• Home
  • »
  • News
  • »
  • lifestyle
  • »
  • Health Care: ಬೆನ್ನು ಮೂಳೆ ಆರೋಗ್ಯಕ್ಕೆ ಈ ಪದಾರ್ಥಗಳು ಪ್ರಯೋಜನಕಾರಿ

Health Care: ಬೆನ್ನು ಮೂಳೆ ಆರೋಗ್ಯಕ್ಕೆ ಈ ಪದಾರ್ಥಗಳು ಪ್ರಯೋಜನಕಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕಾಗಿ ಬಲವಾದ ಮೂಳೆಗಳು ಅವಶ್ಯಕ. ಮೂಳೆಗಳು ದುರ್ಬಲವಾಗುತ್ತಾ ಹೋದಂತೆ ದೇಹದಲ್ಲಿ ಹಲವು ತೊಂದರೆಗಳು ಕಾಣಿಸಲು ಶುರು ಆಗುತ್ತವೆ. ಯಾಕಾದ್ರೂ ಈ ಜೀವನ ಬೇಕಪ್ಪಾ ಎಂದೆನಿಸುತ್ತದೆ. ಜೀವನವು ದುಃಸ್ವಪ್ನದಂತೆ ಭಾಸವಾಗುತ್ತದೆ. ಈ ಮೂಳೆಗಳಲ್ಲಿ ಬೆನ್ನುಹುರಿ ಅತ್ಯಂತ ಬೇಗ ದುರ್ಬಲವಾಗುತ್ತದೆ.

ಮುಂದೆ ಓದಿ ...
  • Share this:

    ದೈಹಿಕ ಶಕ್ತಿ (Physical Strength) ಹೆಚ್ಚಿಸಲು ಮತ್ತು ಸದೃಢ ಆರೋಗ್ಯ (Health) ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಉತ್ತಮ ಜೀವನಕ್ಕಾಗಿ (Good Life) ಉತ್ತಮ ಆರೋಗ್ಯ ಹೊಂದುವುದು ಮೊದಲ ಹೆಜ್ಜೆ ಆಗಿದೆ. ಅದಾಗ್ಯೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವ ಸಮತೋಲನ ಆಹಾರ ಸೇವನೆ ಮಾಡುವುದು ಮುಖ್ಯ. ಹಾಗೂ ಆರೋಗ್ಯಕರ ಆಹಾರ ಪದಾರ್ಥಗಳ (Food Ingredients) ಸೇವನೆ ಮಾಡುವುದು ಮುಖ್ಯ. ವಯಸ್ಸಾದಂತೆ ದೇಹ ಕುಗ್ಗುತ್ತದೆ. ಮೂಳೆಗಳ ಆರೋಗ್ಯ ಕುಂದುತ್ತದೆ. ಇದು ನಿಮ್ಮನ್ನು ವಯಸ್ಸಾಗುವಿಕೆ ಮತ್ತು ದೇಹದ ಸಮತೋಲನವನ್ನು ಹಾಳು ಮಾಡುತ್ತದೆ. ಅದರಲ್ಲೂ ನೀವು ಮೂವತ್ತು ವರ್ಷ ವಯಸ್ಸಾಗುತ್ತಿದ್ದಂತೆ ಕೆಲ ಆರೋಗ್ಯಕರ ಪದಾರ್ಥಗಳ ಸೇವನೆ ಮಾಡುವುದು ಮುಖ್ಯ.


    ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕಾಗಿ ಬಲವಾದ ಮೂಳೆಗಳು ಬೇಕು


    ಮತ್ತು ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕಾಗಿ ಬಲವಾದ ಮೂಳೆಗಳು ಅವಶ್ಯಕ. ಮೂಳೆಗಳು ದುರ್ಬಲವಾಗುತ್ತಾ ಹೋದಂತೆ ದೇಹದಲ್ಲಿ ಹಲವು ತೊಂದರೆಗಳು ಕಾಣಿಸಲು ಶುರು ಆಗುತ್ತವೆ. ಯಾಕಾದ್ರೂ ಈ ಜೀವನ ಬೇಕಪ್ಪಾ ಎಂದೆನಿಸುತ್ತದೆ. ಜೀವನವು ದುಃಸ್ವಪ್ನದಂತೆ ಭಾಸವಾಗುತ್ತದೆ.


    ಈ ಮೂಳೆಗಳಲ್ಲಿ ಬೆನ್ನುಹುರಿ ಅತ್ಯಂತ ಬೇಗ ದುರ್ಬಲವಾಗುತ್ತದೆ. ಇದು 30 ನೇ ವಯಸ್ಸಿನಲ್ಲಿ ತನ್ನ ಶಕ್ತಿ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ದುರ್ಬಲ ಬೆನ್ನುಮೂಳೆಯ ಲಕ್ಷಣಗಳು ಯಾವುವು ಎಂದು ನಾವು ಇಲ್ಲಿ ನೋಡೋಣ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಯಾಕೆ ಬೇಕು? ಯಾವ ಪದಾರ್ಥಗಳು ಮೂಳೆಗಳನ್ನು ಬಲಿಷ್ಠಗೊಳಿಸುತ್ತವೆ?


    ದುರ್ಬಲ ಬೆನ್ನುಮೂಳೆಯ ಲಕ್ಷಣಗಳು ಯಾವುವು?


    ಬೆನ್ನುಮೂಳೆ ದುರ್ಬಲಗೊಂಡಾಗ ಕುತ್ತಿಗೆ ನೋವು, ಬೆನ್ನು ನೋವು, ನಡೆಯಲು ತೊಂದರೆ, ಸೊಂಟದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದೇ ವೇಳೆ ನಿಮ್ಮ ಕೈಗಳು, ಪಾದಗಳು ಅಥವಾ ಅಡಿಭಾಗಗಳು ನಿಶ್ಚೇಷ್ಟಿತ ಆಗಬಹುದು. ಹಾಗಾಗಿ 30 ರ ಹರೆಯ ಸಮೀಪಿಸುತ್ತಿದ್ದಂತೆ ಮೊದಲು ನಿಮ್ಮ ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿ.


    ಸಸ್ಯ ಪ್ರೋಟೀನ್


    ಬೆನ್ನುಮೂಳೆ ಬಲಪಡಿಸಲು ಸಸ್ಯಗಳ ಪ್ರೋಟೀನ್ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಮಾಂಸಾಹಾರಿ ಆಹಾರದಿಂದ ಪ್ರೋಟೀನ್ಗಿಂತ ಹೆಚ್ಚು ಪ್ರಯೋಜನಕಾರಿ. ಇದಕ್ಕಾಗಿ ನೀವು ಚಿಯಾ ಬೀಜಗಳು, ಕಾಳುಗಳು ಮತ್ತು ಬೀನ್ಸ್ ಅನ್ನು ಸೇವಿಸಿ.


    ತರಕಾರಿಗಳು


    ತರಕಾರಿಗಳ ಸೇವನೆ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಇದು ಸೊಂಟಕ್ಕೆ ವಿಶೇಷವಾಗಿ ಪ್ರಯೋಜನ ನೀಡುತ್ತದೆ. ಕೆಲವು ಹಸಿರು ತರಕಾರಿಗಳು ಸೊಂಟದ ಸಮಸ್ಯೆ ತೆಗೆದು ಹಾಕುತ್ತದೆ. ಈ ತರಕಾರಿಗಳಲ್ಲಿ ಪಾಲಕ್, ಕೋಸುಗಡ್ಡೆ, ಕೇಲ್ ಇತ್ಯಾದಿಗಳು ಸೇರಿವೆ. ಇದು ಬೆನ್ನುಮೂಳೆಯ ಉರಿಯೂತ ತಡೆಯುತ್ತದೆ.


    ಹಾಲಿನ ಉತ್ಪನ್ನಗಳು


    30 ರ ನಂತರ ಬೆನ್ನುಮೂಳೆಯ ಮೂಳೆಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ ಬೇಕು. ಡೈರಿ ಉತ್ಪನ್ನಗಳು ಕ್ಯಾಲ್ಸಿಯಂನ ಅತ್ಯುತ್ತಮ ಮೂಲ. ಚೀಸ್, ಹಾಲು ಮತ್ತು ಮೊಸರು ತಿನ್ನುವ ಮೂಲಕ ನೀವು ಸಾಕಷ್ಟು ಕ್ಯಾಲ್ಸಿಯಂ ಪಡೆಯಬಹುದು. ಆದರೆ ಅವುಗಳ ಅತಿಯಾಗಿ ಸೇವನೆ ತಪ್ಪಿಸಿ. ನಿಯಮಿತ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಅವುಗಳ ಸೇವನೆ ಬೆನ್ನುಮೂಳೆಯು ಬಲಿಷ್ಠ ಮಾಡುತ್ತದೆ.


    ಗಿಡಮೂಲಿಕೆ


    30 ವರ್ಷಗಳ ನಂತರ, ಖಂಡಿತವಾಗಿ ನಿಮ್ಮ ಆಹಾರದಲ್ಲಿ ಕೆಲವು ಗಿಡಮೂಲಿಕೆ ಸೇರಿಸಿ. ಇದು ಮೂಳೆಗಳಲ್ಲಿ ಉರಿಯೂತ ಉಂಟಾಗದಂತೆ ತಡೆಯುತ್ತದೆ. ಇದಕ್ಕಾಗಿ ನೀವು ಗಿಡಮೂಲಿಕೆ ಚಹಾ ಸೇವಿಸಿ. ಮತ್ತು ಆಹಾರಕ್ಕೆ ಅರಿಶಿನ, ದಾಲ್ಚಿನ್ನಿ, ಶುಂಠಿ, ತುಳಸಿ ಇತ್ಯಾದಿ ಸೇರಿಸಿ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಯಾವ ಗಿಡಮೂಲಿಕೆ ಸೂಕ್ತ? ಇಲ್ಲಿದೆ ಮಾಹಿತಿ


    ಕಪ್ಪು ಹಣ್ಣು


    ಬೆನ್ನುಮೂಳೆಯ ಮೂಳೆಗಳು ಗಟ್ಟಿಯಾಗಲು ತಾಜಾ ಹಣ್ಣು ಸೇವಿಸುವುದು ಪ್ರಯೋಜನಕಾರಿ.ಆದರೆ ಗಾಢ ಬಣ್ಣದ ಹಣ್ಣುಗಳನ್ನು ಮಾತ್ರ ಆರಿಸಿ. ಬೆರ್ರಿ ಹಣ್ಣು ಬೆನ್ನುಮೂಳೆಗೆ ತುಂಬಾ ಪ್ರಯೋಜನಕಾರಿ. ಆದರೆ ಡೈರಿ ಉತ್ಪನ್ನಗಳಂತೆ, ಅದರ ಅತಿಯಾದ ಸೇವನೆ ಹಾನಿಕಾರ. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.

    Published by:renukadariyannavar
    First published: