ಸಣ್ಣ ದಾಲ್ಚಿನ್ನಿಯಲ್ಲಿದೆ ದೊಡ್ಡ ಪ್ರಯೋಜನ: ಆರೋಗ್ಯಕ್ಕಿದು ಸಂಜೀವಿನಿ

news18
Updated:June 12, 2018, 3:48 PM IST
ಸಣ್ಣ ದಾಲ್ಚಿನ್ನಿಯಲ್ಲಿದೆ ದೊಡ್ಡ ಪ್ರಯೋಜನ: ಆರೋಗ್ಯಕ್ಕಿದು ಸಂಜೀವಿನಿ
news18
Updated: June 12, 2018, 3:48 PM IST
-ನ್ಯೂಸ್ 18 ಕನ್ನಡ

ಹೆಚ್ಚಿನವರು ದಾಲ್ಚಿನ್ನಿಯನ್ನು ಕೇವಲ ಆಹಾರ ಪದಾರ್ಥವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ದಾಲ್ಚಿನ್ನಿಯಲ್ಲಿರುವ ಅತ್ಯುತ್ತಮ ಔಷಧೀಯ ಗುಣಗಳು ಅನೇಕ ರೋಗಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಆಹಾರ ಪದಾರ್ಥಗಳಿಗೆ ಬಳಸುವ ದಾಲ್ಚಿನ್ನಿಯ ಇತರೆ ಪ್ರಯೋಜನಗಳು ಇಂತಿವೆ.

1- ದಾಲ್ಚಿನ್ನಿಯಲ್ಲಿರುವ ಅಂಟಿ ಆಕ್ಸಿಡೆಂಟ್​ಗಳು ಮತ್ತು ಅಂಟಿ ಕ್ಲೊಟಿಂಗ್​ ಅಂಶಗಳು ತೂಕವನ್ನು ಕಡಿಮೆ ಮಾಡಲು ಮತ್ತು ರಕ್ತ ಹೆಪ್ಪುಗಟ್ಟಿವಿಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

2- ನೋಡಲು ಚಿಕ್ಕದಾಗಿರುವ ದಾಲ್ಚಿನ್ನಿಯಲ್ಲಿ ಫೈಬರ್ ಮತ್ತು ಕಬ್ಭಿಣಾಂಶಗಳ ಸಾಕಷ್ಟು ಪ್ರಮಾಣದಲ್ಲಿದ್ದು, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ದಾಲ್ಚಿನ್ನಿ ಸೇವನೆಯಿಂದ ರಕ್ತದ ಸಕ್ಕರೆಯ ಮಟ್ಟವನ್ನು ಮತ್ತು ಕೊಲೆಸ್ಟ್ರಾಲ್​ ಅನ್ನು ನಿಯಂತ್ರಿಸಬಹುದು. ಇದನ್ನು ಫಾಟಿ ಆ್ಯಸಿಡ್ ಮತ್ತು ಅಮಿನೊ ಆ್ಯಸಿಡ್​ನ ಮೂಲವೆಂದು ಪರಿಗಣಿಸಲಾಗುತ್ತದೆ.

3- ಪ್ರತಿನಿತ್ಯ ದಾಲ್ಚಿನ್ನಿಯ ಬಳಕೆಯಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ದೂರ ಮಾಡಬಹುದು. ಮೊಡವೆ ಮತ್ತು ಎಣ್ಣೆಯುಕ್ತ ಮುಖವನ್ನು ಹೊಂದಿರುವವರು ದಾಲ್ಚಿನ್ನಿ ಫೇಸಿಯಲ್ ಪ್ಯಾಕ್​ನ್ನು ಉಪಯೋಗಿಸಬಹುದು. ಇದು ಡ್ರೈ ಸ್ಕಿನ್ ಸಮಸ್ಯೆಯನ್ನು ಹೋಗಲಾಡಿಸಿ ತ್ವಚೆಯನ್ನು ಮೃದುವಾಗಿಸಲು ನೆರವಾಗುತ್ತದೆ.

4- ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಲು ದಾಲ್ಚಿನ್ನಿ ತುಂಡನ್ನು ಜೇನುತುಪ್ಪದಲ್ಲಿ ಬೆರಸಿ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 25 ನಿಮಿಷಗಳ ಬಳಿಕ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಎಣ್ಣೆಯುಕ್ತ ತ್ವಚೆಯಿಂದ ಮುಕ್ತಿ ಪಡೆದು, ಮುಖದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಬಹುದು.

5- ದಾಲ್ಚಿನ್ನಿಯು ಅಂಟಿ ಬ್ಯಾಕ್ಟೀರಿಯಾ ಗುಣಲಕ್ಷಣಗಳನ್ನು ಹೊಂದಿದೆ. ಬಿಸಿಲಿನಲ್ಲಿ ಚರ್ಮವು ಕಂದು ಬಣ್ಣಕ್ಕೆ ತಿರುಗಿದರೆ ದಾಲ್ಚಿನ್ನಿ ಪೇಸ್ಟ್​ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಬಾಳೆಹಣ್ಣು , ನಿಂಬೆರಸ, ಮೊಸರು ಸೇರಿಸಿ ದಾಲ್ಚಿನ್ನಿ ಪೇಸ್ಟ್​ ತಯಾರಿಸಿ. ಇದನ್ನು ಮುಖದ ಭಾಗಕ್ಕೆ ಹಚ್ಚಿ ಒಣಗಲು ಬಿಡಿ, ಬಳಿಕ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮವು ಮೃದುವಾಗುವುದಲ್ಲದೆ, ಚರ್ಮದ ನೈಸರ್ಗಿಕ ಬಣ್ಣವನ್ನು ಹಿಂಪಡೆಯಬಹುದು.
First published:June 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ