• Home
  • »
  • News
  • »
  • lifestyle
  • »
  • Belly Fat: ಹೊಟ್ಟೆಯ ಕೊಬ್ಬನ್ನು ಕರಗಿಸಲು ವಿಟಮಿನ್ ಡಿ ಸೇವಿಸಿ, ರಿಸಲ್ಟ್ ನೀವೇ ನೋಡಿ

Belly Fat: ಹೊಟ್ಟೆಯ ಕೊಬ್ಬನ್ನು ಕರಗಿಸಲು ವಿಟಮಿನ್ ಡಿ ಸೇವಿಸಿ, ರಿಸಲ್ಟ್ ನೀವೇ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಯಾವುದಾದರೂ ಸುಲಭ ಮಾರ್ಗವಿದೆಯೇ ಎಂದರೆ ಹೌದು ಎನ್ನುತ್ತಾರೆ ತಜ್ಞರು. ವಿಟಮಿನ್ ಡಿ ತೆಗೆದುಕೊಳ್ಳುವುದು ಹೊಟ್ಟೆ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಎಂದು ಹೇಳ್ತಾರೆ. ಹೊಟ್ಟೆಯ ಕೊಬ್ಬು ಕರಗಿಸಲು ವಿಟಮಿನ್ ಡಿ ಪೂರೈಸುವ ಪದಾರ್ಥಗಳು.

  • Share this:

    ಹೊಟ್ಟೆಯ ಕೊಬ್ಬು (Belly Fat) ನಮ್ಮ ಆಹಾರದ (Food) ಜೊತೆ ನೇರವಾಗಿ ಸಂಪರ್ಕ ಹೊಂದಿದೆ. ನಾವು ಅನಾರೋಗ್ಯಕರ ಆಹಾರ (Unhealthy Food) ಸೇವಿಸುತ್ತಾ ಹೋದರೆ ಹೊಟ್ಟೆ ಕೊಬ್ಬು ಖಂಡಿತ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ (Winter) ನಮ್ಮ ಹೊಟ್ಟೆ ಕೊಬ್ಬು ವೇಗವಾಗಿ ಹೆಚ್ಚಾಗುತ್ತದೆ. ಯಾಕಂದ್ರೆ ಚಳಿಯಲ್ಲಿ ಹಸಿವು (Hungry) ಹೆಚ್ಚುತ್ತಾ ಹೋಗುತ್ತದೆ. ಆಗ ಬಿಸಿ ಪದಾರ್ಥ ಸೇವನೆಯ ಕ್ರೇವಿಂಗ್ ಸಹ ಹೆಚ್ಚುತ್ತದೆ. ಅದಾಗ್ಯೂ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಯಾವುದಾದರೂ ಸುಲಭ ಮಾರ್ಗವಿದೆಯೇ? ಹೌದು ಎನ್ನುತ್ತಾರೆ ತಜ್ಞರು. ವಿಟಮಿನ್ ಡಿ ತೆಗೆದುಕೊಳ್ಳುವುದು ಹೊಟ್ಟೆ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಎಂದು ಹೇಳ್ತಾರೆ.


    ತೂಕ ನಷ್ಟಕ್ಕೆ  ಅದರಲ್ಲೂ ಹೊಟ್ಟೆಯ ಕೊಬ್ಬು ಕರಗಿಸಲು ವಿಟಮಿನ್ ಡಿ ಯನ್ನು ಯಾವ ಆಹಾರ ಪದಾರ್ಥಗಳು ಪೂರೈಸುತ್ತವೆ ಎಂದು ನಾವು ಇಲ್ಲಿ ನೋಡೋಣ.


    ವಿಟಮಿನ್ ಡಿ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುತ್ತದೆ


    ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ವಿಟಮಿನ್ ಡಿ ತೆಗೆದುಕೊಳ್ಳಬೇಕು. ಇದು ವೇಗವಾಗಿ ತೂಕ ಇಳಿಕೆಗೆ ಸಜಾಯ ಮಾಡುತ್ತದೆ. 2011 ರಲ್ಲಿ ನಡೆಸಿದ ಅಧ್ಯಯನ ಒಂದರ ಪ್ರಕಾರ, ವಿಟಮಿನ್ ಡಿ ಪಡೆಯಲು ಸೂರ್ಯನ ಬೆಳಕು ಉತ್ತಮ ಮಾರ್ಗ ಆಗಿದೆ.


    ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


    ಆದರೆ ಚಳಿಗಾಲದಲ್ಲಿ ಸೂರ್ಯನ ಬೆಳಕು ವಿರಳ ಆಗಿರುತ್ತದೆ. ಇದು ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಬಹುದು. ವಿಟಮಿನ್ ಡಿ ಮಟ್ಟ ಹೆಚ್ಚಿಸಲು ಕೆಲವು ಆಹಾರಗಳನ್ನು ಸೇವಿಸಬಹುದು. ಈ ಆಹಾರಗಳು ಆಹಾರದಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣ ಹೊಂದಿದೆ.


    ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ವಿಟಮಿನ್ ಡಿ ಆಹಾರ


    ವಿಟಮಿನ್ ಡಿ ಹೊಂದಿರುವ ಆಹಾರಗಳು ಕಡಿಮ. ಅದರಲ್ಲೂ ಸಸ್ಯಾಹಾರಿಗಳಲ್ಲಿ ಇನ್ನೂ ಕಡಿಮೆ ಆಗಿವೆ. ವಿಟಮಿನ್ ಡಿ ಸಮೃದ್ಧ ಆಹಾರಗಳ ಬಗ್ಗೆ ತಿಳಿಯೋಣ.


    ಮೊಟ್ಟೆಯ ಹಳದಿ ಭಾಗ, ಸಾಲ್ಮನ್ ಮೀನು, ಟ್ಯೂನ ಮೀನು, ಮೀನಿನ ಎಣ್ಣೆ, ಬಲವರ್ಧಿತ ಧಾನ್ಯಗಳು, ಹಾಲು ಮತ್ತು ಡೈರಿ ಉತ್ಪನ್ನಗಳು, ಅಣಬೆ, ವಿಟಮಿನ್-ಡಿ ಪೂರಕಗಳು ಇತ್ಯಾದಿಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ.


    ಹೊಟ್ಟೆಯ ಕೊಬ್ಬನ್ನು ಕಡಿಮೆ ವಾಕಿಂಗ್ ಮಾಡಿ


    ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ವಿಟಮಿನ್ ಡಿ ಜೊತೆಗೆ ವ್ಯಾಯಾಮವನ್ನೂ ಮಾಡಬೇಕು. ಊಟದ ನಂತರ ಮತ್ತು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ದಿನಕ್ಕೆ ಕೇವಲ 30 ನಿಮಿಷ ನಡೆಯುವ ಮೂಲಕ ನಿಮ್ಮ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.


    ಚಳಿಗಾಲದಲ್ಲಿ ಅತಿಯಾಗಿ ಹಸಿವು ಉಂಟಾಗಲು ಕಾರಣಗಳು ಯಾವವು?


    ಚಳಿಗಾಲದಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ. ಇದು ದೇಹದ ತಾಪಮಾನ ಕಡಿಮೆ ಆಗುತ್ತದೆ. ಈ ಕಾರಣದಿಂದ ದೇಹವು ಶಾಖ ಬಯಸುತ್ತದೆ. ದೇಹದ ಉಷ್ಣತೆ ಹೆಚ್ಚಿಸಲು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದನ್ನು ಜೀರ್ಣಿಸಿಕೊಳ್ಳುವಾಗ ದೇಹದಲ್ಲಿ ಶಾಖ ಉತ್ಪತ್ತಿ ಆಗುತ್ತದೆ ಮತ್ತು ಶೀತದ ಭಾವನೆ ನಿಲ್ಲುತ್ತದೆ.


    ಸೂರ್ಯನಿಂದ ವಿಟಮಿನ್ ಡಿ ತೆಗೆದುಕೊಳ್ಳುವಾಗ ಸನ್‌ಸ್ಕ್ರೀನ್ ಅನ್ವಯಿಸಿ


    ಸೂರ್ಯನ ಬೆಳಕಿನಿಂದ ಹೆಚ್ಚಿನ ವಿಟಮಿನ್ ಡಿ ಪಡೆಯಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸೂರ್ಯನ ಬೆಳಕು ನಿಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಬೇಸಿಗೆ ಅಥವಾ ಚಳಿಗಾಲದ ಋತುವಿನಲ್ಲಿ ಯಾವಾಗಲೂ ಸೂರ್ಯನ ಬಿಸಿಲಿಗೆ ಮೈಯೊಡ್ಡುವ ಮೊದಲು ಸರಿಯಾಗಿ SPF ಸನ್‌ಸ್ಕ್ರೀನ್ ನ್ನು ಅನ್ವಯಿಸಿ.


    ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


    ವಿಟಮಿನ್ ಡಿ ಪ್ರಯೋಜನಗಳು


    ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ವಿಟಮಿನ್ ಡಿ ಸಹಾಯ ಮಾಡುತ್ತದೆ, ಮೂಳೆಗಳನ್ನು ಗಟ್ಟಿಗೊಳಿಸಲು ಸಹಕಾರಿ, ಚಿತ್ತ ಹೆಚ್ಚಿಸುತ್ತದೆ, ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವುದನ್ನು ತಡೆಯುತ್ತದೆ.

    Published by:renukadariyannavar
    First published: