ಸಿರಿಧಾನ್ಯಗಳನ್ನು ಕಷ್ಟಪಟ್ಟು ಸೇವಿಸುತ್ತೀರಾ: ಸುಲಭವಾಗಿ ಇಷ್ಟಪಟ್ಟು ತಿನ್ನುವುದು ಹೀಗೆ..!

ಒಂದೇ ರೀತಿಯ ಸಿರಿಧಾನ್ಯವನ್ನು ನಿರಂತರ ಎರಡು ಮೂರು ದಿನ ತಿನ್ನುವುದು ಕಿರಿಕಿರಿ ಎನಿಸಬಹುದು. ನೀವು ತಿನ್ನುವ ಸಿರಿಧಾನ್ಯದ ಬಳಕೆಯ ಕ್ರಮ ಅರಿಯಿರಿ. ಆಗ ಎಲ್ಲವೂ ಸುಗಮವೆನಿಸುತ್ತದೆ. ಅದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು.

ಸಿರಿಧಾನ್ಯ

ಸಿರಿಧಾನ್ಯ

  • Share this:
ನಿತ್ಯವೂ ಒಂದೇ ಕ್ರಮದಲ್ಲಿ ಸಿರಿಧಾನ್ಯಗಳನ್ನು ತಿನ್ನುವುದು ನೀರಸ ಎಂದು ಬಹಳಷ್ಟು ಮಂದಿಗೆ ಅನಿಸಬಹುದು. ಆದರೆ ಸರಿಯಾದ ಕ್ರಮದಲ್ಲಿ, ಕೊಂಚ ಭಿನ್ನ ಖಾದ್ಯಗಳನ್ನು ಮಾಡಿಕೊಂಡು ತಿನ್ನುವುದರಿಂದ ಸಿರಿಧಾನ್ಯಗಳೊಂದಿಗಿನ ನಿಮ್ಮ ಆಹಾರ ಪ್ರಯಾಣ ಖುಷಿ ನೀಡಬಹುದು. ವಿಶ್ವದ 97 ಶೇಕಡಾ ಜನರು ಗ್ಲುಟೆನ್ ಸೂಕ್ಷತೆ ಹೊಂದಿದ್ದಾರೆ: ಕೇವಲ 1 ಶೇಕಡಾ ಜನರು ಗ್ಲುಟೆನ್ ಅಸಹಿಷ್ಣುತೆ ಹೊಂದಿದ್ದಾರೆ. ಜನರು ಸಿರಿಧಾನ್ಯಗಳನ್ನು ಆರಂಭಿಸಿದಾಗ, ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನಿರ್ದಿಷ್ಟ ಕ್ರಮ ಅನುಸರಿಸುತ್ತಾರೆ. ಆದರೆ ಒಂದೇ ರೀತಿಯ ಸಿರಿಧಾನ್ಯವನ್ನು ನಿರಂತರ ಎರಡು ಮೂರು ದಿನ ತಿನ್ನುವುದು ಕಿರಿಕಿರಿ ಎನಿಸಬಹುದು. ನೀವು ತಿನ್ನುವ ಸಿರಿಧಾನ್ಯದ ಬಳಕೆಯ ಕ್ರಮ ಅರಿಯಿರಿ. ಆಗ ಎಲ್ಲವೂ ಸುಗಮವೆನಿಸುತ್ತದೆ. ಅದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು.

• ಯಾವುದೇ ಸಿರಿಧಾನ್ಯವಿರಲಿ 6-8 ಗಂಟೆಗಳ ಕಾಲ ನೆನೆಸಿಡುವುದು ಅಗತ್ಯ ಎಂಬುವುದನ್ನು ನೆನಪಿಡಿ. ಆಗ ನೀವು ಅದನ್ನು ಸರಿಯಾಗಿ ಬೇಯಿಸಲು ಸಾಧ್ಯವಾಗುತ್ತದೆ.

• ಸಿರಿಧಾನ್ಯದ ಅಂಬಲಿಯನ್ನು 10 ದಿನದಲ್ಲಿ ಮೂರು ಬಾರಿ ಸೇವಿಸಿರಿ ಸಾಕು. ಅದಕ್ಕಿಂತ ಹೆಚ್ಚು ಬಾರಿ ಸೇವಿಸುವ ಅಗತ್ಯವಿಲ್ಲ. ಯಾವುದೂ ಕೂಡ ಅತಿಯಾದರೆ ಒಳ್ಳೆಯದಲ್ಲ.

• ಸಂಸ್ಕರಿತ ಸಿರಿಧಾನ್ಯಗಳ ಹಿಟ್ಟು, ಸಿರಿಧಾನ್ಯಗಳ ಶಾವಿಗೆ, ಸಿರಿಧಾನ್ಯಗಳ ಫ್ಲೇಕ್ಸ್ ಇತ್ಯಾದಿಗಳನ್ನು ಸೇವಿಸಬೇಡಿ. ಗ್ಲುಟೆನ್ ಮುಕ್ತ ಆಹಾರ ಸೇವನೆ ಎಂದರೆ ಕೇವಲ ಸಿರಿಧಾನ್ಯಗಳನ್ನೇ ತಿನ್ನುವುದಲ್ಲ, ಧಾನ್ಯಗಳನ್ನೂ ತಿನ್ನಿ ಮತ್ತು ಸ್ವಂತವಾಗಿ ಹಿಟ್ಟು ಮಾಡಿಕೊಳ್ಳಿ.

ಇದನ್ನೂ ಓದಿ: Shwetha Srivatsav: ವಿನ್ಯಾಸಿತ ಗೌನ್​ ತೊಟ್ಟ ಶ್ವೇತಾ ಶ್ರೀವಾತ್ಸವ: ಸೆಲೆಬ್ರಿಟಿ ಅಮ್ಮ-ಮಗಳ ಟ್ವಿನ್ನಿಂಗ್​..!

• ಪ್ರಮಾಣ, ಜಲಸಂಚಯನ ಮತ್ತು ಒಂದು ಧಾನ್ಯಕ್ಕೆ ಅಂಟಿಕೊಳ್ಳುವ ಕಲ್ಪನೆ ಅರ್ಥ ಮಾಡಿಕೊಳ್ಳಿ.

• ಸಿರಿಧಾನ್ಯಗಳ ಬಳಕೆ ನಿಮಗೆ ಹೊಸದಾಗಿದ್ದರೆ, ದಿನದ ಒಂದು ಊಟದಲ್ಲಿ ಮಾತ್ರ ಸಿರಿಧಾನ್ಯವಿರಲಿ. ವಾರಕ್ಕೆ 6 ಬಾರಿ ಅಷ್ಟೇ ಸೇವಿಸಿ, ದಿನ ಕಳೆದಂತೆ ಆ ಪ್ರಮಾಣ ಹೆಚ್ಚಿಸುತ್ತಾ ಹೋಗಬಹುದು.

ನಾವು ನಿತ್ಯ ಇತರ ಧಾನ್ಯಗಳನ್ನು ಬಳಸಿ ಯಾವ ರೀತಿಯ ಆಹಾರಗಳನ್ನು ಮಾಡುತ್ತೇವೆಯೋ ಅಂತಹ ಪ್ರತಿಯೊಂದು ಖಾದ್ಯಗಳನ್ನು ಸಿರಿಧಾನ್ಯಗಳಿಂದಲೂ ಮಾಡಬಹುದು. ಇಲ್ಲಿ ಹಾರಕ ಅಕ್ಕಿಯ ಮೆಕ್ಸಿಕನ್ ಸಲಾಡ್ ಮಾಡುವ ವಿಧಾನವನ್ನು ತಿಳಿಸಲಾಗಿದೆ.


ಹಾರಕ ಅಕ್ಕಿ ಮೆಕ್ಸಿಕನ್ ಸಲಾಡ್:  ಸಾಮಾಗ್ರಿಗಳು (ಇಬ್ಬರಿಗಾಗಿ):
1/2 ಕಪ್ ಬೇಯಿಸಿದ ಹಾರಕ ಅಕ್ಕಿ
1/2 ಕಪ್ ಕಿಡ್ನಿ ಬೀನ್ಸ್
1/4 ಕಪ್ ಬೇಯಿಸಿದ ಮೆಕ್ಕೆ ಜೋಳ
8-10 ಚೆರ್ರಿ ಟೊಮ್ಯಾಟೋಗಳು
2 ಟೇಬಲ್ ಚಮಚ ಪುದೀನಾ, ಕೊತ್ತಂಬರಿ ಸೊಪ್ಪು, ಕ್ಲಿಯಾಂಟ್ರೋ, ಪಾಸ್ರ್ಲಿ ಇತ್ಯಾದಿ ತಾಜಾ ಎಲೆಗಳು.
1 ಟೇಬಲ್ ಚಮಚ ಒಣಗಿನ ಗಿಡಮೂಲಿಕೆಗಳು (ರೋಸ್‍ಮೆರಿ ಮತ್ತು ಒರೆಗಾನೋ ಆಗಬಹುದು)
1 ಟೇಬಲ್ ಚಮಚ ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ
1 ಟೇಬಲ್ ಚಮಚ ಸಂಸ್ಕರಿಸಲಾಗದ ಸಕ್ಕರೆ
ಅರ್ಧ ನಿಂಬೆ ಹಣ್ಣಿನ ರಸ

ಇದನ್ನೂ ಓದಿ: Shubha Poonja: ಮದುವೆ ತಯಾರಿಯಲ್ಲಿ ಶುಭಾ ಪೂಂಜಾ: ಸುದೀಪ್ ಜತೆ ಮದುವೆ ವಿಷಯ ಹಂಚಿಕೊಂಡ ನಟಿ..!

ವಿಧಾನ:
1. ಹಾರಕ ಅಕ್ಕಿಯನ್ನು ಚೆನ್ನಾಗಿ ತೊಳೆದು, 6-8 ಗಂಟೆಗಳವರೆಗೆ ನೆನೆಸಿಡಿ. ಅದು ನೆನೆದ ಮೇಲೆ ಬೇಯಿಸಿ. ಬೆಂದ ಮೇಲೆ ಆರಲು ಇಡಿ.
2. ಒಂದು ಬೌಲ್‍ನಲ್ಲಿ ಕಿಡ್ನಿ ಬೀನ್ಸ್, ಮೆಕ್ಕೆ ಜೋಳ ಮತ್ತು ಟೊಮ್ಯಾಟೋ ಹಾಕಿ ಮಿಶ್ರ ಮಾಡಿ.
3. ಒಣಗಿದ ಗಿಡಮೂಲಿಕೆಗಳನ್ನು, ಆಲಿವ್ ಎಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಆ ಮಿಶ್ರಣಕ್ಕೆ ಸೇರಿಸಿ.
4. ತಾಜಾ ಗಿಡ ಮೂಲಿಕೆಗಳು ಮತ್ತು ನಿಂಬೆ ರಸವನ್ನು ಸೇರಿಸಿ.
5. ಈ ಸಲಾಡನ್ನು ತಾಜಾ ಇರುವಾಗಲೇ, ಒಂದು ತುಂಡು ಬ್ರೆಡ್ ಅಥವಾ ಬಾರ್ಬಿಕ್ಯೂ ತರಕಾರಿಗಳೊಂದಿಗೆ ಸೇವಿಸಿ.
First published: