'ವಿಟಮಿನ್ ಎ' ಕೊರತೆ ನೀಗಿಸಿ, ಆರೋಗ್ಯ ಹೆಚ್ಚಿಸಿ

news18
Updated:June 3, 2018, 2:03 PM IST
'ವಿಟಮಿನ್ ಎ' ಕೊರತೆ ನೀಗಿಸಿ, ಆರೋಗ್ಯ ಹೆಚ್ಚಿಸಿ
news18
Updated: June 3, 2018, 2:03 PM IST
ನ್ಯೂಸ್ 18 ಕನ್ನಡ

ವ್ಯಾಯಾಮದಿಂದ ಮಾತ್ರ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಂದಿನ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರವು ಕೂಡ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೆಚ್ಚು ಪೋಷಕಾಂಶವಿರುವ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು.

ಉತ್ತಮ ಆರೋಗ್ಯಕ್ಕಾಗಿ ಹಲವು ರೀತಿಯ ಕಸರತ್ತನ್ನು ಮಾಡುತ್ತೇವೆ. ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಲು ಆಹಾರ, ಚರ್ಮ, ಕೂದಲು ಮತ್ತು ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು. ಅದರಲ್ಲೂ ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನು ಕಾಪಾಡುವುದು ಎಂದರೆ ತಪ್ಪಾಗಲಾರದು.


ವಿಟಮಿನ್ ಅಂಶ ಹೆಚ್ಚಾಗಿರುವ ಆಹಾರಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು. ದೇಹದಲ್ಲಿ ವಿಟಮಿನ್ ಎ ಕೊರತೆ ಉಂಟಾದಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಿಟಮಿನ್​ಯುಕ್ತ ಆಹಾರಗಳ ಸೇವನೆಯೇ ಇದಕ್ಕೆ ಪರಿಹಾರ.


ನೀವು ಎಷ್ಟೇ ಫಿಟ್​ ಆಗಿದ್ದರೂ, ದೇಹದಲ್ಲಿ ವಿಟಮಿನ್ ಎ ಕೊರತೆಯಿದ್ದಲ್ಲಿ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ವಿಟಮಿನ್ ಎ ಕೊರತೆಯಿಂದ ಹಲ್ಲು, ಚರ್ಮ ಮತ್ತು ಕಣ್ಣುಗಳಿಗೆ ಅನೇಕ ತೊಂದರೆಗಳು ಉಂಟಾಗುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಅಂಗಾಂಶಗಳ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.


100 ಗ್ರಾಂ ಟರ್ಕಿ ಕೋಳಿ ಲಿವರ್​ನಲ್ಲಿ ಶೇ.1507ರಷ್ಟು ವಿಟಮಿನ್ ಎ ಕಂಡುಬರುತ್ತದೆ. 100 ಗ್ರಾಂ ದನದ ಮಾಂಸದ ಲಿವರ್​ನ ಲ್ಲಿ ಶೇ.300 ರಷ್ಟು ಮತ್ತು 100 ಗ್ರಾಂ ಸಾಸಿವೆ ಎಲೆಗಳಲ್ಲಿ ಶೇ.118ರಷ್ಟು ಎ ಜಿವಸತ್ವಗಳು ಕಂಡುಬರುತ್ತದೆ. 100 ಗ್ರಾಂ ಒಣಬೀಜಗಳಲ್ಲಿ ಶೇ.15ರಷ್ಟು ಹಾಗೆಯೇ 100 ಗ್ರಾಂ ಬಟಾಣಿಗಳಲ್ಲಿ ಶೇ.134 ರಷ್ಟು ವಿಟಮಿನ್ ಎ ಅಂಶಗಳು ಇರುತ್ತದೆ.


ಮಧ್ಯಮ ಗಾತ್ರದ ಟೊಮ್ಯಾಟೊದಲ್ಲಿ ಶೇ.20 ರಷ್ಟು ಕಂಡು ಬಂದರೆ, 200 ಗ್ರಾಂ ಪಾಲಕಿನಲ್ಲಿ 49% ವಿಟಮಿನ್ ಎ ಇರುತ್ತದೆ. ಕ್ಯಾರೆಟ್​ನಲ್ಲಿ ಶೇ.200 ರಷ್ಟು ಮತ್ತು ಮಧ್ಯಮ ಗಾತ್ರದ ಗೆಣಸಿನಲ್ಲಿ ಶೇಕಡ 438 ರಷ್ಟು ವಿಟಮಿನ್ ಎ ಹೊಂದಿರುತ್ತದೆ. ಇಂತಹ ಆಹಾರವನ್ನು ಸೇವಿಸುವುದರಿಂದ ವಿಟಮಿನ್​ ಎ ಕೊರತೆಯನ್ನು ಹೋಗಲಾಡಿಸಬಹುದು.
First published:June 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...