ಅಡುಗೆ ಮನೆಯ ವಿನೆಗರ್​ನಿಂದ ಹಲವು ಪ್ರಯೋಜನ

news18
Updated:July 5, 2018, 5:37 PM IST
ಅಡುಗೆ ಮನೆಯ ವಿನೆಗರ್​ನಿಂದ ಹಲವು ಪ್ರಯೋಜನ
news18
Updated: July 5, 2018, 5:37 PM IST
-ನ್ಯೂಸ್ 18 ಕನ್ನಡ

ವಿನೆಗರ್ ಅನ್ನು ಸಾಮಾನ್ಯವಾಗಿ ಸಲಾಡ್, ಉಪ್ಪಿನಕಾಯಿ ಮತ್ತು ಚಟ್ನಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕೇವಲ ಆಹಾರ ಪದಾರ್ಥ ಎಂದು ಭಾವಿಸಲಾಗಿರುವ ವಿನೆಗರ್​ನಿಂದ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಅವುಗಳೆಂದರೆ.

ಬಟ್ಟೆಯ ಕಲೆ: ಬಟ್ಟೆಯಲ್ಲಿ ಉಳಿದುಕೊಳ್ಳುವ ಬೆವರಿನ ಕಲೆಗಳನ್ನು ಹೋಗಲಾಡಿಸಲು ವಿನೆಗರ್ ಸಹಾಯ ಮಾಡುತ್ತದೆ. ಬಟ್ಟೆ ತೊಳೆಯುವ ಮೊದಲು ಕಲೆಗಳಿರುವ ಭಾಗಕ್ಕೆ ವಿನೆಗರ್ ಹಾಕಿ ಸ್ವಲ್ಪ ಹೊತ್ತು ಬಿಟ್ಟುಬಿಡಿ. ಹೀಗೆ ಮಾಡಿದ ಬಳಿಕ ಬಟ್ಟೆಗಳನ್ನು ತೊಳೆಯುವುದರಿಂದ ಕಲೆಗಳು ಮಾಯವಾಗುತ್ತದೆ.

ಮೊಟ್ಟೆ ಬೇಯಿಸಲು: ಮೊಟ್ಟೆಯನ್ನು ಬೇಯಿಸುವಾಗ ನೀರಿನಲ್ಲಿ ಸ್ವಲ್ಪ ವಿನೆಗರ್ ಬಳಸಿ. ಇದರಿಂದ ಕುದಿಯುತ್ತಿರುವ ಮೊಟ್ಟೆ ಹೊಡೆಯುವುದಿಲ್ಲ. ಅಲ್ಲದೆ ಮೊಟ್ಟೆಯ ಸಿಪ್ಪೆಯನ್ನು ಸುಲಭವಾಗಿ ಸುಳಿಯಬಹುದು.

ಪುಷ್ಪಗುಚ್ಛ ಅಲಂಕಾರ: ನೀರಿನಲ್ಲಿ ವಿನೆಗರ್ ಹನಿಗಳನ್ನು ಮಿಶ್ರ ಮಾಡಿ ಪುಷ್ಪಗುಚ್ಛಗಳಿಗೆ ಸಿಂಪಡಿಸುವುದರಿಂದ ಹೂ ಅರಳಿರುತ್ತದೆ. ಹಾಗೆಯೇ ಗಿಡಗಳಲ್ಲಿ ಅರಳಿರುವ ಹೂಗಳಿಗೆ ಸ್ಪ್ರೇ ಮಾಡಿದರೆ ತುಂಬಾ ಹೊತ್ತಿನವರೆಗೆ ತಾಜಾವಾಗಿ ಕಾಣಿಸುತ್ತದೆ.

ಕೂದಲ ಸಮಸ್ಯೆ : ಒಣ ಕೂದಲ ಸಮಸ್ಯೆಗೆ ವಿನೆಗರ್​ನಿಂದ ಪರಿಹಾರ ಕಾಣಬಹುದು. ತಲೆಗೆ ಶಾಂಪೂ ಹಾಕಿದ ಬಳಿಕ ಅರ್ಧ ಚೊಂಬು ನೀರಿನಲ್ಲಿ ಎರಡು ಚಮಚ ವಿನೆಗರ್ ಹಾಕಿ ಕೂದಲನ್ನು ತೊಳೆಯಿರಿ. ಸ್ವಲ್ಪ ಸಮಯದ ಬಳಿಕ ಶುದ್ದ ನೀರಿನಿಂದ ಮತ್ತೊಮ್ಮೆ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಒಣ ಕೂದಲಿನ ಸಮಸ್ಯೆಗೆ ಪರಿಹಾರ ಕಾಣಬಹುದು.

ಇರುವೆಗಳ ಕಾಟಕ್ಕೆ ಪರಿಹಾರ : ಬೇಸಿಗೆಯಲ್ಲಿ ಮನೆಯ ಒಳಾಂಗಣದಲ್ಲಿ ಇರುವೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಜಾಗದಲ್ಲಿ ವಿನೆಗರ್ ಸಿಂಪಡಿಸಿದರೆ ಇರುವೆಗಳು ಬರುವುದಿಲ್ಲ.
First published:July 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ