• Home
  • »
  • News
  • »
  • lifestyle
  • »
  • Bella Hadid Dress: ಮೈಮೇಲೆ ಬಟ್ಟೆನೇ ಇಲ್ಲ, ಕಲರ್ ಸ್ಪ್ರೇ ಇಂದಾನೆ ಡ್ರೆಸ್ ರೆಡಿ ಆಯ್ತಲ್ಲ! ಖ್ಯಾತ ಮಾಡೆಲ್‌​ ಬೋಲ್ಡ್ ಕ್ಯಾಟ್‌ ವಾಕ್ ನೀವೂ ನೋಡಿ

Bella Hadid Dress: ಮೈಮೇಲೆ ಬಟ್ಟೆನೇ ಇಲ್ಲ, ಕಲರ್ ಸ್ಪ್ರೇ ಇಂದಾನೆ ಡ್ರೆಸ್ ರೆಡಿ ಆಯ್ತಲ್ಲ! ಖ್ಯಾತ ಮಾಡೆಲ್‌​ ಬೋಲ್ಡ್ ಕ್ಯಾಟ್‌ ವಾಕ್ ನೀವೂ ನೋಡಿ

ಬೆಲ್ಲಾ ಹಡಿಡ್​

ಬೆಲ್ಲಾ ಹಡಿಡ್​

Bella Hadid Gets A DIY Dress: ಒಂದೊಂದು ಹಂತವಾಗಿ ಸ್ಪ್ರೇ ಮಾಡುವ ಕಲಾವಿದರು, ಮೊದಲು ದೇಹದ ಮುಂದೆ ಹಾಗೂ ಹಿಂದೆ ಮಾಡುತ್ತಾರೆ. ನಂತರ ತೊಡೆ ಭಾಗ, ಭುಜ, ತೋಳು ಹೀಗೆ ಪೂರ್ಣವಾದ ನಂತರ ಆ ಡ್ರೆಸ್​ ಎಲ್ಲರ ಕಣ್ಣು ಅರಳಿಸಿತ್ತು.

  • Share this:

ಶುಕ್ರವಾರ (Friday) ನಡೆದ ಪ್ಯಾರಿಸ್ ಫ್ಯಾಶನ್ ವೀಕ್ ಕ್ಯಾಟ್‌ವಾಕ್‌ನಲ್ಲಿ (Paris Fashion Week) ತನಗಾಗಿ ಪ್ರಾಯೋಗಿಕವಾಗಿ ತಯಾರಿಸಲಾದ ಸ್ಪ್ರೇ-ಆನ್ ಉಡುಪನ್ನು ಧರಿಸಿ ಸೂಪರ್ ಮಾಡೆಲ್ ಬೆಲ್ಲಾ ಹಡಿಡ್ (Bella Hadid) ಕೋಪರ್ನಿ ವುಮೆನ್ಸ್‌ವೇರ್ ಸ್ಪ್ರಿಂಗ್/ಸಮ್ಮರ್ 2023 ರನ್‌ವೇಯಲ್ಲಿ ಮಿಂಚಿದ್ದು, ಅವರ ಬಟ್ಟೆಯ ವಿಡಿಯೋ ಫುಲ್​ ವೈರಲ್ ಆಗುತ್ತಿದೆ.  ಈ ಕಾರ್ಯಕ್ರಮದ ನಂತರ ಸಾಮಾಜಿಕ ಜಾಲಾತಾಣದಲ್ಲಿ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಕಾಣಿಸಿಕೊಂಡಿದ್ದು, ಎಲ್ಲೆಡೆ ಅದೇ ಸುದ್ದಿ ಹರಿದಾಡುತ್ತಿದೆ.


ಡಯಟ್ ಪ್ರಾಡಾ ಹೆಸರಿನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ಶನಿವಾರ ವೀಡಿಯೊವನ್ನು ಪೋಸ್ಟ್ ಮಾಡಿದ್ದು,  "ಬೆಲ್ಲಾ ಹಡಿದ್ x ಕೊಪರ್ನಿ ಸ್ಪ್ರಿಂಗ್ 2023 ರಲ್ಲಿ ಮೆಕ್ಕ್ವೀನ್ ಫ್ಯಾಶನ್ ನಾಸ್ಟಾಲ್ಜಿಯಾ. ಸುಂದರ ಕ್ಷಣ ಎಂದು ಪೇಜ್​ನಲ್ಲಿ ಕ್ಯಾಪ್ಷನ್​ ನೀಡಲಾಗಿದೆ.  ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಬೆಲ್ಲಾ ಹಡಿಡ್ ಕ್ಯಾಟ್​ ವಾಕ್​ ಮಾಡಲು ರನ್ವೇಗೆ ಪ್ರವೇಶಿಸುವುದನ್ನು ನಾವು ನೋಡಬಹುದಾಗಿದ್ದು, ಆರಂಭದಲ್ಲಿ ಟಾಪ್ಲೆಸ್ ಆಗಿ, ತನ್ನ ಕೈಗಳಿಂದ ತನ್ನ ಸ್ತನಗಳನ್ನು ಮುಚ್ಚಿಕೊಂಡು ಬರುವ ಮಾಡೆಲ್​,  ಒಂದು ಜೊತೆ ನಗ್ನ ಥಾಂಗ್ಸ್ ಮತ್ತು ಸ್ಲಿಪ್-ಆನ್ ಹೈ ಹೀಲ್ಸ್ ಅನ್ನು ಧರಿಸಿ, ಕೂದಲನ್ನು ಸುಂದರವಾಗಿ ಕಟ್ಟಿ ರ್ಯಾಂಪ್​ ಮೇಲೆ ಬಂದಿದ್ದರು.


ಇದನ್ನೂ ಓದಿ: ಕೆರಾಟಿನ್ ಟ್ರೀಟ್​ಮೆಂಟ್​ ಕೂದಲ ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

View this post on Instagram


A post shared by Vogue (@voguemagazine)

ಸುಪ್ರಸಿದ್ಧ ಮಾಡೆಲ್ ತನ್ನ ದೇಹದ ಮೇಲೆ ಇಬ್ಬರು ಕಲಾವಿದರಿಂದ ಸ್ಪ್ರೇ ಪೇಂಟ್ ಮಾಡಿಸಿಕೊಳ್ಳುವುದನ್ನ ನಾವು ವೀಡಿಯೊದಲ್ಲಿ ನೋಡಬಹುದು. ತನ್ನ ದೇಹದ ಮೇಲೆ ಫ್ಯೂಚರಿಸ್ಟಿಕ್ ಕೋಪರ್ನಿ ಸ್ಲಿಪ್ ಡ್ರೆಸ್ ಸ್ಪ್ರೇ-ಪೇಯಿಂಟ್ ಮಾಡಿಸಿಕೊಂಡ ಮಾಡೆಲ್​, ಅದೇ ಬಟ್ಟೆಯಲ್ಲಿಯೇ ರ್ಯಾಮಪ್ ಮೇಲೆ ವಾಕ್ ಮಾಡಿದ್ದಾರೆ.  ಅಪಾರದರ್ಶಕ ಬಿಳಿ ಲ್ಯಾಟೆಕ್ಸ್ನ ದಪ್ಪ ಪದರವನ್ನು ಅವರ ದೇಹದಾದ್ಯಂತ ಸಿಂಪಡಿಸಿದಾಗ ಅದ್ಭುತವಾದ ಡ್ರೆಸ್​ ಆಗಿದ್ದನ್ನು ನೋಡಿ ನೋಡುಗರು ಒಂದು ಕ್ಷಣ ದಂಗಾಗಿ ಹೋಗಿದ್ದು, ಸುಳ್ಳಲ್ಲ.ಒಂದೊಂದು ಹಂತವಾಗಿ ಸ್ಪ್ರೇ ಮಾಡುವ ಕಲಾವಿದರು, ಮೊದಲು ದೇಹದ ಮುಂದೆ ಹಾಗೂ ಹಿಂದೆ ಮಾಡುತ್ತಾರೆ. ನಂತರ ತೊಡೆ ಭಾಗ, ಭುಜ, ತೋಳು ಹೀಗೆ ಪೂರ್ಣವಾದ ನಂತರ ಆ ಡ್ರೆಸ್​ ಎಲ್ಲರ ಕಣ್ಣು ಅರಳಿಸಿತ್ತು.


ಇದನ್ನೂ ಓದಿ: ತ್ವಚೆಯ ಅಂದ ಹೆಚ್ಚಾಗಬೇಕು ಅಂತ ಈ ತಪ್ಪುಗಳನ್ನು ಮಾಡ್ಬೇಡಿ


ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ, ವೀಡಿಯೊ 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ, 2.4 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, ಇನ್ನೂ ಬರುತ್ತಲೇ ಇದೆ. ಅಭಿಮಾನಿಗಳು ನೆಚ್ಚಿನ ಮಾಡೆಲ್​ ಅನ್ನು ಶೋನಲ್ಲಿ ನೋಡಿ ಫಿದಾ ಆಗಿದ್ದು, ಇನ್ನೂ ಕೆಲವರು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಹಲವಾರು ರೀತಿಯ ಟೀಕೆಗಳನ್ನು ಸಹ ಮಾಡಿದ್ದಾರೆ.ಒಬ್ಬ ಬಳಕೆದಾರರು, "ಇದು ಕೇವಲ ದೇಹದ ಬಣ್ಣ ಎಂದು ನಾನು ಭಾವಿಸಿದೆ ಮತ್ತು ನಂತರ ಇದ್ದಕ್ಕಿದ್ದಂತೆ ಡ್ರೆಸ್​ ಆಯಿತು, ಸೂಪರ್ ಎಂದು ಕಾಮೆಂಟ್​ ಮಾಡಿದ್ದಾರೆ. ಸೆಬಾಸ್ಟಿಯನ್ ಮೆಯೆರ್ ಮತ್ತು ಅರ್ನಾಡ್ ವೈಲಂಟ್ ಪ್ಯಾರಿಸ್ ಲೇಬಲ್ ಕೋಪರ್ನಿಯ ಹಿಂದಿನ ಕಲಾವಿದರು. ಈ ಡ್ರೆಸ್​ ಅನ್ನು ಫ್ಯಾಬ್ರಿಕನ್ ಬಳಸಿ ತಯಾರಿಸಲಾಗಿದೆ.

Published by:Sandhya M
First published: