ಪ್ರವಾಸಿಗರಿಗೆ ಸಿಹಿ ಸುದ್ದಿ: ಮುಕ್ತ ವೀಸಾ ಸೌಲಭ್ಯ ಒದಗಿಸಿದ ಬೆಲರಸ್

news18
Updated:August 2, 2018, 3:18 PM IST
ಪ್ರವಾಸಿಗರಿಗೆ ಸಿಹಿ ಸುದ್ದಿ: ಮುಕ್ತ ವೀಸಾ ಸೌಲಭ್ಯ ಒದಗಿಸಿದ ಬೆಲರಸ್
news18
Updated: August 2, 2018, 3:18 PM IST
-ನ್ಯೂಸ್ 18 ಕನ್ನಡ

ವಿಶ್ವ ಸುತ್ತುವ ಆಸೆ ನಿಮಗಿದ್ದರೆ ಬೆಲರಸ್ ದೇಶದ ಹೆಬ್ಬಾಗಿಲು ನಿಮಗಾಗಿ ತೆರೆದಿದೆ. ಬೆಲರಸ್ ಎಂಬ ದೇಶವಿರುವುದೇ ಅನೇಕರಿಗೆ ಗೊತ್ತಿಲ್ಲ. ಸೋವಿಯತ್ ಯೂನಿಯನ್ ರಾಜ್ಯಗಳಲ್ಲಿ ಒಂದಾಗಿದ್ದ ಬೆಲರಸ್ ಇಂದು ಸ್ವಾತಂತ್ರ್ಯ ದೇಶ. ಪೋಲೆಂಡ್ ದೇಶದ ನೆರೆ ರಾಷ್ಟ್ರವಾಗಿರುವ ಬೆಲರಸ್​ನಲ್ಲಿ ವೀಸಾ ಇಲ್ಲದೆ 30 ದಿನಗಳವರೆಗೆ ಪ್ರವಾಸಿಗರು ನೆಲೆಸಬಹುದು ಎಂದು ಅಲ್ಲಿನ ಸರ್ಕಾರ ಘೋಷಿಸಿಕೊಂಡಿದೆ. ಐದು ದಿನಗಳಿಂದ ಮೂವತ್ತು ದಿನಗಳವರೆಗೆ ವೀಸಾ ಮುಕ್ತ ಬೇಟಿಗೆ ಅವಕಾಶ ನೀಡಲಾಗಿದೆ.

ದೇಶದ ಚುಕ್ಕಾಣಿ ಹಿಡಿದಿರುವ ಅಲೆಕ್ಸಾಂಡರ್ ಲುಕಾಶೆಂಕೊ ಅವರು 80 ದೇಶಗಳ ಪ್ರವಾಸಿಗಳಿಗೆ ಉಚಿತ ಭೇಟಿಗೆ ಅನುಮತಿ ನೀಡಿದ್ದಾರೆ. ಇದರಲ್ಲಿ ಯುರೋಪ್​ನ 39 ದೇಶಗಳು ಸೇರಿದ್ದು, ಅಮೆರಿಕ , ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ಮತ್ತಷ್ಟು ದೇಶಗಳ ಪ್ರಜೆಗಳು 30 ದಿನಗಳ ಕಾಲ ಬೆಲರಸ್​ನಲ್ಲಿ ಉಳಿದುಕೊಳ್ಳಬಹುದು ಎಂದು ಆಡಳಿತ ಸರ್ಕಾರ ತಿಳಿಸಿದೆ.

ದೇಶದ ಪ್ರವಾಸೋದ್ಯವನ್ನು ಉತ್ತೇಜಿಸುವ ಸಲುವಾಗಿ ಅಲ್ಲಿನ ಸರ್ಕಾರ ಫ್ರೀ ವೀಸಾ ಸೌಲಭ್ಯ ಒದಗಿಸಿದ್ದು, ಇದಲ್ಲದೆ ರಾಷ್ಟ್ರಮಟ್ಟದ ಕ್ರೀಡಾಕೂಟ ಮತ್ತು ಉತ್ಸವಗಳಿಗೆ ಆತಿಥ್ಯವಹಿಸಲು ಬೆಲರಸ್ ಸರ್ಕಾರ ಮುಂದಾಗಿದೆ. ಈ ಮೂಲಕ ದೇಶದ ಆರ್ಥಿಕತೆಯನ್ನು ಸಧಾರಿಸಿಕೊಳ್ಳುವ ಯೋಜನೆಗಳನ್ನು ಹಾಕಿಕೊಂಡಿದೆ. ಇಲ್ಲಿ ಮುಖ್ಯವಾಗಿ ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರ ಆರೋಗ್ಯ ಕೇಂದ್ರಗಳಲ್ಲಿ ಸ್ಪಾ ಸೇರಿದಂತೆ ಹಲವು ಕಾರ್ಯವಿಧಾನಗಳನ್ನು ಮಾಡುವ ಮೂಲಕ ಜನರ ಆಕರ್ಷಣೆಯನ್ನು ಸೆಳೆಯಲು ಈ ದೇಶ ಉತ್ಸುಕವಾಗಿದೆ.

ವೀಸಾ ಮುಕ್ತ ನಿಯಮವು ರಷ್ಯಾದ ಮೂಲಕ ಬೆಲರಸ್​ಗೆ ಆಗಮಿಸುವ ಪ್ರವಾಸಿಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ನೆರೆರಾಷ್ಟ್ರ ರಷ್ಯಾದ ಗಡಿ ನಿಯಂತ್ರಣದಲ್ಲಿ ಹಲವು ಸಮಸ್ಯೆಗಳಿದ್ದು ಇದರಿಂದಾಗಿ ಈ ಮಾರ್ಗಗಳ ಮೂಲಕ ಬರುವ ಪ್ರವಾಸಿಗರಿಗೆ ವೀಸಾ ಫ್ರಿ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಬೆಲರಸ್​ನ ಮಿನ್ಸ್ಕ್​ ವಿಮಾನ ನಿಲ್ದಾಣದ ಮಾಸ್ಕೊ ನಗರದ ಹತ್ತಿರದಲ್ಲಿದ್ದು ವಾಯುಮಾರ್ಗದ ಮೂಲಕ ಭೇಟಿ ನೀಡಬಹುದು. ಹಾಗೆಯೇ ಚೀನಾ ದೇಶದವರಿಗೆ ಪ್ರತ್ಯೇಕಾ ವೀಸಾ ಒಪ್ಪಂದದ ಅವಕಾಶ ನೀಡಿದ್ದು, ಇದು ಆಗಸ್ಟ್​ನಿಂದ ಜಾರಿಗೆ ಬರಲಿದೆ.

2015ರಲ್ಲಿ ರಾಜಕೀಯ ನಾಯಕರ ಮೇಲೆ ಹೇರಿದ ನಿರ್ಬಂಧಗಳ ತೆರವಿನ ಬಳಿಕ ಯುರೋಪಿಯನ್ ಒಕ್ಕೂಟದಲ್ಲಿ ಬೆಲರಸ್​ ದೇಶದ ಸಂಬಂಧ ಸುಧಾರಣೆಗೊಂಡಿದ್ದು, ಇದೀಗ ಯುರೋಪಿಯನ್​ನ 39 ದೇಶಗಳಿಗೆ ಮುಕ್ತ ಪ್ರವೇಶ ನೀಡುವ ಮೂಲಕ ಅಭಿವೃದ್ದಿ ಪತ್ತದತ್ತ ಸಾಗುವ ನಿರೀಕ್ಷೆ ಹೊಂದಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ