• Home
  • »
  • News
  • »
  • lifestyle
  • »
  • Bengali Sweets Near Me: ರಸಗುಲ್ಲಾದಿಂದ ಸಂದೇಶ್​ವರೆಗೆ, ಬೆಂಗಳೂರಿನಲ್ಲಿ ಬೆಸ್ಟ್ ಬಂಗಾಳಿ ಸ್ವೀಟ್ಸ್ ಸಿಗುವ ಬೇಕರಿಗಳಿವು

Bengali Sweets Near Me: ರಸಗುಲ್ಲಾದಿಂದ ಸಂದೇಶ್​ವರೆಗೆ, ಬೆಂಗಳೂರಿನಲ್ಲಿ ಬೆಸ್ಟ್ ಬಂಗಾಳಿ ಸ್ವೀಟ್ಸ್ ಸಿಗುವ ಬೇಕರಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengali Sweets Shops Near Me: ವಿಶ್ವಪ್ರಸಿದ್ಧ ಬಂಗಾಳಿ ಸಿಹಿತಿಂಡಿಗಳು (Bengali Sweets), ವಿಶೇಷವಾಗಿ ಸಾಂಪ್ರದಾಯಿಕ ಸಂದೇಶ್ ಮತ್ತು ಮಿಷ್ಟಿ ದೋಯಿ (ಸಿಹಿ ಮೊಸರು) ಮಟ್ಕಾಗಳ ಬಗ್ಗೆ  ಮಾತನಾಡಲೇಬೇಕು. ಅದಕ್ಕಾಗಿಯೇ ಬೆಂಗಳೂರಿನಲ್ಲಿರುವ (Bengaluru) ಈ ವಿಶೇಷ ಬೆಂಗಾಲಿ ಸಿಹಿ ಅಂಗಡಿಗಳ ಬಗ್ಗೆ ನಾವು ಮಾಹಿತಿ ನೀಡಿದ್ದು, ಒಮ್ಮೆ ವಿಸಿಟ್​ ಮಾಡಿ.

ಮುಂದೆ ಓದಿ ...
  • Share this:

ಸಿಹಿತಿಂಡಿಗಳು (Sweets) ಸಂತೋಷ ಎಂಬ ಪದದ ಸಮಾನಾರ್ಥಕವಾಗಿದೆ ಮತ್ತು ಸಿಹಿತಿಂಡಿಗಳು ಯಾವಾಗಲೂ ನಮ್ಮ ಮುಖದಲ್ಲಿ ನಗುವನ್ನು ಉಂಟುಮಾಡುತ್ತವೆ. ಒಳ್ಳೆಯ ದಿನ ಅಥವಾ ಒಳ್ಳೆಯ ಕಾರ್ಯದ ಸಮಯದಲ್ಲಿ (Function) ಭಾರತದಲ್ಲಿ (India)  ಸಿಹಿತಿಂಡಿಗಳು ಇರಲೇಬೇಕು. ಈಗ ನಾವು ಸಿಹಿತಿಂಡಿಗಳ ಬಗ್ಗೆ ಮಾತನಾಡುವಾಗ,  ವಿಶ್ವಪ್ರಸಿದ್ಧ ಬಂಗಾಳಿ ಸಿಹಿತಿಂಡಿಗಳು (Bengali Sweets), ವಿಶೇಷವಾಗಿ ಸಾಂಪ್ರದಾಯಿಕ ಸಂದೇಶ್ ಮತ್ತು ಮಿಷ್ಟಿ ದೋಯಿ (ಸಿಹಿ ಮೊಸರು) ಮಟ್ಕಾಗಳ ಬಗ್ಗೆ  ಮಾತನಾಡಲೇಬೇಕು. ಅದಕ್ಕಾಗಿಯೇ ಬೆಂಗಳೂರಿನಲ್ಲಿರುವ (Bengaluru) ಈ ವಿಶೇಷ ಬೆಂಗಾಲಿ ಸಿಹಿ ಅಂಗಡಿಗಳ ಬಗ್ಗೆ ನಾವು ಮಾಹಿತಿ ನೀಡಿದ್ದು, ಒಮ್ಮೆ ವಿಸಿಟ್​ ಮಾಡಿ.


ಬಂಚಾರಂ ಸ್ವೀಟ್ಸ್, ಕೋರಮಂಗಲ, ಬೆಂಗಳೂರು


ನಗರದ ಸುತ್ತಲೂ ಬೆರಳೆಣಿಕೆಯ ಶಾಖೆಗಳನ್ನು ಹೊಂದಿರುವ ಸಿಹಿತಿಂಡಿ ಅಂಗಡಿ ನಿಮ್ಮನ್ನ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹಬ್ಬದ ಅವಧಿಯಲ್ಲಿ ಅವರು ಗ್ರಾಹಕರ ಉದ್ದನೆಯ ಸಾಲುಗಳನ್ನು ಹೊಂದಿರುವುದರಿಂದ, ವಿಶೇಷವಾಗಿ ನೀವು ದೊಡ್ಡ ಆರ್ಡರ್ ಹೊಂದಿದ್ದರೆ ಮುಂಚಿತವಾಗಿ ಬುಕಿಂಗ್ ಮಾಡುವುದು ಉತ್ತಮ. ದೋಯಿ ಮತ್ತು ಸಂದೇಶ್‌, ರಸಮಲೈ, ಚಮ್‌ಚಾಮ್ ಮತ್ತು ಖೀರ್ ಕದಮ್‌ಗಳನ್ನು ಎಂಜಾಯ್ ಮಾಡಬೇಕು.


ವಿಳಾಸ: 114, 5ನೇ ಕ್ರಾಸ್, ಕೇಂಬ್ರಿಡ್ಜ್ ಲೇಔಟ್, ಹಲಸೂರು, ಬೆಂಗಳೂರುಮೊಬೈಲ್ ನಂಬರ್: +918025360030


ವಿಳಾಸ: ಶೀಲಾ ಆರ್ಕೇಡ್, ನೆಲ ಮಹಡಿ, 153, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು


ಮೊಬೈಲ್ ನಂಬರ್: +918025710030


ಕೆಸಿ ದಾಸ್, ಅಶೋಕ್ ನಗರ, ಬೆಂಗಳೂರು


ಪಟ್ಟಣದ ಅತ್ಯಂತ ಹಳೆಯ ಬಂಗಾಳಿ ಸಿಹಿತಿಂಡಿ, ಕೆ.ಸಿ. ದಾಸ್ ಅವರ ಮಿಷ್ಟಿ ದೋಯಿ ಬೆಂಗಳೂರಿನ ಜನರ ಫೇವರೇಟ್​. ಅವರ ಫ್ಲಾಕಿ, ನಿಮ್ಮ ಬಾಯಲ್ಲಿಇಟ್ಟರೆ ಕರಗುವ ಸೋನ್​ ಪಾಪಡಿ. ಅವರ ಮೃದುವಾದ ಸಂದೇಶ್, ರಾಸ್ ಕದಮ್ ಮತ್ತು ರಾಸ್ಮಲೈ ಹೀಗೆ ಹಲವಾರು ವೆರೈಟಿ ಸ್ವೀಟ್​ ನಿಮಗೆ ಸಿಗುತ್ತದೆ. ಲೂಚಿಯ ಪ್ಲೇಟ್‌ಗಳನ್ನು ಇಲ್ಲಿ ಟ್ರೈ ಮಾಡಲೇಬೇಕು.




ವಿಳಾಸ: 295, 17ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು


ಮೊಬೈಲ್ ನಂಬರ್: +918023469192


ವಿಳಾಸ: 38, ಚರ್ಚ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918025587003


ದಿ ಸಂದೇಶ್ ಫ್ಯಾಕ್ಟರಿ, ಬನ್ನೇರ್ಘಟ್ಟ, ಬೆಂಗಳೂರು


ಸಂದೇಶ್ ಫ್ಯಾಕ್ಟರಿ 15 ಕ್ಕೂ ಹೆಚ್ಚು ಬಗೆಯ ಬಂಗಾಳದ ಅತ್ಯಂತ ಪ್ರಿಯವಾದ ಸಿಹಿತಿಂಡಿಗಳನ್ನು ನೀಡುತ್ತದೆ. ಚಂದ್ರಮಿಕಾ ರೈ ನಡೆಸುತ್ತಿರುವ ಈ ಅಂಗಡಿ, ಸಂದೇಶ್, ಕೇಸರ್ ಸಂದೇಶ್ ಹೀಗೆ ವೆರೆಟೈ ಆಹಾರಗಳನ್ನು ನೀಡುತ್ತದೆ. ರಸಭರಿತವಾದ ರಸಗುಲ್ಲಾಗಳನ್ನು ಮಿಸ್​ ಮಾಡಲೇಬಾರದು. ನೀವು ಕನಿಷ್ಟ 24 ಗಂಟೆಗಳ ಮುಂಚಿತವಾಗಿ ನಿಮ್ಮ ಆರ್ಡರ್ ಅನ್ನು ಕಾಯ್ದಿರಿಸಬೇಕು.


ಇದನ್ನೂ ಓದಿ: ರಾತ್ರಿ ಹಾಲಿನ ಜೊತೆ ಈ ಒಂದು ವಸ್ತು ಹಾಕಿ ಕುಡಿರಿ ಸಾಕು, ಬೊಜ್ಜಿನಿಂದ ಮಧುಮೇಹದವರೆಗೆ ಎಲ್ಲವೂ ಮಾಯವಾಗುತ್ತೆ


ವಿಳಾಸ: ಮಂತ್ರಿ ಎಲೆಗನ್ಸ್, ಎನ್​ಎಸ್​ ಪಲ್ಯ, 2ನೇ ಸ್ಟೇಜ್, ಬನ್ನೇರ್ ಘಟ್ಟ ರೋಡ್, ಬಿಟಿಎಂ, ಬೆಂಗಳೂರು


ಮೊಬೈಲ್ ನಂಬರ್: +919980995072


ತೆವರಿ ಬ್ರೋಸ್ ಮಿತೈ ಶಾಪಿಎ, ಉಲಸೂರ್, ಬೆಂಗಳೂರು


ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ದಿನನಿತ್ಯದ ಶಾಪಿಂಗ್ ನಂತರ, ಇಲ್ಲಿಗೆ ಬಂದು ವಿಭಿನ್ನವಾದ ಸ್ವೀಟ್​ ಪ್ರಯತ್ನಿಸಿ. ಈ ಸಿಹಿ ಅಂಗಡಿಯು ಅದರ ಸೋನ್ ಪಾಪ್ಡಿಗೆ ಹೆಸರುವಾಸಿಯಾಗಿದೆ. ಒಮ್ಮೆಯಾದರೂ ಇಲ್ಲಿ ವಿಸಿಟ್​ ಮಾಡಲೇಬೇಕು.


ವಿಳಾಸ: 27, ಡಿಕನ್ಸನ್ ರಸ್ತೆ, ರುಕ್ಮಣಿ ಕಾಲೋನಿ, ಹಲಸೂರು, ಬೆಂಗಳೂರು


ಮೊಬೈಲ್ ನಂಬರ್: +919341252685


ಆಶಾ ಸ್ವೀಟ್ ಸೆಂಟರ್, ಮಲ್ಲೇಶ್ವರಂ, ಬೆಂಗಳೂರು


ಇದು ಮಲ್ಲೇಶ್ವರಂನ ನಿವಾಸಿಗಳು ಹೆಚ್ಚು ಆಗಾಗ್ಗೆ ಭೇಟಿ ನೀಡುವ ಅಂಗಡಿ. ಈ ಅಂಗಡಿ ರೋಸಗುಲ್ಲಾಗಳಿಗೆ ಹೆಸರುವಾಸಿಯಾಗಿದೆ. ಅದರ ಜೊತೆಗೆ ಬಾದಾಮಿ ಹಾಲು, ರೋಸ್​ ವಾಟರ್​ ಸಹ ಇಲ್ಲಿ ಬಹಳ ಫೇಮಸ್​.


ಇದನ್ನೂ ಓದಿ: ರುಚಿ ಜಾಸ್ತಿ ಅಂತ ಹೆಚ್ಚು ಸೋಡಾ ಕುಡಿದ್ರೆ ಹಲ್ಲೆಲ್ಲಾ ಹಾಳಾಗೋದು ಗ್ಯಾರಂಟಿ!


ವಿಳಾಸ: 131, 2ನೇ ಟೆಂಪಲ್ ಸ್ಟ್ರೀಟ್, ಮಲ್ಲೇಶ್ವರಂ, ಬೆಂಗಳೂರು


ಮೊಬೈಲ್ ನಂಬರ್: +918023345112

Published by:Sandhya M
First published: