ಆ್ಯಪಲ್ ಟೀ ಕುಡಿಯುವುದರಿಂದ ಆಗುವ 5 ಪ್ರಯೋಜನಗಳು

news18
Updated:May 15, 2018, 2:05 PM IST
ಆ್ಯಪಲ್ ಟೀ ಕುಡಿಯುವುದರಿಂದ ಆಗುವ 5 ಪ್ರಯೋಜನಗಳು
news18
Updated: May 15, 2018, 2:05 PM IST
ನ್ಯೂಸ್ 18 ಕನ್ನಡ

ಫಿಟ್​ನೆಸ್​ ಹಾಗೂ ತೂಕ ಕಡಿಮೆ ಮಾಡಿಕೊಳ್ಳಲು  ಗ್ರೀನ್ ಟೀ ಮತ್ತು ಐಸ್ ಟೀ ಮೊರೆ ಹೋಗುವವರೆ ಹೆಚ್ಚು. ಆದರೆ ನೀವು ಎಂದಾದರೂ ಆ್ಯಪಲ್ ಟೀ ಬಗ್ಗೆ ಕೇಳಿದ್ದೀರಾ? ಹೌದು, ಆ್ಯಪಲ್ ಟೀ ( ಸೇಬಿನ ಟೀ) ಸಹ ನಿಮ್ಮ ದೇಹದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಚಹಾದ ರುಚಿ ಕೂಡ ಉತ್ತಮವಾಗಿದ್ದು, ಫಿಟ್ನೆಸ್​ ಅನ್ನು  ಕಾಪಾಡುತ್ತದೆ.

ಬಹುಪಯೋಗಿ ಆ್ಯಪಲ್ ಟೀಯನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇಂದು ಅವುಗಳ ಬಗ್ಗೆ ತಿಳಿಯೋಣ.

ಸೇಬಿನ ಸಿಪ್ಪೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಅಡಗಿವೆ. ಇದರ ಸಿಪ್ಪೆಯನ್ನು ಎಸೆಯುವ ಬದಲು ಚಹಾದಲ್ಲಿ ಬಳಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಈಗಾಗಲೇ ಯುರೋಪ್​ ದೇಶಗಳಲ್ಲಿ ಆ್ಯಪಲ್ ಟೀ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಆ್ಯಪಲ್ ಟೀ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಣ್ಣ ಸೋಂಕುಗಳನ್ನು ತಡೆಗಟ್ಟುವಲ್ಲಿ ಆ್ಯಪಲ್ ಟೀ ಮುಖ್ಯ ಪಾತ್ರವಹಿಸುತ್ತದೆ.

ಹೊಟ್ಟೆಯ ಅಸ್ವಸ್ಥತೆಗೆ ಆ್ಯಪಲ್ ಟೀ ಮನೆಮದ್ದಾಗಿದೆ. ಸೇಬಿನ ಸಿಪ್ಪೆಯನ್ನು ಚಹಾದಲ್ಲಿ ಹಾಕಿ ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.

ಈ ಚಹಾವನ್ನು ನಿರಂತರವಾಗಿ ಕುಡಿಯವುದರಿಂದ ದೇಹದ ತೂಕವನ್ನು ನಿಯಂತ್ರಿಸಬಹುದು.
Loading...

ಕೀಲು ನೋವು ಶಮನಕ್ಕೆ ಆ್ಯಪಲ್ ಟೀ ಉತ್ತಮ ಪರಿಹಾರವಾಗಿದೆ.

ನೈಸರ್ಗಿಕವಾಗಿ ತ್ವಚೆಯ ಕಾಂತಿಯು ಹೆಚ್ಚಿಸಲು ಆ್ಯಪಲ್ ಟೀ ಕುಡಿಯಬಹುದು.

ಆ್ಯಪಲ್ ಟೀ ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಚಹಾ ತಯಾರಿಸಲು ಬೇಕಾದಷ್ಟು ನೀರು ತೆಗೆದುಕೊಳ್ಳಿ. ಅನಂತರ ತೊಳೆದ ಸೇಬನ್ನು 1-1 ಇಂಚಿನ ಸಣ್ಣ ತುಂಡುಗಳಾಗಿ ಕತ್ತರಿಸಿ ನೀರಿಗೆ ಹಾಕಿ 10 ನಿಮಿಷ ಕುದಿಸಿ. ಬಳಿಕ ಚಹಾ ಪುಡಿ, ಲವಂಗ ಮತ್ತು ದಾಲ್ಚಿನ್ನಿ ಸೇರಿಸಿ ಸ್ವಲ್ಪ ಸಮಯದವರೆಗೆ ಕುದಿಸಿ. ಸೋಸಿದ ಆ್ಯಪಲ್ ಟೀಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಕುಡಿಯಿರಿ. ಇದನ್ನು ತಣ್ಣಗೆ ಮಾಡಿಯೂ ಕೂಡ ಕುಡಿಯಬಹುದು.

 
First published:May 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...