• Home
  • »
  • News
  • »
  • lifestyle
  • »
  • Online Food: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ತಿನ್ನುವ ಮುನ್ನ ಸ್ವಲ್ಪ ಹುಷಾರಾಗಿರಿ!

Online Food: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ತಿನ್ನುವ ಮುನ್ನ ಸ್ವಲ್ಪ ಹುಷಾರಾಗಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿಗೆ ಕುಳಿತಲ್ಲೇ ಮನೆಯಲ್ಲಿ ಆರ್ಡರ್ ಮಾಡಿಕೊಂಡು ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಂಡು ತಿನ್ನುವ ಪದ್ಧತಿ ಬೆಳೆದಿದೆ. ಆದರೆ ಇದು ಹೇಗೆಲ್ಲಾ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು ತುಂಬಾ ಮುಖ್ಯವಾಗಿದೆ. ಹೊರಗಿನ ಆಹಾರದಲ್ಲಿ ಚೀಸ್ ಬೆಣ್ಣೆ ಹಾಗೂ ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕರ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ತುಂಬಾ ಜನರು (People) ಹೊರಗಿನ ತಿಂಡಿ, ತಿನಿಸು, ಹೋಟೆಲ್ ಊಟವನ್ನೇ (Hotel Food) ಹೆಚ್ಚು ಸೇವನೆ ಮಾಡ್ತಾರೆ. ವೇಗದ ಜೀವನ, ಧಾವಂತದ ಬದುಕಿನಲ್ಲಿ (Life) ಮನೆಯಲ್ಲಿ (Home) ಆಹಾರ ಮಾಡಿ ಸೇವನೆ ಮಾಡಲು ಸಾಧ್ಯವಾಗದ ಸ್ಥಿತಿ... ಇದೆಲ್ಲವೂ ಇಂದು ಹೆಚ್ಚಿನ ಜನರು ಹೊರಗಿನ ಆಹಾರವನ್ನೇ ಆರ್ಡರ್ (Order) ಮಾಡಿ ಸೇವನೆ ಮಾಡುವಂತೆ ಮಾಡಿದೆ. ತುಂಬಾ ಜನರು ಕೆಲಸದ ಹಿನ್ನೆಲೆ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದೇ ಹೊರಗಿನ ತಿಂಡಿ, ತಿನಿಸು, ಊಟವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಹೊರಗೆ ಹೀಗೆ ಆಹಾರ ತಿನ್ನುವುದು ಎಷ್ಟು ಒಳ್ಳೆಯದು ಎಂಬ ಪ್ರಶ್ನೆ ಉದ್ಭವವಾಗುತ್ತದೆ.


    ಆನ್ ಲೈನ್ ಆಹಾರ ಮತ್ತು ಆರೋಗ್ಯ


    ಅದರಲ್ಲೂ ಇತ್ತೀಚೆಗೆ ಕುಳಿತಲ್ಲೇ ಮನೆಯಲ್ಲಿ ಆರ್ಡರ್ ಮಾಡಿಕೊಂಡು, ಆನ್ ಲೈನ್ ನಲ್ಲಿ ಆಹಾರ ತರಿಸಿಕೊಂಡು ತಿನ್ನುವ ಪದ್ಧತಿ ಬೆಳೆದಿದೆ. ಆದರೆ ಇದು ಹೇಗೆಲ್ಲಾ ಜನರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು ತುಂಬಾ ಮುಖ್ಯವಾಗಿದೆ.


    ಮನೆಯಲ್ಲಿ ಹಲವು ಕೆಲಸದ ಧಾವಂತದ ಹಿನ್ನೆಲೆ ಮನೆಯಲ್ಲಿ ಮಾಡಿ ಆಹಾರ ತಿನ್ನುವುದಕ್ಕಿಂತ ಹೊರಗೆ ತಿನ್ನುವುದೇ ಅಥವಾ ಆನ್ ಲೈನ್ ನಲ್ಲಿ ಆರ್ಡರ್ ಮಾಡುವುದೇ ಬೆಟರ್ ಅಂದುಕೊಳ್ಳುವವರೆ ಹೆಚ್ಚು. ಯಾಕಂದ್ರೆ ಆನ್ ಲೈನ್ ನಲ್ಲಿ ತರಿಸುವ ಹೋಟೆಲ್ ತಿಂಡಿ, ಆಹಾರವು ರುಚಿ ಹಾಗೂ ಯಾವುದೇ ಶ್ರಮವಿಲ್ಲದೇ ಮನೆಗೆ ಬಂದು ತಲುಪುತ್ತದೆ.




    ಈಗ ಆನ್‌ಲೈನ್ ಯುಗ. ಜನರು ಮನೆಯಲ್ಲಿ ಕುಳಿತು ಆನ್‌ಲೈನ್‌ ನಲ್ಲಿ ಹೊರಗಿನ ಆಹಾರ ಆರ್ಡರ್ ಮಾಡಿ ತಿನ್ನುತ್ತಾರೆ. ಆದರೆ ಹೀಗೆ ಹೊರಗೆ ಆಹಾರ ತರಿಸಿ ತಿನ್ನುವುದು ಎಷ್ಟೆಲ್ಲಾ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ ಗೊತ್ತಾ?


    ಆಯುರ್ವೇದ ತಜ್ಞ ಡಾ.ಅಂಕಿತ್ ಅವರ ಪ್ರಕಾರ, ಹೊರಗಿನ ಆಹಾರದಲ್ಲಿ ಚೀಸ್, ಬೆಣ್ಣೆ ಹಾಗೂ ಕೊಬ್ಬಿನಂಶ ಹೆಚ್ಚಿರುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕರ. ಜೊತೆಗೆ ದೇಹದೊಳಗೆ ಅಡಚಣೆ, ಕೊಬ್ಬು, ವಿಷ ಉತ್ಪಾದಿಸುತ್ತದೆ. ಇದು ಕೆಲವು ಅಪಾಯಕಾರಿ ರೋಗಗಳು ಉಂಟಾಗಲು ಕಾರಣವಾಗುತ್ತದೆ.


    ಹೆಚ್ಚು ಕೊಬ್ಬುಯುಕ್ತ ಆಹಾರ ಸೇವನೆಯ ಅನಾನುಕೂಲಗಳು ಯಾವುವು?


    ಡಾ. ಅಂಕಿತ್ ಪ್ರಕಾರ, ಆಹಾರದ ಕೊಬ್ಬು ಸ್ಯಾಚುರೇಟೆಡ್ ಕೊಬ್ಬಿನಾಮ್ಲ ಹೊಂದಿದೆ. ಇದು ಕೊಲೆಸ್ಟ್ರಾಲ್, ದೇಹದ ಕೊಬ್ಬು ಮತ್ತು ವಿಷ ಉತ್ಪಾದನೆ ಮಾಡುತ್ತದೆ. ಸ್ಥೂಲಕಾಯ, ಪರಿಧಮನಿಯ ಹೃದಯ ಕಾಯಿಲೆ ಮತ್ತು ಕೆಲವು ರೀತಿಯ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.


    ಸಾಂದರ್ಭಿಕ ಚಿತ್ರ


    ಹೊರಗಿನ ಆಹಾರ ಸೇವನೆಯಿಂದ ಮಧುಮೇಹ, ಕೊಬ್ಬಿನ ಯಕೃತ್ತು ಸಮಸ್ಯೆ, ಹೃದಯಾಘಾತ, ತೂಕ ಹೆಚ್ಚಾಗುವುದು ಮತ್ತು ಬೊಜ್ಜು ಸಮಸ್ಯೆ, ಉದ್ವೇಗ, ತೀವ್ರ ರಕ್ತದೊತ್ತಡದಂತಹ ಕಾಯಿಲೆಗಳು ಉಂಟಾಗುತ್ತವೆ.


    ಹೊರಗಿನ ಆಹಾರ ಸೇವನೆಯಿಂದ ಹೆಚ್ಚುತ್ತದೆ ಸ್ಥೂಲಕಾಯ


    ಆಹಾರದ ಕೊಬ್ಬು ಮೊದಲು ದೇಹದ ಮೇಲೆ ಹಾಗೂ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಹೊರಗಿನ ಆಹಾರ ಸೇವನೆಯು ಮತ್ತಷ್ಟು ಬೊಜ್ಜು ಹೆಚ್ಚಿಸುತ್ತದೆ. ಹಾಗಾಗಿ ದಪ್ಪ ಇರುವವರಿಗೆ ವೈದ್ಯರು ಕೆಲವು ಸಲಹೆ ನೀಡಿದ್ದಾರೆ.


    ಬೊಜ್ಜು ಕಡಿಮೆ ಮಾಡಲು ಈ ಸಲಹೆ ಫಾಲೋ ಮಾಡಿ


    ಸಮತೋಲಿತ ಮತ್ತು ಕಡಿಮೆ ಕ್ಯಾಲೋರಿ ಆಹಾರ ಸೇವನೆ ಮಾಡಿ. ಒಂದು ವಾರದಲ್ಲಿ ವೇಗದ ನಡಿಗೆ, ಜಾಗಿಂಗ್, ಈಜು ಅಥವಾ ಟೆನ್ನಿಸ್‌ ಸೇರಿ 300 ನಿಮಿಷಗಳ ದೈಹಿಕ ಚಟುವಟಿಕೆ ಮಾಡಿ.


    ಇದನ್ನೂ ಓದಿ: ಸ್ನಾನದ ಸಮಯದಲ್ಲಿ ಈ ಸಣ್ಣ ಮಿಸ್ಟೇಕ್ ಮಾಡಿದ್ರೆ ಹೃದಯಾಘಾತವಾಗುತ್ತಂತೆ!


    ಅತಿಯಾಗಿ ಆಹಾರ ಸೇವನೆ ಮಾಡ್ಬೇಡಿ. ನಿಧಾನವಾಗಿ ತಿನ್ನಿರಿ. ಆದಷ್ಟು ಹೊರಗಿನ ಜಂಕ್ ಫುಡ್ ಮತ್ತು ಕರಿದ ಆಹಾರ ಸೇವನೆ ತಪ್ಪಿಸಿ.

    Published by:renukadariyannavar
    First published: