Lonely Life: ತುಂಬಾ ದಿನಗಳ ಕಾಲ ಒಂಟಿಯಾಗಿರುವುದು ತುಂಬಾ ಕೆಟ್ಟದ್ದು! ಏಕೆ ಗೊತ್ತಾ?

ಒಮ್ಮೆ ನೀವು ಒಂಟಿಯಾಗಿ ತೃಪ್ತಿ ಹೊಂದಿದ್ದರೆ ನಂತರ ನೀವು ಜನರೊಂದಿಗೆ ಸೇರಲು, ಮಾತನಾಡಲು ಕೂಡ ಇಷ್ಟ ಪಡುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂಟಿಯಾಗಿರುವುದು ( Lonely ) ಕೆಲವರಿಗೆ ತುಂಬಾ ಇಷ್ಟ. ಏಕಾಂಗಿ ಜೀವನವನ್ನು ಕಳೆಯಲು ಬಯಸುತ್ತಾರೆ. ಯಾರ ಒಡನಾಟ, ಸಂಬಂಧಿಕರು (Relations), ಸ್ನೇಹಿತರ (Friends) ಗೋಜಿಗೆ ಹೋಗದೇ ಒಬ್ಬಂಟಿಯಾಗಿ ಉಳಿದು ಬಿಡುತ್ತಾರೆ. ಒಂಟಿಯಾಗಿರುವುದನ್ನು ತುಂಬಾ ಪ್ರೀತಿಸುತ್ತಾರೆ. ಯಾರ, ಯಾವುದೇ ನಿರ್ಬಂಧಗಳಿಲ್ಲದೇ (Restrictions) ತಮಗೆ ಇಷ್ಟ ಬಂದ ಹಾಗೆ ಜೀವನ ಸಾಗಿಸುತ್ತಾರೆ. ಈ ರೀತಿ ಇರೋ ವ್ಯಕ್ತಿಗಳು ಕೆಲವೊಮ್ಮೆ ಒಳ್ಳೆಯ ಆಲೋಚನೆಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಯಾರ ಸಂಪರ್ಕವೂ ಇರದ ಕಾರಣ ಕೆಟ್ಟದ್ದಾಗಿ ಯೋಚಿಸುತ್ತಾರೆ. ತುಂಬಾ ದಿನಗಳ ಕಾಲ ಒಂಟಿಯಾಗಿರುವುದು ತುಂಬಾ ಕೆಟ್ಟದ್ದಾಗಿದೆಯಂತೆ. ಇದೊಂದು ವ್ಯಸನ (Addiction). ಏಕೆಂದರೆ ಒಮ್ಮೆ ನೀವು ಒಂಟಿಯಾಗಿ ತೃಪ್ತಿ ಹೊಂದಿದ್ದರೆ ನಂತರ ನೀವು ಜನರೊಂದಿಗೆ ಸೇರಲು, ಮಾತನಾಡಲು ಕೂಡ ಇಷ್ಟ ಪಡುವುದಿಲ್ಲ. ಆದ ಕಾರಣ ಹೆಚ್ಚು ಕಾಲ ಒಂಟಿಯಾಗಿ ಜೀವಿಸಿವುದನ್ನು ಕಡಿಮೆ ಮಾಡಿ. ಇಲ್ಲವಾದ್ರೆ ನೀವು ಒಂಟಿಯಾಗಿರುವುದೇ ನಿಜ ಅಂದ್ರೆ ಕೆಲವೊಂದು ಅಭ್ಯಾಸಗಳನ್ನು ಮಾಡಿಕೊಳ್ಳಿ. ಅವು ಏನಂತ ಮುಂದೆ ಓದಿ.

ಒಂಟಿಯಾಗಿರುವವರು ಬೇರೆ ಜನರನ್ನು ಸೇರಲು ಇಷ್ಟ ಪಡಲ್ಲ!
ಒಂಟಿಯಾಗಿ ಕಾಲ ಕಳೆಯಲು ಬಯಸುವ ಜನರು, ಇತರೆ ಜನರೊಂದಿಗೆ ಬೆರೆಯಲು ಇಷ್ಟ ಪಡುವುದಿಲ್ಲ. ಇತರರ ಮಾತುಗಳು ಅವರಿಗೆ ಕಿರಿ ಕಿರಿಯನ್ನುಂಟು ಮಾಡಬಹುದು. ಯಾಕಂದ್ರೆ ಅವರು ಒಂಟಿಯಾಗಿ ತೃಪ್ತಿ ಹೊಂದಿರುತ್ತಾರೆ. ತಮ್ಮ ಜೀವನ ಶೈಲಿಯನ್ನು ಬೇರೆಯದ್ದೇ ರೀತಿಯಲ್ಲಿ ಅಳವಡಿಸಿಕೊಂಡಿರುತ್ತಾರೆ. ಅವರ ಏಕಾಂಗಿ ಲೋಕದಲ್ಲಿ ಅವರೇ ರಾಜರು, ಅವರೇ ಸೇವಕರಾಗಿರುತ್ತಾರೆ. ಅಲ್ಲಿ ಅವರಿಗೆ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ಆದ ಕಾರಣ ಒಂಟಿಯಾಗಿ ಜೀವಿಸುವವರು ಬೇರೆ ಜನರನ್ನು ಸೇರಲು ಇಷ್ಟ ಪಡಲ್ಲ.

ನೀವು ಒಂಟಿಯಾಗಿರುವುದೇ ನಿಜ ಅಂದ್ರೆ ಈ ಅಭ್ಯಾಸಗಳನ್ನು ರೂಡಿಸಿಕೊಳ್ಳಿ

ಒಂಟಿಯಾಗಿರುವುದನ್ನು ಒಪ್ಪಿಕೊಳ್ಳಿ!
ನೀವು ಒಂಟಿಯಾಗಿ ಬದುಕಬೇಕು ಎಂದು ನಿರ್ಧಾರ ಮಾಡಿದ ಮೇಲೆ, ನೀವು ಮೊದಲು ಒಂಟಿಯಾಗಿರುವುದನ್ನು ಒಪ್ಪಿಕೊಳ್ಳಬೇಕು. ನೀವು ಒಬ್ಬಂಟಿಯಾಗಿರುವಿರಿ ಎಂಬ ಅಂಶದ ಬಗ್ಗೆ ನಿಮಗೆ ಸ್ಪಷ್ಟವಾದ ತಿಳುವಳಿಕೆ ಬೇಕು. ಂಟಿಯಾಗಿರುವುದನ್ನು ಎದುರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಸುತ್ತಲಿರುವ ಪರಿಸ್ಥಿತಿಯ ಬಗ್ಗೆ ನೀವು ಗಂಭೀರವಾಗಿ ಯೋಚಿಸಬೇಕು ಮತ್ತು ವಾಸ್ತವಿಕವಾಗಿ ವ್ಯವಹಾರಗಳ ಸ್ಥಿತಿಯನ್ನು ನಿರ್ಣಯಿಸಬೇಕು. ಒಂಟಿತನ ಅರಿತುಕೊಂಡ ನಂತರ ನಿಮ್ಮ ಭಾವನೆಗಳನ್ನು ಕಾರ್ಯಗತದಲ್ಲಿ ವ್ಯಕ್ತಪಡಿಸಿದ್ರೆ ಒಳ್ಳೆಯದು. ನೀವು ನಿಮ್ಮ ದಿನ ನಿತ್ಯದ ಆಲೋಚನೆಗಳನ್ನು ಡೈರಿಯಲ್ಲಿ ಬರೆಯಲು ಪ್ರಾರಂಭಿಸಿದ್ರೆ ಒಳ್ಳೆಯದು. ಸಾಧ್ಯವಾದ್ರೆ ಒಳೆಯ ಸಂಗೀತವನ್ನು ಕೇಳಿ. ಚಿತ್ರಕಲೆ ಅಭ್ಯಸದಲ್ಲಿ ತೊಡಗಿಕೊಳ್ಳಿ. ನಿಮ್ಮೊಂದಿಗೆ ಬೆರೆಯಲು ಕಲಿಯಿರಿ, ಸಮಾಜದ ಮೇಲೆ ಅವಲಂಬಿತರಾಗುವುದನ್ನು ನಿಲ್ಲಿಸಿ, ಮುಕ್ತವಾಗಿರಿ.

ಪುಸ್ತಕಗಳನ್ನು ಓದುವ ಅಭ್ಯಸ ಇದ್ರೆ ಉತ್ತಮ
ಒಂಟಿಯಾಗಿರುವಾಗ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಂಡ್ರೆ ತುಂಬಾ ಒಳ್ಳೆಯದು. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ನೀವು ಹೆಚ್ಚು ತಾಳ್ಮೆ ಪಡೆಯುತ್ತೀರಿ. ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು. ಅಲ್ಲದೇ ಒಂದು ಉತ್ತಮ ಪುಸ್ತಕ ನಿಮ್ಮ ಪಾಂಡಿತ್ಯ ಹೆಚ್ಚಿಸುತ್ತದೆ. ಮತ್ತೆ ಬೇರೆಯವರ ಸಾಂಗತ್ಯ ಬೇಕು ಎಂದೆನಿಸಲ್ಲ.

ನೆಚ್ಚಿನ ಸಾಕುಪ್ರಾಣಿಗಳನ್ನು ಸಾಕಿ
ಏಕಾಂಗಿಯಾಗಿ ಬದುಕುವುದನ್ನು ನಿರ್ಧಾರ ಮಾಡಿದ ಮೇಲೆ ಅಂತೆಯೇ ಬದುಕುವುದು ತುಂಬಾ ಕಷ್ಟ. ಆದ ಕಾರಣ ನೀವು ಯಾವುದಾದರೂ ಸಾಕು ಪ್ರಾಣಿಯನ್ನು ಸಾಕಿದ್ರೆ ಒಳ್ಳೆಯದು. ಮನೆಯಲ್ಲಿ ಸಾಕುಪ್ರಾಣಿಗಳು ಇದ್ರೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೇ ಸಾಕುಪ್ರಾಣಿಗಳು ಅತ್ಯುತ್ತಮ ಸ್ನೇಹಿತರಂತೆ. ಅದರಲ್ಲೂ ನಾಯಿಗಳನ್ನು ಸಾಕಿದ್ರೆ ನಿಮಗೆ ಒಳ್ಳೆಯದು. ನಾಯಿ ನಿಯತ್ತಿನ ಪ್ರಾಣಿಯಾಗಿರುವದರಿಂದ ನಿಮ್ಮ ಜೊತೆ ಹೆಚ್ಚಿನ ಪ್ರೀತಿಯಿಂದ ಇರುತ್ತೆ. ಆದ್ರೆ ನೀವು ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮುದ್ದಾಗಿ ನೋಡಿಕೊಳ್ಳಬೇಕು.

ಇದನ್ನೂ ಓದಿ: Explained: ಜೇನುತುಪ್ಪದಲ್ಲೂ ಇದೆ ಅಪಾಯಕಾರಿ ಅಂಶಗಳು! ಏನೆಲ್ಲಾ ಡೇಂಜರ್ ಇದೆ ತಿಳಿಯಿರಿ

ಕ್ರೀಡೆಗಳಲ್ಲಿ ತೊಡಗಿಕೊಳ್ಳಿ

ದೈಹಿಕ ಚಟುವಟಿಕೆಗಳು ಮನುಷ್ಯರ ಮನಸ್ಥಿತಿಯನ್ನು ಸುಧಾರಿಸುತ್ತದೆ. ನಿಮಗೆ ಇಷ್ಟವಾದ ಕ್ರೀಡೆಗಳಲ್ಲಿ ಹೆಚ್ಚಿನ ಸಮಯ ಕಳೆಯಿರಿ. ಕ್ರೀಡಾ ವಿಭಾಗಗಳಿಗೆ ಹಾಜರಾಗಲು ಸಾಧ್ಯವಾಗದಿದ್ದರೆ,ನೀವು ಪಾರ್ಕ್‍ನಲ್ಲಿ ಬೆಳಗ್ಗೆ, ಸಂಜೆ ವ್ಯಾಯಮ ಮಾಡಬಹುದು.

ಇದನ್ನೂ ಓದಿ:  Andropause: ಪುರುಷರನ್ನೂ ಕಾಡುತ್ತದೆಯಂತೆ ಋತುಬಂಧ! ಆಂಡ್ರೋಪಾಸ್‌ಗೆ ಕಾರಣ, ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ವಿವರ

ಸಾಮಾಜಿಕ ಜಾಲತಾಣದಲ್ಲೇ ಮುಳುಗಬಾರದು.
ನೀವು ಒಂಟಿಯಾಗಿರುತ್ತೀರಿ ಎಂದು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲೇ ಮುಳುಗಬೇಡಿ. ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ಅದಕ್ಕೆ ನೀವು ಅಡಿಕ್ಟ್ ಆದ್ರೆ ಬಿಡೋದು ಕಷ್ಟ.

ಆದಷ್ಟು ಕುಟುಂಬ ಜೊತೆ ಕಾಲ ಕಳೆದ್ರೆ ಒಳ್ಳೆಯದು. ಒಂಟಿಯಾಗಿರಲೇ ಬೇಕು ಎಂದು ನಿರ್ಧರಿಸಿದ್ರೆ ಗಟ್ಟಿ ಮನಸ್ಸು ಮಾಡಿಕೊಳ್ಳಿ. ಯಾವುದೇ ನಕಾರಾತ್ಮಕ ಯೋಚನೆಗಳ ಬಗ್ಗೆ ಗಮನ ಕೊಡಬೇಡಿ. ಹ್ಯಾಪಿಯಾಗಿ ಲೈಫ್ ಲೀಡ್ ಮಾಡಿ.
Published by:Savitha Savitha
First published: