• Home
 • »
 • News
 • »
 • lifestyle
 • »
 • Alcohol Treatment: ಆಲ್ಕೋಹಾಲ್ ಚಿಕಿತ್ಸೆ ಹೃದಯವನ್ನು ಕಾಪಾಡುತ್ತಾ? ಬೆಂಗಳೂರು ಹುಡುಗನ ಲೈಫಲ್ಲಿ ಮ್ಯಾಜಿಕ್!

Alcohol Treatment: ಆಲ್ಕೋಹಾಲ್ ಚಿಕಿತ್ಸೆ ಹೃದಯವನ್ನು ಕಾಪಾಡುತ್ತಾ? ಬೆಂಗಳೂರು ಹುಡುಗನ ಲೈಫಲ್ಲಿ ಮ್ಯಾಜಿಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೃದಯ ಸ್ನಾಯುವಿನ ಕಾಯಿಲೆಯಿಂದ ಸುಮಿತ್ ಬಳಲುತ್ತಿದ್ದರು. ಹೀಗಾಗಿ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅವರು ಹೆಣಗಾಡುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಆಲ್ಕೋಹಾಲ್ ಚಿಕಿತ್ಸೆಯಿಂದ ಅವರೀಗ ಹೃದಯ ಸಮಸ್ಯೆಯಿಂದ ಗುಣಮುಖರಾಗುತ್ತಿದ್ದಾರಂತೆ!

 • News18 Kannada
 • 3-MIN READ
 • Last Updated :
 • Karnataka, India
 • Share this:

  ಬೆಂಗಳೂರು: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು (alcohol is injurious to health) ಎಲ್ಲೆಡೆ ಕೇಳಿಬರುವ ಮಾತು. ಆದರೆ ಇದೇ ಮದ್ಯ ಒಬ್ಬ ವ್ಯಕ್ತಿಯ ಹೃದಯ (Heart) ಹಾಗೂ ಜೀವವನ್ನು (Life) ಉಳಿಸಿದೆ ಎಂದರೆ ನೀವು ನಂಬಲೇಬೇಕು. ಮದ್ಯದ ಸಾರವಾದ ಆಲ್ಕೋಹಾಲ್ (ಈಥೈಲ್ ಆಲ್ಕೋಹಾಲನ್ನು) (ethyl alcohol) ಸುಮಿತ್ (Sumit) ಎಂಬುವವರ ಜೀವ ಉಳಿಸಿದ್ದು, ಪ್ರಾಣ ಉಳಿಸಿದ ಜೀವರಕ್ಷಕನಾಗಿ ಕೆಲಸ ಮಾಡಿದೆ. ಬೆಂಗಳೂರಿನ (Bengaluru) ನಿವಾಸಿಯಾಗಿರುವ ಸುಮಿತ್ ಇನ್ನೂ ಯುವಕ. ಆದರೆ ಹೃದಯ ಸ್ನಾಯುವಿನ ಕಾಯಿಲೆಯಿಂದ (heart muscle disease) ಸುಮಿತ್ ಬಳಲುತ್ತಿದ್ದರು. ಹೀಗಾಗಿ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅವರು ಹೆಣಗಾಡುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಆಲ್ಕೋಹಾಲ್ ಚಿಕಿತ್ಸೆಯಿಂದ ಅವರೀಗ ಹೃದಯ ಸಮಸ್ಯೆಯಿಂದ ಗುಣಮುಖರಾಗುತ್ತಿದ್ದಾರಂತೆ!


  ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು


  ಅನುವಂಶಿಕ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಸುಮಿತ್‌ಗೆ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಸಂದರ್ಭದಲ್ಲಿ, ಇಲ್ಲವೇ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸುವ ಸಂದರ್ಭದಲ್ಲಿ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಹಲವಾರು ಬಗೆಯ ಔಷಧೋಪಚಾರಗಳು, ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೋಪತಿಯ ಒಂದು ವರ್ಷದ ಔಷಧಿ ಕೂಡ ಯಾವುದೇ ಪ್ರಯೋಜನ ನೀಡಲಿಲ್ಲ ಬದಲಿಗೆ ಸುಮಿತ್‌ನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.


  ಆಲ್ಕೋಹಾಲ್ ಚುಚ್ಚುವ ಪರ್ಯಾಯ ವಿಧಾನ


  ಅಕ್ಟೋಬರ್‌ ಮೊದಲ ವಾರ ಸುಮಿತ್ ಸರ್ಜಾಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರನ್ನು ಎರಡು ವಾರಗಳ ಕಾಲ ಪರೀಕ್ಷಿಸಿದ ನಂತರ ವೈದ್ಯರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಹೃದಯದ ಸ್ನಾಯುಗಳ ದಪ್ಪವನ್ನು ಕಡಿಮೆ ಮಾಡಲು ಹೃದಯದ ಭಾಗಗಳಿಗೆ ಆಲ್ಕೋಹಾಲ್ ಅನ್ನು ಚುಚ್ಚುವುದು ಪರ್ಯಾಯ ವಿಧಾನವಾಗಿತ್ತು.


  ಇದನ್ನೂ ಓದಿ:- Health Care: ನಿಮಗೆ ಉಸಿರಾಟದ ತೊಂದರೆ, ಎದೆ ನೋವು ಇದೆಯಾ ಹಾಗದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇ ಬೇಕು


  ಶಸ್ತ್ರಚಿಕಿತ್ಸೆಯನ್ನು ನಿರಾಕರಿಸಿದ್ದ ಸುಮಿತ್!


  ಸುಮಿತ್‌ನ ಸಣ್ಣ ವಯಸ್ಸಿನವರಾಗಿದ್ದರಿಂದ ಶಸ್ತ್ರಕ್ರಿಯೆಗೆ ಒಳಗಾಗುವುದಕ್ಕೆ ಆತನಿಗೆ ಇಷ್ಟವಿರಲಿಲ್ಲ ಎಂದು ಸರ್ಜಾಪುರದ ಮಣಿಪಾಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್, ಹಾಗೂ ಇಂಟರ್ವೆನ್ಶನಲ್ ಮತ್ತು ಸ್ಟ್ರಕ್ಚರಲ್ ಇಂಟರ್ವೆನ್ಶನ್ ಸ್ಪೆಷಲಿಸ್ಟ್ ಡಾ. ಸೂರಜ್ ನರಸಿಂಹನ್ ತಿಳಿಸಿದ್ದಾರೆ.


  ಹೃದಯ ಸ್ನಾಯುವಿನ ಕಾಯಿಲೆ


  ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೊಪತಿ ಹೃದಯ ಸ್ನಾಯುವಿನ ಕಾಯಿಲೆಯಾಗಿದೆ. ಈ ಕಾಯಿಲೆಯು ಹೃದಯದ ಸ್ನಾಯುಗಳನ್ನು ದಪ್ಪಗಾಗಿಸುತ್ತದೆ ಎಂದು ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ ಸೈಕತ್ ಕಾಂಜಿಲಾಲ್ ವಿವರಿಸಿದ್ದಾರೆ.


  ಆಲ್ಕೋಹಾಲ್ ಚಿಕಿತ್ಸೆ


  ಆಲ್ಕೋಹಾಲ್ ಸೆಪ್ಟಲ್ ಅಬ್ಲೇಶನ್ ಎಂಬ ಕಾರ್ಯವಿಧಾನದ ಭಾಗವಾಗಿ 0.5 ಮಿಲಿ ಆಲ್ಕೋಹಾಲ್ ಅನ್ನು ವಿಶೇಷವಾದ ಬಲೂನ್ ಕ್ಯಾತಿಟರ್ ಮೂಲಕ ಮೂರು ಬಾರಿ ಚುಚ್ಚಲಾಗುತ್ತದೆ, ಇದು ಉಬ್ಬಿದಾಗ ಆಲ್ಕೋಹಾಲ್ ಬೇರೆ ಸ್ಥಳಕ್ಕೆ ಹರಿಯುವುದನ್ನು ತಡೆಯುತ್ತದೆ. ಹೃದಯಾಘಾತವನ್ನು ಉಂಟುಮಾಡಿದ ಪ್ರದೇಶಗಳಲ್ಲಿನ  ಸ್ನಾಯುಗಳಿಗೆ ಆಲ್ಕೋಹಾಲ್ ಅನ್ನು ಅನ್ವಯಿಸಲಾಗುತ್ತದೆ.


  ರಕ್ತದ ಹರಿವು ಸರಾಗವಾಗಲು ಸಹಾಯ


  ಆಲ್ಕೋಹಾಲ್ ರೋಗಪೀಡಿತ ದಪ್ಪನಾದ ಸ್ನಾಯುವಿನ ಮೇಲೆ ಪರಿಣಾಮ ಬೀರುವುದಲ್ಲದೆ, ಅದನ್ನು ಕೊಲ್ಲುತ್ತದೆ, ರಕ್ತದ ಹರಿವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ ಎಂದು ಸೈಕತ್  ತಿಳಿಸಿದ್ದಾರೆ. ಈ ಸ್ಥಿತಿಯಲ್ಲಿ, ಸ್ನಾಯು ಸಾಮಾನ್ಯವಾಗಿ ಅಸಹಜವಾಗಿ ದಪ್ಪವಾಗುತ್ತದೆ ಆ ಸಮಯದಲ್ಲಿ ಹೃದಯಕ್ಕೆ ರಕ್ತವನ್ನು ಪಂಪು ಮಾಡುವುದು ಕಷ್ಟವಾಗುತ್ತದೆ.


  ಈ ಕಾಯಿಲೆಗೆ ಯಾವುದೇ ಲಕ್ಷಣಗಳಿಲ್ಲ


  ಇದು ಯಾವುದೇ ಗಮನಾರ್ಹ ರೋಗಲಕ್ಷಣಗಳನ್ನು ತೋರಿಸದೇ ಇರುವ ಕಾರಣ ಕೆಲವೊಂದು ಸಂದರ್ಭಗಳಲ್ಲಿ, ಯಾವುದೇ ಗಮನಾರ್ಹ ಲಕ್ಷಣಗಳಿಲ್ಲದೆ ಅನೇಕರು ಜೀವಿಸುವುದರಿಂದ ಇದು ಕೂಡಲೇ ಪತ್ತೆಯಾಗುವುದಿಲ್ಲ. ಆದಾಗ್ಯೂ, ಈ ಸಮಸ್ಯೆ ಇರುವವರಲ್ಲಿ ಒಮ್ಮೊಮ್ಮೆ ಉಸಿರಾಟದ ತೊಂದರೆ, ಎದೆ ನೋವು ಅಥವಾ ಹೃದಯದ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಕಾಣಿಸುತ್ತದೆ. ಇದರ ಪರಿಣಾಮವಾಗಿ ಅಸಹಜ ಹೃದಯ ಬಡಿತ ಅಥವಾ ಹಠಾತ್ ಸಾವು ಸಂಭವಿಸುತ್ತದೆ. ಹೃದಯಾಘಾತದ ಸಂದರ್ಭದಲ್ಲಿ, ಹೃದಯದ ಆ ಪ್ರದೇಶದಲ್ಲಿನ ಜೀವಕೋಶಗಳು ಸಾಯುವಂತೆ ಮಾಡುತ್ತದೆ ಮತ್ತು ಸ್ನಾಯುಗಳು ತೆಳುವಾಗುತ್ತವೆ.


  ಇದನ್ನೂ ಓದಿ: Heart Attack: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!


  ಸುಮಿತ್ ಆರೋಗ್ಯದಲ್ಲಿ ಸುಧಾರಣೆ


  ಅಕ್ಟೋಬರ್‌ನಲ್ಲಿ 45 ನಿಮಿಷಗಳ ಚಿಕಿತ್ಸೆಯನ್ನು ಸುಮಿತ್‌ಗೆ ನಡೆಸಲಾಯಿತು ಮತ್ತು ಎರಡು ದಿನಗಳಲ್ಲಿ ಸುಮಿತ್ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ಗೊಂಡಿದ್ದರು. ಸುಮಿತ್ ಪರಿಶೀಲನೆಯ ಭಾಗವಾಗಿ ನಿತ್ಯವೂ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  Published by:Annappa Achari
  First published: