ಕಿಡ್ನಿ ಕಲ್ಲಿನ ಸಮಸ್ಯೆಗೆ ಈ ಆಹಾರ ಮಾರಣಾಂತಿಕ

news18
Updated:May 23, 2018, 12:09 PM IST
ಕಿಡ್ನಿ ಕಲ್ಲಿನ  ಸಮಸ್ಯೆಗೆ ಈ ಆಹಾರ ಮಾರಣಾಂತಿಕ
news18
Updated: May 23, 2018, 12:09 PM IST
ಮನುಷ್ಯನ ಶರೀರದಲ್ಲಿ ಮೂತ್ರಪಿಂಡಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇವು ರಕ್ತವನ್ನು ಹಾಳುವ ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ, ಮೂತ್ರದ ಮೂಲಕ ಹೊರ ಹಾಕಿ ಲವಣಗಳ ಸಮತೋಲನವನ್ನು ಕಾಪಾಡುತ್ತವೆ. ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಫಟಿಕ ರೂಪದಲ್ಲಿ ಮಾರ್ಪಟ್ಟು ಘನ ವಸ್ತುವಾಗಿ ಪರಿವರ್ತನೆಯಾಗುತ್ತವೆಯೋ ಅದನ್ನು ಮೂತ್ರಕೋಶದ ಕಲ್ಲು ಅಥವಾ ಕಿಡ್ನಿ ಸ್ಟೋನ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಇರುವವರು ಆಹಾರ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಟೊಮ್ಯಾಟೊ, ಬದನೆಕಾಯಿ, ಸೀಬೆಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸಹ ಕಿಡ್ನಿ ಸ್ಟೋನ್ ಸಮಸ್ಯೆ ಕಂಡು ಬರುತ್ತದೆ.


ಕಿಡ್ನಿಯಲ್ಲಿ ಕಲ್ಲು ​ ಉಂಟಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದು ಕಡಿಮೆ ನೀರು ಕುಡಿಯುವುದು ಮತ್ತು ಟೊಮ್ಯಾಟೊ, ಬದನೆಕಾಯಿಯ ಹೆಚ್ಚಿನ ಸೇವನೆ. ಸಾಮಾನ್ಯವಾಗಿ ಕಂಡು ಬರುವ ಈ ಸಮಸ್ಯೆಯನ್ನು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಹೋಗಲಾಡಿಸಬಹುದು. ಆದರೆ ಕೆಲವರಿಗೆ ಈ ಸಮಸ್ಯೆ ಕಾಣಿಸಿಕೊಂಡರೆ ಬಹುಬೇಗ ಪರಿಹಾರ ಲಭಿಸುವುದಿಲ್ಲ.


ಆರೋಗ್ಯ ತಜ್ಞರ ಪ್ರಕಾರ ಐದು ಮಿ.ಮೀ ನಷ್ಟಿರುವ ಕಲ್ಲು ಮೂತ್ರಕೋಶದಲ್ಲಿ ಕಂಡು ಬಂದರೆ ಅದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಮಾತ್ರ ಹೊರ ತೆಗೆಯಬೇಕಾಗುತ್ತದೆ. ಅದಕ್ಕಿಂತ ಚಿಕ್ಕದಾಗಿರುವ ಕಲ್ಲನ್ನು ಔಷಧಿ ಮತ್ತು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಸುಲಭವಾಗಿ ಹೊರ ತೆಗೆಯಬಹುದು.


ಕಿಡ್ನಿ ಕಲ್ಲಿನ ನೋವು ಹೇಳತೀರದು. ಮೂತ್ರಪಿಂಡದ ಭಾಗದಲ್ಲಿ ಮತ್ತು ಮೂತ್ರ ನಾಳಗಳಲ್ಲಿ ಇದರ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರಕೋಶದ ಕಲ್ಲು ಎಲ್ಲಿ ಕಂಡುಬರುತ್ತದೋ ಆ ಭಾಗಗಳಲ್ಲಿ ನೋವಿರುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಮತ್ತು ಆಕ್ಸಲೇಟ್ (oxalate) ಅಂಶಗಳನ್ನು ಹೊಂದಿರುವ  ಹಣ್ಣು-ತರಕಾರಿಗಳ ಅಧಿಕ ಸೇವನೆಯಿಂದ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ.


ಆಕ್ಸಲೇಟ್ (oxalate) ಅಂಶಗಳನ್ನು ಹೊಂದಿರುವ  ಪಾಲಕ ಸೊಪ್ಪು, ಬದನೆಕಾಯಿ,ಟೊಮ್ಯಾಟೊಗಳನ್ನು ಸೇವಿಸುವುದಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕಾಗುತ್ತದೆ. ಮೂತ್ರದ ಮೂಲಕ ಇವುಗಳ ಲವಣಾಂಶಗಳು ಹೊರ ಹೋಗುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು.
First published:May 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...