ತಲೆಮಾರುಗಳಿಂದ ಹಸ್ತಾಂತರಿಸಲು ಪಟ್ಟ ಹಳೆಯ ಔಷಧಿ (Medicine) ಮಾರ್ಗಗಳಲ್ಲಿ ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಲು ಭಾರತದಲ್ಲಿ ಮುಲ್ತಾನಿ ಮಿಟ್ಟಿ (Multani Mitti) ಅಥವಾ ಫುಲ್ಲರ್ಸ್ ಅರ್ಥ್ ಅನ್ನು ಬಳಸುತ್ತಿದ್ದಾರೆ. ಅದು ಎಣ್ಣೆ, ಕೊಳಕು, ಬೆವರು ಮತ್ತು ಕಲ್ಮಶಗಳನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ, ಚರ್ಮವನ್ನು ಸ್ವಚ್ಛವಾಗಿ ಮತ್ತು ಮೃದುವಾಗಿರಿಸುತ್ತದೆ. ಮುಲ್ತಾನಿ ಮಿಟ್ಟಿಯನ್ನು ದಿನಕ್ಕೆ ಒಮ್ಮೆ ನಮ್ಮ ಫೇಸ್ ಪ್ಯಾಕ್ (Face Pack) ಆಗಿ ಬಳಸಬಹುದು, ಇದರಿಂದ ಮುಖದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಮುಲ್ತಾನಿ ಮಿಟ್ಟಿ ಮೊಡವೆಗಳ (Pimples) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಚರ್ಮದಲ್ಲಿನ ಹೆಚ್ಚುವರಿ ಮೇದೋಗ್ರಂಥಿ ಮತ್ತು ಎಣ್ಣೆಯನ್ನು ತೆಗೆದುಹಾಕುತ್ತದೆ.
ಸ್ಕಿನ್ ಟೋನ್ ಹೆಚ್ಚಿಸಿಕೊಳ್ಳಲು ಸಹಕಾರಿ
ಮುಲ್ತಾನಿ ಮಿಟ್ಟಿಯ ಪೇಸ್ಟ್ ಮುಲ್ತಾನಿ ಮಿಟ್ಟಿ ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ. ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.
ಸಾಮಾನ್ಯವಾಗಿ ಕಣ್ಣಿನ ಸುತ್ತಲೂ ಬರುವ ಡಾರ್ಕ್ ಸರ್ಕಲ್ಸ್ ಸಮಸ್ಯೆಯಿಂದ ಎಲ್ಲಾ ವಯಸ್ಕರು ಬಳಲುತ್ತಿದ್ದಾರೆ. ಸರಿಯಾಗಿ ನಿದ್ರೆ ಆಗದಿರುವುದು ದೀರ್ಘ ಸಮಯದ ಕಾಲ ಮೊಬೈಲ್ ಕಂಪ್ಯೂಟರ್ ಅನ್ನು ಬಳಸುವುದರಿಂದ ಈ ಸಮಸ್ಯೆ ಎದುರಾಗುತ್ತವೆ. ಡಾರ್ಕ್ ಸರ್ಕಲ್ಸ್ ಹೋಗಲಾಡಿಸಲು, ಕೇವಲ ಅರ್ಧ ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ತುರಿ ಮಾಡಿ. ನಿಂಬೆ ರಸ, ಒಂದು ಟೀಚಮಚ ತಾಜಾ ಕೆನೆ ಮತ್ತು ಮುಲ್ತಾನಿ ಮಿಟ್ಟಿ ಜೊತೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳಿಗೆ ಹಚ್ಚಿ. ಮತ್ತು ಇಪ್ಪತ್ತು ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ.
ಇತ್ತೀಚೆಗೆ ಎಲ್ಲರಿಗೂ ಕಾಡುತ್ತಿರುವ ಸಮಸ್ಯೆಯೆಂದರೆ ತ್ವಚೆ ಜಿಡ್ಡು ಇದರಿಂದ ಮುಖದ ಕಾಂತಿಹೀನವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ತ್ವಚೆಗೆ ಮುಲ್ತಾನಿ ಮಿಟ್ಟಿ ಪ್ಯಾಕ್ ಅನ್ನು ಬಳಕೆ ಮಾಡುವುದರಿಂದ ಎಣ್ಣೆಯುಕ್ತ ಚರ್ಮವನ್ನು ಪಡೆದುಕೊಳ್ಳಬಹುದು. ಮುಲ್ತಾನಿ ಮಿಟ್ಟಿ ಮಿಶ್ರಣಕ್ಕೆ ಸಮಾನ ಪ್ರಮಾಣದಲ್ಲಿ ಕಿತ್ತಳೆ ಸಿಪ್ಪೆ ಹುಡಿಯನ್ನು ಹಾಕಿ ಎರಡನ್ನೂ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೋ ನಗಲು ಬಿಡಬೇಕು. 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಟ್ಟು ಆಮೇಲೆ ತೊಳೆಯಿರಿ. ವೈದ್ಯರ ಪ್ರಕಾರ ಈ ರೀತಿ ಪ್ಯಾಕ್ ಅನ್ನು ತಿಂಗಳಲ್ಲಿ 3 ಬಾರಿ ಬಳಕೆ ಮಾಡುವುದರಿಂದ ಎಣ್ಣೆಯುಕ್ತ ತ್ವಚೆಯನ್ನು ಪಡೆಯಬಹುದು.
ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ
ಮೊಸರಿನೊಂದಿಗೆ ಕೆಲವು ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಅರೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮಿಲ್ತಾನಿ ಮಿಟ್ಟಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.
ಮುಲ್ತಾನಿ ಮಿಟ್ಟಿಯೊಂದಿಗೆ ಟೊಮೇಟೊ ರಸವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಇದು ಚರ್ಮದ ಹೊಳಪನ್ನು ಹೆಚ್ಚಿಸುವುದರ ಜೊತೆಗೆ ಚರ್ಮದ ಕಲೆಗಳು ತೆಗೆದುಹಾಕಲು ಸಹಾಯ ಮಾಡುತ್ತದೆ. ಟೊಮೆಟೊ ರಸ ಡೆಡ್ ಸೆಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅದೇ ರೀತಿ ಟೊಮೆಟೊದಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ