ಗರ್ಭಿಣಿಯರು ದಾಳಿಂಬೆ ಸೇವಿಸಬಹುದೇ?: ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವಿದೆ!

news18
Updated:June 10, 2018, 2:30 PM IST
ಗರ್ಭಿಣಿಯರು ದಾಳಿಂಬೆ ಸೇವಿಸಬಹುದೇ?: ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವಿದೆ!
news18
Updated: June 10, 2018, 2:30 PM IST
-ನ್ಯೂಸ್ 18 ಕನ್ನಡ

ಗರಿಗರಿ ಬೀಜಗಳನ್ನು ಹೊಂದಿರುವ ದಾಳಿಂಬೆಯಲ್ಲಿ ದೇಹಕ್ಕೆ ಬೇಕಾಗುವ ಹಲವಾರು ರೀತಿಯ ಪೋಷಕಾಂಶಗಳಿವೆ. ಇದನ್ನು ಪ್ರತಿಯೊಬ್ಬರೂ ಸೇವಿಸಬಹುದು. ಅದರಲ್ಲೂ ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವಿಸಿದರೆ ಹಲವಾರು ರೀತಿಯ ಲಾಭಳಿವೆ.

ಗರ್ಭಿಣಿಯರು ದಾಳಿಂಬೆ ತಿನ್ನಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ವಾದ ಪ್ರತಿವಾದಗಳು ಇದ್ದೇ ಇವೆ. ಅವುಗಳಿಗೆ ಅವರು ತಮ್ಮದೇ ಆದ ಸಮರ್ಥನೆ ನೀಡುವವರೂ ಇದ್ದಾರೆ. ಅದೇನಿದ್ದರೂ ಗರ್ಭಿಣಿಯರು ದಾಳಿಂಬೆ ಸೇವಿಸುವುದು ಅತೀ ಅಗತ್ಯವೆಂದು ಕೆಲ ಅಧ್ಯಯನಗಳಿಂದ ಸ್ಪಷ್ಟವಾಗಿದೆ.

ನೀವು ಗರ್ಭಿಣಿಯಾಗಿದ್ದು, ಅತ್ಯಧಿಕ ಮಟ್ಟದ ಪೋಷಕಾಂಶಗಳು ದೇಹಕ್ಕೆ ಸಿಗಬೇಕೆಂದರೆ ದಾಳಿಂಬೆ ಸೇವಿಸಿ. ಬಹುತೇಕ ಮಂದಿ ದಾಳಿಂಬೆಯನ್ನು ರುಚಿಯಿಂದ ಇಷ್ಟಪಡುತ್ತಾರೆ. ಅಲ್ಲದೇ ಹಸಿವಾಗುವಾಗ ಅಧಿಕ ಕ್ಯಾಲೊರಿಯ ತಿಂಡಿಗಳನ್ನು ಸೇವಿಸುವ ಬದಲು ದಾಳಿಂಬೆಯನ್ನು ತಿನ್ನಲಿಚ್ಛಿಸುತ್ತಾರೆ.

ಗರ್ಭಿಣಿಯರು ದಾಳಿಂಬೆ ಸೇವಸುವುದರಿಂದ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ಪೋಷಕಾಂಶ ನೀಡುತ್ತದೆ. ಗರ್ಭಿಣಿಯರಿಗೆ ಸಿಹಿ ತಿನ್ನುವ ಆಸೆಯಾಗುತ್ತಿದ್ದರೆ ಒಂದು ಮುಷ್ಟಿ ದಾಳಿಂಬೆ ನೀಡಿ. ದಾಳಿಂಬೆ ಜ್ಯೂಸ್ ಕೂಡ ಕುಡಿಯಬಹುದು. ಇದು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು.

ಎರಡನೇ ಹಾಗೂ ಮೂರನೇ ತಿಂಗಳಿನಲ್ಲಿ ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವಿಸುವುದರಿಂದ ಕ್ಯಾಲೊರಿ ಮತ್ತು ಪೋಷಕಾಂಶಗಳು ಸಿಗುವುದು. ಇದು ರುಚಿ ಮಾತ್ರವಲ್ಲದೆ, ಗರ್ಭಧಾರಣೆ ವೇಳೆ ಹಲವಾರು ರೀತಿಯ ಆರೋಗ್ಯಕರ ಲಾಭಗಳನ್ನು ಕೂಡ ನೀಡುತ್ತವೆ.

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು:
Loading...

* ಗರ್ಭಧಾರಣೆ ವೇಳೆ ಮಲಬದ್ಧತೆಯಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಿರುವಾಗ ನಾರಿನಾಂಶ ಹೆಚ್ಚಾಗಿರುವ ಆಹಾರವನ್ನು ಸೇವವಿಸುವುದರಿಂದ ಮಲಬದ್ಧತೆಯಂತಹ ಸಮಸ್ಯೆ ಕಡಿಮೆಯಾಗುತ್ತದೆ.
* ದಾಳಿಂಬೆ ಸೇವಿಸುವುದರಿಂದ ನಿಮಗೆ ಪ್ರತಿನಿತ್ಯ ಬೇಕಾಗಿರುವ ಕಬ್ಬಿಣದ ಅಂಶವು ಸಿಗುವುದು.
* ದಾಳಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ ಮತ್ತು ಇದರಿಂದ ದೇಹವು ಕಬ್ಬಿಣದ ಅಂಶವನ್ನು ಸರಿಯಾಗಿ ಹೀರಿಕೊಳ್ಳುವಂತೆ ಮಾಡುವುದು.

ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವಿಸಿದರೆ ಎಷ್ಟು ಲಾಭವಿದಯೋ ಅದರಿಂದ ಅಪಾಯ ಕೂಡ ಅಷ್ಟೇ ಎಂಬ ಬಗ್ಗೆ ಅರಿವಿರಲಿ

ಗರ್ಭಿಣಿ ಮಹಿಳೆಯರಿಗೆ ದಾಳಿಂಬೆ ಸೇವನೆಯಿಂದಾಗುವ ಅಪಾಯಗಳು:

* ದಾಳಿಂಬೆ ಸೇವನೆ ಮಾಡುವಾಗ ಅದರ ಸಿಪ್ಪೆಯ ಅಂಶವನ್ನು ಸೇವಿಸಿದರೆ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಯಿದೆ.
* ದಾಳಿಂಬೆ ಜ್ಯೂಸ್ ಮಾಡಿ ಕುಡಿಯುವುದಾದರೆ ಅದು ಮಿತ ಪ್ರಮಾಣದಲ್ಲಿರಲಿ, ಇದರಲ್ಲಿ ಹೆಚ್ಚಿನ ಕ್ಯಾಲೊರಿ ಇರುತ್ತದೆ ಎಂಬುವುದು ಗಮನದಲ್ಲಿರಲಿ.
* ಗರ್ಭಿಣಿ ಮಹಿಳೆಯರಿಗೆ ನೀಡಲಾಗುವಂತಹ ಕಬ್ಬಿಣದ ಅಂಶವಿರುವ ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆ ಬಿಟ್ಟು ಬೇರೆ ಯಾವುದೇ ಮಾತ್ರೆಗಳ ಸೇವನೆ ಮಾಡುತ್ತಿದ್ದರೆ, ನೀವು ವೈದ್ಯರ ಸಲಹೆ ಪಡೆದ ಬಳಿಕ ದಾಳಿಂಬೆ ಸೇವಿಸುವುದು ಉತ್ತಮ.
* ರಕ್ತದೊತ್ತಡ ಮತ್ತು ರಕ್ತ ತೆಳುಗೊಳಿಸುವ ಔಷಧಿ ಸೇವನೆ ಮಾಡುತ್ತಿದ್ದರೆ ದಾಳಿಂಬೆ ಸೇವಿಸದಿರಿ.
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...