ಖರ್ಜೂರ ತಿನ್ನುವುದರಿಂದ ಸಿಗುತ್ತದೆ ಹಲವಾರು ಪ್ರಯೋಜನಗಳು

news18
Updated:June 1, 2018, 11:34 AM IST
ಖರ್ಜೂರ ತಿನ್ನುವುದರಿಂದ ಸಿಗುತ್ತದೆ ಹಲವಾರು ಪ್ರಯೋಜನಗಳು
news18
Updated: June 1, 2018, 11:34 AM IST
ನ್ಯೂಸ್ 18 ಕನ್ನಡ

ಪ್ರತಿದಿನ ಖರ್ಜೂರ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದರಲ್ಲಿ ಖನಿಜಾಂಶಗಳು, ಫೈಬರ್​ ಮತ್ತು ವಿಟಮಿನ್​ಗಳು ಹೇರಳವಾಗಿದ್ದು ಇದು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಪ್ರತಿನಿತ್ಯ ಖರ್ಜೂರ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಬಹುದು, ಅಲ್ಲದೆ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ಒಂದು ಖರ್ಜೂರದಲ್ಲಿ ಪೊಟ್ಯಾಶಿಯಂ (696 ಮಿಲಿ ಗ್ರಾಂ), ಮೆಗ್ನೀಷಿಯಂ (54 ಮಿ.ಗ್ರಾಂ), ವಿಟಮಿನ್ ಬಿ (60.2 ಮಿ.ಗ್ರಾಂ), ಫೈಬರ್ (6.7 ಮಿ.ಗ್ರಾಂ), ಮ್ಯಾಂಗನೀಸ್ (0.3 ಮಿ.ಗ್ರಾಂ) ಮತ್ತು ಕಾಪರ್ (0.4 ಮಿ.ಗ್ರಾಂ) ಅಂಶಗಳು ಕಂಡುಬರುತ್ತದೆ. ಆದರಿಂದ ಸಿಹಿ ತಿಸಿಸುಗಳ ಬದಲಾಗಿ ಖರ್ಜೂರವನ್ನು ಸೇವಿಸುವುದು ಉತ್ತಮ.

ವಾರದಲ್ಲಿ ಮೂರು ಖರ್ಜೂರ ತಿಂದರೂ ಕೂಡ ಆರೋಗ್ಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು. ಈ ಹಣ್ಣನ್ನು ತಿನ್ನುವುದರಿಂದ ಸಿಗುವ ಕೆಲ ಪ್ರಯೋಜನಗಳು ಇಲ್ಲಿವೆ.

ಮೂಳೆ ಬಲಗೊಳ್ಳುವುದು : ಖರ್ಜೂರದಲ್ಲಿ ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ಇರುವುದರಿಂದ ಮೂಳೆಗಳು ಗಟ್ಟಿಮುಟ್ಟಾಗುತ್ತದೆ. ಇದರಲ್ಲಿರುವ ಸೆಲೆನಿಯಮ್ ಅಂಶ ಕ್ಯಾನ್ಸರ್​ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸಾಮರ್ಥ್ಯ ಹೆಚ್ಚಿಸುತ್ತದೆ : ಈ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದ್ದು, ಇದು ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರೋಟೀನ್ ಪೌಡರ್​ ತೆಗೆದುಕೊಳ್ಳುವ ಬದಲು ಖರ್ಜೂರವನ್ನು ತಿನ್ನಬಹುದು.

ಜೀರ್ಣಕ್ರಿಯೆ : ಖರ್ಜೂರದಲ್ಲಿರುವ ಫೈಬರ್​ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು.
Loading...

ರಕ್ತಹೀನತೆಗೆ ಪರಿಹಾರ : ಖರ್ಜೂರವನ್ನು ತಿನ್ನುವುದರಿಂದ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಬಹುದು. ಇದರಿಂದ ರಕ್ತಹೀನತೆಯ ಸಮಸ್ಯೆಯು ದೂರವಾಗುತ್ತದೆ.
First published:June 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...