ಚರ್ಮದ ಹೈಡ್ರೇಶನ್ ಮತ್ತು ಮೂಳೆಯ ಸಾಂದ್ರತೆ ಪತ್ತೆ ಹಚ್ಚುವ ಪರಿಕರ ಅಭಿವೃದ್ಧಿಪಡಿಸಿದ ಬೆಂಗಳೂರು ಮೂಲದ ಸಂಸ್ಥೆ!

ಸ್ಮಾರ್ಟ್ ವಾಚ್‍ನಂತಹ ಸಾಧನ ದೇಹದ ಮೇಲಿನ ಭಾಗವನ್ನು ಸ್ಕ್ಯಾನ್ ಮಾಡಿದರೆ, ಕಾಲಿನ ಬ್ಯಾಂಡ್ ಕೆಳಗಿನ ಭಾಗವನ್ನು ಸ್ಕ್ಯಾನ್ ಮಾಡುತ್ತದೆ. ಬ್ಲೂಟೂತ್ ಮೂಲಕ ಧರಿಸಬಹುದಾದ ಸಾಧನಕ್ಕೆ ಮಾಹಿತಿ ರವಾನೆ ಮಾಡುವುದಕ್ಕೊಸ್ಕರ ಈ ಬ್ಯಾಂಡನ್ನು ವಾರಕ್ಕೆ ಎರಡು ಸಲ 10-15 ಸೆಕೆಂಡ್ ಧರಿಸಿದರೆ ಸಾಕು.

ಸ್ಮಾರ್ಟ್​ ವಾಚ್​ನಂತೆ ಕಾಣುವ ಚರ್ಮದ ಹೈಡ್ರೇಶನ್ ಮತ್ತು ಮೂಳೆಯ ಸಾಂದ್ರತೆ ಪತ್ತೆ ಹಚ್ಚುವ ಪರಿಕರ.

ಸ್ಮಾರ್ಟ್​ ವಾಚ್​ನಂತೆ ಕಾಣುವ ಚರ್ಮದ ಹೈಡ್ರೇಶನ್ ಮತ್ತು ಮೂಳೆಯ ಸಾಂದ್ರತೆ ಪತ್ತೆ ಹಚ್ಚುವ ಪರಿಕರ.

 • Share this:

  ನಿಮ್ಮ ದೇಹವನ್ನು ಸ್ಕ್ಯಾನ್ ಮಾಡುವ, ಚರ್ಮದ ಹೈಡ್ರೇಶನ್ , ಬಾಹ್ಯಕೋಶೀಯ ಮತ್ತು ಅಂತರ್ ಜೀವಕೋಶದ ನೀರು, ಮೂಳೆಯ ಸಾಂದ್ರತೆ ಮತ್ತು ಇತರ ಕೆಲವು ಅಂಶಗಳನ್ನು ತಿಳಿಸುವ, ದೇಹದಲ್ಲಿ ಧರಿಸಬಹುದಾದ ಸಾಧನವೊಂದು ತಯಾ ರಾಗಿದೆ. ಅದು ಪತ್ತೆ ಹಚ್ಚುವ ಎಲ್ಲಾ ಸಂಗತಿಗಳನ್ನು ಒಂದು ನಿರ್ದಿಷ್ಟ ಮೊಬೈಲ್ ಆ್ಯಪ್ ಮೂಲಕ ನಾವು ಪಡೆಯಬಹುದು. ಬೆಂಗಳೂರು ಮೂಲದ ಆರೋಗ್ಯ ತಂತ್ರಜ್ಞಾನ ಸ್ಟಾರ್ಟ್ ಅಪ್ ಸಂಸ್ಥೆ, ಇನ್‍ಬಯೋಜ್ ಈ ಸಾಧನದ ಒಂದು ವರ್ಕಿಂಗ್ ಮಾಡೆಲ್ ಅನ್ನು ತಯಾರಿಸಿದ್ದು, ಇಂತಹ ಸಾಧನ ತಯಾರಾ ಗಿರುವುದು ದೇಶದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಈ ಸಾಧನ ನೋಡಲು ಒಂದು ಸ್ಮಾರ್ಟ್ ವಾಚ್‍ನಂತೆ ಕಾಣುತ್ತದೆ, ಆದರೆ ಅದರ ಜೊತೆಗೆ ಒಂದು ಕಾಲಿಗೆ ಹಾಕುವ ಬ್ಯಾಂಡ್ ಕೂಡ ಇರುತ್ತದೆ.


  “ಸ್ಮಾರ್ಟ್ ವಾಚ್‍ನಂತಹ ಸಾಧನ ದೇಹದ ಮೇಲಿನ ಭಾಗವನ್ನು ಸ್ಕ್ಯಾನ್ ಮಾಡಿದರೆ, ಕಾಲಿನ ಬ್ಯಾಂಡ್ ಕೆಳಗಿನ ಭಾಗವನ್ನು ಸ್ಕ್ಯಾನ್ ಮಾಡುತ್ತದೆ. ಬ್ಲೂಟೂತ್ ಮೂಲಕ ಧರಿಸಬಹುದಾದ ಸಾಧನಕ್ಕೆ ಮಾಹಿತಿ ರವಾನೆ ಮಾಡುವುದಕ್ಕೊಸ್ಕರ ಈ ಬ್ಯಾಂಡನ್ನು ವಾರಕ್ಕೆ ಎರಡು ಸಲ 10-15 ಸೆಕೆಂಡ್ ಧರಿಸಿದರೆ ಸಾಕು” ಎಂದು ಇನ್‍ಬಯೋಜ್‍ನ ಸಹ ಸಂಸ್ಥಾಪಕ ಸೌವಿಕ್ ಮಜುಮ್‍ದಾರ್ ಹೇಳಿದ್ದಾರೆ.


  ದೆಹಲಿ ಮತ್ತು ಬೆಂಗಳೂರಿನ ಹಲವಾರು ಜಿಮ್‍ಗಳಲ್ಲಿ 150 ಜನರಿಗೆ ಈ ಸಾಧನವನ್ನು ಹಾಕಿ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿರುವ ಅವರು, “ಫಿಟ್ನೆಸ್ ಮಾತ್ರವಲ್ಲದೆ, ಈ ಸಾಧನ ಮೂತ್ರಪಿಂಡದ ಕಾಯಿಲೆ ಮತ್ತು ಡಯಾಲಿಸ್ ಪತ್ತೆ ಹಚ್ಚುವುದರೊಂದಿಗೂ ಸಂಬಂಧ ಹೊಂದಿದೆ. ಡಯಾಲಿಸಿಸ್ ರೋಗಿಗಳ ನಿರೀಕ್ಷಣೆಗಾಗಿ ನಾವು ನಗರದ ಒಂದು ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.


  ಜಿಮ್‍ಗೆ ಹೋಗುವವರ ಮಾದರಿ ಗಾತ್ರದೊಂದಿಗೆ, ಇನ್‍ಬಾಡಿ-230 ಯಂತಹ ಪ್ರಮಾಣಿತ ವ್ಯವಸ್ಥೆಗಳ ವಿರುದ್ಧ ಸಾಧನವನ್ನು ಮಾಪನಾಂಕ ಮಾಡಲಾಗಿದೆ. ನಗರ ಮೂಲದ ಆಸ್ಪತ್ರೆಯೊಂದರ ಸಹಯೋಗದಲ್ಲಿ ವೈದ್ಯಕೀಯ ಪ್ರಯೋಗಗಳು ಸದ್ಯದಲ್ಲಿಯೇ ಆರಂಭ ಆಗಲಿವೆ. “ಒಟ್ಟಾರೆ ಶೇಕಡಾ 94 ರಷ್ಟು ನಿಖರತೆ ಇದೆ. ಅದರಲ್ಲಿ ಬ್ಯಾಟರಿ ಮತ್ತು ಬ್ಲೂಟೂತ್ ಇರುವುದರಿಂದ ನಾವು ಅಗತ್ಯ ಸುಕರ್ಷಾ ಪ್ರಮಾಣಪತ್ರಗಳನ್ನು ಕೂಡ ಪಡೆದಿದ್ದೇವೆ” ಎಂದು ಹೇಳಿದ್ದಾರೆ ಮಜುಮ್‍ದಾರ್. ಇನ್‍ಬಯೋಜ್ ಭಾರತದಲ್ಲಿ ಈ ಸಾಧನದ ಪೇಟೆಂಟ್‍ಗಾಗಿ ಕೂಡ ಅರ್ಜಿ ಸಲ್ಲಿಸಿದೆ.


  ಇದನ್ನೂ ಓದಿ: ಸ್ಟ್ರಾಬೆರಿ, ಡ್ರ್ಯಾಗನ್ ಹಣ್ಣುಗಳನ್ನು ಮನೆಯಲ್ಲಿಯೇ ಬೆಳೆಸಿ: 10 ಬಗೆಯ ಹಣ್ಣುಗಳನ್ನು ಬೆಳೆಸುವ ಮಾಹಿತಿ ಇಲ್ಲಿದೆ!

  ಕಳೆದ ವರ್ಷ ಪರಿಕಲ್ಪನೆಗೊಂಡ , ಈ ಸ್ಮಾರ್ಟ್ ವಾಚ್‍ನಂತಹ ಸಾಧನ, ಮುಂದಿನ ಎರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಬಹುದು. ಅದಕ್ಕೆ ಸಂಬಂಧಪಟ್ಟಿರುವ ಮೊಬೈಲ್ ಅ್ಯಪ್ ಇನ್‍ಬಯೋಜ್ , ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‍ನಲ್ಲಿ ಈಗಾಗಲೇ ಲಭ್ಯವಿದೆ. ಈ ಸಾಧನ ಇನ್ನಷ್ಟು ಫೀಚರ್‍ಗಳೊಂದಿಗೆ ಶೀಘ್ರದಲ್ಲೇ ಅಪ್‍ಡೇಟ್ ಆಗಲಿದೆ. “ನಾವು ಬಯೋಫಿಸಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಫೀಚರ್ಸ್‍ಗಳ ಮೇಲೆ ನಗರದ ವಿಜ್ಞಾನಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.ಫಿಟ್‍ನೆಸ್ ಟ್ರ್ಯಾಕರ್‌ಗಳಿಂದ ಹಿಡಿದು ಈಸಿಜಿ ಮತ್ತು ರಕ್ತದೊತ್ತಡ ತಿಳಿಸುವ ಸಾಧನಗಳ ವರೆಗೆ, ಆರೋಗ್ಯ ಸಂಬಂಧಿತ , ಧರಿಸಬಹುದಾದ ಸಾಧನಗಳು ಸಾಕಷ್ಟು ನವೀಕರಣಗೊಂಡಿವೆ.


  ಇದನ್ನೂ ಓದಿ: Amit Shah| ಕೊರೋನಾ ವಿರುದ್ಧ ಹೋರಾಟ; ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಅಮಿತ್ ಷಾ ಮೆಚ್ಚುಗೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  First published: