ಜಗತ್ತಿನಲ್ಲಿ ಹಲವು ವಿಧದ ಹಣ್ಣುಗಳು ಮತ್ತು ತರಕಾರಿಗಳು (Verity Fruits And Vegetables) ಇವೆ. ಅವುಗಳಲ್ಲಿ ಪೇರಳೆ ಹಣ್ಣು (Guava Fruit) ಕೂಡ ಒಂದು. ಸೇಬು (Apple), ಕಿತ್ತಳೆ, ಫೈನಾಪಲ್, ಕಲ್ಲಂಗಡಿ ಸೇರಿದಂತೆ ಹಲವು ಹಣ್ಣುಗಳು ಆರೋಗ್ಯ ಪ್ರಯೋಜನ (Health Benefits) ನೀಡುತ್ತವೆ. ದಿನವೂ ಒಂದು ಸೇಬು ತಿಂದರೆ ಅನಾರೋಗ್ಯ (Unhealthy) ಕಡಿಮೆ ಆಗುತ್ತದೆ ಎಂಬ ನಂಬಿಕೆಯಿದೆ. ಬಾಳೆಹಣ್ಣು ಸೇವನೆ ಜೀರ್ಣಕ್ರಿಯೆಗೆ ಸಹಕಾರಿ. ಕಲ್ಲಂಗಡಿ ಹೆಚ್ಚು ನೀರಿನಂಶವಿರುವ ಪದಾರ್ಥ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಕಿತ್ತಳೆ ಹಣ್ಣು ಅನೇಕ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿ. ವಿಟಮಿನ್ ಸಿ ಸಮೃದ್ಧ ಕಿತ್ತಳೆ ಹಣ್ಣು ರೋಗ ನಿರೋಧಕ ಶಕ್ತಿ ಸುಧಾರಿಸಲು ಸಹಕಾರಿ.
ಆರೋಗ್ಯಕ್ಕೆ ಪೇರಳೆ ಹಣ್ಣು ಯಾವೆಲ್ಲಾ ಪ್ರಯೋಜನ ತಂದು ಕೊಡುತ್ತದೆ?
ಕೆಮ್ಮು ಬಾಧಿಸುತ್ತಿದ್ದರೆ ಹುರಿದ ಪೇರಳೆ ಹಣ್ಣು ಸೇವಿಸಲು ಮನೆಯಲ್ಲಿ ಅಜ್ಜಿ ಸಲಹೆ ನೀಡುತ್ತಿದ್ದರು. ಪೇರಳೆ ಹಣ್ಣು ಸಾಕಷ್ಟು ಪೋಷಕಾಂಶ ಸಮೃದ್ಧವಾಗಿದೆ. ಪೇರಳೆ ಹಣ್ಣು ಸೇವನೆಯ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಪೇರಳೆ ಹಣ್ಣು ರೋಗ ನಿರೋಧಕ ಗುಣಗಳನ್ನು ಹೊಂದಿದೆ.
ಪೇರಳೆ ಹಣ್ಣು ಸೇವನೆ ಶೀತ ಮತ್ತು ನೆಗಡಿ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಪೇರಳೆ ಹಣ್ಣಿನ ಸೇವನೆಯು ಅನೇಕ ವಿಶಿಷ್ಟ ಪ್ರಯೋಜನ ನೀಡುತ್ತದೆ. ಪೇರಳೆ ಹಣ್ಣು ಮಾತ್ರವಲ್ಲದೇ ಅದರ ಎಲೆ ಸಹ ಪ್ರಯೋಜನ ನೀಡುತ್ತದೆ. ಪೇರಳೆ ಹಣ್ಣಿನ ಎಲೆಗಳಲ್ಲಿ ಯಾವೆಲ್ಲಾ ಪೋಷಕಾಂಶ ಇದೆ?
ಪೇರಳೆ ಹಣ್ಣು ಹಾಗೂ ಅದರ ಎಲೆ ಎರಡೂ ಆರೋಗ್ಯಕ್ಕೆ ಲಾಭಕಾರಿ. ಪೇರಳೆ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ವಿಟಮಿನ್ ಸಿ, ಫೈಬರ್, ಪೊಟ್ಯಾಸಿಯಂ ಸೇರಿದಂತೆ ಉತ್ತಮ ಪ್ರಮಾಣದ ಪೋಷಕಾಂಶ ದೇಹಕ್ಕೆ ಮತ್ತು ಆರೋಗ್ಯಕ್ಕೆ ನೀಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ
ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹಕ್ಕೆ ಫೈಬರ್ ಒದಗಿಸುತ್ತದೆ. ಹೃದಯದ ಆರೋಗ್ಯ ಕಾಪಾಡಲು ಪೇರಳೆ ಹಣ್ಣು ಮತ್ತು ಎಲೆ ಪ್ರಯೋಜನ ನೀಡುತ್ತದೆ.
ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ
ಅಜೀರ್ಣ, ಹೊಟ್ಟೆಯುಬ್ಬರ, ಅನಿಲದಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಹಸಿರು ಹಣ್ಣು ಪೇರಳೆಯನ್ನು ಸೇವನೆ ಮಾಡಿ. ಪೇರಳೆ ಹಣ್ಣಿನ ಸೇವನೆ ಮಾಡುವುದು ಆಹಾರದ ಫೈಬರ್ ಒದಗಿಸುತ್ತದೆ. ಇದು ಜೀರ್ಣಕ್ರಿಯೆ ಚೆನ್ನಾಗಿಡಲು ಮತ್ತು ಸುಧಾರಿಸಲು ಸಹಕಾರಿ ಆಗಿದೆ. ಹೊಟ್ಟೆ ಸ್ವಚ್ಛವಾಗಲು ಸಹಾಯ ಮಾಡುತ್ತದೆ.
ಕೆಮ್ಮು ಮತ್ತು ಶೀತ ಸಮಸ್ಯೆಗೆ ಪರಿಹಾರ ನೀಡುತ್ತದೆ
ಪೇರಳೆ ಹಣ್ಣು ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಹೊಂದಿದೆ. ಪೇರಳೆ ಹಣ್ಣಿನ ಸೇವನೆಯು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಇದು ಶೀತ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ. ಪೇರಳೆ ಹಣ್ಣಿನ ಎಲೆಗಳು ಇನ್ಸುಲಿನ್ ಪ್ರತಿರೋಧ ನಿವಾರಿಸುತ್ತವೆ. ಹಾಗೂ ರಕ್ತದ ಸಕ್ಕರೆ ನಿಯಂತ್ರಿಸುತ್ತವೆ.
ಹೃದಯದ ಯಂತ್ರ ಫಿಟ್ ಆಗಿರುತ್ತದೆ
ಹೃದಯದ ಕಾರ್ಯ ಚಟುವಟಿಕೆ ಚೆನ್ನಾಗಿರಲು ಸಹಕಾರಿ. ಇದು ರಕ್ತವನ್ನು ಪಂಪ್ ಮಾಡುತ್ತದೆ. ಇದು ಚೆನ್ನಾಗಿ ಕೆಲಸ ಮಾಡಲು ಪೊಟ್ಯಾಸಿಯಮ್ ಅಗತ್ಯ. ಪೇರಳೆ ಹಣ್ಣು ದೇಹಕ್ಕೆ ಉತ್ತಮ ಪ್ರಮಾಣದ ಪೊಟ್ಯಾಸಿಯಂ ನೀಡುತ್ತದೆ.
ಈ ವಿಟಮಿನ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಋತುಮಾನದ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ. ಪೇರಳೆ ಹಣ್ಣಿನ ಸೇವನೆ ಕೆಮ್ಮು, ನೆಗಡಿ ಸೇರಿದಂತೆ ಹಲವು ಕಾಯಿಲೆಗಳನ್ನು ದೂರ ಮಾಡುತ್ತದೆ.
ಇದನ್ನೂ ಓದಿ: ನಿಮಗೆ 30 ವರ್ಷ ದಾಟಿದೆಯಾ? ಕಡ್ಡಾಯವಾಗಿ ಈ ಕೆಲಸ ಮಾಡಿ
ಹೊಟ್ಟೆ ಕೊಬ್ಬು ಕರಗಿಸಲು ಸಹಕಾರಿ
ತೂಕ ಇಳಿಕೆಗೆ ಪೇರಳೆ ಸೇವಿಸಿ. ಪೇರಳೆ ಹಣ್ಣಿನಲ್ಲಿ ನಾರಿನಂಶ ಹೆಚ್ಚು. ಇದು ತೂಕ ಇಳಿಕೆಗೆ ಸಹಕಾರಿ. ಈ ಆಹಾರದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಇದು ಕೊಬ್ಬು ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ