ಬೆಂಗಳೂರು (Bengaluru) ಪ್ರವಾಸಿ ಪ್ರಿಯರ ನೆಚ್ಚಿನ ಸ್ಥಳಗಳಲ್ಲಿ (Tourist Place) ಒಂದು, ಇಲ್ಲಿನ ಜಂಜಾಟ ಮತ್ತು ಟ್ರಾಫಿಕ್ (Traffic) ನಡುವೆ ಸಹ ಇಲ್ಲಿ ಸುತ್ತಾಡಲು ಹಲವಾರು ಸ್ಥಳಗಳಿದೆ. ಇನ್ನು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದವರು ಕಿರು ಪ್ರವಾಸ (Mini Tour) ಮಾಡಬೇಕು ಎಂದು ಯೋಚಿಸಿದರೆ ಹೊಸ ಯೋಜನೆಯೊಂದು ಜಾರಿಗೆ ಬಂದಿದ್ದು ಬೆಂಗಳೂರು ಮೆಟ್ರೋ (Bengaluru Metro) ಹೊಸ ಟ್ರಿಪ್ ಟಿಕೆಟ್ಗಳನ್ನು ನೀಡುವ ಯೋಜನೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ವಿಭಿನ್ನ ಟಿಕೆಟಿಂಗ್ ವ್ಯವಸ್ಥೆ ಹಾಗೂ ಸಾರ್ವಜನಿಕ ಟಿಕೆಟ್ ಕೌಂಟರ್ ಗಳಲ್ಲಿ ಜನದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಪರಿಚಯಿಸುವುದು ನಮ್ಮ ಮೆಟ್ರೋದ ಇನ್ನೊಂದು ಉದ್ದೇಶವಾಗಿದೆ.
ಮಾರ್ಚ್ 2022 ರಿಂದ ಟ್ರಿಪ್ ಟಿಕೆಟ್ ಗಳು ಜಾರಿಗೆ ಬರಲಿದೆ. ಮೆಟ್ರೋ ಕಾರ್ಡ್ ಗಳ ಮಾದರಿಯಲ್ಲೇ ಇರಲಿರುವ ಟ್ರಿಪ್ ಟಿಕೆಟ್ ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್ ಗಳನ್ನು ಹೊಂದಿರುತ್ತವೆ ಹಾಗೆಯೇ ಇದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಆದರೆ ಈ ಟಿಕೆಟ್ ಪಡೆಯಲು ಮುಂಗಡವಾಗಿ ಹಣ ಪಾವತಿ ಮಾಡಬೇಕು. ಟ್ರಿಪ್ ಟಿಕೆಟ್ ಗಳು ಬೆಂಗಳೂರಿಗೆ ಕಿರು ಪ್ರವಾಸ ಕೈಗೊಳ್ಳುವವರಿಗೆ ಅಥವಾ ಮೊದಲು ಯೋಚಿಸದೆ ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವವರು ಅಥವಾ ಆ ಪ್ರದೇಶಕ್ಕೆ ನಿಯಮಿತವಾಗಿ ಪ್ರಯಾಣ ಮಾಡಬೇಕಾಗಿರುವವರು ಸಹ ಈ ಟಿಕೆಟ್ ಖರೀದಿ ಮಾಡಬಹುದು.
ಇದನ್ನೂ ಓದಿ: Christmas ಟೈಮಲ್ಲಿ ಕರ್ನಾಟಕದ ಈ ಅದ್ಭುತ ಚರ್ಚ್ಗಳಿಗೆ ವಿಸಿಟ್ ಮಾಡಿ
ಈ ರೀತಿ ಪ್ರಯಾಣ ಮಾಡುವವರು ಹೊಸ ಕಾರ್ಡ್ ನ್ನು ಪಡೆಯುವುದಾಗಲೀ ಅಥವಾ ಆ ಕಾರ್ಡ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಬೆಲೆ ಅಂಶ ಪ್ರಮುಖವಾಗಿದ್ದು ಬಿಎಂಆರ್ ಸಿಎಲ್ ಆ ಬಗ್ಗೆ ಕೆಲಸ ಮಾಡುತ್ತಿದ್ದು, ಯೋಚಿಸಿ ನಿರ್ಧರಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದು, ಕಿ.ಮೀ ಆಧಾರದಲ್ಲಿ ಬೆಲೆ ನಿಗದಿಪಡಿಸುವುದಕ್ಕೆ ಸಾಧ್ಯವೇ? ಹಾಗೂ ರಿಯಾಯಿತಿ ನೀಡಲು ಸಾಧ್ಯವೆ? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ನಿಮ್ಮ ಕ್ರಿಸ್ಮಸ್, ಹೊಸ ವರ್ಷದ ರಜೆಯನ್ನು ಸುಂದರವಾಗಿ ಕಳೆಯಲು ಈ ಸ್ಥಳಗಳಿಗೆ ಟ್ರಿಪ್ ಹೋಗ್ಬೋದು
ಸಾಮಾನ್ಯವಾಗಿ ಮೆಟ್ರೋ ಕಾರ್ಡ್ ಖರೀದಿ ಮಾಡಿದರೆ ಅದಕ್ಕೆ ಕನಿಷ್ಠ ಹಣ ಎಂದು ಇಟ್ಟುಕೊಳ್ಳಬೇಕಾಗುತ್ತದೆ, ಆದರೆ ಟ್ರಿಪ್ ಟಿಕೆಟ್ಗಳ ಯಾವುದೇ ಕನಿಷ್ಠ ಮಿತಿ ಇರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ