ ಯಾವಾಗಲೂ ಕಾಲೇಜು ವಿದ್ಯಾರ್ಥಿಗಳ ಗುಂಪೇ ಕೂಡಿರುತ್ತದೆ. (ಜ್ಯೋತಿ ನಿವಾಸ್ ಕಾಲೇಜಿನ ಮುಂಭಾಗ) ಟಿಬೇಟನ್ ವೈಶಿಷ್ಟ್ಯವುಳ್ಳ ತಿನಿಸುಗಳಿಗೆ ಈ ರೆಸ್ಟೋರೆಂಟ್ ಖ್ಯಾತಿ ಗಳಿಸಿದ್ದರೂ ಕೆಲವೊಂದು ಚೈನೀಸ್ ತಿನಿಸುಗಳನ್ನು ಇವರು ಉಣಬಡಿಸುತ್ತಾರೆ. ನೂಡಲ್ಸ್, ಫ್ರೈಡ್‌ರೈಸ್ ಹೀಗೆ ಚೈನೀಸ್ ದೈನಂದಿನ ಖಾದ್ಯಗಳಲ್ಲದೆ ಮಂಚೂರಿ ಹಾಗೂ ಬೀಫ್ ಸ್ಟಾರ್ಟರ್ಸ್ ಅನ್ನು ನೀವು ಸವಿಯಲೇಬೇಕು.

ಚುಂಗ್ ವಾ ಕೋರಮಂಗಲ, ಬೆಂಗಳೂರು (Chung Wah, Koramangala, Bengaluru):
ಚುಂಗ್‌ವಾ ಚೈನೀಸ್ ಇಂಡಿಯನ್ ರೆಸ್ಟೋರೆಂಟ್ ಆಗಿದೆ. ಚುಂಗ್‌ವಾದ ಮೆನುವಿನಲ್ಲಿ ಯಾವಾಗಲೂ ವಿಶೇಷ ತಿನಿಸುಗಳೇ ಇದ್ದು ಹೆಚ್ಚು ಖ್ಯಾತಿ ಪಡೆದುಕೊಂಡಿರುವುದು ಕ್ರಿಸ್ಪಿ ಸ್ಪ್ರಿಂಗ್ ರೋಲ್, ಮಿಕ್ಸ್ಡ್ ಸೀಫುಡ್ ಸೂಪ್, ಬಟರ್ ಗಾರ್ಲಿಕ್ ಪ್ರಾನ್ಸ್, ಬ್ಲ್ಯಾಕ್ ಪೆಪ್ಪರ್‌ಕಾರ್ನ್‌ ಮಿಶ್ರಿತ ಕುರಿಮಾಂಸ, ಕ್ಯಾಂಟೊನಿಸ್ ಚೌಮೀನ್.

ಟಿಬೆಟಿಯನ್ ಮದರ್ಸ್ ಕಿಚನ್, ಕೋರಮಂಗಲ, ಬೆಂಗಳೂರು (Tibetan Mother's Kitchen, Koramangala, Bengaluru):
ಮನೆಯೂಟದ ಸೊಗಡನ್ನು ಉಣಬಡಿಸುವ ಈ ರೆಸ್ಟೋರೆಂಟ್ ಟಿಬೆಟಿಯನ್ ವಿಶೇಷತೆಗಳಾದ ತುಕ್ಪಾ ಮತ್ತು ಥೆಂತುಕ್, ಚೈನೀಸ್ ಡಿಲೈಟ್ಸ್ ಗಳಿಗೆ ಹೆಸರುವಾಸಿಯಾಗಿದೆ. ಪೋರ್ಕ್ ಡಿಶ್‌ಗಳಿಗೆ ಈ ರೆಸ್ಟೋರೆಂಟ್ ಖ್ಯಾತವಾಗಿದೆ. ಚೈನೀಸ್ BBQ ಪೋರ್ಕ್ ಹಾಗೂ ಶೆಜ್ವಾನ್ ಪೋರ್ಕ್ ಅನ್ನು ನೀವು ಸವಿಯಲೇಬೇಕು. ದಪ್ಪನೆಯ ಸಾಸ್ ಮಿಶ್ರಿತ ಅಮೆರಿಕನ್ ಚಾಪ್‌ ಸೂಯಿ ಇನ್ನೊಂದು ವಿಶೇಷತೆಯಾಗಿದ್ದು ಇದರೊಂದಿಗೆ ಗರಿಗರಿಯಾದ ಫ್ರೈ ಮಾಡಿದ ನೂಡಲ್ಸ್ ಸವಿಯಬಹುದು.

ಇದನ್ನೂ ಓದಿ:Breakfast Recipe: ಉದ್ದಿನ ಬೇಳೆ ಹಾಕದೇ ತುಪ್ಪದ ದೋಸೆ ಮಾಡೋದು ಎಷ್ಟು ಸುಲಭ ನೋಡಿ

ಬಾಮೇಸ್ ರೆಸ್ಟ್ರೋ ಕೆಫೆ ಕೋರಮಂಗಲ ಬೆಂಗಳೂರು (Bamey's Restro Cafe, Koramangala, Bengaluru):
ಸರಳವಾದ ಸುಂದರ ಪೋಸ್ಟರ್‌ಗಳನ್ನು ಹೊಂದಿರುವ ಈ ರೆಸ್ಟೋರೆಂಟ್ ಮನಸ್ಸಿಗೆ ಮುದ ನೀಡುವ ವಾತಾವರಣವನ್ನು ಒಳಗೊಂಡಿದೆ. ಶಾಂಘೈ ಸ್ಪ್ರಿಂಗ್ ರೋಲ್ಸ್, ಎಕ್ಸ್‌ಒ ಚಿಕನ್ ಹೀಗೆ ವೈವಿಧ್ಯಮಯ ತಿನಿಸುಗಳನ್ನು ನೀವು ಇಲ್ಲಿ ಆಸ್ವಾದಿಸಬಹುದಾಗಿದೆ. ಇನ್ನು ಇಲ್ಲಿನ ಫ್ರೈಡ್ ನೂಡಲ್ಸ್ ಇಲ್ಲವೇ ಅನ್ನವನ್ನು ಟೇಸ್ಟ್ ಮಾಡಲೇಬೇಕು. ನೀವು ಖಾರಪ್ರಿಯರು ಎಂದಾದಲ್ಲಿ ನಿಮ್ಮ ಬಾಯಿ ರುಚಿಗೆ ಈ ರೆಸ್ಟೋರೆಂಟ್ ಪರ್ಫೆಕ್ಟ್ ಎಂದೆನಿಸಿದೆ.
Published by:Ashwini Prabhu
First published: