Benefits of Ashwagandha: ಸರ್ವರೋಗಕ್ಕೆ ಮನೆ ಮದ್ದು ಈ ಅಶ್ವಗಂಧ; ಇದರ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಅಶ್ವಗಂಧ ಪುಡಿ ನೀರಿನಲ್ಲಿ ಅಷ್ಟು ಸುಲಭದಲ್ಲಿ ಕರಗುವುದಿಲ್ಲ. ಪುಡಿಯು ನೀರಿನಲ್ಲಿ ಚೆನ್ನಾಗಿ ಮಿಶ್ರಗೊಂಡ ನಂತರವೇ ಅದನ್ನು ಸೇವಿಸಬೇಕು ಎಂದು ವಿಮ್ಕಿ ಹೇಳುತ್ತಾರೆ.

ಅಶ್ವಗಂಧ

ಅಶ್ವಗಂಧ

  • Share this:
ಪುರಾತನ ಔಷಧೀಯ ಸಸ್ಯ(Medicine Plant)ವಾಗಿರುವ ಅಶ್ವಗಂಧ(Ashwagandha) ದೇಹ(Body)ದ ಒತ್ತಡ ನಿರ್ವಹಿಸಲು ಪರಿಣಾಮಕಾರಿಯಾಗಿರುವ ಗಿಡಮೂಲಿಕೆಯಾಗಿದೆ. ಒತ್ತಡ(Stress) ಹಾಗೂ ಆತಂಕ ನಿವಾರಕವಾಗಿರುವ ಈ ಗಿಡಮೂಲಿಕೆ ವಿಮ್ಕಿ ಗಿರಿಯಾರವರು ತಮ್ಮ ದಿನನಿತ್ಯದ ಆಹಾರ(Daily Food)ದಲ್ಲಿ ಸೇರ್ಪಡೆಗೊಳಿಸಲು ಪ್ರಾರಂಭಿಸಿದರು. ಇದರ ಪುಡಿ(Ashwagandha Powder)ಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಪುಡಿ ನೀರಿನಲ್ಲಿ ಅಷ್ಟು ಸುಲಭದಲ್ಲಿ ಕರಗುವುದಿಲ್ಲ. ಪುಡಿಯು ನೀರಿನಲ್ಲಿ ಚೆನ್ನಾಗಿ ಮಿಶ್ರಗೊಂಡ ನಂತರವೇ ಅದನ್ನು ಸೇವಿಸಬೇಕು ಎಂದು ವಿಮ್ಕಿ ಹೇಳುತ್ತಾರೆ.

ಅಶ್ವಗಂಧದ ಜೊತೆ ಈ ಸೊಪ್ಪುಗಳನ್ನು ಸೇರಿಸಿ

ಸೇವಿಸಲು ಕಠಿಣವಾದ ಗಿಡಮೂಲಿಕೆಯಾಗಿರುವ ಅಶ್ವಗಂಧವನ್ನು ಬೇರೆ ರೀತಿಯಲ್ಲಿ ಕೂಡ ಸೇವಿಸಬಹುದು ಎಂಬುದನ್ನು ವಿಮ್ಕಿ ಕಂಡುಕೊಂಡರು. ಕೊತ್ತಂಬರಿ, ಪುದೀನ ಹಾಗೂ ಕರಿಬೇವಿನ ಎಲೆಗಳೊಂದಿಗೆ ಅಶ್ವಗಂಧ ಸೇರಿಸಿ ತಯಾರಿಸಲಾದ ಫೆಟ್ಟೂಸಿನ್ ಪಾಸ್ಟಾ. ಇದನ್ನು ಭಾರತೀಯ ಕೆಂಪು ಸಾಸ್‌ನೊಂದಿಗೆ ಮಿಶ್ರ ಮಾಡಿ ತಯಾರಿಸಿದಾಗ ಅಶ್ವಗಂಧದ ರುಚಿ ಇನ್ನಷ್ಟು ವೈವಿಧ್ಯಮಯವಾಗಿತ್ತು ಎಂದು ಬೆಂಗಳೂರು ಮೂಲದ ರೆಸಿಪಿ ಅಭಿವೃದ್ಧಿಕಾರ ಹಾಗೂ ಕರುಳಿನ ಪೌಷ್ಟಿಕ ತಜ್ಞ ವಿಮ್ಕಿ ಹೇಳುತ್ತಾರೆ.

ಇದನ್ನೂ ಓದಿ:Almonds Benefits: ಡಯಾಬಿಟಿಸ್​ಗೆ, ಬಿಳಿಕೂದಲ ಸಮಸ್ಯೆಗೆ ಬಾದಾಮಿ ರಾಮಬಾಣವಂತೆ..!

ಅಶ್ವಗಂಧದ 2 ಪ್ರಮುಖ ಪ್ರಯೋಜನಗಳಿವು

ಒತ್ತಡ ನಿವಾರಣೆಗೆ ಅತ್ಯುತ್ತಮ ಎಂದೇ ಹೆಸರಾಗಿರುವ ಅಶ್ವಗಂಧವನ್ನು ಹುಡಿ ಅಥವಾ ಮಾತ್ರೆಯ ರೂಪದಲ್ಲಿ ಸೇವಿಸುವುದು ಸಂಪ್ರದಾಯವಾಗಿದೆ. ಚಾಕೊಲೇಟ್, ಪಾಸ್ತಾದಂತಹ ಬೇರೆ ಬೇರೆ ಸಾಮಾನ್ಯ ಆಹಾರ ಹಾಗೂ ಪಾನೀಯ ಐಟಂಗಳೊಂದಿಗೆ ಬೆರೆಸಿ ಸೇವಿಸಬಹುದಾಗಿದೆ. ಇದಲ್ಲದೆ ಅಶ್ವಗಂಧವು 2 ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಶಕ್ತಿ ಸಾಮರ್ಥ್ಯಗಳೊಂದಿಗೆ ರೋಗನಿರೋಧಕ ಅಂಶ ಬಲಪಡಿಸುತ್ತದೆ. ಇದರಿಂದ ದೇಹವು ನಿರಾಳಗೊಂಡು ಉತ್ತಮ ನಿದ್ರೆ ಬರುತ್ತದೆ.

ಔಷಧಿಯಾಗಿ ಬಳಕೆಯಾಗುತ್ತಿರುವ ಅಶ್ವಗಂಧ 

ಆಯುರ್ವೇದ-ಕೇಂದ್ರಿತ ಆರೋಗ್ಯ ಮತ್ತು ಸ್ವಾಸ್ಥ್ಯ ಕಂಪನಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಶ್ವಗಂಧದೊಳಕ್ಕೆ ಸೇರಿಸಿದ ಹಾಟ್ ಚಾಕೊಲೇಟ್ ಅನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿತು. ಪ್ರತಿ ತಿಂಗಳು 2,000-2,500 ಪ್ಯಾಕೆಟ್‌ಗಳು ಮಾರಾಟವಾಗುತ್ತದೆ ಎಂದು ಸಂಸ್ಥೆಯ ದೀಪಕ್ ಅಗರ್‌ವಾಲ್ ಹೇಳುತ್ತಾರೆ. ಹೀಗೆ ಕೋವಿಡ್‌ನ ಮೊದಲೇ ಅಶ್ವಗಂಧವನ್ನು ಔಷಧಿಯಾಗಿ ಜನರು ಬಳಸುತ್ತಿದ್ದಾರೆ. ಕೋವಿಡ್ ನಂತರ ಜನರು ಇನ್ನಷ್ಟು ಆರೋಗ್ಯದ ಕಡೆಗೆ ಗಮನ ಹರಿಸುತ್ತಿರುವುದರಿಂದ ಅಶ್ವಗಂಧದ ಜನಪ್ರಿಯತೆ ಇನ್ನಷ್ಟು ಎತ್ತರಕ್ಕೇರಿದೆ.

ಮಕ್ಕಳಿಗೆ ಪ್ರಿಯ ಅಶ್ವಗಂಧ ಪಾಸ್ತಾ

ದೆಹಲಿ ಮೂಲದ ಬಾಣಸಿಗರಾದ ಸಿಮ್ರನ್ ಮಕ್ಕರ್ ಹಾಗೂ ಕಾಮ್ನಾ ಚೌಧುರಿ ಅಶ್ವಗಂಧ ಬೆರೆಸಿದ ಪಾಸ್ತಾ ತಯಾರಿಯಲ್ಲಿ ಪರಿಣಿತರಾಗಿದ್ದಾರೆ. ಸಪ್ಟೆಂಬರ್‌ನಲ್ಲಿ ಆಯುರ್ವೇದದ ಅಂಶವಿರುವ ಪಾಸ್ತಾವನ್ನು ಇವರಿಬ್ಬರೂ ತಯಾರಿಸಿ ಮಾರಾಟ ನಡೆಸಿದ್ದು ಮೊದಲಿಗೆ ತಮ್ಮ ಮಕ್ಕಳಿಗೆ ತಯಾರಿಸಿ ನೀಡಿದರು. ಅಶ್ವಗಂಧ ಅನೂಹ್ಯವಾದ ವಾಸನೆ ಹೊಂದಿರುವುದರಿಂದ ಇದನ್ನು ಪಾನೀಯವಾಗಿ ಸೇವಿಸುವುದು ಕಷ್ಟ ಎಂಬುದು ಸಿಮ್ರನ್ ಮಾತಾಗಿದೆ. ಆದರೆ ಪಾಸ್ತಾ ರೀತಿಯಲ್ಲಿ ಸಿದ್ಧಪಡಿಸಿ ಸೇವಿಸುವುದು ಬೇರೆ ರೀತಿಯ ರುಚಿ ನೀಡುತ್ತದೆ ಹಾಗೂ ಮಕ್ಕಳಿಗೂ ಇದು ಪ್ರಿಯವೆನಿಸುತ್ತದೆ ಎಂದು ಸಿಮ್ರನ್ ತಿಳಿಸುತ್ತಾರೆ.

ಅಶ್ವಗಂಧ ಕಿಡ್ನಿಗಳಿಗೆ ಹಾನಿ ಉಂಟು ಮಾಡುತ್ತಾ?

ಪೋಷಕಾಂಶ ತಜ್ಞೆಯಾಗಿರುವ ಸೌಮಿತಾ ಬಿಸ್ವಾಸ್ ಅಶ್ವಗಂಧದ ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸುತ್ತಾರೆ. ಆದರೂ ಅಶ್ವಗಂಧವನ್ನು ಸೀಮಿತವಾಗಿ ಸೇವಿಸಬೇಕು ಎಂದಾಕೆ ಸಲಹೆ ನೀಡುತ್ತಾರೆ. ಇದನ್ನು ದೀರ್ಘಕಾಲವಾಗಿ ನಿರಂತರವಾಗಿ ಸೇವಿಸುವುದು ಕಿಡ್ನಿಗಳಿಗೆ ಹಾನಿಯನ್ನುಂಟು ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ದಿನಕ್ಕೆ 250 ಮಿಲಿ ಗ್ರಾಮ್‌ನಿಂದ 3 ಗ್ರಾಮ್‌ವರೆಗೆ ಸೇವಿಸಬಹುದು ಎಂದಾಕೆ ತಿಳಿಸುತ್ತಾರೆ.

ಇದನ್ನೂ ಓದಿ:Weight Loss Tips: ಕಾರ್ಬ್ ತಿನ್ನದೇ ಬರೀ ಹರ್ಬಲ್ ಟೀ ಕುಡಿದರೆ ಸಣ್ಣಗಾಗ್ತಾರಾ? ತಜ್ಞರು ಹೀಗೆನ್ನುತ್ತಾರೆ...

ಪಾನೀಯಗಳ ಜೊತೆ ಅಶ್ವಗಂಧ ಸೇರಿಸಿ

ಹೀಗೆ ಗಿಡಮೂಲಿಕೆಯನ್ನು ವೈವಿಧ್ಯಮಯವಾದ ತಿನಿಸು ಹಾಗೂ ಪಾನೀಯಗಳಲ್ಲಿ ಮಿಶ್ರಗೊಳಿಸಿ ಸೇವಿಸುವುದು ಉತ್ತಮ ಮಾರುಕಟ್ಟೆ ಸಲಹೆಯೂ ಹೌದು. ಇದರೊಂದಿಗೆ ಉತ್ಪನ್ನವೂ ಮಾರಾಟವಾಗುತ್ತದೆ ಹಾಗೂ ಗಿಡಮೂಲಿಕೆ ಸತ್ವವು ದೇಹಕ್ಕೆ ಸೇರ್ಪಡೆಗೊಳ್ಳುತ್ತದೆ. ಸಿಮ್ರನ್ ಹಾಗೂ ಕಾಮ್ನಾ ತಯಾರಿಸುವ ಪಾಸ್ತಾದಲ್ಲಿ 3 - 4 ಗ್ರಾಮ್ ಅಶ್ವಗಂಧವನ್ನು ಸೇರಿಸಲಾಗುತ್ತದೆ ಎಂದು ಅವರು ಸಲಹೆ ನೀಡುತ್ತಾರೆ. ದಿನವೂ ಪಾಸ್ತಾ ಸೇವಿಸುವುದು ಅಷ್ಟೊಂದು ಒಳ್ಳೆಯದಲ್ಲ ಎಂದವರು ತಿಳಿಸುತ್ತಿದ್ದು ಯಾವಾಗಲಾದರೊಮ್ಮೆ ಸೇವಿಸುವುದು ಉತ್ತಮ ಎಂಬುದು ಅವರ ಅಭಿಪ್ರಾಯವಾಗಿದೆ.
Published by:Latha CG
First published: