HOME » NEWS » Lifestyle » BENGALURU TECH SUMMIT WILL START FROM TODAY RH SHM

ಇಂದು ರಾಜ್ಯದ ಪ್ರತಿಷ್ಠಿತ ಬೆಂಗಳೂರು ಟೆಕ್ ಸಮ್ಮಿಟ್ 2020 ಪ್ರಾರಂಭ; ಪ್ರಧಾನಿ ಮೋದಿ ಉದ್ಘಾಟನೆ

40,000ಕ್ಕೂ ಹೆಚ್ಚು ಜನರು ವರ್ಚ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ಟೆಕ್ ಸಮ್ಮಿಟ್ ನಲ್ಲಿ ವಿಚಾರಗೋಷ್ಠಿ, ಜೈವಿಕ ಪಾಲುದಾರಿಕೆ, ಸಂಶೋಧನೆಗಳ ಮಂಡನೆ, ರಾಷ್ಟ್ರೀಯ ಹಾಗೂ ಜಾಗತಿಕ ಮೈತ್ರಿ ಮತ್ತು ರಸಪ್ರಶ್ನೆ ಕಾರ್ಯಕ್ರಮ ಇರಲಿವೆ. ಆನ್ ಲೈನ್ ಮೂಲಕ ಸಾರ್ವಜನಿಕರು ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಬಹುದಾಗಿದೆ.

news18-kannada
Updated:November 19, 2020, 7:20 AM IST
ಇಂದು ರಾಜ್ಯದ ಪ್ರತಿಷ್ಠಿತ ಬೆಂಗಳೂರು ಟೆಕ್ ಸಮ್ಮಿಟ್ 2020 ಪ್ರಾರಂಭ; ಪ್ರಧಾನಿ ಮೋದಿ ಉದ್ಘಾಟನೆ
ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮಕ್ಕೂ ಮುನ್ನ ಸಿದ್ಧತೆ ಪರಿಶೀಲಿಸಿದ ಸಚಿವ ಅಶ್ವತ್ಥ್ ನಾರಾಯಣ.
  • Share this:
ಬೆಂಗಳೂರು: ರಾಜ್ಯದ ಪ್ರತಿಷ್ಠಿತ  23ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2020 ಇಂದಿನಿಂದ ಪ್ರಾರಂಭವಾಗಲಿದೆ. ಇಂದಿನಿಂದ ನವೆಂಬರ್ 21ರವರೆಗೆ ಮೂರು ದಿನಗಳ ಕಾಲ ಟೆಕ್ ಸಮ್ಮಿಟ್  ಬೆಂಗಳೂರಿನ ಶಾಂಘ್ರಿಲಾ ಹೊಟೇಲ್​ನಲ್ಲಿ ನಡೆಯಲಿದೆ.‌ ಕೊರೋನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ವರ್ಚ್ಯುಯಲ್ ಮೂಲಕ ಟೆಕ್ ಸಮ್ಮಿಟ್ ನಡೆಯುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಟೆಕ್ ಸಮ್ಮಿಟ್ ಉದ್ಘಾಟನೆ ಮಾಡಲಿದ್ದಾರೆ.

ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ‌ 25 ಕ್ಕೂ ಹೆಚ್ಚು ದೇಶಗಳು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಷನ್ ಸೇರಿದಂತೆ ಇತರೆ ದೇಶಗಳ ಗಣ್ಯರು ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ.

ಇದನ್ನು ಓದಿ: ಜೆಪಿ ನಡ್ಡಾ-ಯಡಿಯೂರಪ್ಪ ಭೇಟಿ; 20 ನಿಮಿಷ ಚರ್ಚೆ; ಹೈಕಮಾಂಡ್ ನಿರ್ದೇಶನದ ಮೇರೆಗೆ ಮುಂದಿನ ನಿರ್ಧಾರ ಎಂದ ಸಿಎಂ

ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟ್ ಅಪ್ ಪಾಲುದಾರಿಕೆ ವಲಯಗಳಲ್ಲಿ 7 ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಟೆಕ್ ಸಮ್ಮಿಟ್ ನಲ್ಲಿ‌ ಜಾಗತಿಕ ಅವಿಷ್ಕಾರ ಮೈತ್ರಿಗೆ ಸಂಬಂಧಿಸಿದಂತೆ 15 ಅಧಿವೇಶನಗಳು ನಡೆಯಲಿವೆ. ವಿವಿಧ ದೇಶಗಳ 10ಕ್ಕೂ ಹೆಚ್ಚು ಸಚಿವರ ನಿಯೋಗ ಸಮ್ಮಿಟ್ ನಲ್ಲಿ ಭಾಗಿಯಾಗಲಿದೆ. 60 ಕ್ಕೂ ಹೆಚ್ಚು ಭಾಷಣಕಾರರು ಉಪನ್ಯಾಸ ನೀಡಲಿದ್ದಾರೆ.

500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯೋಗಗಳು ಟೆಕ್ ಸಮ್ಮಿಟ್ ನಲ್ಲಿ ಭಾಗಿಯಾಗಲಿವೆ. 100 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು, 4000ಕ್ಕೂ ಹೆಚ್ಚು ವಹಿವಾಟು ಪ್ರತಿನಿಧಿಗಳು ವರ್ಚ್ಯುಯಲ್ ಮೂಲಕ ಭಾಗವಹಿಸಲಿದ್ದಾರೆ. 40,000ಕ್ಕೂ ಹೆಚ್ಚು ಜನರು ವರ್ಚ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ಟೆಕ್ ಸಮ್ಮಿಟ್ ನಲ್ಲಿ ವಿಚಾರಗೋಷ್ಠಿ, ಜೈವಿಕ ಪಾಲುದಾರಿಕೆ, ಸಂಶೋಧನೆಗಳ ಮಂಡನೆ, ರಾಷ್ಟ್ರೀಯ ಹಾಗೂ ಜಾಗತಿಕ ಮೈತ್ರಿ ಮತ್ತು ರಸಪ್ರಶ್ನೆ ಕಾರ್ಯಕ್ರಮ ಇರಲಿವೆ. ಆನ್ ಲೈನ್ ಮೂಲಕ ಸಾರ್ವಜನಿಕರು ಟೆಕ್ ಸಮ್ಮಿಟ್ ನಲ್ಲಿ ಭಾಗವಹಿಸಬಹುದಾಗಿದೆ.
Published by: HR Ramesh
First published: November 19, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories