Dates Benefits: ದಿನಕ್ಕೊಂದು ಖರ್ಜೂರ ತಿಂದ್ರೆ ಮೂಳೆ ಆರೋಗ್ಯಕ್ಕೆ ಒಳ್ಳೆಯದಂತೆ

ಖರ್ಜೂರ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಖರ್ಜೂರದಲ್ಲಿ ಸಾಕಷ್ಟು ಪೋಷಕಾಂಶಗಳಿವೆ, ಇದರಲ್ಲಿ ಜೀವಸತ್ವಗಳು, ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಖರ್ಜೂರ (Dates) ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಖರ್ಜೂರದಲ್ಲಿರುವ ಹೆಚ್ಚಿನ ಕ್ಯಾಲೋರಿ (Calories) ಅಂಶವು ದೇಹಕ್ಕೆ ದಿನವಿಡೀ ಶಕ್ತಿಯನ್ನು ಒದಗಿಸುವುದರಿಂದ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಖರ್ಜೂರ ಅಗತ್ಯ ವಿಟಮಿನ್‌ (Vitamin) ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಖರ್ಜೂರದಲ್ಲಿ ಸಾಕಷ್ಟು ಪೋಷಕಾಂಶಗಳಿವೆ, ಇದರಲ್ಲಿ ಜೀವಸತ್ವಗಳು, ಪ್ರೋಟೀನ್ (Protein) ಮತ್ತು ಫೈಬರ್ (Fiber) ಅನ್ನು ಹೊಂದಿವೆ. ತಜ್ಞರ ಪ್ರಕಾರ, ಎಲ್ಲಾ ರೀತಿಯ ಖರ್ಜೂರವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರಗಳು ಮೂಲತಃ ಉಷ್ಣವಲಯದ ಹಣ್ಣುಗಳಾಗಿವೆ. ವೈಜ್ಞಾನಿಕವಾಗಿ ಇದನ್ನು ಫೀನಿಕ್ಸ್ ಡಾಕ್ಟಿಲಿಫೆರಾ ಎಂದು ಕರೆಯಲಾಗುತ್ತದೆ.

    ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಕಡಿಮೆ ಕೊಬ್ಬಿನಂಶ

    ಖರ್ಜೂರ ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ. ಇವುಗಳಲ್ಲಿ ವಿಟಮಿನ್ ಮಿನರಲ್ ಅಧಿಕವಾಗಿದೆ ಎಂಬುದು ಸುಳ್ಳಲ್ಲ. ಪ್ರೋಟೀನ್, ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಮಿನ್ ಬಿ1, ಬಿ2, ಬಿ3 ಮತ್ತು ಬಿ5 ಅಲ್ಲದೆ ವಿಟಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ. ಕರಗುವ ಮತ್ತು ಕರಗದ ಫೈಬರ್‌ಗಳು ಹಾಗೂ ವಿವಿಧ ಪ್ರಕಾರದ ಅಮೀನೊ ಏಸಿಡ್ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಜೀರ್ಣಿಸಲು ಖರ್ಜೂರ ಸಹಾಯ ಮಾಡುತ್ತದೆ.

    ಮೂಳೆಯ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆ

    ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ತಾಮ್ರದಂತಹ ಸೂಕ್ಷ್ಮ ಪೋಷಕಾಂಶಗಳು ಹೆಚ್ಚು ಸಮೃದ್ಧವಾಗಿವೆ. ಈ ಸೂಕ್ಷ್ಮ ಪೋಷಕಾಂಶಗಳು ಮೂಳೆಯ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಖರ್ಜೂರದಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಆಸ್ಟಿಯೊಪೊರೋಸಿಸ್‌ನಂತಹ ಮೂಳೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೆಚ್ಚು ಪರಿಣಾಮಕಾರಿ. ಆದ್ದರಿಂದ, ಆರೋಗ್ಯಕರ ಮೂಳೆಗಳಿಗಾಗಿ ನಿಮ್ಮ ಆಹಾರದ ಭಾಗವಾಗಿ ನೀವು ಖರ್ಜೂರವನ್ನು ಸೇರಿಸುವುದು ಹೆಚ್ಚು ಸೂಕ್ತವಾಗಿದೆ.

    ಇದನ್ನೂ ಓದಿ: Weight Loss Tips: ಹೊಟ್ಟೆಯ ಬೊಜ್ಜನ್ನು ಕರಗಿಸಬೇಕಾ? ಹಾಗಾದ್ರೆ ಬೆಲ್ಲದ ಜೊತೆಗೆ ಇದನ್ನು ಸೇವಿಸಿ

    ಮೂತ್ರಪಿಂಡಗಳನ್ನು ರಕ್ಷಿಸುತ್ತದೆ

    ಖರ್ಜೂರದ ಸೇವನೆ ಮೂತ್ರಪಿಂಡಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಅಂಶ ಮೂತ್ರಪಿಂಡದಲ್ಲಿ ಹೆಚ್ಚುವರಿಯಾಗಿರುವ ಪ್ಲಾಸ್ಮಾ ಮತ್ತು ಕ್ರಿಯೇಟಿನೈನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮೂತ್ರಪಿಂಡಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖರ್ಜೂರ ಸೇವಿಸಬೇಕು. ಶೀತವಿದ್ದಾಗ, ಒಂದು ಗ್ಲಾಸ್ ಹಾಲಿನಲ್ಲಿ 5-6 ಖರ್ಜೂರ ಸೇರಿಸಿ, ಐದು ಕರಿಮೆಣಸು, ಒಂದು ಏಲಕ್ಕಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಮತ್ತು ಅದನ್ನು ಕುದಿಸಿ. ರಾತ್ರಿಯಲ್ಲಿ ಮಲಗುವ ಮುನ್ನ ಕುಡಿಯುವುದರಿಂದ ಶೀತ ಮತ್ತು ನೆಗಡಿಗೆ ಪರಿಹಾರ ಸಿಗುತ್ತದೆ.

    ಇದನ್ನೂ ಓದಿ: Eye Health: ಕಣ್ಣು ಉರಿಯ ಸಮಸ್ಯೆ ನಿಮಗಿದೆಯೇ ಇಲ್ಲಿದೆ ನೋಡಿ ಸರಳ ಪರಿಹಾರ

    ರಕ್ತಹೀನತೆಯನ್ನು ಹೋಗಲಾಡಿಸಲು ನೆರವಾಗುತ್ತದೆ

    ಖರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದು ರಕ್ತಹೀನತೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ರಾತ್ರಿ ಖರ್ಜೂರವನ್ನು ನೆನೆಸಿಟ್ಟು, ಬೆಳಿಗ್ಗೆ ಹಾಲು ಅಥವಾ ತುಪ್ಪದೊಂದಿಗೆ ತಿನ್ನುವುದು ಪ್ರಯೋಜನಕಾರಿಯಾಗಿದೆ. ಇದಲ್ಲದೆ, 3-4 ಖರ್ಜೂರಗಳನ್ನು ಬಿಸಿ ನೀರಿನಲ್ಲಿ ತೊಳೆದು ಹಸುವಿನ ಹಾಲಿನೊಂದಿಗೆ ಕುದಿಸಿ, ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪ್ರತಿದಿನ ಸೇವಿಸುವ ಎರಡು ಖರ್ಜೂರಗಳಿಂದ 20-25mg ನಷ್ಟು ಮೆಗ್ನೀಶಿಯಂ ದೊರಕುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗುತ್ತದೆ.

    ಮಲಬದ್ಧತೆ ಸಮಸ್ಯೆಗೆ ಪರಿಹಾರ

    ಚಳಿಗಾಲದಲ್ಲಿ ಖರ್ಜೂರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಅಂಶಗಳಿವೆ. ಹೀಗಾಗಿ ಇದು ಮಲಬದ್ಧತೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ರಾತ್ರಿಯಲ್ಲಿ ಮಲಗುವ ಮುನ್ನ ಕೆಲವು ಖರ್ಜೂರಗಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಿರಿ. ಇದು ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಖರ್ಜೂರದ ಸೇವನೆ ಸಂಧಿವಾತದ ನೋವನ್ನು ಶಮನ ಮಾಡುತ್ತದೆ. ಇದಲ್ಲದೆ, ಪಾರ್ಶ್ವವಾಯು ಮತ್ತು ಎದೆ ನೋವಿನ ಸಮಸ್ಯೆಗಳನ್ನು ನಿವಾರಿಸಲು ಖರ್ಜೂರ ಸಹಕಾರಿಯಾಗಿದೆ.
    Published by:Swathi Nayak
    First published: