• Home
  • »
  • News
  • »
  • lifestyle
  • »
  • Weight Loss: ಮದುವೆ ಮೊದಲು ತೂಕ ಇಳಿಸಲು ಈ ಪಾನೀಯ ಪರಿಣಾಮಕಾರಿ ಅಂತಾರೆ ಆಯುರ್ವೇದ ತಜ್ಞರು!

Weight Loss: ಮದುವೆ ಮೊದಲು ತೂಕ ಇಳಿಸಲು ಈ ಪಾನೀಯ ಪರಿಣಾಮಕಾರಿ ಅಂತಾರೆ ಆಯುರ್ವೇದ ತಜ್ಞರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮದ್ವೇ ಇದ್ರೆ ಮನೆಯಲ್ಲಿ ತಿಂಗಳ ಮೊದಲೇ ಸಿದ್ಧತೆಗಳು ಆರಂಭ ಆಗುತ್ತವೆ. ಪ್ರತಿಯೊಬ್ಬರೂ ತಮ್ಮ ಇಷ್ಟದ ಬಟ್ಟೆ ಧರಿಸಿ ಮದುವೆಯಲ್ಲಿ ಚೆನ್ನಾಗಿ ಕಾಣ್ಬೇಕು ಅನ್ಕೊಳ್ತಾರೆ. ಆದರೆ ಬೊಜ್ಜಿನ ಸಮಸ್ಯೆ ಇದಕ್ಕೆ ತಣ್ಣೀರೆರಚಿ ಬಿಡುತ್ತದೆ. ಇದಕ್ಕೆಲ್ಲಾ ಚಿಂತೆ ಮಾಡೋದ್ ಬಿಡಿ. ಯಾಕಂದ್ರೆ ಇಲ್ಲಿ ತೂಕ ಇಳಿಕೆಗೆ ಸಹಾಯ ಮಾಡುವ ಕೆಲವು ಪಾನೀಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಇದನ್ನು ಬೆಳಿಗ್ಗೆ ಸೇವಿಸಿದರೆ ವೇಗವಾಗಿ ತೂಕ ಕಡಿಮೆ ಮಾಡಬಹುದು.

ಮುಂದೆ ಓದಿ ...
  • Share this:

    ನವೆಂಬರ್ ತುಳಸಿ ಪೂಜೆಯ (Tulsi Pooja) ನಂತರ ಎಲ್ಲೆಡೆ ಮದುವೆ ಸಮಾರಂಭಗಳ (Marriage Functions) ಸೀಸನ್ (Season) ಶುರುವಾಗುತ್ತದೆ. ಫ್ರೆಂಡ್ಸ್, ಫ್ಯಾಮಿಲಿ (Family), ಸಂಬಂಧಿಕರು ಹೀಗೆ ಹಲವಾರು ಮದುವೆ ಫಂಕ್ಷನ್ಸ್ ಗಳನ್ನು ಅಟೆಂಡ್ ಮಾಡ್ಬೇಕಾಗುತ್ತದೆ. ಮದುವೆ ಸಮಾರಂಭ ಅಂದ್ರೆ ಸುಮ್ನೇನಾ? ಫುಲ್ ರೆಡಿಯಾಗ್ಬೇಕು. ಸೀರೆ ಉಡ್ಬೇಕು, ಚಂದವಾಗಿ ಅಲಂಕಾರ ಮಾಡ್ಬೇಕು. ಅದ್ರಲ್ಲೂ ಹುಡುಗಿಯರು ಸೀರೆಯಲ್ಲಿ, ತಾವು ಹಾಕೋ ಡ್ರೆಸ್ ಗಳಲ್ಲಿ, ಅದರಲ್ಲೂ ಮದ್ವೆ ಸಮಾರಂಭದಲ್ಲಿ ಚೆನ್ನಾಗಿ, ಸುಂದರವಾಗಿ ಕಾಣ್ಬೇಕು ಅಂತಾ ತುಸು ಹೆಚ್ಚೆ ಕಸರತ್ತು ಮಾಡ್ತಾರೆ. ಮದ್ವೇ ತಮ್ಮದಲ್ಲದೇ ಹೋದ್ರೂ ತಯಾರಿ ಜೋರಾಗಿರುತ್ತದೆ. ಎಲ್ಲಾ ಓಕೆ ಆದ್ರೆ ದಪ್ಪ ಆಗಿದ್ರೆ ಮದ್ವೇ ಹತ್ತಿರ ಬರ್ತಿದ್ದಂಗೆ ಹೆಣ್ಣುಮಕ್ಕಳು ವೇಟ್ ಲಾಸ್ ಮಾಡೋಕೆ ಮುಂದಾಗ್ತಾರೆ.


    ಮದುವೆ ಮೊದಲು ವೇಟ್ ಲಾಸ್ ಮಾಡ್ಬೇಕಾ?


    ಮದ್ವೇ ಇದ್ರೆ ಮನೆಯಲ್ಲಿ ತಿಂಗಳ ಮೊದಲೇ ಸಿದ್ಧತೆಗಳು ಆರಂಭ ಆಗುತ್ತವೆ. ಪ್ರತಿಯೊಬ್ಬರೂ ತಮ್ಮ ಇಷ್ಟದ ಬಟ್ಟೆ ಧರಿಸಿ ಮದುವೆಯಲ್ಲಿ ಚೆನ್ನಾಗಿ ಕಾಣ್ಬೇಕು ಅನ್ಕೊಳ್ತಾರೆ.


    ಆದರೆ ಬೊಜ್ಜಿನ ಸಮಸ್ಯೆ ಇದಕ್ಕೆ ತಣ್ಣೀರೆರಚಿ ಬಿಡುತ್ತದೆ. ಯಾಕಂದ್ರೆ ಇಷ್ಟವಾಗಿರೋ ಡ್ರೆಸ್ ಸೈಜ್ ಸಿಗಲ್ಲ. ಸಿಕ್ಕಿರೋ ಡ್ರೆಸ್ ಸರಿ ಕಾಣಲ್ಲ. ಅದ್ರಲ್ಲೂ ಹೊಟ್ಟೆ ಬಂದಿದ್ದರೆ ಡ್ರೆಸ್ ಹಲವು ಬಾರಿ ಹೊಂದಿಕೆಯಾಗಲ್ಲ.




    ತ್ವರಿತ ತೂಕ ನಷ್ಟಕ್ಕೆ ಅತ್ಯಂತ ಪ್ರಯೋಜನಕಾರಿ ಈ ಪಾನೀಯ


    ಇದಕ್ಕೆಲ್ಲಾ ಚಿಂತೆ ಮಾಡೋದ್ ಬಿಡಿ. ಯಾಕಂದ್ರೆ ಇಲ್ಲಿ ತೂಕ ಇಳಿಕೆಗೆ ಸಹಾಯ ಮಾಡುವ ಕೆಲವು ಪಾನೀಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಇದನ್ನು ಬೆಳಿಗ್ಗೆ ಸೇವಿಸಿದರೆ ವೇಗವಾಗಿ ತೂಕ ಕಡಿಮೆ ಮಾಡಬಹುದು. ಮನೆಯಲ್ಲಿ ನೀವು ಮಾಡಿಕೊಳ್ಳುವ ಈ ಪಾನೀಯ ತೂಕ ಇಳಿಕೆಹೆ ಪರಿಣಾಮಕಾರಿ. ತೂಕ ಇಳಿಸುವ ಪಾನೀಯವು ತ್ವರಿತ ತೂಕ ನಷ್ಟಕ್ಕೆ ಅತ್ಯಂತ ಪ್ರಯೋಜನಕಾರಿ ಆಗಿದೆ.


    ಈ ಪಾನೀಯ ದೇಹದಿಂದ ವಿಷವನ್ನು ತೆಗೆದು ಹಾಕುವ ಮೂಲಕ ಚಯಾಪಚಯವನ್ನು ವೇಗಗೊಳಿಸುತ್ತದೆ. ಇದರ ಸಹಾಯದಿಂದ ಮನೆಯಲ್ಲಿ ಹೊಟ್ಟೆಯ ಕೊಬ್ಬು ಕೆಲವೇ ದಿನಗಳಲ್ಲಿ ಕಡಿಮೆ ಆಗುತ್ತದೆ. ತೂಕ ಇಳಿಸುವ ಈ ಪಾನೀಯದ ಪಾಕವಿಧಾನವನ್ನು ಆಯುರ್ವೇದದಲ್ಲೂ ಹೇಳಲಾಗಿದೆ.


    ವೇಟ್ ಲಾಸ್ ಪಾನೀಯ ಹೀಗೆ ತಯಾರಿಸಿ


    ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಅವರ ಪ್ರಕಾರ, ತ್ವರಿತ ತೂಕ ನಷ್ಟ ಪಾನೀಯದ ಬಗ್ಗೆ ಹೇಳಿದ್ದಾರೆ. ತ್ವರಿತ ತೂಕ ಇಳಿಕೆಗೆ ಕೆಲವು ಮನೆಯಲ್ಲೇ ಸಿಗುವ ಪದಾರ್ಥಗಳ ಬಗ್ಗೆ ತಿಳಿಸಿದ್ದಾರೆ. 2 ಲೋಟ ನೀರು, 7-10 ಕರಿಬೇವಿನ ಎಲೆ, 3 ಸೆಲರಿ ಎಲೆ, 1 ಚಮಚ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, 1 ಪುಡಿ ಮಾಡಿದ ಹಸಿರು ಏಲಕ್ಕಿ, ಅರ್ಧ ನಿಂಬೆ ರಸ ಮತ್ತು 1 ಇಂಚಿನ ಶುಂಠಿ ರುಬ್ಬಿರಿ.


    ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ. ನೀರಿಗೆ ನಿಂಬೆ ರಸ ಹೊರತುಪಡಿಸಿ, ಉಳಿದೆಲ್ಲಾ ಪದಾರ್ಥಗಳನ್ನು ಹಾಕಿರಿ. ಈಗ ಈ ಮಿಶ್ರಣವನ್ನು 5 ನಿಮಿಷ ಕುದಿಸಿ. ಪಾನೀಯವನ್ನು ಫಿಲ್ಟರ್ ಮಾಡಿ. ಅದಕ್ಕೆ ನಿಂಬೆ ರಸ ಬೆರೆಸಿ ಕುಡಿಯಿರಿ.


    ಚಹಾದ ಬದಲು ತೂಕ ಇಳಿಸುವ ಪಾನೀಯ ಸೇವಿಸಿ


    ತ್ವರಿತ ತೂಕ ನಷ್ಟಕ್ಕೆ, ನೀವು ಬೆಳಿಗ್ಗೆ ಚಹಾದ ಬದಲಿಗೆ ಈ ಪಾನೀಯ ಸೇವಿಸಬೇಕು ಎಂದು ಡಾ.ದೀಕ್ಷಾ ಭಾವಸರ್ ಹೇಳುತ್ತಾರೆ. ತೂಕ ನಷ್ಟದ ಜೊತೆಗೆ ಇದು ನಿಮಗೆ ಅನೇಕ ಪ್ರಯೋಜನ ನೀಡುತ್ತದೆ. ಚಳಿಗಾಲದಲ್ಲಿ ತೂಕ ನಷ್ಟಕ್ಕೆ ಇದು ಉತ್ತಮ ಆಯುರ್ವೇದ ಪರಿಹಾರವಾ ಆಗಿದೆ.


    ಇದನ್ನೂ ಓದಿ: ಮಧುಮೇಹ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ವ್ಯಾಯಾಮ ಮಾಡದಿರಿ!


    ಕೂದಲು ಉದುರುವುದು ಮತ್ತು ಮಧುಮೇಹ ನಿಯಂತ್ರಣವಾಗುತ್ತದೆ


    ಕೂದಲು ಉದುರುವುದು ತಡೆಯುತ್ತದೆ ಈ ಪಾನೀಯ. ಇದರಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಔಷಧೀಯ ಎಲೆಗಳು ರಕ್ತದ ಸಕ್ಕರೆ ನಿರ್ವಹಿಸಲು ಮತ್ತು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Published by:renukadariyannavar
    First published: