• Home
  • »
  • News
  • »
  • lifestyle
  • »
  • Health Tips: ಹೊಕ್ಕಳಿಗೆ ಎಣ್ಣೆ ಮಾತ್ರ ಅಲ್ಲ ಇಂಗನ್ನು ಹಚ್ಚಿದ್ರೆ ಸಹ ಲಾಭವಿದೆ

Health Tips: ಹೊಕ್ಕಳಿಗೆ ಎಣ್ಣೆ ಮಾತ್ರ ಅಲ್ಲ ಇಂಗನ್ನು ಹಚ್ಚಿದ್ರೆ ಸಹ ಲಾಭವಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hing on Belly Button: ಇಂಗು ತಿನ್ನುವುದರ ಜೊತೆಗೆ ಹೊಕ್ಕಳಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಇಂದು ನಾವು ಇಂಗನ್ನು ಹೊಕ್ಕಳಿಗೆ ಹಚ್ಚುವುದರ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ. 

  • Share this:

ಇಂಗು (hing) ಭಾರತೀಯ ಮಸಾಲೆಗಳಲ್ಲಿ (Indian Masala) ಒಂದಾಗಿದೆ.  ಇದನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಅಡುಗೆಯಲ್ಲಿ (Cooking)  ಬಳಸಲಾಗುತ್ತದೆ.  ಈ ಇಂಗು ಆಹಾರದ ರುಚಿಯನ್ನು  ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ (Health) ಸಹ  ತುಂಬಾ ಪ್ರಯೋಜನಕಾರಿಯಾಗಿದೆ. ಈ ಇಂಗಿನ ಪ್ರಯೋಜನಗಳನ್ನು ನಾವು ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಇನ್ನು ನೀವು ಕೇಳಿರಬಹುದು, ಹೊಕ್ಕಳಿಗೆ ಎಣ್ಣೆಯನ್ನು ಹಚ್ಚಿದರೆ ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳುತ್ತಾರೆ. ಆದರೆ ಕೆಲವರು ಹೊಕ್ಕುಳಿನ ಮೇಲೆ ಇಂಗನ್ನು ಸಹ ಹಚ್ಚಿದರೆ ಲಾಭವಿದೆ ಎನ್ನುತ್ತಾರೆ.  ಹೌದು ಇಂಗು ತಿನ್ನುವುದರ ಜೊತೆಗೆ ಹೊಕ್ಕಳಿಗೆ (Belly Button)  ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ (Benefits). ಇಂದು ನಾವು ಇಂಗನ್ನು ಹೊಕ್ಕಳಿಗೆ ಹಚ್ಚುವುದರ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ.


ಈ ಇಂಗನ್ನು ನಾವು ಶತಮಾನಗಳಿಂದ ಹೊಟ್ಟೆಯ ನೋವು, ಗ್ಯಾಸ್​ ಮತ್ತು  ಹೊಟ್ಟೆ ಮುರಿತ ಸಮಸ್ಯೆಗಳ ಪರಿಹಾರವಾಗಿ ಬಳಸಲಾಗುತ್ತದೆ. ಇದರ ಕಾರ್ಮಿನೇಟಿವ್ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳು ಅಧಿಕ ಆಮ್ಲ ಸ್ರವಿಸುವಿಕೆಯಿಂದ ಉಂಟಾಗುವ ಗ್ಯಾಸ್​ ಮತ್ತು ಹೊಟ್ಟೆ ನೋವನ್ನು ನಿವಾರಿಸುತ್ತದೆ. ಅಡುಗೆ ಮಾಡುವಾಗ ಇದನ್ನು ಬಳಸುವುದು ಸಹ ಹಲವಾರು ಪ್ರಯೋಜನ ನೀಡುತ್ತದೆ.  ಅದರ ಬಲವಾದ ರುಚಿ ಹಸಿವನ್ನು ಉತ್ತೇಜಿಸುತ್ತದೆ ಮತ್ತು ಲಾಲಾರಸದ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.  ಹಾಗೆಯೇ ಹೊಕ್ಕಳಿನ ಮೇಲೆ ಹಚ್ಚುವುದು ಸಹ ಹಲವಾರು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಅದು ಹೇಗೆ ಎಂಬುದು ಇಲ್ಲಿದೆ.


ಹೊಕ್ಕುಳ ಮೇಲೆ ಇಂಗ್ ಅನ್ನು ಹಚ್ಚುವುದರಿಂದ ಸಿಗುವ ಪ್ರಯೋಜನಗಳು


ಹೊಟ್ಟೆ ತಂಪಾಗುತ್ತದೆ: 


ಕೆಲ ಮಾಹಿತಿಯ ಪ್ರಕಾರ, ಆಲಿವ್ ಎಣ್ಣೆಯನ್ನು ಇಂಗಿನ ಪುಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್​ ರೀತಿ ತಯಾರಿಸಿಕೊಂಡು ಬಳಸುವುದು ಬಹಳ ಲಾಭ ನೀಡುತ್ತದೆ. ಈ ಪೇಸ್ಟ್​ ಅನ್ನು ಹೊಕ್ಕುಳಿನ ಮೇಲೆ ಹಚ್ಚಿದರೆ ಹೊಟ್ಟೆಗೆ ತಂಪಾಗುತ್ತದೆ. ನಿಮಗೆ ಎದೆ ಉರಿ ಸಮಸ್ಯೆ ಇದ್ದರೆ ಸಹ ನೀವು ಇದನ್ನು ಬಳಸಬಹುದು. ಇದನ್ನು ನೀವು ದಿನಕ್ಕೆ 2 ರಿಂದ 3 ಬಾರಿ ಮಾಡಬಹುದು.


ಇದನ್ನೂ ಓದಿ: ಈ ಆಹಾರಗಳನ್ನು ತಿಂದ್ರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ


ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ


ನೀವು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಇಂಗು ನಿಮಗೆ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ, 1 ಟೀಸ್ಪೂನ್ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದರಲ್ಲಿ ಸ್ವಲ್ಪ ಇಂಗು ಸೇರಿಸಿ. ಈ ಮಿಶ್ರಣವನ್ನು ಹೊಕ್ಕುಳ ಮೇಲೆ ಹಚ್ಚುವುದರಿಂದ ಉತ್ತಮ ಪರಿಹಾರ ಸಿಗುತ್ತದೆ. ಅಲ್ಲದೇ, ಇದನ್ನು ನಿಯಮಿತವಾಗಿ ಮಾಡುವುದು ಹೊಟ್ಟೆ ನೋವು ಬರದಂತೆ ಸಹ ತಡೆಯುತ್ತದೆ.


ಗ್ಯಾಸ್, ಜೀರ್ಣಕ್ರಿಯೆಗೆ ಒಳ್ಳೆಯದು:


ನೀವು ಗ್ಯಾಸ್ ಅಥವಾ ಹೊಟ್ಟೆಯ ಬೇರೆ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಹೊಕ್ಕುಳ ಮೇಲೆ ಈ ಇಂಗನ್ನು ಹಚ್ಚುವುದು ಪ್ರಯೋಜನಕಾರಿ ಎನ್ನುತ್ತಾರೆ. ಇದಕ್ಕಾಗಿ ಸ್ವಲ್ಪ ಬಿಸಿ ನೀರಿನಲ್ಲಿ ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಹೊಕ್ಕಳಿಗೆ ಹಚ್ಚಿ. ಇದು  ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳಿಂದ ನಿಮಗೆ ಪರಿಹಾರ ನೀಡುತ್ತದೆ.




ಇದನ್ನು ಓದಿ: ನವಜಾತ ಶಿಶುಗಳಲ್ಲಿ ಈ ಲಕ್ಷಣ ಕಂಡ್ರೆ ನೆಗ್ಲೆಕ್ಟ್ ಮಾಡ್ಬೇಡಿ


ಇಂಗನ್ನು  ಬಳಸುವ ಇನ್ನೊಂದು ಉಪಯುಕ್ತ ವಿಧಾನವೆಂದರೆ, ಸ್ವಲ್ ಇಂಗು ತೆಗೆದುಕೊಂಡು, ಅದನ್ನು  ಒಂದು ಲೋಟ ನೀರಿನಲ್ಲಿ ಬೆರೆಸಿ. ಇದನ್ನು ನೀವು ದಿನಕ್ಕೆ 2 ಬಾರಿ ಸೇವನೆ ಮಾಡಬಹುದು. ನಿಮಗೆ ರುಚಿ ಹಿಡಿಸಲಿಲ್ಲ ಎಂದರೆ  ಅದರ ರುಚಿಯನ್ನು ಹೆಚ್ಚಿಸಲು ಕಪ್ಪು ಉಪ್ಪನ್ನು ಸೇರಿಸಿ. ನಿಮಗೆ ಹೊಟ್ಟೆಯ ಸಮಸ್ಯೆ ಕಾಡಿದರೆ ಈ  ನೀರನ್ನು ಕುಡಿಯಿರಿ. ಅಲ್ಲದೇ,  ಕಪ್ಪು ಉಪ್ಪು ಕೂಡ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

Published by:Sandhya M
First published: