ಉಪ್ಪಿನ ಉಪಯೋಗ : ಉಪ್ಪನ್ನು ಬಳಸಿ ಸೌಂದರ್ಯ ಹೆಚ್ಚಿಸಿ

news18
Updated:June 2, 2018, 4:19 PM IST
ಉಪ್ಪಿನ ಉಪಯೋಗ : ಉಪ್ಪನ್ನು ಬಳಸಿ ಸೌಂದರ್ಯ ಹೆಚ್ಚಿಸಿ
news18
Updated: June 2, 2018, 4:19 PM IST
ನ್ಯೂಸ್ 18 ಕನ್ನಡ

'ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ' ಎಂಬ ಗಾದೆ ಮಾತೊಂದಿದೆ. ಯಾವುದೇ ಭಕ್ಷ್ಯ ಪದಾರ್ಥದಲ್ಲೂ ಉಪ್ಪು ಸ್ವಲ್ಪ ಏರುಪೇರಾದರೂ ನಾಲಿಗೆ ರುಚಿಯನ್ನು ಕೆಡಿಸುತ್ತದೆ. ಆಹಾರದ ರುಚಿಗೆ ಅಲ್ಲದೆ ಮನೆಮದ್ದಾಗಿಯು ಉಪ್ಪು ಬಹಳ ಪ್ರಯೋಜನಕಾರಿ.

ಆದರೆ ಉಪ್ಪು ಸೌಂದರ್ಯವರ್ಧಕ ಎಂದರೆ ನಂಬುತ್ತೀರಾ? ಸೋಡಿಯಂ ಕ್ಲೋರೈಡ್ ಎಂಬ ರಾಸಾಯನಿಕ ವಸ್ತುವನ್ನು ಹೊಂದಿರುವ ಉಪ್ಪನ್ನು ಉಪಯೋಗಿಸಿ ಸೌಂದರ್ಯ ಕೂಡ ಹೆಚ್ಚಿಸಬಹುದು. ಪ್ರತಿನಿತ್ಯ ಅಡುಗೆ ಉಪ್ಪನ್ನು ಬಳಸಿ ಸೌಂದರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

1- ಡೆಡ್ ಸ್ಕಿನ್​​ಗೆ ಪರಿಹಾರ : ಬೇಸಿಗೆಯಲ್ಲಿ ತ್ವಚೆಯು ತುಂಬಾ ಹಾನಿಗೊಳಗಾಗುತ್ತದೆ. ತ್ವಚೆಯ ಜೀವಕೋಶಗಳು ನಿರ್ಜೀವವಾಗುವುದರಿಂದ ಚರ್ಮವು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಇಂತಹ ಅನಗತ್ಯ ಜೀವಕೋಶಗಳನ್ನು ತೆಗೆದು ಹಾಕಲು ಉಪ್ಪು ಸಹಾಯಕವಾಗಿದೆ. ಉಪ್ಪನ್ನು ಅಲಿವ್ ಆಯಿಲ್, ಲೆವೆಂಡರ್ ಆಯಿಲ್ ಮತ್ತು ಬಾದಾಮಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿಕೊಳ್ಳಿ. ಕೆಲ ನಿಮಿಷಗಳ ಬಳಿಕ ಮುಖವನ್ನು ತೊಳೆದರೆ ತ್ವಚೆಯು ಕಾಂತಿಯುತವಾಗಿರುತ್ತದೆ.

2- ಬಿಳಿ ಹಲ್ಲು : ಹಳದಿ ಹಲ್ಲಿನ ಸಮಸ್ಯೆಗಳು ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಯಾವುದೇ ಟೂತ್​ಪೇಸ್ಟ್ ಬಳಸಿದರೂ ಪರಿಹಾರ ಸಿಗದ ಹಳದಿ ಹಲ್ಲುಗಳಿಗೆ ಉಪ್ಪು ರಾಮಬಾಣ. ಒಂದು ಟೀ ಸ್ಪೂನ್ ಉಪ್ಪಿಗೆ ಎರಡು ಟೀ ಸ್ಪೂನ್ ಅಡುಗೆ ಸೋಡಾ ಅಥವಾ ಬೇಕಿಂಗ್ ಪೌಡರ್​ನ್ನು ಮಿಶ್ರಣ ಮಾಡಿ. ಈ ಪೇಸ್ಟ್​ ಅನ್ನು ಬಳಸಿ ಪ್ರತಿನಿತ್ಯ ಹಲ್ಲು ಉಜ್ಜುವುದರಿಂದ ಹಳದಿ ಹಲ್ಲನ್ನು ಬಿಳಿಯಾಗಿಸಬಹುದು.

3- ಉಗುರಿನ ಹೊಳಪು : ವಿಟಮಿನ್​ಗಳ ಕೊರೆತೆಯಿಂದಾಗಿ ಉಗುರುಗಳು ದುರ್ಬಲಗೊಳ್ಳುತ್ತದೆ. ಇದರಿಂದ ಉಗುರುಗಳು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ಒಂದು ಟೀ ಸ್ಪೂನ್ ಉಪ್ಪು, ಒಂದು ಚಮಚ ನಿಂಬೆ ರಸ, ಒಂದು ಟೀ ಸ್ಪೂನ್ ಅಡುಗೆ ಸೋಡಾವನ್ನು ಅರ್ಧ ಲೋಟ ನೀರಿನಲ್ಲಿ ಮಿಶ್ರಣ ಮಾಡಿ. ಈ ಪೇಸ್ಟ್​ ಅನ್ನು ದಿನಂಪ್ರತಿ ಉಗುರಿನ ಮೇಲೆ ಹಚ್ಚುವುದರಿಂದ ಉಗುರುಗಳು ಹೊಳಪನ್ನು ಪಡೆದುಕೊಳ್ಳುತ್ತದೆ.

4- ಬಾಯಿ ದುರ್ನಾತ : ಉಸಿರಾಟದ ತೊಂದರೆಯನ್ನು ಹೋಗಲಾಡಿಸಲು ಮತ್ತು ಬಾಯಿಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವಲ್ಲಿ ಉಪ್ಪು ಪ್ರಮುಖ ಪಾತ್ರವಹಿಸುತ್ತದೆ. ಉಪ್ಪು ಮಿಶ್ರಿತ ನೀರನ್ನು ಮುಕ್ಕಳಿಸುವುದರಿಂದ ಬ್ಯಾಕ್ಟೀರಿಯಾ ನಾಶವಾಗಿ ಬಾಯಿ ಸ್ವಚ್ಛವಾಗುತ್ತದೆ. ಇದು ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ.
First published:June 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ