Orange Juice: ದಿನಾ ಈ ಟೈಮಲ್ಲಿ ಕಿತ್ತಳೆ ಜ್ಯೂಸ್ ಕುಡಿದರೆ ಚರ್ಮ ಸುಕ್ಕುಗಟ್ಟುವುದಿಲ್ಲವಂತೆ, ಟ್ರೈ ಮಾಡಿ ನೋಡಿ

Vitamin C ಮತ್ತು E ಬಿಸಿಲಿನಿಂದ ಚರ್ಮವನ್ನು ರಕ್ಷಿಸುತ್ತದೆ ಜೊತೆಗೆ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ. ನೀವು ಆಗಾಗ್ಗೆ ಕಿತ್ತಳೆ ರಸವನ್ನು ಕುಡಿಯುತ್ತಿದ್ದರೆ, ಹಾನಿಗೊಳಗಾದ ಚರ್ಮವು ವೇಗವಾಗಿ ಗುಣ ಮುಖವಾಗುತ್ತೆ.

ಕಿತ್ತಳೆ ರಸ

ಕಿತ್ತಳೆ ರಸ

  • Share this:
ಪ್ರಪಂಚದಾದ್ಯಂತ ಆರೆಂಜ್ ಜ್ಯೂಸ್ (Orange Juice) ರಿಫ್ರೆಶಿಂಗ್ ಡ್ರಿಂಕ್ (Refreshing drink) ಅಂತಾನೆ ಹೆಚ್ಚು ಜನಪ್ರಿಯವಾಗಿದೆ. ಕಿತ್ತಳೆ ರಸವು ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ (Vitamin C), ಪೊಟ್ಯಾಷಿಯಂ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ ನಂತಹ ಖನಿಜಗಳಾಂಶ ಹೊಂದಿದೆ. ರೋಗ ನಿರೋಧಕ ಶಕ್ತಿ(Immune system)ಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು, ತ್ವಚೆಯ ಮೇಲೆ ಸುಕ್ಕು ಹಾಗೂ ನೆರಿಗೆ ಬರುವುದನ್ನು ಇದು ತಡೆಯುತ್ತದೆ. ನಿತ್ಯವೂ ಮುಂಜಾನೆ ಬ್ರೇಕ್ ಫಾಸ್ಟ್(Breakfast)ಗೂ ಮುನ್ನ ತಾಜಾ ಕಿತ್ತಳೆ ಹಣ್ಣಿನ ರಸ(Orange Juice) ಸೇವಿಸುವುದು ಒಳ್ಳೆಯದು. ಇನ್ನು ಕಿತ್ತಳೆ ಹಣ್ಣಿನಿಂದ ಯಾವೆಲ್ಲಾ ಪ್ರಯೋಜನೆ ಇದೆ ಅಂತ ನೋಡೋಣ ಬನ್ನಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ!

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಕಿತ್ತಳೆ ಹಣ್ಣು ಬಹುಮುಖ್ಯ ಪಾತ್ರವಹಿಸುತ್ತದೆ. ದಿನ ನಿತ್ಯ ಒಂದು ಗ್ಲಾಸ್ ಕಿತ್ತಳೆ ಜ್ಯೂಸ್ ಕುಡಿದರೆ ದೇಹಕ್ಕೆ ಅಗತ್ಯವಾದ ವಿಟಮಿನ್ ದೊರೆಯುತ್ತದೆ. ರೋಗಗಳನ್ನು ದೂರವಿಡಲು ಸಹಕಾರಿಯಾಗಿದೆ. ಹಾಗೇ ಹಣ್ಣುಗಳನ್ನ ಸೇವಿಸಿದರೆ ಉಪಹಾರಕ್ಕೆ ಸಮವಾಗಿದೆ. ಒಂದು ಬ್ರೇಕ್ ಫಾಸ್ಟ್ ನೀಡುವಷ್ಟು ಶಕ್ತಿ ಹಾಗೂ ಪೋಷಕಾಂಶವನ್ನು ದೇಹಕ್ಕೆ ನೀಡುತ್ತದೆ.

ಮೂತ್ರಪಿಂಡದ ಕಲ್ಲುಗಳ ನಿವಾರಣೆ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹಲವರನ್ನ ಕಾಡುತ್ತಿರುವ ರೋಗ ಅಂದ್ರೆ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಾಗಿದೆ. ಮೂತ್ರಪಿಂಡದಲ್ಲಿ ಕಲ್ಲುಗಳಾಗಲು ಕಾರಣವಗಳೆಂದ್ರೆ ಮೂತ್ರದ ಸೋಂಕು, ಡಿಹೈಡ್ರೇಶನ್, ಸಂಧಿವಾತ, ಡಿ ಜೀವಸತ್ವದ ವಿಪರೀತ ಸೇವನೆಯಾಗಿದೆ. ಇದ್ರಿಂದ ತೀವ್ರವಾದ ನೋವು, ಮೂತ್ರದಲ್ಲಿ ರಕ್ತ ಮತ್ತು ವಾಕರಿಕೆಗೆ ಕಾರಣವಾಗುತ್ತವೆ. ಆದ್ದರಿಂದ ಕಿತ್ತಳೆ ರಸವು ಮೂತ್ರದ PH ಅನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಯನ್ನು ತಡೆಯಲು ಕಿತ್ತಳೆ ರಸ ಸಹಾಯ ಮಾಡುತ್ತದೆ.

ಇದನ್ನೂ ಓದಿ: Orange Juice: ಸಕ್ಕರೆ ಹಾಕದೇ ಕಿತ್ತಳೆ ಜ್ಯೂಸ್​ ಎಷ್ಟು ಪ್ರಯೋಜನಕಾರಿ ನೋಡಿ

ಕೊಲೆಸ್ಟ್ರಾಲ್ ಮಟ್ಟ ತಗ್ಗಿಸಲು ಸಹಕಾರಿ

ನೀವು ನಿರಂತರವಾಗಿ ಕಿತ್ತಳೆ ರಸವನ್ನು ಕುಡಿಯುತ್ತಿದ್ದರೆ, ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಅತಿಯಾದ ಬೊಜ್ಜಿನ ಸಮಸ್ಯೆ ಇರುವವರು ಆರೆಂಜ್ ಜ್ಯೂಸ್ ಕುಡಿಯೋದು ಉತ್ತಮ. ತೂಕ ನಷ್ಟದ ಸಮಯದಲ್ಲಿ ಕಿತ್ತಳೆ ರಸ ಕುಡಿಯೋದ್ರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹಸಿವಿನ ಭಾವನೆಯನ್ನು ಮಂದಗೊಳಿಸುತ್ತದೆ.

ಹೃದಯ ರಕ್ಷಕ ಕಿತ್ತಳೆ

ಕಿತ್ತಳೆಯಲ್ಲಿರುವ ಪೊಟ್ಯಾಶಿಯಮ್ ಅಂಶವು ಹೃದಯದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಪೊಟ್ಯಾಶಿಯಮ್ ಮಟ್ಟ ಕಡಿಮೆಯಾದಾಗ ಹೃದಯ ಸಮಸ್ಯೆ ಖಾಯಿಲೆಗಳು ಶುರುವಾಗುತ್ತೆ. ಹೀಗಾಗಿ ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲ ಪಡಿಸಲು ಹಾಗೂ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಿ ಕಿತ್ತಳೆ ಹಣ್ಣು ಸಹಕಾರಿಯಾಗುತ್ತೆ.

ಚರ್ಮ ರಕ್ಷಣೆಗೆ ಕಿತ್ತಳೆ ಮದ್ದು

ಕಿತ್ತಳೆ ರಸವು ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತ್ವಚೆಯನ್ನು ಒಂದಲು ಇಷ್ಟ ಪಡುವರಿಗೆ ಕಿತ್ತಳೆ ರಸವು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ ಮತ್ತು ಇ ಅನ್ನು ಹೊಂದಿರುತ್ತದೆ. ಇದು ಚರ್ಮದ ಕೋಶಗಳ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಇವು ಚರ್ಮದಲ್ಲಿ ಕಪ್ಪು ಚುಕ್ಕೆಗಳು ಮತ್ತು ಕಲೆಗಳಿಂದ ಉಂಟಾಗುವ ಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Orange fruit: ಚಳಿಗಾಲದಲ್ಲಿ ಕಿತ್ತಳೆ ಹಣ್ಣಿನ ಸೇವನೆ ಬಗ್ಗೆ ಇರಲಿ ಎಚ್ಚರ..

ವಿಟಮಿನ್ ಸಿ ಮತ್ತು ಇ ಬಿಸಿಲಿನಿಂದ ಚರ್ಮವನ್ನು ರಕ್ಷಿಸುತ್ತದೆ ಜೊತೆಗೆ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ. ನೀವು ಆಗಾಗ್ಗೆ ಕಿತ್ತಳೆ ರಸವನ್ನು ಕುಡಿಯುತ್ತಿದ್ದರೆ, ಹಾನಿಗೊಳಗಾದ ಚರ್ಮವು ವೇಗವಾಗಿ ಗುಣ ಮುಖವಾಗುತ್ತೆ. ಕಿತ್ತಳೆ ರಸ ಕುಡಿಯೋದ್ರಿಂದ ಹಲವು ಪ್ರಯೋಜನಗಳಿವೆ. ಬಾಟಲ್ ನಲ್ಲಿ ಸಿಗೋ ಕಿತ್ತಳೆ ರಸವನ್ನು ಖರೀದಿಸುವ ಬದಲು ಮನೆಯಲ್ಲೇ ತಾಜಾ ಜ್ಯೂಸ್‌ ಮಾಡಿ ಕುಡಿಯಿರಿ.
Published by:Soumya KN
First published: