• Home
  • »
  • News
  • »
  • lifestyle
  • »
  • Health Tips: ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಪಪ್ಪಾಯ ನೀರು ಕುಡಿದರೆ ಸಾಕು, ಹೊಟ್ಟೆ ಶುದ್ಧವಾಗುತ್ತೆ

Health Tips: ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಪಪ್ಪಾಯ ನೀರು ಕುಡಿದರೆ ಸಾಕು, ಹೊಟ್ಟೆ ಶುದ್ಧವಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Papaya Water Benefits: ಈ ಪಾನೀಯವನ್ನು ಪ್ರತಿದಿನ ಸೇವಿಸಬಹುದು, ಆದರೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಶೇಖರಿಸಿಟ್ಟಾಗ ಕಡಿಮೆ ಆಗುವುದರಿಂದ ಇದನ್ನು ತಾಜಾವಾಗಿ ಮಾಡಿಕೊಂಡು ಕುಡಿಯಬೇಕು.

  • Share this:

ಉತ್ತಮ ಆರೋಗ್ಯಕ್ಕಾಗಿ (Health) ಪಪ್ಪಾಯಿಯಂತಹ (Papaya) ತಾಜಾ ಹಣ್ಣುಗಳನ್ನು ಸೇವಿಸಬೇಕು ಅಂತ ವೈದ್ಯರು ನಮಗೆ ಯಾವಾಗಲೂ ಹೇಳುತ್ತಲೇ ಇರುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಈ ಪಪ್ಪಾಯಿ ಹಣ್ಣನ್ನು (Fruit) ಯಾವ ಸಮಯದಲ್ಲಿ ತಿಂದರೆ ಒಳ್ಳೆಯದು ಎನ್ನುವುದರ ಬಗ್ಗೆ ಗೊಂದಲಗಳಿರುತ್ತವೆ. ಇಲ್ಲೊಬ್ಬ ಕಂಟೆಂಟ್ ಕ್ರಿಯೇಟರ್ ಆಗಿರುವ ಅರ್ಮೆನ್ ಆಡಮ್ಜಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಒಟ್ಟಾರೆ ಯೋಗಕ್ಷೇಮಕ್ಕಾಗಿ ಪಪ್ಪಾಯಿ ನೀರನ್ನು ಕುಡಿಯಬೇಕು ಅಂತ ಹೇಳಿದ್ದಾರೆ. ಏನಿದು ಪಪ್ಪಾಯಿ ನೀರು ಅಂತೀರಾ? ಇದನ್ನು ತಯಾರಿಸುವುದು ಹೇಗೆ? ಎಂದು ಅನೇಕ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.


ಪಪ್ಪಾಯಿ ನೀರನ್ನು ತಯಾರಿಸುವುದು ಹೇಗೆ?


  • ಮೊದಲು ಪಪ್ಪಾಯಿ ಹಣ್ಣನ್ನು ಅರ್ಧಕ್ಕೆ ಕತ್ತರಿಸಿಕೊಳ್ಳಿ, ನಂತರ ಅದರ ಸಿಪ್ಪೆ ಸುಲಿದು ತೆಗೆಯಿರಿ.

  • ಅದರಿಂದ ಬೀಜಗಳನ್ನು ತೆಗೆದು, ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿರಿ.

  • ನಂತರ ಸುಮಾರು ಐದು ನಿಮಿಷಗಳ ಕಾಲ ನೀರಿನಲ್ಲಿ ಈ ಪಪ್ಪಾಯಿ ತುಂಡುಗಳನ್ನು ಹಾಕಿ ಕುದಿಸಿ.

  • ಅದನ್ನು ಶಾಖದಿಂದ ತೆಗೆದು ಸ್ವಲ್ಪ ಕಾಲ ತಣ್ಣಗಾಗಲು ಬಿಡಿ.

  • ಪಪ್ಪಾಯಿ ನೀರನ್ನು ಫ್ರಿಡ್ಜ್ ನಲ್ಲಿಟ್ಟು ಸಾಮಾನ್ಯ ನೀರಿನಂತೆ ಕುಡಿಯಿರಿ.


ಪಪ್ಪಾಯಿ ನೀರು ಜೀವಸತ್ವಗಳಿಂದ ತುಂಬಿದೆ, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಜೀರ್ಣಕ್ರಿಯೆಗೆ ಒಳ್ಳೆಯದು, ಮುಟ್ಟಿನ ನೋವನ್ನು ನಿವಾರಿಸುತ್ತದೆ, ಮೂತ್ರಪಿಂಡಗಳನ್ನು ರಕ್ಷಿಸುತ್ತದೆ ಮತ್ತು ಮೈಗ್ರೇನ್ ಮತ್ತು ಸಂಧಿವಾತಕ್ಕೂ ಸಹ ಸಹಾಯ ಮಾಡುತ್ತದೆ.


ಪಪ್ಪಾಯಿ ಹಣ್ಣನ್ನು ಬಿಟ್ಟು ಅದರ ನೀರನ್ನು ಏಕೆ ಕುಡಿಯಬೇಕು?


ಹೀಗೆ ಪಪ್ಪಾಯಿ ನೀರನಲ್ಲಿ ಲೈಕೋಪೀನ್ ಅಂಶವು ತುಂಬಾನೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅವುಗಳ ನಾರಿನಂಶದ ಪ್ರಯೋಜನಗಳನ್ನು ಪಡೆಯಲು ಕಚ್ಚಾ ಹಣ್ಣುಗಳನ್ನು ಸೇವಿಸುವುದು ಉತ್ತಮವಾಗಿದ್ದರೂ, ಕೆಲವು ಸಂದರ್ಭಗಳಲ್ಲಿ, ಅಡುಗೆಯು ಕೆಲವು ರಕ್ಷಣಾತ್ಮಕ ಸಂಯುಕ್ತಗಳ ಮಟ್ಟವನ್ನು ಹೆಚ್ಚಿಸುತ್ತದೆ. ಪಪ್ಪಾಯಿಯಲ್ಲಿರುವ ಲೈಕೋಪೀನ್ ಥರ್ಮೋ-ಸ್ಟೇಬಲ್ ಆಗಿದೆ ಎಂದು ಆಹಾರ ತಜ್ಞೆ ಗರಿಮಾ ಗೋಯಲ್ ವಿವರಿಸಿದರು.


ಪಪ್ಪಾಯಿ ನೀರನ್ನು ಕುಡಿಯಲು ಉತ್ತಮವಾದ ಸಮಯ ಯಾವುದು?


ದೇಹದ ಅಧಿಕವಾದ ತೂಕ ಇಳಿಸಲು ಈ ಹಣ್ಣಿನ ಪ್ರಯೋಜನವನ್ನು ನೀವು ಪಡೆಯಬೇಕಾದರೆ, ಬೆಳಿಗ್ಗೆ ಬೇಗನೆ ಪಪ್ಪಾಯಿ ನೀರನ್ನು ಸೇವಿಸಿ, ಏಕೆಂದರೆ ಇದು ಕರುಳಿನ ಅಂಶಗಳನ್ನು ಸ್ವಚ್ಛಗೊಳಿಸಲು ಮತ್ತು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ ಎಂದು ಗೋಯಲ್ ಹೇಳಿದರು.


"ಈ ಪಾನೀಯದಲ್ಲಿ ಪಪ್ಪಾಯಿ ಕ್ಯೂಬ್ ಗಳನ್ನು ಸೇವಿಸಲು ಪ್ರಯತ್ನಿಸಿ, ಏಕೆಂದರೆ ಅವು ಪ್ರಯೋಜನಗಳನ್ನು ಹೆಚ್ಚಿಸುತ್ತವೆ. ಏಕೆಂದರೆ ಪಪ್ಪಾಯಿ ತುಂಡುಗಳು ಕುದಿಯುವಾಗ ಲೈಕೋಪೀನ್ ನಂತಹ ಅದರ ಉತ್ಕರ್ಷಣ ನಿರೋಧಕಗಳನ್ನು ಬಿಡುಗಡೆ ಮಾಡುತ್ತಿದ್ದವು. ಯಾವುದೇ ಹಣ್ಣಿನ ನೀರನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದಾದರೂ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ನೀರನ್ನು ಸೇವಿಸುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು.


ಇದರಲ್ಲಿ ಪಪೈನ್ ಕಿಣ್ವದ ಉಪಸ್ಥಿತಿಯೇ ಇದಕ್ಕೆ ಕಾರಣ, ಇದು ಕರುಳು ಸ್ನೇಹಿಯಾಗಿದೆ ಮತ್ತು ಕರುಳಿನ ನಾಳದಿಂದ ವಿಷವನ್ನು ತೆಗೆದು ಹಾಕುತ್ತದೆ" ಎಂದು ಗೋಯಲ್ ಹಂಚಿಕೊಂಡಿದ್ದಾರೆ.




ಇದರಿಂದಾಗುವ ಆರೋಗ್ಯಕರ ಪ್ರಯೋಜನಗಳು ಹೀಗಿವೆ


1. ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ: ಪಪ್ಪಾಯಿ ಕ್ಯೂಬ್ ಗಳನ್ನು ನೀರಿನಲ್ಲಿ ಕುದಿಸಿ ನಂತರ ಅವುಗಳನ್ನು ಸೇವಿಸುವುದು ವಿಟಮಿನ್ ಸಿ, ನೀರಿನಲ್ಲಿ ಕರಗುವ ವಿಟಮಿನ್ ಸಿ ಅನ್ನು ಹೊಂದಲು ಉತ್ತಮ ಮಾರ್ಗವಾಗಿದೆ. ಈ ಜೀವಸತ್ವವು ನೀರಿನಲ್ಲಿ ಬಿಡುಗಡೆಯಾಗುತ್ತದೆ, ಇದು ಉತ್ತಮ ಉತ್ಕರ್ಷಣ ನಿರೋಧಕವನ್ನು ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ವಿವಿಧ ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಒದಗಿಸುತ್ತದೆ ಎಂದು ಗೋಯಲ್ ಹೇಳಿದರು.


ಇದನ್ನೂ ಓದಿ: ಆಗುಂಬೆಯ ಪ್ರೇಮ ಸಂಜೆಯ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! ತಂಗಾಳಿಯಲ್ಲಿ ಬಿಸಿ ಟೀ ಕುಡಿತಾ ಇದ್ರೆ ಸ್ವರ್ಗ!


2. ಸಾಕಷ್ಟು ಬೀಟಾ ಕ್ಯಾರೋಟಿನ್ ಹೊಂದಿದೆ: ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಎ ಜೀವಸತ್ವ ಇದ್ದು, ಇದು ದೃಷ್ಟಿಗೆ ತುಂಬಾನೇ ಅತ್ಯಗತ್ಯವಾಗಿದೆ.


3. ಪಪೈನ್ ಅನ್ನು ಸಹ ಹೊಂದಿದೆ: ಪಪ್ಪಾಯಿ ಹಣ್ಣಿನಲ್ಲಿ ಪಪೈನ್ ಎಂಬ ಪ್ರೋಟಿಯೇಸ್ ಕಿಣ್ವವಿದೆ, ಇದು ವ್ಯಕ್ತಿಯು ಸೇವಿಸುವ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಶಾಖ ನಿರೋಧಕವಾಗಿದೆ, ಆದ್ದರಿಂದ ಪಪ್ಪಾಯಿಯನ್ನು ನೀರಿನಲ್ಲಿ ಕುದಿಸಿದಾಗಲೆಲ್ಲಾ, ಪಪೈನ್ ಹಾಗೆಯೇ ಉಳಿಯುತ್ತದೆ ಮತ್ತು ಸುಗಮ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಪಪೈನ್ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಕರುಳು ಸ್ನೇಹಿಯಾಗಿದೆ.


4. ಉರಿಯೂತ ಶಮನಕಾರಿಯಾಗಿದೆ: ಪಪ್ಪಾಯಿಯಲ್ಲಿರುವ ಜೀರ್ಣಕಾರಿ ಕಿಣ್ವವು ಶಾಖ-ನಿರೋಧಕವಾಗಿರುವುದರಿಂದ, ಸೈಟೋಕೈನ್ ಗಳು ಬಿಡುಗಡೆಯಾಗುತ್ತವೆ, ಇದು ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದೆ.


5. ಋತುಚಕ್ರದ ಸೆಳೆತಗಳನ್ನು ಕಡಿಮೆ ಮಾಡುತ್ತದೆ: ಋತುಚಕ್ರದ ಸಮಯದಲ್ಲಿ ನೋವು, ಸೆಳೆತಗಳನ್ನು ಕಡಿಮೆ ಮಾಡುತ್ತದೆ ಮತ್ತು ಗರ್ಭಾಶಯದ ಸೆಳೆತದಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ.


6. ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ: ಈ ಪಾನೀಯದಲ್ಲಿ ಫೈಟೋನ್ಯೂಟ್ರಿಯಂಟ್ ಗಳು, ಪಾಲಿಫಿನಾಲ್ ಗಳು ಮತ್ತು ಫ್ಲೇವನಾಯ್ಡ್ ಗಳ ಉಪಸ್ಥಿತಿಯಿಂದಾಗಿ ಬಲವಾದ ಕ್ಯಾನ್ಸರ್ ಕಾರಕ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಕರುಳು, ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.


ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ಆಹಾರ ಪದಾರ್ಥಗಳಿವು


ಪಪ್ಪಾಯಿ ನೀರನ್ನು ಪ್ರತಿದಿನ ಕುಡಿಯಬಹುದೇ?


ಈ ಪಾನೀಯವನ್ನು ಪ್ರತಿದಿನ ಸೇವಿಸಬಹುದು, ಆದರೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಶೇಖರಿಸಿಟ್ಟಾಗ ಕಡಿಮೆ ಆಗುವುದರಿಂದ ಇದನ್ನು ತಾಜಾವಾಗಿ ಮಾಡಿಕೊಂಡು ಕುಡಿಯಬೇಕು ಎಂದು ಗೋಯಲ್ ಹೇಳಿದರು.

Published by:Sandhya M
First published: