#Superfoods: ಬಟರ್ ಫ್ರೂಟ್​ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

news18
Updated:August 3, 2018, 3:51 PM IST
#Superfoods: ಬಟರ್ ಫ್ರೂಟ್​ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?
news18
Updated: August 3, 2018, 3:51 PM IST
-ನ್ಯೂಸ್ 18 ಕನ್ನಡ

ಅವಕಾಡೊ ಹಣ್ಣು ಎಲ್ಲರಿಗೆ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್​ ಫ್ರೂಟ್​ನ್ನು ಬೆಳೆಯಲಾಗುತ್ತದೆ. ಪಿಯರ್ ಹಣ್ಣಿನ ಆಕಾರದಲ್ಲಿರುವ ಈ ಹಣ್ಣು ಮೆಕ್ಸಿಕೊ ದೇಶದಲ್ಲಿ ಹೆಚ್ಚು ಕಂಡು ಬರುತ್ತದೆ. ಸಾಮಾನ್ಯವಾಗಿ ಈ ಹಣ್ಣನ್ನು ಮಿಲ್ಕ್​ ಶೇಕ್ ಮಾಡಿ ಕುಡಿಯುವವರೇ ಹೆಚ್ಚು, ಆದರೆ ಈ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ಹಲವರಿಗೆ ತಿಳಿದಿಲ್ಲ. ಬಟರ್ ಫ್ರೂಟ್​ ಹಣ್ಣಿನಿಂದ ಸಿಗುವ ಕೆಲ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.ಬಟರ್ ಫ್ರೂಟ್​ನಲ್ಲಿ ವಿಟಮಿನ್ ಎ, ಬಿ ಮತ್ತು ಇ ಅಂಶಗಳು ಧಾರಾಳವಾಗಿರುತ್ತದೆ. ಇದರೊಂದಿಗೆ ಆರೋಗ್ಯಕ್ಕೆ ಅನುಕೂಲಕರವಾಗಿರುವ ಪ್ರೋಟೀನ್, ಫೈಬರ್​ ಮತ್ತು ಖನಿಜಾಂಶಗಳು ಇದರಲ್ಲಿದೆ. ಅವಕಾಡೊದಲ್ಲಿ ಮೊನೊಅನ್ಸಚುರೇಟೆಡ್ ಕೊಬ್ಬಿನಾಂಶವಿದ್ದರೂ ಇದು ಆರೋಗ್ಯಕ್ಕೆ ಹಾನಿಕಾರಕವಲ್ಲ.

* ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಹಾಗೆಯೇ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನಲ್ಲಿ ಕಂಡು ಬರುವ ಫಾಲಿಕ್ ಆ್ಯಸಿಡ್ ಆರೋಗ್ಯವನ್ನು ಹೆಚ್ಚಿಸುತ್ತದೆ.

* ಅವಕಾಡೊದಿಂದ ತೈಲವನ್ನು ಕೂಡ ತಯಾರಿಸಲಾಗುತ್ತದೆ. ಚರ್ಮವನ್ನು ಮೃದುಗೊಳಿಸುವಲ್ಲಿ ಈ ತೈಲ ಸಹಕಾರಿ. ವಾರದಲ್ಲಿ ಎರಡು ಬಾರಿ ಅವಕಾಡೊ ತೈಲದಿಂದ ಮಸಾಜ್ ಮಾಡುವುದರಿಂದ ತ್ವಚೆಯು ಸಮಸ್ಯೆಗಳು ದೂರವಾಗುತ್ತದೆ.

*  ಬ್ರಟರ್ ಫ್ರೂಟ್ ಸೇವನೆಯಿಂದ ದೇಹ ತೂಕ ಕಡಿಮೆಯಾಗುತ್ತದೆ. ಇದರಲ್ಲಿರುವ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿನಾಂಶ ದೇಹಕ್ಕೆ ಶಕ್ತಿ ನೀಡುತ್ತದೆ. ಅಲ್ಲದೆ ಸ್ನಾಯುಗಳನ್ನು ಬಲಪಡಿಸುವಲ್ಲಿಯು ಅವಕಾಡೊ ಹಣ್ಣು ಪ್ರಯೋಜನಕಾರಿ.

*  ಅವಕಾಡೊ ಹಣ್ಣು ಗರ್ಭಿಣಿ ಸ್ತ್ರೀಯರಿಗೂ ಕೂಡ ತುಂಬಾ ಪ್ರಯೋಜನಕಾರಿ. ಈ ಹಣ್ಣಿನಲ್ಲಿ ಪೊಲಾಟ್ ಅಂಶಗಳು ಹೇರಳವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಬಟರ್ ಫ್ರೂಟ್​ನ್ನು ಸೇವಿಸಲು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಗರ್ಭಿಣಿಯರು ಈ ಹಣ್ಣನ್ನು ತಿನ್ನುವುದರಿಂದ ಶಿಶುಗಳ ಬೆಳವಣಿಗೆ ಉತ್ತಮಗೊಳ್ಳುತ್ತದೆ.
First published:August 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ