Health Tips: ಹೊಸಬರ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ಈ ಅಂಶಗಳನ್ನು ಗಮನಿಸಲೇ ಬೇಕು!

ಲೈಂಗಿಕ ಸಂಪರ್ಕ ಒಪ್ಪಿಗೆ ಸೂಚಿಸಿದ ನಂತರದಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾರೆ. ಇದು ಅವರ ಮೊದಲ ಭೇಟಿ ಆದ್ದರಿಂದ ಸಹಜವಾಗಿಯೇ ನಾಚಿಕೆ ಇದ್ದೇ ಇರುತ್ತದೆ. ಹೀಗೆ ಹೊಸಬರ ಜೊತೆ ಸೆಕ್ಸ್​ ಮಾಡುವಾಗ ಕೆಲ ಅಂಶಗಳನ್ನು ಗಮನಿಸಲೇಬೇಕು.

news18
Updated:July 10, 2019, 5:12 PM IST
Health Tips: ಹೊಸಬರ ಜೊತೆ ಲೈಂಗಿಕ ಸಂಪರ್ಕ ಮಾಡುವಾಗ ಈ ಅಂಶಗಳನ್ನು ಗಮನಿಸಲೇ ಬೇಕು!
ಪುರುಷರು ಇದನ್ನು ಗಮನಿಸಲೇಬೇಕು. ಬೆಡ್ ರೂಂನಲ್ಲಿ ತಾವೇ ಡಾಮಿನೇಟ್ ಮಾಡಲು ಹೋಗಿ ಕೆಲವೊಮ್ಮೆ ತಮ್ಮ ಸಂಗಾತಿಗೆ ರೊಮ್ಯಾನ್ಸ್ ಮಾಡುವಷ್ಟು ಅವಕಾಶ ನೀಡದೇ ಇದ್ದಾಗ ಲೈಂಗಿಕ ಕ್ರಿಯೆಯ ಅವಧಿ ಕಡಿಮೆಯಾಗುವುದು. ಕೆಲ ಹೊತ್ತು ನಿಮ್ಮ ಸಂಗಾತಿಗೂ ರೊಮ್ಯಾನ್ಸ್ ಮಾಡಲು ಅವಕಾಶ ಕೊಡಿ.
  • News18
  • Last Updated: July 10, 2019, 5:12 PM IST
  • Share this:
ಲೈಂಗಿಕ ಸಂಪರ್ಕ ಎಂಬುದು ಮನುಷ್ಯನಿಗೆ ಅತಿ ಮುಖ್ಯವಾದುದು. ಇದನ್ನು ಅನೇಕರು ಮಂಡಿವಂತಿಕೆಯಿಂದ ನೋಡಿದರೆ ಇನ್ನೂ ಕೆಲವರು ಇದನ್ನು ಸಾಮಾನ್ಯವಾಗಿ ಸ್ವೀಕರಿಸುತ್ತಾರೆ. ಪ್ರೀತಿಯಲ್ಲಿದ್ದಾಗ ಕೆಲವರು ಲೈಂಗಿಕ ಸಂಪರ್ಕ ಹೊಂದುತ್ತಾರೆ. ಇನ್ನೂ ಕೆಲವು ವ್ಯಕ್ತಿಗಳು ಪರಸ್ಪರ ಒಪ್ಪಿಗೆ ಮೇರೆಗೆ ದೇಹದ ವಾಂಛೆಗಳ ಈಡೇರಿಕೆಗೆ ಸೆಕ್ಸ್​​​ ಮಾಡುತ್ತಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಹೊಸಬರ ಪರಿಚಯವಾಗುತ್ತದೆ. ಅಲ್ಲಿಯೇ ಚಾಟಿಂಗ್​, ಫ್ಲರ್ಟಿಂಗ್​ ನಡೆಯುತ್ತದೆ ಕೂಡ. ಹೀಗೆ ಸಂದೇಶ ರವಾನೆಯಾಗುವಾಗ ಕೆಲವರು ಲೈಂಗಿಕ ಕ್ರಿಯೆ ಬಗ್ಗೆ ಮಾತನಾಡಿಕೊಂಡಿರುತ್ತಾರೆ. ಒಬ್ಬರಿಗೊಬ್ಬರು ಲೈಂಗಿಕ ಸಂಪರ್ಕಹೊಂದಲು ಅಲ್ಲಿಯೇ ಒಪ್ಪಿಗೆ ಸೂಚಿಸುತ್ತಾರೆ ಕೂಡ.

ಹೀಗೆ ಒಪ್ಪಿಗೆ ಸೂಚಿಸಿದ ನಂತರದಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾರೆ. ಇದು ಅವರ ಮೊದಲ ಭೇಟಿ ಆದ್ದರಿಂದ ಸಹಜವಾಗಿಯೇ ನಾಚಿಕೆ ಇದ್ದೇ ಇರುತ್ತದೆ. ಹೀಗೆ ಹೊಸಬರ ಜೊತೆ ಸೆಕ್ಸ್​ ಮಾಡುವಾಗ ಕೆಲ ಅಂಶಗಳನ್ನು ಗಮನಿಸಲೇಬೇಕು.

ನಾಚಿಕೆ ಬಿಡಿ:

ನೀವು ಚಾಟಿಂಗ್​ನಲ್ಲಿ, ವಿಡಿಯೋ ಕಾಲ್​ಗಳಲ್ಲಿ ಒಂದು ಹುಡುಗಿಯ ಜೊತೆ ಸೆಕ್ಸ್​ ಬಗ್ಗೆ ಮಾತನಾಡಿರಬಹುದು. ಈ ವೇಳೆ ಕಾಡದ ನಾಚಿಕೆ ಅವರು ಎದುರು ಬಂದಾಗ ಆಗುತ್ತದೆ. ನಿಮಗೆ ಮಾತೇ ಹೊರಡುವುದಿಲ್ಲ. ಇಂಥ ಸಂದರ್ಭದಲ್ಲಿ ನಾಚಿಕೆ ಬಿಟ್ಟು ಆದಷ್ಟು ಸಾಮಾನ್ಯವಾಗಿ ವರ್ತಿಸಿ.

ಸೆಕ್ಸ್​ ಮಾಡುವ ಭರದಲ್ಲಿ ಪ್ರೀತಿಸುವುದನ್ನು ಮರೆಯಬೇಡಿ:

ಕೆಲವರಿಗೆ ಲೈಂಗಿಕ ಸಂಪರ್ಕ ಹೊಂದುವುದೇ ಉದ್ದೇಶವಾಗಿರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ಹುಡುಗಿ ಸಂತೋಷಗೊಳ್ಳದೆಯೂ ಇರಬಹುದು! ಹೌದು, ಸೆಕ್ಸ್​ ಮಾಡುವಾಗ ನಿಮ್ಮ ಹುಡುಗಿಯನ್ನು ಸಾಕಷ್ಟು ಮುದ್ದಿಸಬೇಕು. ಅಂದಾಗ ಮಾತ್ರ ನಿಮ್ಮ ಹುಡುಗಿ ಸಂತೋಷ ಹೊಂದಲು ಸಾಧ್ಯ. ಹುಡುಗಿಯರೂ ಅಷ್ಟೇ ಹುಡಗನಿಗೆ ಸಾಕಷ್ಟು ಪ್ರೀತಿ ನೀಡಬೇಕು. ಆಗ, ಆತನೂ ಸಂತುಷ್ಟ ಗೊಳ್ಳುತ್ತಾನೆ.ಹಿತಕರ ವಾತಾವರಣ ಸೃಷ್ಟಿಸಿ:

ಹುಡುಗ-ಹುಡುಗಿ ಒಬ್ಬರನ್ನೊಬ್ಬರು ಭೇಟಿ ಮಾಡಿದಾಗ ಹಿತರಕರ ವಾತಾವರಣ ಸೃಷ್ಟಿಯಾಗಬೇಕು. ಇಲ್ಲದಿದ್ದರೆ ಸಂಪೂರ್ಣ ಬೆಡ್​ರೂಂ ನಿಮಗೆ ಮುಳ್ಳಿನ ಮಂಚದಂತೆ ಕಾಣಬಹುದು. ಇಬ್ಬರಿಗೂ ಕಂಪರ್​ಟೆಬಲ್​ ಫೀಲ್​ ಸೃಷ್ಟಿಯಾದರೆ ನೀವು ಹೆಚ್ಚು ತೃಪ್ತಿ ಹೊಂದುವುದರಲ್ಲಿ ಆಶ್ವರ್ಯವಿಲ್ಲ.

ಪರಸ್ಪರ ಗೌರವಿಸಿ:

ನೀವು ಹೊಸಬರ ಜೊತೆಗೇ ಸೆಕ್ಸ್​ ಮಾಡುತ್ತಿರಬಹುದು. ಈ ಭೇಟಿ ನಂತರ ಅವರು ನಿಮಗೆ ಸಿಗದೆಯೂ ಇರಬಹುದು. ಆದಗ್ಯೂ, ನೀವು ಒಬ್ಬರನ್ನೊಬ್ಬರು ಗೌರವಿಸಬೇಕು. ಅವರ ಕಷ್ಟ ಸುಖಗಳನ್ನು ಆಲಿಸಬೇಕು.

ನಿಧಾನಕ್ಕೆ ಆವರಿಸಿ:

ಸೆಕ್ಸ್​ ಎಂದಾಕ್ಷಣ ಮನೆ ಪ್ರವೆಶೀಸಿದ ಕೂಡಲೇ ಅವರನ್ನು ಆವರಿಸಿದರೆ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು. ಹಾಗಾಗಿ ಸಮಯ ಎಷ್ಟೇ ಕಡಿಮೆ ಇದ್ದರೂ ನೀವು ನಿಮ್ಮ ಹುಡುಗಿಯನ್ನು ನಿಧಾನವಾಗಿಯೇ ಆವರಿಸಬೇಕು.

ನಂಬಿಕೆ ಮುಖ್ಯ:

ಒಬ್ಬರನ್ನೊಬ್ಬರು ಸೇರುವಾಗ ಇಬ್ಬರಲ್ಲೂ ನಂಬಿಕೆ ಎನ್ನುವುದು ತುಂಬಾನೇ ಮುಖ್ಯ. ಹಾಗಾಗಿ, ನಂಬಿಕೆ ಇಲ್ಲದಿದ್ದರೆ ನೀವು ಸೆಕ್ಸ್​​ ಮಾಡುವ ನಿರ್ಧಾರಕ್ಕೆ ಬರದೆ ಇದ್ದರೆ ಒಳಿತು!

Published by: Rajesh Duggumane
First published: July 10, 2019, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading