• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಸಲು ಹರಸಾಹಸ ಪಡುವ ಮೊದಲು ಎಷ್ಟು ಕ್ಯಾಲೋರಿ ಸೇವನೆ ಮಾಡ್ಬೇಕು? ಎಷ್ಟು ಬರ್ನ್ ಮಾಡ್ಬೇಕು ತಿಳಿಯಿರಿ!

Weight Loss: ತೂಕ ಇಳಿಸಲು ಹರಸಾಹಸ ಪಡುವ ಮೊದಲು ಎಷ್ಟು ಕ್ಯಾಲೋರಿ ಸೇವನೆ ಮಾಡ್ಬೇಕು? ಎಷ್ಟು ಬರ್ನ್ ಮಾಡ್ಬೇಕು ತಿಳಿಯಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಲ್ಲಿನ ಅನ್ ವಾಂಟೆಡ್ ಕ್ಯಾಲೊರಿ ಬರ್ನ್ ಮಾಡಿದಷ್ಟು ಫಿಟ್ ಆಗಿರಲು ಸಾಧ್ಯ. ಫಿಟ್‌ನೆಸ್‌ನಿಂದ ಆಹಾರದವರೆಗೆ ಕ್ಯಾಲೊರಿ ಸೇವನೆ ಬಹು ಮುಖ್ಯ ಪಾತ್ರ ವಹಿಸುತ್ತವೆ. ಮತ್ತು ಎಲ್ಲಾ ತೂಕ ನಷ್ಟವು ಕ್ಯಾಲೊರಿ ಸೇವನೆ ಮತ್ತು ಬರ್ನಿಂಗ್ ಕ್ಯಾಲೊರಿ ಮೇಲೆ ಮಾತ್ರ ಅವಲಂಬಿತವಾಗಿದೆ. ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಕ್ಯಾಲೊರಿ ಬಗ್ಗೆ ಗಮನಹರಿಸಬೇಕು.

ಮುಂದೆ ಓದಿ ...
  • Share this:

    ತೂಕ ನಷ್ಟದ (Weight Loss) ವಿಷಯಕ್ಕೆ ಬಂದಾಗ ನಾವು ತಿನ್ನುವ ಆಹಾರ (Eating Food) ಎಷ್ಟು ಕ್ಯಾಲೋರಿ (Calorie) ಹೊಂದಿದೆ ಎಂಬ ಬಗ್ಗೆ ಹೆಚ್ಚಿನ ಜನರು (People) ಗಮನ ಹರಿಸುತ್ತಾರೆ. ಆದರೆ ಕೆಲವರು ತಾವು ತಿನ್ನುವ ಆಹಾರದಲ್ಲಿ ಎಷ್ಟು ಕ್ಯಾಲೋರಿ ಇರಬೇಕು? ಎಷ್ಟು ಪೋಷಕಾಂಶಗಳು (Nutrients) ಮತ್ತು ಯಾವ ಪೋಷಕಾಂಶಗಳ ಇರಬೇಕು ಎಂಬುದರ ಬಗ್ಗೆ ಗಮನ ಕೊಡುವುದಿಲ್ಲ. ಇದು ತೂಕ ನಷ್ಟದಲ್ಲಿ ಸರಿಯಾದ ಫಲಿತಾಂಶ ನೀಡುವುದಿಲ್ಲ. ದಿನವಿಡೀ ವ್ಯಾಯಾಮ (Exercise) ಮಾಡುವ ಮೂಲಕ ಅಥವಾ ಸೀಮಿತ ಕ್ಯಾಲೊರಿ ಸೇವಿಸುವ ಮೂಲಕ ದೇಹದ ತೂಕ ಕಡಿಮೆ ಮಾಡುವ ಯೋಜನೆ ರೂಪಿಸುವುದು ಮುಖ್ಯವಾಗುತ್ತದೆ.


    ದೇಹಕ್ಕೆ ಎಷ್ಟು ಕ್ಯಾಲೋರಿ ಬೇಕು?


    ದೇಹದಲ್ಲಿನ ಅನ್ ವಾಂಟೆಡ್ ಕ್ಯಾಲೊರಿ ಬರ್ನ್ ಮಾಡಿದಷ್ಟು ಫಿಟ್ ಆಗಿರಲು ಸಾಧ್ಯ. ಫಿಟ್‌ನೆಸ್‌ನಿಂದ ಆಹಾರದವರೆಗೆ ಕ್ಯಾಲೊರಿ ಸೇವನೆ ಬಹು ಮುಖ್ಯ ಪಾತ್ರ ವಹಿಸುತ್ತವೆ. ಮತ್ತು ಎಲ್ಲಾ ತೂಕ ನಷ್ಟವು ಕ್ಯಾಲೊರಿ ಸೇವನೆ ಮತ್ತು ಬರ್ನಿಂಗ್ ಕ್ಯಾಲೊರಿ ಮೇಲೆ ಮಾತ್ರ ಅವಲಂಬಿತವಾಗಿದೆ.


    ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಮುಖ್ಯ ಮಾರ್ಗ ಅಂದ್ರೆ ನೀವು ಸೇವಿಸುವ ಕ್ಯಾಲೊರಿ ಮತ್ತು ನೀವು ಎಷ್ಟು ಕ್ಯಾಲೋರಿ ಬರ್ನ್ ಮಾಡುತ್ತೀರಿ ಎಂಬ ಪ್ರಮಾಣದಲ್ಲಿ ಸಮತೋಲನ ಕಾಯ್ದುಕೊಳ್ಳುವುದು. ಆದರೆ ವ್ಯಕ್ತಿಗೆ ಎಷ್ಟು ಕ್ಯಾಲೊರಿ ಬೇಕು ಎಂದು ಹೇಗೆ ಗೊತ್ತಾಗುತ್ತದೆ?


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ತೂಕ ನಷ್ಟದ ಸಮಯದಲ್ಲಿ ಎಷ್ಟು ಕ್ಯಾಲೊರಿ ಸೇವಿಸುವುದು ಆರೋಗ್ಯಕರ? ಒಂದು ದಿನದಲ್ಲಿ ಎಷ್ಟು ಕ್ಯಾಲೊರಿ ಬರ್ನ್ ಮಾಡಿದರೆ ತೂಕ ಇಳಿಕೆಗೆ ಸಹಕಾರಿ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳೋಣ. ನಿಮ್ಮ ತೂಕ ಇಳಿಸುವ ಪ್ರಯಾಣದ ಯಶಸ್ಸಿಗೆ ಈ ಮುಖ್ಯ ಅಂಶಗಳ ಬಗ್ಗೆ ತಿಳಿಯೋಣ.


    ಎಷ್ಟು ಕ್ಯಾಲೋರಿ ಸೇವಿಸಬೇಕು?


    ಮೇಯೊ ಕ್ಲಿನಿಕ್ ಪ್ರಕಾರ, ಆಹಾರದಲ್ಲಿನ ಕ್ಯಾಲೊರಿಗಳು ಶಕ್ತಿ ಉಲ್ಲೇಖಿಸುತ್ತವೆ. ನಿಮ್ಮ ದೇಹವು ದಿನವಿಡೀ ಕಾರ್ಯ ನಿರ್ವಹಿಸಲು ಶಕ್ತಿಯ ಅಗತ್ಯವಿದೆ. ಆ ಶಕ್ತಿ ನಿಮಗೆ ಆಹಾರದಿಂದ ಸಿಗುತ್ತದೆ. ಕಾರ್ಬೋಹೈಡ್ರೇಟ್‌, ಕೊಬ್ಬು ಮತ್ತು ಪ್ರೋಟೀನ್‌ ಕ್ಯಾಲೊರಿ ಒಳಗೊಂಡಿರುವ ಪೋಷಕಾಂಶಗಳಾಗಿವೆ.


    ಮತ್ತು ನಿಮ್ಮ ದೇಹಕ್ಕೆ ಮುಖ್ಯ ಶಕ್ತಿಯ ಮೂಲಗಳಾಗಿವೆ. ನೀವು ಸೇವಿಸುವ ಕ್ಯಾಲೊರಿಗಳನ್ನು ದೈಹಿಕ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಅಥವಾ ದೇಹದ ಕೊಬ್ಬಿನಂತೆ ಸಂಗ್ರಹಿಸಲಾಗುತ್ತದೆ. ನೀವು ಎಲ್ಲಿಯವರೆಗೆ ಈ ಕ್ಯಾಲೋರಿಗಳನ್ನು ಬಳಸುವುದಿಲ್ಲವೋ, ಅಲ್ಲಿಯವರೆಗೆ ನಿಮ್ಮ ದೇಹದಲ್ಲಿ ಇವು ಕೊಬ್ಬಿನಂತೆ ಉಳಿಯುತ್ತವೆ.


    ಒಂದು ವೇಳೆ ಈ ಕ್ಯಾಲೋರಿಗಳನ್ನು ಬರ್ನ್ ಮಾಡದೇ ಇದ್ದರೆ ಅದು ಮುಂದೆ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಮತ್ತು ಒಮ್ಮೆ ಹೆಚ್ಚಾದ ತೂಕ ಇಳಿಸಲು ಡಯಟ್, ವ್ಯಾಯಾಮ ಹೀಗೆ ಅನೇಕ ಅಂಶಗಳನ್ನು ಮಾಡಬೇಕಾಗುತ್ತದೆ.


    ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಕ್ಯಾಲೊರಿ ಸೇವನೆ ಮಾಡಬೇಕು?


    ರಾಷ್ಟ್ರೀಯ ಆರೋಗ್ಯ ಕೇಂದ್ರದ ಪ್ರಕಾರ ಮಹಿಳೆಯರಿಗೆ ದೈನಂದಿನ ಕ್ಯಾಲೋರಿ ಸೇವನೆಯು ದಿನಕ್ಕೆ 2,000 ಕ್ಯಾಲೋರಿ ಆಗಿದೆ. ಮತ್ತು ಪುರುಷರಿಗೆ 2,500 ಕ್ಯಾಲೋರಿ ಸೇವನೆ ಮಾಡಬೇಕು. ಒಂದು ದಿನದಲ್ಲಿ ಇಷ್ಟು ಕ್ಯಾಲೋರಿಗಳನ್ನು ಸೇವಿಸುವುದು ನಮಗೆ ಸಾಕಾಗುತ್ತದೆ.


    ಮತ್ತು ಆರೋಗ್ಯಕರ ಹೌದು. ಆದರೆ ತೂಕ ಇಳಿಕೆ ವಿಚಾರದಲ್ಲಿ ತಜ್ಞರ ಸಲಹೆ ಫಾಲೋ ಮಾಡುವ ಮೂಲಕ ಕ್ಯಾಲೋರಿ ಸೇವನೆ ಕಡಿಮೆ ಮಾಡಬಹುದು. ಪ್ರತಿಯೊಬ್ಬ ವ್ಯಕ್ತಿಯ ಕ್ಯಾಲೋರಿ ಸೇವನೆಯು ವಿಭಿನ್ನವಾಗಿರುತ್ತದೆ. ಆದರೆ ಆರೋಗ್ಯಕರ ಕ್ಯಾಲೋರಿ ಸೇವನೆ ಮತ್ತು ಬರ್ನ್ ಮಾಡುವಂತಿರಬೇಕು.


    ಕ್ಯಾಲೊರಿ ಕಡಿಮೆ ಮಾಡಲು ಏನು ಮಾಡಬೇಕು?


    ಹೆಚ್ಚಿನ ಕ್ಯಾಲೋರಿ ಮತ್ತು ಕಡಿಮೆ ಪೌಷ್ಟಿಕಾಂಶದ ವಸ್ತುಗಳ ಸೇವನೆ ಮಾಡದೇ ಇರುವುದು ಮತ್ತು ಕಡಿಮೆ ಕ್ಯಾಲೋರಿ ಆಹಾರ ಪದಾರ್ಥಗಳ ಆಯ್ಕೆ ಮಾಡಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ತೂಕ ಇಳಿಸಲು ಎಷ್ಟು ಕ್ಯಾಲೊರಿ ಸೇವನೆ ಕಡಿಮೆ ಮಾಡಬೇಕು?


    ಮೇಯೊ ಕ್ಲಿನಿಕ್ ಪ್ರಕಾರ, ನಿಮ್ಮ ಸಾಮಾನ್ಯ ಆಹಾರದಿಂದ ದಿನಕ್ಕೆ ಸುಮಾರು 500 ಕ್ಯಾಲೊರಿ ಸೇವನೆ ಕಡಿತಗೊಳಿಸಿದರೆ, ನೀವು ವಾರಕ್ಕೆ ಅರ್ಧದಿಂದ 1 ಕೆಜಿ ತೂಕ ಕಳೆದುಕೊಳ್ಳಬಹುದು. ಆದರೆ ಇದು ನಿಮ್ಮ ದೇಹ, ನೀವು ಎಷ್ಟು ತೂಕ ಕಳೆದುಕೊಳ್ಳಲು ಬಯಸುತ್ತೀರಿ, ಲಿಂಗ ಮತ್ತು ಚಟುವಟಿಕೆಯ ಮಟ್ಟವನ್ನು ಅವಲಂಬಿಸಿದೆ.

    Published by:renukadariyannavar
    First published: