Health Tips| ನಿಮ್ಮ ಆಹಾರ ಮಾತ್ರವಲ್ಲ, ಈ ಅಭ್ಯಾಸಗಳು ಸಹ ನಿಮ್ಮ ಹೆಚ್ಚುತ್ತಿರುವ ಬೊಜ್ಜಿಗೆ ಕಾರಣವಿರಬಹುದು..!

ಹೊಟ್ಟೆಯ ಭಾಗದಲ್ಲಿರುವ ಕೊಬ್ಬು ತುಂಬಾ ಹಠಮಾರಿ ಎಂದು ಕರೆಯಲ್ಪಡುತ್ತದೆ. ಇದು ಕೇವಲ ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರದೆ, ನಮ್ಮ ದೈನಂದಿನ ಅಭ್ಯಾಸಗಳ ಮೇಲೆಯೂ  ಅವಲಂಬಿತವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಬಹುತೇಕ ಜನರು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಬಳಲುತ್ತಿದ್ದರೆ, ಇನ್ನೊಂದೆಡೆ ಸದ್ದಿಲ್ಲದಂತೆ ಜನರನ್ನು ಕಾಡುತ್ತಿರುವಂತಹ ವಿಷಯ ಎಂದರೆ ಅವರ ದೇಹದಲ್ಲಿರುವ ಅತಿಯಾದ ಬೊಜ್ಜಿನಾಂಶ ಎಂದರೆ ತಪ್ಪಲ್ಲ. ಈ ಬೊಜ್ಜಿನ ಸಮಸ್ಯೆಯು ಮನುಷ್ಯನ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಇದಲ್ಲದೆ, ಇದು ಹೆಚ್ಚಾಗಿ ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ತಂದೊಡ್ಡಬಹುದು. ಈ ಸ್ಥೂಲಕಾಯದ ವಿಷಯಕ್ಕೆ ಬಂದಾಗ, ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗುವ ಕೊಬ್ಬು ಸುಲಭವಾಗಿ ಹೆಚ್ಚಾಗುತ್ತದೆ.

ಆದರೆ, ಇದನ್ನು ಕಡಿಮೆ ಮಾಡಿಕೊಳ್ಳುವುದು ಮಾತ್ರ ತುಂಬಾ ಕಷ್ಟದ ಕೆಲಸ. ಈ ಹೊಟ್ಟೆಯ ಭಾಗದಲ್ಲಿರುವ ಕೊಬ್ಬು ತುಂಬಾ ಹಠಮಾರಿ ಎಂದು ಕರೆಯಲ್ಪಡುತ್ತದೆ. ಇದು ಕೇವಲ ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರದೆ, ನಮ್ಮ ದೈನಂದಿನ ಅಭ್ಯಾಸಗಳ ಮೇಲೆಯೂ  ಅವಲಂಬಿತವಾಗಿರುತ್ತದೆ. ಹಾಗಾದರೆ ಇಲ್ಲಿ ಕೆಳಗೆ ಒಂದಿಷ್ಟು ಅಭ್ಯಾಸಗಳನ್ನು ನೀಡಲಾಗಿದೆ, ನೀವು ದೈನಂದಿನ ಬದುಕಿನಲ್ಲಿ ಇವುಗಳನ್ನು ಮಾಡುತ್ತಿದ್ದರೆ, ತಕ್ಷಣವೇ ನಿಲ್ಲಿಸುವುದು ಉತ್ತಮ.

ನಿಂತುಕೊಂಡು, ಅಡ್ಡಾಡಿಕೊಂಡು ನೀರು ಕುಡಿಯುವುದು:

ಈಗಂತೂ ಬಹುತೇಕ ಜನರು ಮನೆಯಿಂದ ಕೆಲಸ ಮಾಡುತ್ತಿದ್ದರೂ ಕೆಲಸದ ಅತಿಯಾದ ಒತ್ತಡದಿಂದ ಶಾಂತಿಯುತವಾಗಿ ಕುಳಿತು ಊಟ ಮಾಡಲು ಮತ್ತು ನೀರು ಕುಡಿಯುವುದನ್ನು ಮರೆತೇ ಬಿಟ್ಟವರಂತೆ ಕಾಣುತ್ತದೆ. ಕೆಲಸದ ಒತ್ತಡದಿಂದ ಜನರು ನಿಂತುಕೊಂಡೇ ನೀರು ಕುಡಿಯುವುದನ್ನು ಮತ್ತು ಅಡ್ಡಾಡಿಕೊಂಡು ನೀರು ಕುಡಿಯುವುದನ್ನು ನಾವು ನೋಡಿರುತ್ತೇವೆ. ಇದು ನೋಡಲು ತುಂಬಾ ಸಾಮಾನ್ಯ ಎನಿಸಿದರೂ ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ.

ಬೆನ್ನನ್ನು ನೇರವಾಗಿಟ್ಟುಕೊಂಡು ಒಳ್ಳೆಯ ಭಂಗಿಯಲ್ಲಿ ಕುಳಿತು ನೀರನ್ನು ಸೇವಿಸಿದಾಗ ನೀರಿನಿ೦ದ ಗರಿಷ್ಟ ಪ್ರಯೋಜನಗಳನ್ನು ನಮ್ಮ ದೇಹವು ಪಡೆಯುವ ರೀತಿಯಲ್ಲಿ ಶರೀರವು ಸೃಷ್ಟಿಸಲ್ಪಟ್ಟಿದೆ ಎ೦ದು ಆಯುರ್ವೇದವು ಹೇಳುತ್ತದೆ. ಕುಳಿತು ನೀರು ಕುಡಿಯುವುದರಿಂದ ನೀರು ಮೆದುಳನ್ನು ತಲುಪಿ ಇತರೆ ಅಂಗಾಂಗಗಳ ಕಾರ್ಯಗಳನ್ನು ಬಲಪಡಿಸುತ್ತದೆ.
ನೀವು ಹೆಚ್ಚು ಸೋಡಾ ಕುಡಿಯುತ್ತೀರಿ: ಸೋಡಾಗಳಂತಹ ಕಾರ್ಬೋನೇಟೆಡ್ ಸಕ್ಕರೆಯುಕ್ತ ಪಾನೀಯಗಳನ್ನು ಬಹುತೇಕರು ಆಗಾಗ್ಗೆ ಕುಡಿಯುತ್ತಲೇ ಇರುತ್ತಾರೆ.

ಸಾಮಾನ್ಯವಾಗಿ ಎಲ್ಲರೂ ನಂಬಿರುವ ಸುಳ್ಳು ಎಂದರೆ ಈ ಸಂಸ್ಕರಿಸಿದ ಕಾರ್ಬ್ಸ್ ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ಪಾನೀಯಗಳು ಸಂಸ್ಕರಿಸಿದ ಸಕ್ಕರೆ ಒಳಗೊಂಡಿದ್ದು ಹೊಟ್ಟೆಯ ಭಾಗದಲ್ಲಿ ಅತಿಯಾದ ಕೊಬ್ಬು ಸಂಗ್ರಹವಾಗುತ್ತದೆ.

ನಿಮ್ಮ ಆಹಾರದಲ್ಲಿ ಪ್ರೋಬಯಾಟಿಕ್ ಗಳ ಕೊರತೆಯಿದೆ:

ಪ್ರೋಬಯಾಟಿಕ್ ಅಂಶವಿರುವ ಆಹಾರ ಪದಾರ್ಥಗಳು ನಮ್ಮ ಕರುಳಿನ ಆರೋಗ್ಯ ಕಾಪಾಡುತ್ತವೆ. ಇದು ಜೀರ್ಣಾಂಗವ್ಯೂಹವನ್ನು ಸ್ಪಷ್ಟ ಮತ್ತು ಆರೋಗ್ಯಕರ ವಾಗಿರಿಸುತ್ತದೆ. ಮೊಸರಿನಂತಹ ಆಹಾರಗಳು ಹೊಟ್ಟೆ ಉಬ್ಬರ ಮತ್ತು ಇತರ ರೀತಿಯ ಜೀರ್ಣಾಂಗ ತೊಂದರೆ ತಡೆಗಟ್ಟಲು ಸಹಾಯ ಮಾಡುವ ಪ್ರೋಬಯಾಟಿಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ: Guinness World Record: ಈ ಅಜ್ಜನ ವಯಸ್ಸು 112, ಇಷ್ಟು ವರ್ಷ ಆರೋಗ್ಯವಾಗಿರೋದು ಹೇಗೆ ಅನ್ನೋ ಗುಟ್ಟು ಹೇಳಿದ್ದಾರೆ ನೋಡಿ..!

ನೀವು ಊಟ ಮಾಡದೆ ಇರುವುದು: 

ತುಂಬಾ ಜನರು ತಾವು ಸೇವಿಸುವ ಆಹಾರದಲ್ಲಿ ಕಡಿಮೆ ಸೇವಿಸಿದರೆ ತಮ್ಮ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆ ಮಾಡಿಕೊಳ್ಳಬಹುದು ಎಂದು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ಹೀಗೆ ಊಟ ತ್ಯಜಿಸುವುದರಿಂದ ನಿಮ್ಮ ದೇಹದಲ್ಲಿ ಇನ್ನಷ್ಟು ಬೊಜ್ಜು ಮತ್ತು ಸೊಂಟದ ಸುತ್ತಲಿನ ಭಾಗದಲ್ಲಿ ಇನ್ನಷ್ಟು ಬೊಜ್ಜು ಸಂಗ್ರಹವಾಗುತ್ತದೆ. ನಿಮ್ಮ ದೇಹವನ್ನು ಹೆಚ್ಚು ಗಂಟೆಗಳ ಕಾಲ ಆಹಾರದಿಂದ ವಂಚಿತಗೊಳಿಸುವುದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸಬಹುದು.
Published by:MAshok Kumar
First published: