ಅರಳಿ ಮರದಿಂದ ಸಿಗುವ ಆರೋಗ್ಯಕರ ಪ್ರಯೋಜನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..!

home remedies: ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.

zahir | news18-kannada
Updated:September 23, 2019, 6:14 PM IST
ಅರಳಿ ಮರದಿಂದ ಸಿಗುವ ಆರೋಗ್ಯಕರ ಪ್ರಯೋಜನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..!
peepal-tree
  • Share this:
ಸಾಮಾನ್ಯವಾಗಿ ಜನರು ಅರಳಿ ಮರವನ್ನು ಪೂಜಿಸುವುದನ್ನು ನೋಡಿರುತ್ತೀರಿ. ಇಲ್ಲ ದೇವಸ್ಥಾನಗಳ ಬಳಿಯಿರುವ ಅರಳಿ ಮರ (ಅಶ್ವತ್ಥಮರ) ಪ್ರದಕ್ಷಿಣೆ ಹಾಕುತ್ತಿರುವುದನ್ನು ಗಮನಿಸಿರುತ್ತೀರಿ. ಇದು ಕೇವಲ ಒಂದು ಸಂಪ್ರದಾಯ ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ವೃಕ್ಷ ಕೂಡ ಒಂದು. ಹಾಗೆಯೇ ಔಷಧೀಯ ದೃಷ್ಟಿಕೋನದಿಂದ ಅರಳಿ ಮರ ಅತ್ಯಂತ ಉಪಯುಕ್ತ. ಅರಳಿ ಮರದ ಎಲೆಗಳು ಮತ್ತು ಅದರ ತೊಗಟೆ, ರೆಂಬೆ ಸೇರಿದಂತೆ ಇದರ ಎಲ್ಲಾ ಭಾಗಗಳನ್ನು ಬಳಸಿ ಅನೇಕ ರೀತಿಯ ರೋಗಗಳನ್ನು ತಡೆಗಟ್ಟಬಹುದು.

ಅಸ್ತಮಾ, ದುರ್ಬಲತೆ, ಮಲಬದ್ಧತೆ, ಮೂತ್ರಪಿಂಡ, ಅತಿಸಾರ ಸೇರಿದಂತೆ ಅನೇಕ ಪ್ರಮುಖ ಕಾಯಿಲೆಗಳಿಗೆ ಮರದ ಎಲೆಗಳು ಪರಿಣಾಮಕಾರಿ ಔಷಧಿಯಾಗಿದೆ. ಇಷ್ಟೇ ಅಲ್ಲದೆ ಕಾಮಾಲೆ, ರಾತ್ರಿ ಕುರುಡುತನ, ಕೆಮ್ಮು, ಮಲೇರಿಯಾ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅರಳಿ ಮರದ ರೆಂಬೆ ಮತ್ತು ಬೇರುಗಳನ್ನು ಬಳಸಲಾಗುತ್ತದೆ. ಅರಳಿ ಮರ (ಅಶ್ವತ್ಥಮರ)ದಿಂದ ಸಿಗುವ ಐದು ಪ್ರಮುಖ ಆರೋಗ್ಯಕರ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.

ಅಸ್ತಮಾ ಸೇರಿದಂತೆ ಇತರ ಉಸಿರಾಟದ ಸಮಸ್ಯೆಗಳಿಗೆ ರಾಮಬಾಣ:

ನೀವು ಅಸ್ತಮಾ ಮತ್ತು ಇತರೆ ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅರಳಿ ಮರಗಳ ಸಹಾಯದಿಂದ ಮನೆಮದ್ದುಗಳನ್ನು ಸಿದ್ಧಪಡಿಸಿಕೊಳ್ಳಬಹುದು.ನೀವು ಮಾಡಬೇಕಾಗಿರುವುದು ಮರದ ತೊಗಟೆಯ ಒಳ ಭಾಗವನ್ನು ತೆಗೆದು ಒಣಗಿಸಿ. ಅದರ ನಂತರ ಆ ಒಣಗಿದ ಭಾಗದ ಪುಡಿಯನ್ನು ತಯಾರಿಸಿ ಅದನ್ನು ನೀರಿನೊಂದಿಗೆ ಔಷಧಿಯಾಗಿ ತೆಗೆದುಕೊಳ್ಳಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಅನೇಕ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಬಹುದು.

ಇಷ್ಟೇ ಅಲ್ಲದೆ, ನೀವು ಅದರ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಹೀಗೆ ಮಾಡುವುದರಿಂದ, ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ. ಅರಳಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅದರ ಮೃದುವಾದ ಎಲೆಗಳನ್ನು ನಿಯಮಿತವಾಗಿ ಅಗಿಯುವುದರಿಂದ ದೇಹದೊತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಯೌವ್ವನವನ್ನು ಕಾಪಾಡಿಕೊಳ್ಳಬಹುದು.

ತುರಿಕೆ ಮತ್ತು ಚರ್ಮದ ಸಮಸ್ಯೆಗೆ ಪರಿಹಾರ:
ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.
Loading...

ಇದನ್ನೂ ಓದಿ: 600 ಕೋಟಿ ಬಜೆಟ್​​ನಲ್ಲಿ ಬೆಳ್ಳಿತೆರೆ ಮೇಲೆ ರಾಮಾಯಣ: ರಾಮ ಮತ್ತು ರಾವಣ ಪಾತ್ರಕ್ಕೆ ಸ್ಟಾರ್ ನಟರು ಫಿಕ್ಸ್..!

ಹಾಗೆಯೇ ಗಾಯವಾಗಿದ್ದರೆ, ಅರಳಿ ಎಲೆಗಳ ಬೆಚ್ಚಗಿನ ಪೇಸ್ಟ್ ಅನ್ನು ಅನ್ವಯಿಸಿ. ಹೀಗೆ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ಅದೇ ರೀತಿ ಅರಳಿ ಮರದ ತೊಗಟೆ ಪುಡಿಯನ್ನು ಗಾಯಗಳಿಗೆ ಅನ್ವಯಿಸುವುದರಿಂದ ಕಿರಿಕಿರಿ ಕಡಿಮೆಯಾಗುವುದಲ್ಲದೆ, ತ್ವರಿತವಾಗಿ ಗಾಯ ಗುಣವಾಗುತ್ತದೆ.

ಹಲ್ಲು ಮತ್ತು ಒಸಡುಗಳು ಬಲಗೊಳಿಸುತ್ತವೆ:
ಅರಳಿ ಮರದಿಂದ ಮಾಡಿದ ಬ್ರಶ್ (ಕಡ್ಡಿ) ಹಲ್ಲುಗಳನ್ನು ಬಲಪಡಿಸುತ್ತವೆ. ಈ ಕಡ್ಡಿಗಳಿಂದ ಪ್ರತಿದಿನ ಹಲ್ಲುಗಳನ್ನು ಸ್ವಚ್ಚಗೊಳಿಸುವ ಮೂಲಕ ಹಲ್ಲುನೋವು ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಇದರಿಂದ ಒಸಡುಗಳು ಬಲಗೊಳ್ಳುತ್ತದೆ.

ಇದನ್ನೂ ಓದಿ: ಜಿಯೋ ಕೊಡುಗೆಗಳೊಂದಿಗೆ ಕೇವಲ 2500 ರೂ.ನಲ್ಲಿ ಸ್ಮಾರ್ಟ್​ಫೋನ್​ ಖರೀದಿಸುವ ಅವಕಾಶ

ಗ್ಯಾಸ್​ ಅಥವಾ ಮಲಬದ್ಧತೆ ಸಮಸ್ಯೆಗೆ ಪರಿಹಾರ:
ಇತ್ತೀಚಿನ ದಿನಗಳಲ್ಲಿ, ಜಂಕ್ ಫುಡ್ ಮತ್ತು ಬೀದಿ ಬದಿಯ ಆಹಾರಗಳ ಸೇವನೆಯಿಂದ ಹೆಚ್ಚಿನ ಜನರು ಮಲಬದ್ಧತೆ ಅಥವಾ ಗ್ಯಾಸ್​ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯನ್ನು ತೊಡೆದುಹಾಕಲು ಅರಳಿ ಮರದ ಎಲೆಗಳನ್ನು ಔಷಧಿಯಾಗಿ ಬಳಸಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು. ಹಾಗೆಯೇ ದಿನನಿತ್ಯ ಒಂದು ಟೀಸ್ಪೂನ್ ಅರಳಿ ಎಲೆ ರಸವನ್ನು ಕುಡಿಯುವುದರಿಂದ ಪಿತ್ತದ ಸಮಸ್ಯೆಯನ್ನು ನಿವಾರಿಸಬಹುದು.

ಚೆಂದುಟಿಯ ಚೆಲುವೆ ಶುಭಾ ಪೂಂಜಾ ಮುಂದಿದೆ ಖಾಲಿ ದೋಸೆ
First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...