ಮಹಿಳೆಯರು (Women’s) ಹೆಚ್ಚು ಹಾರ್ಮೋನ್ ಅಸಮತೋಲನ (Hormone Imbalance) ಸಮಸ್ಯೆ ಎದುರಿಸುತ್ತಾರೆ. ಹಾರ್ಮೋನ್ ಅಸಮತೋಲನವು ತೂಕ ಹೆಚ್ಚಳಕ್ಕೆ (Weight Gain) ಮುಖ್ಯ ಕಾರಣವಾಗಿದೆ. ತುಂಬಾ ಮಹಿಳೆಯರು ಹಾರ್ಮೋನ್ ಅಸಮತೋಲನದಿಂದಾಗಿ ತೂಕ ಹೆಚ್ಚಳ ಸಮಸ್ಯೆ (Problem) ಎದುರಿಸುತ್ತಿದ್ದಾರೆ. ಹೆಚ್ಚಿನ ಒತ್ತಡ ಹಾಗೂ ದೇಹದಲ್ಲಿನ ಕಾರ್ಟಿಸೋಲ್ ಮಟ್ಟಗಳ ಹೆಚ್ಚಳವು ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ಇದನ್ನು ಹಾರ್ಮೋನ್ ತೂಕ ಹೆಚ್ಚಳ ಎಂದು ಕರೆಯುತ್ತಾರೆ. ಕಾರ್ಟಿಸೋಲ್ ಮಟ್ಟದಲ್ಲಿ ಹೆಚ್ಚಳವಾದರೆ ದೇಹದಲ್ಲಿ ಕೊಬ್ಬಿನ ಕೋಶಗಳ ಉತ್ಪಾದನೆ ಹೆಚ್ಚುತ್ತದೆ. ಇದು ನಂತರದ ದಿನಗಳಲ್ಲಿ ಚಯಾಪಚಯ ಕ್ರಿಯೆ ಹಾಳಾಗಲು ಕಾರಣ ಆಗುತ್ತದೆ. ಇದು ಅನೇಕ ಮಹಿಳೆಯರು ಹಠಾತ್ ತೂಕ ಹೆಚ್ಚಿಸಲು ಕಾರಣ ಆಗುತ್ತದೆ.
ಹಾರ್ಮೋನ್ ತೂಕ ಹೆಚ್ಚಳಕ್ಕೆ ಯಾವೆಲ್ಲಾ ಸಂಗತಿಗಳು ಕಾರಣ
ಹಾರ್ಮೋನ್ ತೂಕ ಹೆಚ್ಚಳಕ್ಕೆ ಯಾವೆಲ್ಲಾ ಸಂಗತಿಗಳು ಕಾರಣವಾಗುತ್ತವೆ ಎಂದು ನೋಡೋಣ. ತೂಕ ನಷ್ಟದ ಆಲೋಚನೆಯ ಮೊದಲು ದೇಹದಲ್ಲಿ ತೂಕ ಹೆಚ್ಚಳಕ್ಕೆ ಏನು ಕಾರಣ ಎಂಬುದನ್ನು ಮೊದಲು ತಿಳಿಯಬೇಕು. ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳು ಮತ್ತು ತೂಕ ಹೆಚ್ಚಳದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.
ಮಹಿಳೆಯರಲ್ಲಿ ಋತುಬಂಧದ ವೇಳೆ ಎಸ್ಟ್ರಾಡಿಯೋಲ್ ಎಂಬ ನಿರ್ದಿಷ್ಟ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟದಲ್ಲಿ ಇಳಿಕೆ ಕಂಡು ಬರುತ್ತದೆ. ಇದು ದೇಹದಲ್ಲಿ ಚಯಾಪಚಯ ಮತ್ತು ದೇಹದ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಸ್ಟ್ರಾಡಿಯೋಲ್ ಮಟ್ಟ ಕಡಿಮೆ ಮಾಡಿದರೆ ತೂಕ ಹೆಚ್ಚಾಗುತ್ತದೆ.
ಇದರಿಂದ ಮಹಿಳೆಯು ಸೊಂಟ ಮತ್ತು ತೊಡೆಯ ಭಾಗದಲ್ಲಿ ಹೆಚ್ಚು ತೂಕ ಹೊಂದುತ್ತಾಳೆ. ಹಾರ್ಮೋನ್ ಅಸಮತೋಲನ ಹೇಗೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ತೂಕ ನಷ್ಟಕ್ಕೆ ಅಡ್ಡಿಯಾಗುತ್ತದೆ ಎಂಬುದನ್ನು ಪೌಷ್ಟಿಕತಜ್ಞೆ ಕರಿಷ್ಮಾ ಶಾ ವಿವರಿಸಿದ್ದಾರೆ ತಿಳಿಯೋಣ.
ತಜ್ಞರ ಪ್ರಕಾರ, ಎಷ್ಟೇ ಕಠಿಣ ಡಯಟ್ ಹಾಗೂ ವ್ಯಾಯಾಮ ಮಾಡಿದ ನಂತರವೂ ತೂಕ ಕಡಿಮೆ ಆಗುತ್ತದೆ ಎಂಬುದು ನಿಶ್ಚಲವಾಗಿಲ್ಲ. ಯಾಕಂದ್ರೆ ದೇಹದಲ್ಲಿ ಹಾರ್ಮೋನುಗಳ ಕಾರ್ಯ ಚಟುವಟಿಕೆಯಲ್ಲಿನ ವ್ಯತ್ಯಾಸ ತೂಕ ನಷ್ಟಕ್ಕೆ ಅಡ್ಡಿ ಮಾಡುತ್ತದೆ.
ಹಾಗೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಅಂತಾರೆ. ಹಾರ್ಮೋನುಗಳು ಅಸಮತೋಲನ ಸಮಸ್ಯೆ ಇದ್ದಾಗ ತೂಕ ನಷ್ಟ ತುಂಬಾ ಕಷ್ಟ ಅಂತಾರೆ ತಜ್ಞರು.
ತೂಕ ಹೆಚ್ಚಾಗಲು ಯಾವ ಅಂಶಗಳು ಕಾರಣವಾಗಿವೆ?
ಋತುಬಂಧದಲ್ಲಿ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ
ಋತುಬಂಧದಲ್ಲಿನ ಹಾರ್ಮೋನ್ ಬದಲಾವಣೆ ಸಾಮಾನ್ಯ. ಸೊಂಟ ಮತ್ತು ತೊಡೆಗಳಿಗಿಂತ ನಿಮ್ಮ ಹೊಟ್ಟೆಯ ಸುತ್ತಲೂ ತೂಕ ಹೆಚ್ಚುತ್ತದೆ. ಋತುಬಂಧದಲ್ಲಿ ತೂಕ ಹೆಚ್ಚಾಗಲು ಹಾರ್ಮೋನ್ ಬದಲಾವಣೆಗಳು ಮತ್ತು ವಯಸ್ಸು, ಕೆಟ್ಟ ಜೀವನಶೈಲಿ ಮತ್ತು ಆನುವಂಶಿಕ ಅಂಶಗಳು ಕಾರಣವಾಗುತ್ತವೆ.
ಆರೋಗ್ಯಕರ ಆಹಾರ ಸೇವನೆ ಮಾಡದೇ ಇರುವುದು, ಉತ್ತಮ ನಿದ್ರೆ ಮಾಡದಿರುವುದು ಮತ್ತು ವ್ಯಾಯಾಮ ಮಾಡದಿರುವುದು ಕೂಡ ಋತುಬಂಧದ ನಂತರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಾಕಷ್ಟು ನಿದ್ದೆ ಮಾಡದಿದ್ದರೆ ಹೆಚ್ಚು ಕ್ಯಾಲೊರಿ ಸೇವನೆಯು ತೂಕ ಹೆಚ್ಚಿಸುತ್ತದೆ.
ಎಂಡೊಮೆಟ್ರಿಯೊಸಿಸ್
ಎಂಡೊಮೆಟ್ರಿಯೊಸಿಸ್ ಮತ್ತು ತೂಕ ಹೆಚ್ಚಳದ ನಡುವೆ ಪರಸ್ಪರ ಸಂಬಂಧವಿದೆ. ಇದು ತೂಕ ಹೆಚ್ಚಾಗಲು ಮತ್ತು ವಾಯು ಉಂಟಾಗಲು ಕಾರಣವಾಗಿದೆ. ಎಂಡೊಮೆಟ್ರಿಯೊಸಿಸ್ ಹೊಂದಿರುವ ಜನರು ತೂಕ ಹೆಚ್ಚಾಗುತ್ತದೆ. ಇದರಿಂದ ತೂಕ ಇಳಿಕೆ ಕಷ್ಟ.
ಪಿಸಿಓಎಸ್ ಸಮಸ್ಯೆ
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಒಂದು ಹಾರ್ಮೋನ್ ಸಮಸ್ಯೆ. ಇದು ಮಹಿಳೆಯರಲ್ಲಿ ಪ್ರೌಢಾವಸ್ಥೆಯಲ್ಲಿ ಕಂಡು ಬರುತ್ತದೆ. ದೇಹವು ಸಕ್ಕರೆ ಮತ್ತು ಪಿಷ್ಟವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಇನ್ಸುಲಿನ್ ಸಹಾಯ ಮಾಡುತ್ತದೆ. ಯಾವಾಗ ದೇಹವು ಇನ್ಸುಲಿನ್ ಅನ್ನು ಬಳಸಲು ಕಷ್ಟವಾಗುತ್ತದೋ ಆಗ ಪಿಸಿಓಎಸ್ ಸಮಸ್ಯೆ ಉಂಟಾಗುತ್ತದೆ.
ಹೆಚ್ಚಿನ ಇನ್ಸುಲಿನ್ ಮಟ್ಟವು ಪುರುಷ ಹಾರ್ಮೋನುಗಳಾದ ಆಂಡ್ರೋಜೆನ್ ಗಳ ಉತ್ಪಾದನೆ ಹೆಚ್ಚಿಸುತ್ತದೆ. ಹೆಚ್ಚಿನ ಆಂಡ್ರೊಜೆನ್ ಮಟ್ಟವು ದೇಹದ ಕೂದಲು ಬೆಳವಣಿಗೆ, ಮೊಡವೆ, ಅನಿಯಮಿತ ಅವಧಿ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಹೈಪೋಥೈರಾಯ್ಡ್
ಚಯಾಪಚಯ ಸಮತೋಲನಗೊಳಿಸಲು ಮತ್ತು ನಿಮ್ಮ ಹಸಿವನ್ನು ನಿಯಂತ್ರಿಸಲು ನಿಮ್ಮ ಥೈರಾಯ್ಡ್ ಕಾರಣವಾಗಿದೆ. ಥೈರಾಯ್ಡ್ ಹಾರ್ಮೋನುಗಳು ನಿಮ್ಮ ಮೆದುಳಿನಲ್ಲಿನ ಅನೇಕ ಅಂಗಾಂಶಗಳೊಂದಿಗೆ ಸಂವಹನ ನಡೆಸುತ್ತವೆ. ಕೊಬ್ಬಿನ ಕೋಶಗಳು, ಸ್ನಾಯುಗಳು, ಯಕೃತ್ತು ಇತ್ಯಾದಿ. ಥೈರಾಯ್ಡ್ ಮಟ್ಟವು ಕಡಿಮೆಯಾದರೆ ಚಯಾಪಚಯವು ನಿಧಾನವಾಗುತ್ತದೆ.
ಇದನ್ನೂ ಓದಿ: ಹೊಟ್ಟೆಯಲ್ಲಿ ಇಲಿ ಓಡಾಡಿದಂತೆ ಅನಿಸುತ್ತಾ? ಹಾಗಾದ್ರೆ ಈ ಹೆಲ್ದೀ ಡ್ರಿಂಕ್ ಕುಡಿಯಿರಿ
ಆಗ ಕಡಿಮೆ ಶಕ್ತಿಯ ಬಳಕೆ ಆಗುತ್ತದೆ. ಆಗ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗಲ್ಲ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ