Heart Care: ಆಂಜಿಯೋಪ್ಲಾಸ್ಟಿಗೆ ಒಳಗಾಗುವ ಮುನ್ನ ಈ ಅಂಶಗಳು ನಿಮ್ಮ ಮನಸ್ಸಿನಲ್ಲಿರಲಿ..!

ಒಬ್ಬ ವ್ಯಕ್ತಿಯು ಉಸಿರಾಟ ತೊಂದರೆ, ಎದೆನೋವು, ಆಯಾಸ ಹೀಗೆ ಇನ್ನಿತರ ರೋಗ ಲಕ್ಷಣಗಳನ್ನು ಎದುರಿಸುತ್ತಿದ್ದರೆ, ಆತ ಹೃದಯಾಘಾತದ ಅಪಾಯ ಎದುರಿಸುತ್ತಿದ್ದಾನೆ ಎಂದರ್ಥ

ಹೃದಯ

ಹೃದಯ

  • Share this:

ಕಳಪೆ ಆಹಾರ ಪದ್ಧತಿ, ಜಂಕ್ ಫುಡ್ ಸೇವನೆ, ಅಕಾಲಿಕ ನಿದ್ರೆ, ಅನಿಯಮಿತ ವ್ಯಾಯಾಮ ಇವೆಲ್ಲವೂ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಅಂದರೆ ಹೃದಯ ಸಂಬಂಧಿ ಕಾಯಿಲೆಗಳು, ಹೊಟ್ಟೆನೋವು - ಇನ್ನಿತರ ರೋಗಗಳು ದೇಹವನ್ನು ಬಾಧಿಸುತ್ತದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಹೃದಯವೇ ದೇಹದ ಮುಖ್ಯ ಅಂಗಗಳಲ್ಲೊಂದು. ಒಂದು ಸೆಕೆಂಡ್ ಹೃದಯ ತನ್ನ ಕಾರ್ಯ ನಿಲ್ಲಿಸಿದರೆ ಆ ಮನುಷ್ಯನ ಗತಿ ಏನಾಗಬೇಡ ಹೇಳಿ. ಹಾಗಾಗಿ ಹೃದಯದ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದು ಮುಖ್ಯ.ಒಬ್ಬ ವ್ಯಕ್ತಿಯು ಉಸಿರಾಟ ತೊಂದರೆ, ಎದೆನೋವು, ಆಯಾಸ ಹೀಗೆ ಇನ್ನಿತರ ರೋಗ ಲಕ್ಷಣಗಳನ್ನು ಎದುರಿಸುತ್ತಿದ್ದರೆ, ಆತ ಹೃದಯಾಘಾತದ ಅಪಾಯ ಎದುರಿಸುತ್ತಿದ್ದಾನೆ ಎಂದರ್ಥ. ಆ ವ್ಯಕ್ತಿಯ ಅಪಧಮನಿಯಲ್ಲಿ ತೀವ್ರವಾದ ತೊಂದರೆ ಇದ್ದರೆ ಅದನ್ನು ಆಂಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು.


ಆಂಜಿಯೋಪ್ಲಾಸ್ಟಿ ಒಂದು ಪ್ರಕ್ರಿಯೆಯಾಗಿದ್ದು, ಶಸ್ತ್ರಚಿಕಿತ್ಸೆ ಇಲ್ಲದೆ ರೋಗಿಯಲ್ಲಿ ಸ್ಟಂಟ್ ಅಳವಡಿಸಲಾಗುತ್ತದೆ. ಆದರೆ ಕೆಲವೊಮ್ಮೆ ಸ್ಟಂಟ್ ಅಳವಡಿಸಿದ ನಂತರವೂ ಕೆಲವು ಸಮಸ್ಯೆಗಳು ಎದುರಾಗಬಹುದು. ಅಧ್ಯಯನದ ಪ್ರಕಾರ, ಲೋಹದ ಸ್ಟಂಟ್ ಅಳವಡಿಸಿದ ನಂತರವೂ ಶೇ. 15 ರಿಂದ 30ರಷ್ಟು ಮರಳಿ ಬರುವ ಸಾಧ್ಯತೆ ಇರುತ್ತದೆ. ಇದಲ್ಲದೇ ರೋಗಿಯು ರಕ್ತವನ್ನು ತೆಳುವಾಗಿಸುವ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಇದು ಅವರ ಆರೋಗ್ಯದ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀಳಬಹುದು.


ಹಾಗಾಗಿ ಹೃದಯ ಸಂಬಂಧಿ ಚಿಕಿತ್ಸೆಯಾದ ಆಂಜಿಯೋಪ್ಲಾಸ್ಟಿಗೆ ಒಳಗಾಗುವುದಕ್ಕಿಂತ ನಾವೇ ಕೆಲವೊಂದು ಉತ್ತಮ ಅಭ್ಯಾಸದ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. ಆಂಜಿಯೋಪ್ಲಾಸ್ಟಿ, ಶಸ್ತ್ರಚಿಕಿತ್ಸೆಯಿಂದ ದೂರವಿರಬಹುದು.


1. ವಾಹನ ಚಾಲನೆ ಬೇಡ
ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಿನ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಹಾಗಾಗಿ ಕೆಲವು ವಾರಗಳವರೆಗೆ ವಾಹನ ಚಾಲನೆಯಿಂದ ದೂರವಿರಿ. ಅದರಲ್ಲೂ ದೂರದ ಪ್ರಯಾಣ ಬೇಡವೇ ಬೇಡ.


2. ಒತ್ತಡದಿಂದ ದೂರವಿರಿ
ಆಧುನಿಕ ಜೀವನಶೈಲಿ ಅಧಿಕ ಒತ್ತಡವನ್ನು ತಂದೊಡ್ಡುತ್ತದೆ. ತೀವ್ರವಾದ ಒತ್ತಡ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಯೋಗ, ಧ್ಯಾನ ಇನ್ನಿತರ ಉತ್ತಮ ಆರೋಗ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳವ ಮೂಲಕ ಒತ್ತಡದಿಂದ ದೂರವಿರಲು ಪ್ರಯತ್ನಿಸಿ.


3. ಅಧಿಕ ಆಯಾಸ ನೀಡುವ ವ್ಯಾಯಾಮಗಳಿಂದ ದೂರವಿರಿ
ವ್ಯಾಯಾಮ ದೇಹದ ಆರೋಗ್ಯಕ್ಕೆ ಒಳ್ಳೆಯದು. ಆದರೆ ವ್ಯಾಯಾಮದ ಮೂಲಕ ದೇಹಕ್ಕೆ ಅಧಿಕ ಆಯಾಸ ನೀಡುವುದು ಒಳ್ಳೆಯದಲ್ಲ. ಅಂದರೆ ಮೆಟ್ಟಿಲು ಹತ್ತುವುದು, ಇಳಿಯವುದು, ಅಧಿಕ ಭಾರ ಎತ್ತುವ ವ್ಯಾಯಾಮಗಳಿಂದ ದೂರವಿರಿ. ಯಾವ ರೀತಿಯ ವ್ಯಾಯಾಮ ಒಳ್ಳೆಯದು ಎಂಬುದರ ಬಗ್ಗೆ ನಿಮ್ಮ ವೈದ್ಯರನ್ನು ಸಂಪರ್ಕಿಸಿದರೆ ಇನ್ನೂ ಉತ್ತಮ.


4. ವೈದ್ಯರು ಹೇಳಿದ ಡಯಟ್ ಅನುಸರಿಸಿ
ಮನಸ್ಸೋ ಇಚ್ಛೆ ಡಯಟ್ ಮಾಡುವುದು ಒಳ್ಳೆಯದಲ್ಲ. ಇದು ಕೂಡ ತೊಂದರೆ ತಂದೊಡ್ಡಬಹುದು. ಹಾಗಾಗಿ ವೈದ್ಯರ ಸಲಹೆಯ ಮೂಲಕ ಉತ್ತಮ ಡಯಟ್ ಅನುಸರಿಸಿ


5. ಮದ್ಯಪಾನ, ಧೂಮಪಾನ ತ್ಯಜಿಸಿ
ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಎಂಬ ಘೋಷಣೆಯ ಬಗ್ಗೆ ಅರಿತು, ಇದರಿಂದ ದೂರವಿದ್ದರೆ, ಹೃದಯ ಸಂಬಂಧಿ ಹಾಗೂ ಇತರೆ ಎಲ್ಲಾ ರೋಗಗಳಿಂದ ದೂರವಿರಬಹುದು.


Published by:Seema R
First published: