Onion Benefits: ಕೆಂಪು ಈರುಳ್ಳಿಗಿಂತ ಬಿಳಿ ಈರುಳ್ಳಿ ಆರೋಗ್ಯಕರವಂತೆ! ಹೇಗೆ ಗೊತ್ತಾ?

ಬಿಳಿ ಈರುಳ್ಳಿ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಉರಿಯೂತ ನಿವಾರಕ ಮತ್ತು ಆ್ಯಂಟಿಬಯೋಟಿಕ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ಆರ್ಯುವೇದ ಅತೀ ಹೆಚ್ಚು ಬೆಲೆಯನ್ನು ಹೊಂದಿದೆ ಎಂದು ಪೌಷ್ಠಿಕ ತಜ್ಞರಾದ ಡಾ.ರಚನಾ ಅಗರ್ವಾಲ್ ಹೇಳಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಂಪು ಈರುಳ್ಳಿ (Red Onion) ಬಿಳಿ ಈರುಳ್ಳಿ  (White Onion) ಕೆಲವು ಸಾಮಾನ್ಯ ವಿಷಯಗಳನ್ನು ಹೊಂದಿದ್ದರೂ ಅವುಗಳ ನಡುವೆ  ಅವೆರಡನ್ನೂ  ಪ್ರತ್ಯೇಕಿಕರಿಸುವ ಕೆಲವು ಗುಣಲಕ್ಷಣಗಳಿವೆ ಎಂದು ಪೌಷ್ಠಿಕ ತಜ್ಞೆ (Nutrition) ಡಾ. ರಚನಾ (Dr. Rachana) ಹೇಳಿದ್ದಾರೆ. ಬಿಳಿ ಈರುಳ್ಳಿಯನ್ನು ಸಾಮಾನ್ಯವಾಗಿ ಆಹಾರಗಳನ್ನು (Food), ಖಾದ್ಯಗಳನ್ನು ಅಥವಾ ಭಕ್ಷ್ಯಗಳನ್ನು ತಯಾರಿಸಲು ಬಳಸುವುದಿಲ್ಲ. ಆದರೆ ಇದು ಅತ್ಯಂತ ಆರೋಗ್ಯಕರವಾಗಿದೆ (Healthy). ಇದು ತಿಳಿಯಾದ ಸಿಪ್ಪೆ ಮತ್ತು ಸುವಾಸನೆಗೆ ಪ್ರಸಿದ್ದಿಯಾಗಿದೆ. ಇದನ್ನು ಬೇಯಿಸಿಯೂ ತಿನ್ನಬಹುದು ಅಥವಾ ಬೇಯಿಸದೆಯೂ ಸೇವಿಸಬಹುದಾಗಿದೆ.

    ಹೌದು ಬಿಳಿ ಈರುಳ್ಳಿ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಉರಿಯೂತ ನಿವಾರಕ ಮತ್ತು ಆ್ಯಂಟಿಬಯೋಟಿಕ್ ಗುಣಲಕ್ಷಣಗಳನ್ನು ಹೊಂದಿದೆ. ಅಲ್ಲದೆ ಆರ್ಯುವೇದ ಅತೀ ಹೆಚ್ಚು ಬೆಲೆಯನ್ನು ಹೊಂದಿದೆ ಎಂದು ಪೌಷ್ಠಿಕ ತಜ್ಞರಾದ ಡಾ.ರಚನಾ ಅಗರ್ವಾಲ್ ಹೇಳಿದರು.

    ಈರುಳ್ಳಿ ಉಪಯೋಗ ತಿಳಿಸಿದ ಸಂಜೀವ್ ಕಪೂರ್

    ಇತ್ತೀಚಿಗೆ ಬಾಣಸಿಗ ಸಂಜೀವ ಕಪೂರ್ ರವರು ತಮ್ಮ ಅದ್ಭುತ ಆಹಾರದ ಪ್ರಯೋಜನಗಳನ್ನು ಇನ್ಸ್ಟ್ರಾಗ್ರಾಂ ನಲ್ಲಿ ಹಂಚಿಕೊಂಡರು. ಅಲ್ಲಿ ಅವರು, ಕ್ಯಾ ಆಪ್ ಜಾಂತೇ ದಿ, ಪ್ಯಾಜ್, ನಮ್ಮ ದಿನನಿತ್ಯದ ಅಡಿಗೆ ಅಗತ್ಯವು ಸೂರ್ಯನ ವಿರುದ್ಧ ಮತ್ತು ಬಿಸಿಲಿನ ಬೇಗೆಯ ನಡುವೆಯೂ ಸಹಾಯ ಮಾಡುತ್ತದೆ? ದೇಹವನ್ನು ತಂಪಾಗಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ಆ್ಯಂಟಿಬ್ಯಾಕ್ಟಿರಿಯಲ್ ಗುಣಲಕ್ಷಣಗಳನ್ನು ಹೊಂದಿದೆ ರೋಗನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಂದು ಅವರು ತಮ್ಮ ಪೋಸ್ಟಿಗೆ ಶೀರ್ಷಿಕೆ ನೀಡಿದ್ದಾರೆ.

    ಇದನ್ನೂ ಓದಿ: Immunity: ಮಳೆಗಾಲದಲ್ಲಿ ಇಮ್ಯೂನಿಟಿ ಹೆಚ್ಚಾಗಲು ತಿನ್ನಲೇಬೇಕಾದ 7 ಸೀಸನ್‌ ಹಣ್ಣುಗಳಿವು

    ಪೌಷ್ಟಿಕ ತಜ್ಞರಾದ ಡಾ. ರಚನಾ ಅಗರ್ವಾಲ್ ಬಾಣಸಿಗ ಸಂಜೀವ ಕಪೂರ್ ರವರ ಈ ಅಭಿಪ್ರಾಯಗಳನ್ನು ಒಪ್ಪಿಕೊಂಡರು ಮತ್ತು ಜೊತೆಗೆ ಇನ್ನೂ ಕೆಲವು ಪ್ರಯೋಜನಗಳನ್ನು ಪಟ್ಟಿ ಮಾಡಿದರು;

    1. ಸೋಂಕು ನಿವಾರಣೆಗೆ ಒಳ್ಳೆಯದು - ಬಿಳಿ ಈರುಳ್ಳಿ ಮುಖ್ಯವಾಗಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಸೋಂಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತು ಇದರ ಪ್ರತಿಜೀವಕ ಗುನಲಕ್ಷಣಗಳಿಂದಾಗಿ ಕಣ್ಣು, ಮೂಗು ಮತ್ತು ಕಿವಿಗೆ ಸಂಬಂಧಿತ ಸೋಂಕುಗಳ ನಿವಾರಣೆಗೂ ಸಹಾಯ ಮಾಡುತ್ತದೆ ಎಂದು ಡಾ. ರಚನಾ ಅಗರ್ವಾಲ್ ಹೇಳಿದರು.

    2. ಆಮ್ಲೀಯತೆಯ ಸಮತೋಲನ- ಅನೇಕ ಆಹಾರಗಳು ಪ್ರಕೃತಿಯಲ್ಲಿ ಹೆಚ್ಚು ಆಮ್ಲೀಯವಾಗಿದ್ದು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳಲ್ಲಿ ಸಮೃದ್ಧವಾಗಿರುವಂತಹವುಗಳಾಗಿವೆ ,ಇದು ದೇಹವನ್ನು ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತದೆ ಎಂದು ಅನೇಕ ಪರಿಣಿತರು ಹೇಳಿದ್ದಾರೆ. ಆದರೆ ಬಿಳಿ ಈರುಳ್ಳಿಯೂ ನೈಸರ್ಗಿಕವಾಗಿ ಕ್ಷಾರೀಯವಾಗಿದ್ದು, ಇದನ್ನು ಆಹಾರಕ್ಕೆ ಸೇರಿಸಿದಾಗ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳ ಆಮ್ಲೀಯತೆಯನ್ನು ಸರಿದೂಗಿಸಯತ್ತದೆ. ಎಂದು ಡಾ. ರಚನಾ ಹೇಳಿದರು.

    3. ಉಸಿರಾಟದ ಕಾಯಿಲೆಯನ್ನು ಗುಣಪಡಿಸುತ್ತದೆ- ರೋಗನಿರೋಧಕ ಮತ್ತು ಪ್ರತಿಜೀವಕ ಗುಣಲಕ್ಷಣಗಳಿಂದಾಗಿ ಬಿಳಿ ಈರುಳ್ಳಿಯು ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು. ಜೇನುತುಪ್ಪದೊಂದಿಗೆ ಬಿಳಿ ಈರುಳ್ಳಿ ರಸವು ಉತ್ತಮ ಕೆಮ್ಮು ಸಿರಪ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಡಾ.ರಚನಾ ಹೇಳಿದರು. ಅಲ್ಲದೆ ಈ ಮಿಶ್ರಣವನ್ನು ಐದು ಗಂಟೆಗಳವರೆಗೆ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಬಹುದು ಎಂದರು. ಆರ್ಯುವೇದದಲ್ಲಿ ಈ ಮಿಶ್ರಣವನ್ನು ವ್ಯಕ್ತಿಯ ಎದೆಯ ಮೇಲೆ ಹಚ್ಚಿ ಹತ್ತಿ ಬಟ್ಟೆಯಲ್ಲಿ ಸುತ್ತುವ ಮೂಲಕ ಉಸಿರಾಟದ ತೊಂದರೆಯನ್ನು ಪರಿಹರಿಸಲಾಗುತ್ತದೆ ಎಂದರು.

    4. ಕೂದಲು ಬೆಳವಣಿಗೆಗೆ ಸಹಾಯ- ಬಿಳಿ ಈರುಳ್ಳಿಯ ರಸವನ್ನು ನೆತ್ತಿಯ ಮೇಲೆ ಹಚ್ಚುವುದರಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ ಮತ್ತು ಸದೃಢವಾಗಿರುತ್ತದೆ.

    ಇದನ್ನೂ ಓದಿ: Health Tips: ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿ ಕುಡಿದು ನೋಡಿ! ಇದರ ಚಮತ್ಕಾರ ಅದ್ಭುತ

    ಬಿಳಿ ಈರುಳ್ಳಿ ಕೆಂಪು ಈರುಳ್ಳಿಗಿಂತ ಹೇಗೆ ಭಿನ್ನವಾದುದು?

    ಕೆಂಪು ಈರುಳ್ಳಿ ಮತ್ತು ಬಿಳಿ ಈರುಳ್ಳಿಯು ಕೆಲವು ವಿಷಯಗಳಲ್ಲಿ ಸಾಮಾನ್ಯ ಹೋಲಿಕೆಯನ್ನು ಹೊಂದಿದ್ದರೂ ಅವುಗಳ ನಡುವೆ ಪ್ರತ್ಯೇಕಿಕರಿಸುವ ಗುಣಲಕ್ಷಣಗಳಿವೆ. ಬಿಳಿ ಈರುಳ್ಳಿಯು ಕೆಂಪು ಈರುಳ್ಳಿಗಿಂತ ಹೆಚ್ಛು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಮತ್ತು ಬಿಳಿ ಈರುಳ್ಳಿಯೂ ಸಹ ಕೆಂಪು ಈರುಳ್ಳಿಯಂತೆ ಕಟುವಾಗಿರುವುದಿಲ್ಲ ಎಂದು ಪೌಷ್ಠಿಕ ತಜ್ಞೆ ಡಾ. ರಚನಾ ಅಗರ್ವಾಲ್ ಹೇಳಿದರು.
    Published by:Annappa Achari
    First published: