ಆನ್​ಲೈನ್​ನಲ್ಲಿ ಗಿಳಿ ಖರೀದಿಸಲು ಹೋಗಿ 71,500 ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ!

news18
Updated:July 4, 2018, 4:11 PM IST
ಆನ್​ಲೈನ್​ನಲ್ಲಿ ಗಿಳಿ ಖರೀದಿಸಲು ಹೋಗಿ 71,500 ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ!
news18
Updated: July 4, 2018, 4:11 PM IST
-ನ್ಯೂಸ್ 18 ಕನ್ನಡ

ಆನ್​ಲೈನ್ ಶಾಪಿಂಗ್​ನಲ್ಲಿ ವಸ್ತುಗಳನ್ನು ಖರೀದಿಸಿ ಅನೇಕರು ಮೋಸ ಹೋಗಿರುವ ಸುದ್ದಿ ಕೇಳಿರ್ತೀರಿ. ಆದರೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಆನ್​ಲೈನ್​ನಲ್ಲಿ ಗಿಳಿ ಖರೀದಿಸಲು ಹೋಗಿ ಬರೋಬ್ಬರಿ 71,500 ರೂ. ಕಳೆದುಕೊಂಡಿರುವ ಅಪರೂಪದ ಘಟನೆ ನಡೆದಿದೆ. ಮೋಸಕ್ಕೆ ಒಳಗಾದ ಮಹಿಳೆಯನ್ನು ಬೆಂಗಳೂರಿನ ಸರ್ಜಾಪುರ ರಸ್ತೆ ವಿಜಯಕುಮಾರ್ ಲೇಔಟ್​​ನ ನಿವಾಸಿ ಶ್ರೀಜಾ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಆನ್​ಲೈನ್​ನಲ್ಲಿ ಗಿಳಿಗಾಗಿ ಹುಡುಕಾಡಿದ ಶ್ರೀಜಾ ಅವರಿಗೆ ಬಾಬಿ ಎಂಬ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಅಲ್ಲದೆ ಗಿಳಿ ಕೊಡುವುದಾಗಿ ತಿಳಿಸಿದ ಬಾಬಿ, ಫೇಸ್​ಬುಕ್, ವಾಟ್ಸಪ್ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.

ಆನ್​ಲೈನ್ ಮೂಲಕ ಗಿಳಿಯನ್ನು ಕಳುಹಿಸುವುದಾಗಿ ತಿಳಿಸಿದ ಆರೋಪಿ, ಜೂನ್​ 21 ಮತ್ತು 23 ದಿನಾಂಕಗಳ ಒಳಗೆ ನೆಟ್ ಬ್ಯಾಕಿಂಗ್ ಮೂಲಕ ಹಣ ಪೀಕಿಸಿಕೊಂಡಿದ್ದಾನೆ. ಎರಡು ಮೂರು ಹಂತದಲ್ಲಿ 71,500 ರೂ ಹಣ ವರ್ಗಾಯಿಸಿದರೂ ಗಿಳಿ ಮಾತ್ರ ಶ್ರೀಜಾ ಅವರ ಗೂಡು ಸೇರಿರಲಿಲ್ಲ. ಈ ಕುರಿತು ವಿಚಾರಿಸಲು ಬಾಬಿ ನಂಬರ್​ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಅಲ್ಲದೆ ವಾಟ್ಸಪ್​ನಲ್ಲಿ ಯಾವುದೇ ರಿಪ್ಲೈ ಬರದೇ ಇರುವುದರಿಂದ ಅನುಮಾನಗೊಂಡಿದ್ದಾರೆ.

ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ಶ್ರೀಜಾ ಜೂನ್​ 25 ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕ್ ಹಣ ವರ್ಗಾವಣೆ ಮತ್ತು ಫೇಸ್​ಬುಕ್​ / ವಾಟ್ಸಪ್​ ಚಾಟ್​ಗಳನ್ನು ಆಧರಿಸಿ ಕ್ರೈಂ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.​
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...