ಮಹಿಳೆಯರು, ಪುರುಷರು ಸೇರಿ ಎಲ್ಲರೂ ಮುಖ, ಚರ್ಮದ ಕಾಳಜಿಗಿಂತ (Skin Care) ಇತ್ತೀಚೆಗೆ ಕೂದಲಿನ ಆರೈಕೆ, ಕಾಳಜಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮನೆ ಮದ್ದು (Home ಟ್ರೈ ಮಾಡುವ ಹೊಸ ಟ್ರೆಂಡ್ ಕೂಡ ಈಗ ಜನಪ್ರಿಯವಾಗುತ್ತಿದೆ. ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳ (Natural Things) ಮೂಲಕ ಹೇರ್ ಕೇರ್ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆಲೋವೇರಾ (Aloe Vera), ಅಗಸೆ ಬಿಜ, ದಾಸವಾಳ, ಮೆಂತೆ, ನೆಲ್ಲಿಕಾಯಿ, ಈರುಳ್ಳಿ, ಅಕ್ಕಿ ಬಸಿದ ನೀರು ಹೀಗೆ ಈ ರೀತಿಯ ಮನೆ ಮದ್ದುಗಳು ಕೂದಲ ಆರೈಕೆಯಲ್ಲಿ ಒಳ್ಳೆ ಫಲಿತಾಂಶ ನೀಡುತ್ತಿವೆ ಎಂದು ಹಲವಾರು ಮಂದಿ ಹೇಳುತ್ತಿದ್ದಾರೆ. ಇತ್ತೀಚೆಗೆ, ಕೂದಲಿನ ಬೆಳವಣಿಗೆಯಲ್ಲಿ ಮೇಲೆ ಹೇಳಿದ ಕೆಲ ವಸ್ತುಗಳ ಜೊತೆ ರೋಸ್ಮರಿ ಕೂಡ ಸಾಕಷ್ಟು ಜನಪ್ರಿಯತೆ ಪಡೆದಿದೆ. ಕೂದಲ ಆರೈಕೆಯಲ್ಲಿ ರೋಸ್ಮರಿ ನೀರು (Rosemary Water) ಅದರ ಎಣ್ಣೆಗಳನ್ನು ಶಾಂಪೂವಿನ ಜೊತೆ ಬಳಕೆ ಮಾಡುತ್ತಿದ್ದಾರೆ.
ರೋಸ್ಮರಿ ಎಂಬ ಸೂಪರ್ ಹರ್ಬ್
ರೋಸ್ಮರಿ ಎನ್ನುವುದು ಒಂದು ಸುವಾಸನಾಭರಿತ, ನಿತ್ಯ ಹರಿದ್ವರ್ಣ ಸಸ್ಯ. ಚೂಪಾದ ಎಲೆ ಹೊಂದಿರುವ ರೋಸ್‌ಮರಿ ಬಿಳಿ, ಗುಲಾಬಿ, ನೀಲಿ ಹಾಗೂ ನೇರಳೆ ಬಣ್ಣದ ಹೂವು ಬಿಡುತ್ತದೆ. ಇದನ್ನು ಉದ್ಯಾನಗಳಲ್ಲಿ ಅಲಂಕಾರಿಕ ಸಸ್ಯವನ್ನಾಗಿ ಬೆಳೆಯಲಾಗುತ್ತದೆ. ಈ ರೋಸ್ಮರಿ ಈಗ ಸೌಂದರ್ಯ ಚಿಕಿತ್ಸೆಯಾಗಿಯೂ ಬಳಕೆಯಾಗುತ್ತಿದೆ. ಹಾಗಾದರೆ ಕೂದಲ ಆರೈಕೆಯಲ್ಲಿ ರೋಸ್ಮರಿಯ ಪಾತ್ರವೇನು? ಪ್ರಯೋಜನಗಳೇನು? ಹೇಗೆ ಬಳಕೆ ಮಾಡಬೇಕು ಎಂಬುದನ್ನು ನೋಡೋಣ.
ರೋಸ್ಮರಿಯ ಪ್ರಯೋಜನಗಳು
ಆಹಾರದಲ್ಲಿ ಮತ್ತು ಅದರ ಔಷಧೀಯ ಗುಣಗಳಿಗಾಗಿ ಬಳಸಲಾಗುವ ಸುಗಂಧಭರಿತ ಮೂಲಿಕೆ, ರೋಸ್ಮರಿಯನ್ನು ಆಯುರ್ವೇದದಲ್ಲಿ ರುಜಾಮರಿ ಎಂದು ಕರೆಯಲಾಗುತ್ತದೆ. ಸಸ್ಯವನ್ನು ಅರಿವಿನ ಉತ್ತೇಜಕವೆಂದು ಪರಿಗಣಿಸಲಾಗುತ್ತದೆ, ಇದು ಮೆಮೊರಿ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಸುಧಾರಿಸಲು, ಜಾಗರೂಕತೆ, ಬುದ್ಧಿವಂತಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ಆತಂಕ ಅಥವಾ ಒತ್ತಡದ ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವವರಿಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಕೂದಲಿನ ಬೆಳವಣಿಗೆಯಲ್ಲಿ ರೋಸ್ಮರಿ
ರೋಸ್ಮರಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ನೆತ್ತಿಯ ಉರಿಯೂತವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕೂದಲು ಕಿರುಚೀಲಗಳಿಗೆ ರಕ್ತ ಪೂರೈಕೆಯನ್ನು ಉತ್ತೇಜಿಸಲು ಮತ್ತು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲ ಬೆಳವಣಿಗೆಗೆ ತೊಡಕು ಉಂಟುಮಾಡುವ ಕೂದಲಿನ ತುದಿ ಒಡೆಯುವಿಕೆ, ತಲೆಹೊಟ್ಟುಗಳನ್ನು ಸಹ ನಿವಾರಣೆ ಮಾಡುತ್ತದೆ.
ರೋಸ್ಮರಿ ಬಳಕೆ ಮಾಡುವುದು ಹೇಗೆ?
ನಿಮ್ಮ ನೆತ್ತಿಯ ಮೇಲೆ ರೋಸ್ಮರಿ ನೀರನ್ನು ಸಿಂಪಡಿಸಿಕೊಂಡರೆ ಸಾಕು ಕೂದಲ ಬೆಳವಳಿಗೆ ಉತ್ತಮವಾಗುತ್ತದೆ. ರೋಸ್ಮರಿ ನೀರಿನ ಜೊತೆ ರೋಸ್ಮರಿ ಎಣ್ಣೆಯನ್ನು ಸಹ ಕೂದಲಿಗೆ ಹಚ್ಚಬಹುದು. ಸ್ನಾನಕ್ಕೂ ಮುನ್ನ ಅರ್ಧಗಂಟೆಯ ಮೊದಲು ಈ ಎಣ್ಣೆಯನ್ನು ಕೂದಲಿಗೆ ಅನ್ವಯಿಸಬೇಕು. ರೋಸ್ಮರಿ ಚಹಾ ಕೂಡ ಆರೋಗ್ಯ ಪ್ರಯೋಜನದ ಜೊತೆ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ನೀವು ಬಳಸುವ ಶಾಂಪೂವಿನ ಜೊತೆ ಸಹ ರೋಸ್ಮರಿ ನೀರನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಬಹುದು.
ಇದನ್ನೂ ಓದಿ; Hair Fall: ಕೂದಲು ತುಂಬಾ ಹೋಗಿದೆ ಅಂತ ಟೆನ್ಶನ್ ಆಗ್ಬೇಡಿ, ಹೇರ್ ಫಾಲ್ಸ್ ತಡೆಯೋಕೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ರೋಸ್ಮರಿ ಇನ್ಫ್ಯೂಸ್ಡ್ ನೀರನ್ನು ತಯಾರಿಸುವುದು ಹೇಗೆ?
ಮೊದಲಿಗೆ ರೋಸ್ಮರಿ ಎಲೆಗಳ ಕೆಲವು ಚಿಗುರುಗಳನ್ನು ತೆಗೆದುಕೊಳ್ಳಿ, ಅದನ್ನು 2 ಕಪ್ ನೀರಿನಲ್ಲಿ 15 ನಿಮಿಷಗಳ ಕಾಲ ಕುದಿಸಿ. ನಂತರ ಈ ನೀರು ತಣಿದ ಮೇಲೆ ಸ್ಪ್ರೇ ಬಾಟಲಿಗೆ ವರ್ಗಾಯಿಸಿ ಮೊದಲು ಅದನ್ನು ತಣ್ಣಗಾಗಲು ಬಿಡಿ. ಕೂದಲ ಬೆಳೆವಣಿಗೆ ಹೆಚ್ಚಿಸಲು ಆಗಾಗ ನಿಮ್ಮ ನೆತ್ತಿಗೆ ಈ ನೀರನ್ನು ಸಿಂಪಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ