Health Tips: ಗರಂ ಮಸಾಲೆಯಿಂದ ಪ್ರಯೋಜನಗಳೆಷ್ಟು ಇದೆಯೋ ಅಷ್ಟೇ ಅಡ್ಡ ಪರಿಣಾಮಗಳಿವೆ

ಅಡುಗೆಗೆ ಇಷ್ಟು ಮುಖ್ಯವಾದ ಈ ಗರಂ ಮಸಾಲೆಯು ಕೆಲವು ಅಡ್ಡ ಪರಿಣಾಮಗಳನ್ನು ಸಹ ಹೊಂದಿದೆ. ಎಂದರೆ ನೀವು ನಂಬುತ್ತಿರಾ? ಈ ಗರಂ ಮಸಾಲೆಯನ್ನು ನಿಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಏನೇನು ಪ್ರಯೋಜನಗಳು ಇವೆಯೋ, ಅಂತೆಯೇ ಅಡ್ಡ ಪರಿಣಾಮಗಳೂ ಇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಯಾವುದೇ ಅಡುಗೆ ಮಾಡಿ, ಸಸ್ಯಾಹಾರಿ ಅಥವಾ ಮಾಂಸಹಾರಿ ಅದಕ್ಕೆ ಗರಂ ಮಸಾಲಾ ಹಾಕದೆ ಇದ್ದರೆ ಆ ಅಡುಗೆ ಪರಿಪೂರ್ಣವಾಗದು ಎಂದರೆ ತಪ್ಪಾಗಲಾರದು. ಈ ಗರಂ ಮಸಾಲೆಯಿಂದಲೇ ನಿಮ್ಮ ಅಡುಗೆಗೆ ರುಚಿ ಮತ್ತು ಪರಿಮಳ ಎಂದರೂ ಅತಿಶಯೋಕ್ತಿಯಲ್ಲ. ಮೊದಲೆಲ್ಲ ನಮ್ಮ ಹಿರಿಯರು ಗರಂ ಮಸಾಲೆಯನ್ನು ಮನೆಯಲ್ಲಿಯೇ ಎಲ್ಲ ತರಹದ ಮಸಾಲೆ ಪದಾರ್ಥಗಳನ್ನು ಸೇರಿಸಿ ಅವರ ಅಡುಗೆ ರುಚಿಗೆ ತಕ್ಕಂತೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಗರಂ ಮಸಾಲೆ ಸಿದ್ದಪಡಿಸಿದ ಪ್ಯಾಕೆಟ್‌ಗಳು ಲಭ್ಯ ಇದೆ. ಪ್ರತಿಯೊಂದು ಖಾದ್ಯಕ್ಕೂ ಅದರದೇ ಆದ ಮಸಾಲೆ ತಯಾರಿಸಿದ್ದಾರೆ. ನೀವು ಈ ಗರಂ ಮಸಾಲೆಯನ್ನು ಅಡುಗೆಯಲ್ಲಿ ಹಾಕದೆ ಹೋದರೆ ನಿಮ್ಮ ಅಡುಗೆ ಸಪ್ಪೆಯಾಗುವುದಂತೂ ಗ್ಯಾರಂಟಿ. ಒಂದು ವೇಳೆ ಅಡುಗೆಗೆ ಗರಂ ಮಸಾಲೆ ಹಾಕದೆ ಹೋದರೆ ನಂತರವೂ ನೀವು ಅದನ್ನು ನಿಮ್ಮ ಅಡುಗೆಯಲ್ಲಿ ಸೇರಿಸಿಕೊಳ್ಳಬಹುದು.

ಗರಂ ಮಸಾಲೆ ನಾವು ಮಾಡುವಂತಹ ಅಡುಗೆಗೆ ಕೇವಲ ಪರಿಮಳ ನೀಡದೆ, ರುಚಿಯನ್ನೂ ಕೊಡುತ್ತದೆ. ಈ ಗರಂ ಮಸಾಲೆಯು ನಮ್ಮ ದೇಶದಲ್ಲಿ ಮಾಡುವಂತಹ ಅಡುಗೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು.

ಆದರೆ, ಅಡುಗೆಗೆ ಇಷ್ಟು ಮುಖ್ಯವಾದ ಈ ಗರಂ ಮಸಾಲೆಯು ಕೆಲವು ಅಡ್ಡ ಪರಿಣಾಮಗಳನ್ನು ಸಹ ಹೊಂದಿದೆ. ಎಂದರೆ ನೀವು ನಂಬುತ್ತಿರಾ? ಈ ಗರಂ ಮಸಾಲೆಯನ್ನು ನಿಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಏನೇನು ಪ್ರಯೋಜನಗಳು ನಮಗೆ ಆಗುತ್ತವೆ ಎಂದು ಮೊದಲು ತಿಳಿದುಕೊಳ್ಳೋಣ. ನಂತರ ಅದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಸುತ್ತೇವೆ.

ಇದನ್ನೂ ಓದಿ: ದಿವ್ಯಾ ಸುರೇಶ್​ ಕುಟುಂಬವನ್ನು ಭೇಟಿ ಮಾಡಿದ Bigg Boss Kannada Season 8ರ ವಿನ್ನರ್​ ಮಂಜು ಪಾವಗಡ

ಶೀತ ಮತ್ತು ಕೆಮ್ಮಿಗೆ ರಾಮಬಾಣ: 

ಈಗ ಮಳೆಗಾಲ ಶುರುವಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಚಳಿಗಾಲವು ಶುರುವಾಗುತ್ತದೆ. ಹವಾಮಾನವು ಕ್ರಮೇಣವಾಗಿ ತಂಪಾಗುತ್ತಿದ್ದಂತೆ ಶೀತ, ಕೆಮ್ಮು ಬರುವುದು ಸಾಮಾನ್ಯ. ಲವಂಗ, ಕರಿ ಮೆಣಸು ಮತ್ತು ದಾಲ್ಚಿನ್ನಿಯಂತಹ ಮಸಾಲೆ ಪದಾರ್ಥಗಳು ತಕ್ಷಣವೇ ನಿಮಗಿರುವಂತಹ ಕೆಮ್ಮು ಮತ್ತು ಶೀತ ನಿವಾರಿಸಲು ತುಂಬಾ ಸಹಾಯಕವಾಗಿವೆ

ಇದನ್ನೂ ಓದಿ: Salman Khan-Akshay Kumar ಸೇರಿದಂತೆ 30 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು..!

ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ತಂಪಾದ ವಾತಾವರಣದಲ್ಲಿ ಜನರು ಹೆಚ್ಚಾಗಿ ಬಿಸಿಬಿಸಿಯಾದ ಪಕೋಡ, ಮೆಣಸಿನಕಾಯಿ ಬಜ್ಜಿ ತಿನ್ನಲು ಇಷ್ಟಪಡುತ್ತಾರೆ ಮತ್ತು ಇದರಿಂದ ನಮ್ಮ ಜೀರ್ಣಕ್ರಿಯೆ ಹದಗೆಡುವುದು ಸಾಮಾನ್ಯ. ಈ ಜೀರ್ಣಕ್ರಿಯೆಯ ಸಮಸ್ಯೆಯನ್ನು ನಿವಾರಿಸಲು ಈ ಗರಂ ಮಸಾಲೆಗಳನ್ನು ಅದರಲ್ಲಿ ಸೇರಿಸಬಹುದು.

ನೋವು ಮತ್ತು ಊತ ಕಡಿಮೆಯಾಗುತ್ತದೆ: ಗರಂ ಮಸಾಲೆಗಳಲ್ಲಿ ಉರಿಯೂತ ನಿವಾರಕ ಗುಣಗಳಿದ್ದು, ನೋವು ಮತ್ತು ಊತವನ್ನು ನಿವಾರಿಸುತ್ತದೆ. ಹೀಗಾಗಿ ಇದನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.

ಮಧುಮೇಹಕ್ಕೆ ರಾಮಬಾಣ: 

ನೀವು ಸೇವಿಸುವ ಆಹಾರದಲ್ಲಿ ಜೀರಿಗೆ ಮತ್ತು ಇತರೆ ಮಸಾಲೆ ಪದಾರ್ಥಗಳನ್ನು ಸೇರಿಸುವುದರಿಂದ ಮಧುಮೇಹ ನಿಯಂತ್ರಿಸುವಲ್ಲಿ ಇದು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Actress Leelavathi ಮನೆಗೆ ಭೇಟಿ ಕೊಟ್ಟು ಸಂತೋಷದಿಂದ ಕಾಲ ಕಳೆದ ಭಾರತಿ ವಿಷ್ಣುವರ್ಧನ್​-ಹೇಮಾ ಚೌಧರಿ

ಇದುವರೆಗೂ ನಾವು ಈ ಗರಂ ಮಸಾಲೆಯಿಂದ ಆಗುವಂತಹ ಪ್ರಯೋಜನಗಳನ್ನು ತಿಳಿದುಕೊಂಡೆವು. ಇದರಿಂದ ಕೆಲವು ಅನಾನುಕೂಲತೆಗಳು ಸಹ ಇವೆ. ಈ ಗರಂ ಮಸಾಲೆಯನ್ನು ನೀವು ಅತಿಯಾಗಿ ಮತ್ತು ನಿರಂತರವಾಗಿ ಎಲ್ಲ ಅಡುಗೆಗಳಲ್ಲಿ ಬಳಸಿದರೆ ನಿಮಗೆ ಮೂಲವ್ಯಾಧಿ, ಎದೆಯುರಿ, ಹೊಟ್ಟೆ ಉರಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
Published by:Anitha E
First published: