Rice Tea: ಬ್ರೌನ್ ರೈಸ್ ಟೀ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ

Brown Rice Tea Benefits: ಬ್ರೌನ್ ರೈಸ್ ಟೀ, ಜಪಾನೀಸ್ ನಲ್ಲಿ "ಜೆನ್ಮೈಚಾ" ಎಂದು ಕರೆಯಲ್ಪಡುತ್ತದೆ. ಬ್ರೌನ್ ರೈಸ್ ಚಹಾ ಫ್ಲೇವನಾಯ್ಡ್‌ಗಳು, ಆ್ಯಂಟಿ ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಚಹಾ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಚಹಾದಲ್ಲಿ ಹಲವಾರು ವಿಧಗಳಿವೆ. ಗ್ರೀನ್ ಟೀ, ಬ್ಲ್ಯಾಕ್ ಟೀ ಹೀಗೆ. ಈ ಎಲ್ಲ ಟೀ ಗಳು ತಮ್ಮದೇ ಆದ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ನೀವು ಗಮನಿಸಿ ನೋಡಿ ಕೆಲವರಂತೂ ಟೀ ಇಲ್ಲದೆ ಇರುವುದಿಲ್ಲ. ಆದರೆ ಪ್ರತಿಯೊಂದು ಆಹಾರ ಪದಾರ್ಥವನ್ನು ಅತಿಯಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ.  ಇತ್ತೀಚಿನ ದಿನಗಳಲ್ಲಿ ರೈಸ್ ಚಹಾ ಪ್ರಸಿದ್ಧವಾಗುತ್ತಿದೆ. ಹೆಚ್ಚಿನ ಜನರು ರೈಸ್ ಚಹಾದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಇದನ್ನು ಕೆಂಪು ಅಕ್ಕಿಯನ್ನು ಬಳಸಿ ತಯಾರಿಸಲಾಗುತ್ತದೆ.

ಬ್ರೌನ್ ರೈಸ್ ಟೀ, ಜಪಾನೀಸ್ ನಲ್ಲಿ "ಜೆನ್ಮೈಚಾ" ಎಂದು ಕರೆಯಲ್ಪಡುತ್ತದೆ. ಬ್ರೌನ್ ರೈಸ್ ಚಹಾ ಫ್ಲೇವನಾಯ್ಡ್‌ಗಳು, ಆ್ಯಂಟಿ ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತದೆ. ಬ್ರೌನ್ ರೈಸ್ ಚಹಾವು ಅಡಿಕೆ ಸುವಾಸನೆಯನ್ನು ಹೊಂದಿರುತ್ತದೆ.

ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿರುವ ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ, ಬ್ರೌನ್ ರೈಸ್ ಚಹಾದಲ್ಲಿ ಪಾಲಿಫೆನಾಲ್ಸ್ ಎಂದು ಕರೆಯಲ್ಪಡುವ ಆ್ಯಂಟಿ ಆಕ್ಸಿಡೆಂಟ್​ ಗುಣಗಳಿವೆ. ಚೀನಾದಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ ವಾರಕ್ಕೊಮ್ಮೆ ಕನಿಷ್ಠ ಒಂದು ಕಪ್ ಬ್ರೌನ್ ರೈಸ್ ಚಹಾವನ್ನು ಆರು ತಿಂಗಳವರೆಗೆ ಸೇವಿಸಿದ ಪುರುಷರು ಮತ್ತು ಮಹಿಳೆಯರು ಬ್ರೌನ್ ರೈಸ್ ಚಹಾ ಸೇವಿಸದವರಿಗಿಂತ ಕೊಲೊನ್, ಪ್ಯಾಂಕ್ರಿಯಾಟಿಕ್ ಮತ್ತು ರೆಕ್ಟಲ್ ಕ್ಯಾನ್ಸರ್ ಅಪಾಯದಿಂದ ಬಚಾವ್ ಆಗಿದ್ದಾರೆ.  ಆದರೆ ನೀವು ಹೃದ್ರೋಗದಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಬ್ರೌನ್ ರೈಸ್ ಚಹಾವನ್ನು ಸೇರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಹೆಚ್ಚು ಆತಂಕ ಅನುಭವಿಸುತ್ತಿದ್ದೀರಾ? ಆತಂಕದ ಸಮಸ್ಯೆಯಿಂದ ಹೊರ ಬರಲು ಇಲ್ಲಿದೆ ಟಿಪ್ಸ್

ಬ್ರೌನ್ ರೈಸ್ ಚಹಾದಲ್ಲಿ ಸೆಲೆನಿಯಂ ಎಂಬ ಪ್ರಮುಖ ಖನಿಜವಿದ್ದು ಅದು ಥೈರಾಯ್ಡ್ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಹಾರ್ಮೋನುಗಳು ಮತ್ತು ಚಯಾಪಚಯವನ್ನು ನಿಯಂತ್ರಿಸುತ್ತದೆ. ಬ್ರೌನ್ ರೈಸ್ ಚಹಾದಲ್ಲಿ ಮ್ಯಾಂಗನೀಸ್‌ನಲ್ಲಿ  ಅಂಶ ಹೆಚ್ಚಿದೆ. ಇದು ನರಗಳ ಸಮಸ್ಯೆಗೆ ಪರಿಹಾರ ನೀಡುತ್ತದೆ.  ಅಲ್ಲದೇ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ಮತ್ತು ಕೊಲೆಸ್ಟ್ರಾಲ್  ನಿಯಂತ್ರಿಸಲು ಸಹಾಯ ಮಾಡುತ್ತದೆ. ಬ್ರೌನ್ ರೈಸ್ ಚಹಾದಲ್ಲಿ ವಿಟಮಿನ್ ಬಿ, ಫೈಬರ್ ಮತ್ತು ಕಬ್ಬಿಣದ ಅಂಶಗಳಿವೆ.

ಅಕ್ಕಿಯು ಚರ್ಮಕ್ಕೆ  ಬಹಳ ಉತ್ತಮವಾಗಿದೆ.ಇದು ಚರ್ಮವನ್ನು ಮೃದುವಾಗಿರಿಸುತ್ತದೆ ಮತ್ತು ಸುಕ್ಕುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಚಹಾವು ಕೆಫಿನ್ ಅಂಶವನ್ನು ಹೊಂದಿರುವುದಿಲ್ಲ. ಆದ್ದರಿಂದ ಇದನ್ನು ನೀವು ಎಷ್ಟು ಕಪ್  ಚಹಾ ಸೇವಿಸಿದರೂ ತೊಂದರೆಯಾಗುವುದಿಲ್ಲ. ಅಲ್ಲದೆ ಇದು ನೈಸರ್ಗಿಕವಾಗಿ  ತಯಾರಿಸುವ ಚಹಾವಾಗಿದ್ದು, ನಿಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ.ಅಲ್ಲದೇ ಇದನ್ನು ಜೀರ್ಣಕ್ರಿಯೆ ಸುಧಾರಿಸಲು ಬಳಸಲಾಗುತ್ತದೆ.

ರೈಸ್ ಚಹಾ ತಯಾರಿಸುವ ವಿಧಾನ ಇಲ್ಲಿದೆ

ನೀವು ಒಂದು ಚಮಚ ಕಪ್ಪು ಅಕ್ಕಿ ಅಥವಾ ಕೆಂಪು ಅಕ್ಕಿಯನ್ನು ತೆಗದುಕೊಂಡು ಎರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.  ನಂತರ ಇದನ್ನು ಮೂರರಿಂದ ಐದು ನಿಮಿಷಗಳ ಕಾಲ ನೀರಿನಲ್ಲಿ ಸರಿಯಾಗಿ ಕುದಿಸಿ.    ಬ್ರೌನ್ ರೈಸ್ ಟೀ ತುಂಬಾ ಕಡಿಮೆ ಕ್ಯಾಲೋರಿ ಹೊಂದಿದ್ದು ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಬಾರಿ ಬ್ರೌನ್ ರೈಸ್ ಚಹಾವನ್ನು ಬೆಳಿಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸಬಹುದು ಇದಕ್ಕೆ ಸಕ್ಕರೆ ಸೇರಿಸದೆ ಸೇವನೆ ಮಾಡುವುದು ಉತ್ತಮ.

ಮೂತ್ರಪಿಂಡದ ಕಲ್ಲು ನಿವಾರಣೆ ಮಾಡಲು ಇದು ಉತ್ತಮ ಆಯ್ಕೆ.  ಅಲ್ಲದೇ ಬ್ರೌನ್ ರೈಸ್ ಚಹಾ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿರುವ ನೀರು ಮತ್ತು ಫೈಬರ್ ಇರುತ್ತದೆ.
Published by:Sandhya M
First published: