Peanuts Benefits: ಹೃದಯದ ಆರೋಗ್ಯದ ಜೊತೆಗೆ ತೂಕ ಇಳಿಕೆ; ಕಡಲೆಕಾಯಿ ಬೀಜದ 7 ಚಮತ್ಕಾರಗಳು

ಕಡಲೆಕಾಯಿ ಬೆಣ್ಣೆ / ಪೀನಟ್ ಬಟರ್ ತಿನ್ನುವುದು ಕೆಲವು ವಿಧದ ಹೊಟ್ಟೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಲೆಕಾಯಿ ಬೀಜ

ಕಡಲೆಕಾಯಿ ಬೀಜ

  • Share this:
ನಾವು ಪ್ರತಿನಿತ್ಯ ಸಿಹಿ ಅಥವಾ ಖಾರದ ತಿನಿಸಿನೊಡನೆ ಕಡಲೇಕಾಯಿ ಬೀಜವನ್ನು(Peanuts) ಸೇವನೆ ಮಾಡುತ್ತೇವೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್(Protein), ಆರೋಗ್ಯಕರ ಕೊಬ್ಬು(Healthy fat), ಪೋಷಕಾಂಶಗಳು ಹೇರಳವಾಗಿದೆ. ಅಲ್ಲದೆ ಸಕ್ಕರೆ ಕಾಯಿಲೆ(Sugar), ಹೃದ್ರೋಗ(Cardio) ಮತ್ತು ಕ್ಯಾನ್ಸರ್(Cancer)​​ನಂತಹ ಕಾಯಿಲೆ ಬಾರದಂತೆ ರಕ್ಷಿಸುತ್ತದೆ. ಸಂಜೆಯ ಕುರುಕಲಾಗಿ ಇಲ್ಲವೇ ಆಹಾರದಲ್ಲಿ ಒಂದು ಭಾಗವಾಗಿ ಈ ದ್ವಿದಳ ಧಾನ್ಯವನ್ನು ನಾವು ಅಳವಡಿಸಿಕೊಂಡಿದ್ದೇವೆ. 'ಅರಾಚಿಸ್ ಹೈಪೋಜಿಯಾ' ಎನ್ನುವ ವೈಜ್ಞಾನಿಕ ಹೆಸರನ್ನು ಹೊಂದಿರುವ ಕಡಲೆಕಾಯಿ 'ಪೀನಟ್​ ಬಟರ್' ಬಡವರ ಬೆಣ್ಣೆಯಾಗಿದೆ.

ಕೇಕ್, ಡೆಸರ್ಟ್ ಇಲ್ಲವೇ ಸ್ನ್ಯಾಕ್​ ರೂಪದಲ್ಲಿ ಕಡಲೇಬೀಜ ಸೇವನೆಯು ತೂಕ ಇಳಿಕೆ ಜೊತೆಗೆ ಹೃದ್ರೋಗವನ್ನು ನಿಯಂತ್ರಿಸುತ್ತದೆ ಎನ್ನುತ್ತಾರೆ ಆಹಾರ ತಜ್ಞರಾದ ಗರಿಮಾ ಗೋಯಲ್. ಇದಿಷ್ಟೇ ಅಲ್ಲದೇ ಕಡಲೇ ಬೀಜದ ಇನ್ನಿತರ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆಯೂ ವಿವರಿಸಿದ್ದಾರೆ.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ವಾಲ್​ನಟ್ಸ್​​ ಮತ್ತು ಬಾದಾಮಿಯಂತಹ ವಿವಿಧ ಒಣ ಬೀಜಗಳು ಹೃದಯಕ್ಕೆ ಆರೋಗ್ಯಕರ ಆಹಾರಗಳಾಗಿವೆ. ಇದರೊಟ್ಟಿಗೆ ಕಡಲೆಕಾಯಿಯೂ ಅಷ್ಟೇ ಪರಿಣಾಮಕಾರಿಯಾಗಿದೆ. ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯಕ್ಕೆ ರಕ್ಷಾ ಕವಚವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುವ ಮೂಲಕ ಪಾರ್ಶ್ವವಾಯು ಬಾರದಂತೆ ಆರೋಗ್ಯ ಕಾಪಾಡುತ್ತದೆ.

ಇದನ್ನೂ ಓದಿ:Metabolism: ಈ 6 ಅಭ್ಯಾಸ ಬಿಡದೆ ಇದ್ರೆ ನಿಮ್ಮ ಮೆಟಬಾಲಿಸಂ ಕಡಿಮೆ ಆಗುತ್ತಂತೆ..!

ತೂಕ ಇಳಿಕೆ

ಕಡಲೇಕಾಯಿಯಲ್ಲಿ ಹೆಚ್ಚಿನ ಅಂಶದ ಕ್ಯಾಲೋರಿ ಮತ್ತು ಕೊಬ್ಬು ಕಂಡು ಬಂದರೂ ಅವು ತೂಕ ಹೆಚ್ಚಿಸುವುದಿಲ್ಲ ಎನ್ನುತ್ತಾರೆ ಸಂಶೋಧಕರು. ಆರೋಗ್ಯಕರ ಕೊಬ್ಬು ಮತ್ತು ತೂಕ ಕಾಯ್ದುಕೊಳ್ಳುವ ಮೂಲಕ ಬೊಜ್ಜಿನ ದೇಹದ ಅಪಾಯ ತಡೆಯುತ್ತವೆ.

ಪಿತ್ತಕೋಶದ ಕಲ್ಲುಗಳ ನಿಯಂತ್ರಣ

ಸರಿಯಾದ ಪ್ರಮಾಣದಲ್ಲಿ ಕಡಲೇಕಾಯಿ ಸೇವಿಸುವುದರಿಂದ ಪುರುಷ ಮತ್ತು ಮಹಿಳೆಯರ ಪಿತ್ತಕೋಶದಲ್ಲಿ ಕಲ್ಲುಗಳು ಕಂಡು ಬರುವುದಿಲ್ಲ. ಇದನ್ನು ಹಲವಾರು ಸಂಶೋಧನೆಗಳು ಬಹಿರಂಗ ಪಡಿಸಿವೆ.

ವಿವಿಧ ಜೈವಿಕ ಸಕ್ರಿಯ ರಾಸಾಯನಿಕಗಳ ಭಂಡಾರ

ಕಡಲೆಬೀಜವು ಐಸೊಫ್ಲಾವೋನ್ಸ್, ರೆಸ್ವೆರಾಟ್ರೋಲ್ ಮತ್ತು ಫೈಟಿಕ್ ಆಸಿಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅಲ್ಲದೇ ಹೆಚ್ಚಿನ ಬಯೋಟಿನ್ (ಗರ್ಭಾವಸ್ಥೆಗೆ ಅಗತ್ಯ), ತಾಮ್ರ, ನಿಯಾಸಿನ್, ಫೋಲೇಟ್, ಮ್ಯಾಂಗನೀಸ್, ರಂಜಕ, ಮೆಗ್ನೀಸಿಯಮ್, ವಿಟಮಿನ್ ಇ, ಮತ್ತು ಥಯಾಮಿನ್, ಇತರ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಅಧಿಕವಾಗಿವೆ.

ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ

ಕಡಿಮೆ ಗ್ಲೈಸೆಮಿಕ್ ಆಹಾರದ ಪಟ್ಟಿಗೆ ಕಡಲೆಕಾಯಿಯೂ ಸೇರ್ಪಡೆಯಾಗುತ್ತದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಟೈಪ್ 2 ಡಯಾಬಿಟೀಸ್ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುತ್ತವೆ ಸಂಶೋಧನೆಗೆಳು.

ಉರಿಯೂತ ಕಡಿಮೆ ಮಾಡುತ್ತದೆ

ಅತ್ಯಧಿಕ ನಾರಿನಾಂಶವನ್ನು ಒಳಗೊಂಡ ಕಾರಣ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಊರಿಯೂತವನ್ನು ನಿಯಂತ್ರಣದಲ್ಲಿಡುತ್ತದೆ.

ಕ್ಯಾನ್ಸರ್ ತಡೆಯುತ್ತದೆ

ಕಡಲೆಕಾಯಿ ಬೆಣ್ಣೆ / ಪೀನಟ್ ಬಟರ್ ತಿನ್ನುವುದು ಕೆಲವು ವಿಧದ ಹೊಟ್ಟೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ವಯಸ್ಸಾದವರಲ್ಲಿ ಗ್ಯಾಸ್ಟ್ರಿಕ್ ಅಲ್ಲದ ಅಡೆನೊಕಾರ್ಸಿನೋಮ ಎನ್ನುವ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Dates Health Benefits: ದಿನದಲ್ಲಿ ಯಾವಾಗ ಖರ್ಜೂರ ತಿನ್ನಬೇಕು? ತಜ್ಞರು ಹೇಳುವುದು ಹೀಗೆ..!

ಎಲ್ಲದರಲ್ಲೂ ಆಗಿ ಬರುವುದು ಮತ್ತು ಆಗದಿರುವುದು ಎರಡು ವಿಧಗಳನ್ನು ಕಾಣಬಹುದು. ಇದೇ ರೀತಿ ಕೆಲವರಿಗೆ ಕಡಲೆ ಬೀಜ ಒಗ್ಗುತ್ತದೆ, ಇನ್ನೂ ಕೆಲವರಿಗೆ ಅಲರ್ಜಿಯಾಗಬಹುದು. ಆದ್ದರಿಂದ ವಾಕರಿಕೆ, ಮುಖದ ಊತ ಕಂಡು ಬಂದರೆ ಕಡಲೇಕಾಯಿ ಸೇವನೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಪೀನಟ್ ಬಟರ್/ ಕಡಲೆ ಕಾಯಿ ಬೆಣ್ಣೆ ಜೊತೆಗೆ ಹುರಿದ, ಬೇಯಿಸಿದ, ಪುಡಿ, ಲಡ್ಡು ರೂಪದಲ್ಲಿ ಕಡಲೆ ಬೀಜವನ್ನು ಸೇವನೆ ಮಾಡಬಹುದು.

ಕುಕೀಸ್ ಮತ್ತು ಪೈ, ಸಲಾಡ್​ನಲ್ಲಿ ಡ್ರೆಸ್ಸಿಂಗ್, ಪೀನಟ್‌ ಬಟರ್‌ ಮತ್ತು ಬಾಳೆ ಹಣ್ಣಿನ ಸ್ಯಾಂಡ್​ವಿಚ್​ ಜೊತೆಗೆ ಸೇವಿಸಬಹುದು. ಅಲ್ಲದೇ ಇಡ್ಲಿ, ದೋಸೆಗೆ ಕಡಲೇಬೀಜದ ಚಟ್ನಿ ಮಾಡಿಕೊಂಡು ರುಚಿ ನೋಡಿ. ನೂಡಲ್ಸ್​ ಆಹಾರದೊಟ್ಟಿಗೂ ಇದನ್ನು ಸವಿಯಬಹುದು.
Published by:Latha CG
First published: