HOME » NEWS » Lifestyle » BENEFITS AND MYTHS AROUND BREASTFEEDING STG AE

ಎದೆ ಹಾಲುಣಿಸುವ ಬಗ್ಗೆ ಇರುವ ತಪ್ಪು ಕಲ್ಪನೆಗಳು-ವಾಸ್ತವಿಕ ಅಂಶಗಳ ಕುರಿತಾಗಿ ಅರಿಯೋಣ..!

ಎದೆ ಹಾಲುಣಿಸುವುದು ಎಂದರೆ ಮಗುವಿಗೆ ಕೇವಲ ಆಹಾರ ನೀಡುವುದಲ್ಲ. ಅದಕ್ಕಿಂದಲೂ ಹೆಚ್ಚಿನ ಸಂಗತಿಗಳು ಅದರಲ್ಲಿ ಅಡಗಿವೆ. ಅದೇನೆಂದು ಇಲ್ಲಿ ತಿಳಿಯೋಣ.

Trending Desk
Updated:July 23, 2021, 12:54 AM IST
ಎದೆ ಹಾಲುಣಿಸುವ ಬಗ್ಗೆ ಇರುವ ತಪ್ಪು ಕಲ್ಪನೆಗಳು-ವಾಸ್ತವಿಕ ಅಂಶಗಳ ಕುರಿತಾಗಿ ಅರಿಯೋಣ..!
ಸಾಂದರ್ಭಿಕ ಚಿತ್ರ
  • Share this:
ಎದೆ ಹಾಲು ಉಣಿಸುವುದು ಎಂದರೆ ಸಾಮಾನ್ಯ ಸಂಗತಿ ಅಲ್ಲ, ಅದು ವಿಶಿಷ್ಟ, ಅನನ್ಯ ಅನುಭವ. ಇತ್ತೀಚೆಗೆ ಕಿರುತೆರೆ ಕಲಾವಿದೆ ಅಂಕಿತಾ ಭಾರ್ಗವ ಒಂದು ಪೋಸ್ಟ್‍ನಲ್ಲಿ ಆ ಬಗ್ಗೆ ಬರೆದ ಸುಂದರ ಸಾಲುಗಳು ಇಂತಿವೆ-ಎದೆ ಹಾಲು ಉಣಿಸುವುದು ಮೂಲತಃ ತಾಯಿ ಮತ್ತು ಮಗುವಿನ ನಡುವಿನ ಸಂಭಾಷಣೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಗು ಹುಟ್ಟಿದ ಆರು ತಿಂಗಳ ವರೆಗೆ ಅದಕ್ಕೆ ಯಾವುದೇ ಘನ ಆಹಾರ ನೀಡದೆ ,ಕೇವಲ ಎದೆ ಹಾಲು ಉಣಿಸಬೇಕು. ಆದರೆ ತಾಯಂದಿರು ನವಜಾತ ಶಿಶುವಿಗೆ ಎದೆ ಹಾಲುಣಿಸುವುದನ್ನು ನಿಲ್ಲಿಸುವಂತೆ ಮಾಡುವ ಹಲವಾರು ತಪ್ಪು ಕಲ್ಪನೆಗಳು ಇವೆ. ಎದೆ ಹಾಲುಣಿಸುವುದು ಎಂದರೆ ಮಗುವಿಗೆ ಕೇವಲ ಆಹಾರ ನೀಡುವುದಲ್ಲ, ಅದಕ್ಕಿಂದಲೂ ಹೆಚ್ಚಿನ ಸಂಗತಿಗಳು ಅದರಲ್ಲಿ ಅಡಗಿವೆ. ಅದೇನೆಂದು ಇಲ್ಲಿ ತಿಳಿಯೋಣ.

ಎದೆ ಹಾಲುಣಿಸುವಿಕೆಯ ಲಾಭಗಳು:

ಮಗು ಮತ್ತು ತಾಯಿಯ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಎದೆ ಹಾಲಿನಲ್ಲಿ ನವಜಾತ ಶಿಶುವಿಗೆ ಅಗತ್ಯ ಇರುವ ಎಲ್ಲಾ ಪೋಷಕಾಂಶಗಳು ಇರುತ್ತವೆ.
ಎದೆ ಹಾಲನ್ನು ನವಜಾತ ಶಿಶು ಸುಲಭವಾಗಿ ಜೀರ್ಣ ಮಾಡಿಕೊಳ್ಳಬಲ್ಲದು
ಅದು ಬ್ರೆಸ್ಟ್ ಕ್ಯಾನ್ಸರ್ ಮತ್ತು ಒವೇರಿಯನ್ ಕ್ಯಾನ್ಸರ್​ನ‌ ಅಪಾಯದಿಂದ ರಕ್ಷಿಸುತ್ತದೆ.
ಎದೆ ಹಾಲು , ಪ್ರಸವದ ನಂತರ ಗರ್ಭಾಶಯದ ಗಾತ್ರವನ್ನು ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಸಹಾಯ ಮಾಡುತ್ತದೆ.ಎದೆ ಹಾಲು ಯಾವಾಗಲೂ ಶಿಶುವಿಗೆ ಸೂಕ್ತವಾದ ತಾಪಮಾನ ಹೊಂದಿರುತ್ತದೆ.
ಎದೆ ಹಾಲಿನಿಂದ ನಿತ್ಯ ಸುಮಾರು 500 ಅಧಿಕ ಕ್ಯಾಲೋರಿಗಳು ಕರಗುತ್ತವೆ.
ಎದೆ ಹಾಲಿನಲ್ಲಿ ಮಗುವಿನ ರೋಗ ನಿರೋಧಕ ಶಕ್ತಿಗೆ, ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಕಾಯಿಲೆಗಳಿಂದ ದೂರ ಇಡಲು ಅಗತ್ಯವಾದ ಪ್ರತಿಕಾಯಗಳಿವೆ.

ಇದನ್ನೂ ಓದಿ: ಕಣ್ಣೀರಿಟ್ಟು ನಾನು ಬಿಗ್ ಬಾಸ್​ ಮನೆಯ ಬ್ಯಾಡ್ ಬಾಯ್​​ ಎಂದಿದ್ದೇಕೆ ಬ್ರೋ ಗೌಡ

ಶಿಶು ಹುಟ್ಟಿದ ಕೂಡಲೇ ಅಥವಾ ಒಂದು ಗಂಟೆಯ ಒಳಗೆ ಎದೆ ಹಾಲು ಕುಡಿಸಬೇಕು. ಆರಂಭದಲ್ಲಿ ಬರುವ ಹಳದಿ ಬಣ್ಣದ ಹಾಲು ಪೋಷಕಾಂಶಗಳ ಖಜಾನೆಯಾಗಿರುತ್ತದೆ. 3-5 ದಿನಗಳ ಬಳಿಕ ಬಿಳಿ ವರ್ಣ ಹಾಲು ಬರುತ್ತದೆ. ಕೆಲವು ತಾಯಂದಿರಲ್ಲಿ ಹಾಲಿನ ಪ್ರಮಾಣ ಕಡಿಮೆ ಇರುತ್ತದೆ. ಹಾಲು ಚೆನ್ನಾಗಿ ಉತ್ಪಾದನೆ ಆಗಬೇಕಾದರೆ, ಮಗುವಿಗೆ ನಿತ್ಯವೂ ಎದೆ ಹಾಲು ಕುಡಿಸಬೇಕು. ಪ್ರತೀ ಎರಡೂವರೆ ಗಂಟೆಗೊಮ್ಮೆ, ಎರಡೂ ಬದಿಯಿಂದ 20 ನಿಮಿಷ ಹಾಲುಣಿಸಬೇಕು. ಅದು ಬೇಗನೇ ಜೀರ್ಣಗೊಳ್ಳುವುದರಿಂದ, ಮಗುವಿಗೆ ಬೇಗ ಹಸಿವಾಗುತ್ತದೆ ಹಾಗೂ ಅವು ಪದೇ ಪದೇ ಅಳಲು ಆರಂಭಿಸುತ್ತವೆ.

ಇದನ್ನೂ ಓದಿ: Bigg Boss Season 8 Kannada: ಚಕ್ರವರ್ತಿ ಮೀಸೆಗೆ ಕತ್ತರಿ ಹಾಕಿದ ಪ್ರಶಾಂತ್​ ಸಂಬರಗಿ..!

ಮೆಂತೆ ಸೊಪ್ಪು, ಕೊತ್ತಂಬರಿ ಬೀಜ ಮತ್ತು ಹಸಿರು ಸೊಪ್ಪುತರಕಾರಿಗಳನ್ನು ಸೇವಿಸುವುದರಿಂದ ಎದೆ ಹಾಲು ಚೆನ್ನಾಗಿ ಉತ್ಪಾದನೆ ಆಗುತ್ತದೆ. ನವಜಾತ ಶಿಶುವಿನ ತಾಯಂದಿರು ಪೋಷಕಾಂಶಯುಕ್ತ ಊಟ ಮಾಡಿ, ದಿನಕ್ಕೆ ಕನಿಷ್ಟ ಎರಡು ಲೋಟ ಹಾಲು ಕುಡಿಯಬೇಕು. ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಕಾರ್ಬ್ ಆಹಾರ ಕ್ರಮವನ್ನು ಅನುಸರಿಸಲೇಬೇಡಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by: Anitha E
First published: July 23, 2021, 12:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories