Walking Benefits: ಪ್ರತಿದಿನ ಕೇವಲ ಅರ್ಧ ಗಂಟೆ ವಾಕಿಂಗ್ ಮಾಡಿ, ಅದರಿಂದಾಗುವ ಲಾಭ ನೋಡಿ

Walking Benefits :ತೂಕವನ್ನು ಕಮ್ಮಿಮಾಡಿಕೊಳ್ಳಲು ವಾಕಿಂಗ್ ಮಾಡುವುದಕ್ಕಿಂತಾ ಬೇರೆ ಯಾವ ವ್ಯಾಯಾಮಗಳಿಲ್ಲ. ವಾಕಿಂಗ್ ಮಾಡುವುದು ಸರಳ, ಸುಲಭ ಮತ್ತು ವಿನೋದವೂ ಆಗಿರುತ್ತದೆ. ಇದು ಹೆಚ್ಚು ಶ್ರಮವಿಲ್ಲದೆ ಯಾವಾಗಲೂ ಕಾರ್ಯನಿರತವಾಗಿರಲು ಮತ್ತು ಸೂಕ್ತವಾದ ಆರೋಗ್ಯದಿಂದರಲು ಬಯಸುವ ಎಲ್ಲಾ ವಯಸ್ಸಿನ ಜನರಿಗೆ ಒಂದು ಅತ್ಯುತ್ತಮ ಮಾರ್ಗ

ವಾಕಿಂಗ್

ವಾಕಿಂಗ್

 • Share this:
  ಬದಲಾಗುತ್ತಿರುವ ಜೀವನಶೈಲಿಯಲ್ಲಿ(Life Style) ಮನುಷ್ಯ ನಡೆಯುವುದೇ ಕಡಿಮೆಯಾಗಿದೆ.. ಹಲವು ಗಂಟೆಗಳ(Hours) ಕಾಲ ಕುಳಿತಲ್ಲಿಯೇ ಕುಳಿತು ಕೆಲಸಮಾಡುವ ಸಮಸ್ಯೆ ಕೆಲವರದ್ದು, ಮತ್ತೆ ಕೆಲವರು ಆಲಸ್ಯದಿಂದ(laziness) ಮಲಗಿದ್ದಲ್ಲೇ ಮಲಗಿ ಕುಳಿತಲ್ಲಿಯೇ ಕುಳಿತಿರುತ್ತಾರೆ.. ಇಂಥವರು ದಿನಕ್ಕೆ ಹತ್ತು ಹೆಜ್ಜೆ ಇಡುವುದು ಕಷ್ಟ.. ಅಲ್ಲದೆ ಮೊದಲೆಲ್ಲಾ ಅಂಗಡಿ(Shop) ಮುಂಗಟ್ಟುಗಳಿಗೆ ಹೋಗ್ಬೇಕಾದ್ರೆ ನಡೆದುಕೊಂಡು ಹೋಗುತ್ತಿದ್ದ ಜನರು ಇಂದು ವಾಹನಗಳ(Vehicles) ಮೇಲೆ ಅವಲಂಬಿತರಾಗಿದ್ದಾರೆ.. ಇದರಿಂದ ತಮಗೆ ಅರಿವಿಲ್ಲದಂತೆಯೇ ಜನರು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.. ಆದ್ರೆ ಹೀಗೆ ಕುಳಿತುಕೊಂಡಿರುವುದು ಕ್ಕಿಂತ ಹೆಚ್ಚು ನಡೆಯುವುದರಿಂದ(Walking) ಪ್ರಯೋಜನ ಇದೆ ಎಂಬುದನ್ನ ಅರಿತುಕೊಂಡರೆ ವಾಹನಗಳಿಗೆ ಬಾಯ್ ಹೇಳಿ, ಒತ್ತಡದ ಜೀವನದಲ್ಲಿಯು ಜನರು ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ..

  ನಡಿಗೆಯಲ್ಲಿದೆ ಆರೋಗ್ಯದ ಗುಟ್ಟು

  ತೂಕವನ್ನು ಕಮ್ಮಿಮಾಡಿಕೊಳ್ಳಲು ವಾಕಿಂಗ್ ಮಾಡುವುದಕ್ಕಿಂತಾ ಬೇರೆ ಯಾವ ವ್ಯಾಯಾಮಗಳಿಲ್ಲ. ವಾಕಿಂಗ್ ಮಾಡುವುದು ಸರಳ, ಸುಲಭ ಮತ್ತು ವಿನೋದವೂ ಆಗಿರುತ್ತದೆ. ಇದು ಹೆಚ್ಚು ಶ್ರಮವಿಲ್ಲದೆ ಯಾವಾಗಲೂ ಕಾರ್ಯನಿರತವಾಗಿರಲು ಮತ್ತು ಸೂಕ್ತವಾದ ಆರೋಗ್ಯದಿಂದರಲು ಬಯಸುವ ಎಲ್ಲಾ ವಯಸ್ಸಿನ ಜನರಿಗೆ ಒಂದು ಅತ್ಯುತ್ತಮ ಮಾರ್ಗ. ಈ ಒಂದು ವ್ಯಾಯಾಮಕ್ಕೆ ನಮಗೆ ಯಾವ ಉಪಕರಣಗಳ ಅಗತ್ಯವೂ ಸಹ ಇರುವುದಿಲ್ಲ ಮತ್ತು ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ.. ಹೀಗಾಗಿ ನಡಿಗೆಯಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಏನು ಎನ್ನುವುದರ ಮಾಹಿತಿ ಇಲ್ಲಿದೆ..

  1) ಆಸ್ಟಿಯೊಪೊರೋಸಿಸ್ ಅಪಾಯ ಕಡಿಮೆ ಮಾಡಲು :ದೈಹಿಕ ಚಟುವಟಿಕೆಯ ಕೊರತೆ ಮತ್ತು ಕಳಪೆ ಆಹಾರದಿಂದ ಇತ್ತೀಚಿನ ದಿನಗಳಲ್ಲಿ 30 ವರ್ಷದೊಳಗಿನ ಯುವಕರಲ್ಲಿಯೂ ಆಸ್ಟಿಯೊಪೊರೋಸಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.. ಮೂಳೆಗಳಲ್ಲಿ ಬಿಎಂಡಿ ಕಡಿಮೆಯಾಗುವುದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಇದರೊಂದಿಗೆ, ಭವಿಷ್ಯದಲ್ಲಿ ಮೊಣಕಾಲು ಮತ್ತು ಸೊಂಟದ ಸಮಸ್ಯೆಯೂ ಹೆಚ್ಚಾಗುತ್ತದೆ. ಆದರೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಆಸ್ಟಿಯೊಪೊರೋಸಿಸ್ ಅಪಾಯವು ತುಂಬಾ ಕಡಿಮೆಯಾಗಿದೆ.

  ಇದನ್ನೂ ಓದಿ :ಅಕಾಲಿಕ ಮರಣ ತಪ್ಪಿಸಲು ಪ್ರತಿದಿನ ಎಷ್ಟು ಹೆಜ್ಜೆ ವಾಕ್‌ ಮಾಡಬೇಕು ಗೊತ್ತಾ..?

  2) ಹೃದಯದ ಆರೋಗ್ಯ ಹೆಚ್ಚಳ :ನಾವು ಸೇವಿಸುವ ಆಹಾರಗಳು ನಮ್ಮ ದಿನನಿತ್ಯದ ಬದುಕು ನಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತವೆ.. ಹೀಗಾಗಿ ಪ್ರತಿನಿತ್ಯ ನಮ್ಮ ಹೃದಯವನ್ನು ನಾವು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಅಂದರೆ ಸತತವಾಗಿ ಮೂವತ್ತು ನಿಮಿಷಗಳಕಾಲ ನಡಿಗೆ ಮಾಡುವುದು ಆರೋಗ್ಯಕರವಾದದ್ದು.ಅಲ್ಲದೆ ಹೃದಯಾಘಾತ ಮತ್ತು ಬೈಪಾಸ್ ಚಿಕಿತ್ಸೆಯಾಗಿರುವವರು ಬಹಳ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

  3) ಅಧಿಕ ಬಿಪಿ ತಡೆಗಟ್ಟುವುದು : ಇತ್ತೀಚಿನ ದಿನಗಳಲ್ಲಿ ಜನರನ್ನ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಗ ಅಂದ್ರೆ ಅದು ಬಿಪಿ.. ನಾವು ನಡೆಯೋದೇ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಅದು ಅಧಿಕ ಬಿಪಿ ಹಾಗೂ ಹೃದಯಾಘಾತದ ಸಮಸ್ಯೆಗೆ ಕಾರಣವಾಗಬಹುದು..ಆದರೆ ಪ್ರತಿನಿತ್ಯ ಮೂವತ್ತು ನಿಮಿಷಗಳಕಾಲ ನಡೆಯುವುದರಿಂದ ನಮ್ಮ ದೇಹವನ್ನು ನಾವು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು.

  4 ) ಕ್ಯಾನ್ಸರ್ ನಿವಾರಣೆ :ನಮ್ಮ ಜೀವನ ಶೈಲಿ ಕೂಡ ಕ್ಯಾನ್ಸರ್ ಗೆ ಕಾರಣ ಎಂದು ಹೇಳಲಾಗುತ್ತದೆ. ವಿಜ್ಞಾನಿಗಳು ಸಹ ವಾಕಿಂಗ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಖಚಿತಪಡಿಸಿದ್ದಾರೆ. ಕೀಮೊಥೆರಪಿಯ ಅಡ್ಡ ಪರಿಣಾಮ ಗಳನ್ನು ಕಡಿಮೆ ಮಾಡುತ್ತದೆ. ಸ್ತನ ಕ್ಯಾನ್ಸರ್‌ನಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ.

  ಇದನ್ನೂ ಓದಿ :ಅಜ್ಜಿ ತಾತನನ್ನು ನೋಡಲು 240 ಕಿಮೀ ನಡೆದೇ ಹೊರಟ ಬಾಲಕಿ, ನಂತರ ನಡೆದಿದ್ದೆಲ್ಲಾ ಇಂಟರೆಸ್ಟಿಂಗ್ ಕತೆ!

  5 )ಒತ್ತಡ ನಿವಾರಣೆ :ಇತ್ತೀಚಿನ ದಿನಗಳಲ್ಲಿ ಒತ್ತಡ ಕೂಡ ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡವು ಬೊಜ್ಜು, ಮೆದುಳು ಸಂಬಂಧಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ.

  6)ರೋಗನಿರೋಧಕ ಶಕ್ತಿ ಹೆಚ್ಚಳ : ಸೋಂಕುಗಳು ಅಥವಾ ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಬೇಕೆಂದರೆ ವಾಕಿಂಗ್ ಮಾಡಲೇಬೇಕು. ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ರೋಗನಿರೋಧಕ ಹೆಚ್ಚುತ್ತದೆ. ಬಿ-ಕೋಶಗಳು, ಟಿ-ಕೋಶಗಳು, ಡಬ್ಲ್ಯೂಬಿಸಿಗಳು ವೇಗವಾಗಿ ಬಿಡುಗಡೆಯಾಗುತ್ತವೆ.
  Published by:ranjumbkgowda1 ranjumbkgowda1
  First published: