ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ ಆರೋಗ್ಯವಾಗಿರಿ: ಉಷಾಪಾನ ದೇಹದ ಕಲ್ಮಶಕ್ಕೆ ರಾಮಬಾಣ

news18
Updated:June 8, 2018, 3:19 PM IST
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ ಆರೋಗ್ಯವಾಗಿರಿ: ಉಷಾಪಾನ ದೇಹದ ಕಲ್ಮಶಕ್ಕೆ ರಾಮಬಾಣ
news18
Updated: June 8, 2018, 3:19 PM IST
-ನ್ಯೂಸ್ 18 ಕನ್ನಡ

ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಹೀಗಾಗಿನೇ ಹಿರಿಯರು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಅಥವಾ ನಿಂಬೆ ಮತ್ತು ಜೇನು ಮಿಶ್ರಿತ ನೀರನ್ನು ಕುಡಿಯುತ್ತಿದ್ದರು. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗುತ್ತವೆ. ಇದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂಬುದನ್ನು ವೈದ್ಯರು ಕೂಡ ದೃಢಪಡಿಸಿದ್ದಾರೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಿಗುವ ಕೆಲ ಪ್ರಯೋಜನಗಳು ಇಂತಿವೆ.

-ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ತ್ವಚೆಯ ಸೌದರ್ಯ ವೃದ್ಧಿಸುತ್ತದೆ. ಇದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ದೂರಾಗುತ್ತವೆ.

-ಉಷಾಪಾನದಿಂದ ದೇಹದಲ್ಲಿ ಹೈಡ್ರೇಟೆಡ್​ ಅಂಶಗಳು ಹೆಚ್ಚಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

-ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ರಕ್ತ ಶುದ್ದಿಯಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.

-ಹೊಟ್ಟೆಯ ಸಮಸ್ಯೆಗಳಿಗೆ ನೀರು ಕುಡಿಯುವುದು ಅತ್ಯುತ್ತಮ ಪರಿಹಾರ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹೊಟ್ಟೆಯ ಅಸ್ವಸ್ಥತೆಯನ್ನು ದೂರ ಮಾಡಬಹುದು.

-ಪ್ರತಿ ದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪ ಮಿಶ್ರಿತ  ನೀರು ಕುಡಿದರೆ ತ್ವಚೆಯು ಮೃದುವಾಗಿರುತ್ತದೆ.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...