Waxing Care: ಮುಖದಲ್ಲಿನ ಅನಗತ್ಯ ಕೂದಲು ವ್ಯಾಕ್ಸಿಂಗ್ ಮಾಡುವ ಮೊದಲು ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ

ಕೆಲವರು ಮುಖದ ಮೇಲೆ ವ್ಯಾಕ್ಸಿಂಗ್ ಮಾಡುವುದು ಕೂದಲು ತೆಗೆಯಲು ಸರಿಯಾದ ಮಾರ್ಗವಲ್ಲ ಎಂದು ಹೇಳುತ್ತಾರೆ. ಆದರೂ ಸಹ ಇತ್ತೀಚಿನ ದಿನಗಳಲ್ಲಿ ಮುಖದ ವ್ಯಾಕ್ಸಿಂಗ್ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚೆಗೆ ಮಹಿಳೆಯರಲ್ಲಿ (Women’s) ಮುಖದ ಕೂದಲು (Face Hair) ತೆಗೆಯುವುದು ಸಾಮಾನ್ಯ ವಿಷಯವಾಗಿದೆ (Thing). ಮುಖದ ಅಂದ ಹೆಚ್ಚಿಸಲು ಮತ್ತು ಕಾಪಾಡಲು ಕೂದಲು ತೆಗೆಯುವುದು ಮಾಮೂಲಿ ಸಂಗತಿಯಾಗಿದೆ. ವ್ಯಾಕ್ಸಿಂಗ್ (Waxing) ಮಾಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸ್ವಚ್ಛ (Clean) ಮತ್ತು ಸುಂದರ ನೋಟ ಪಡೆಯಲು ಮಹಿಳೆಯರು ತಮ್ಮ ಮುಖದಿಂದ ಅನಗತ್ಯ ಕೂದಲು ತೆಗೆದು ಹಾಕುತ್ತಾರೆ. ಇದು ಸಾಮಾನ್ಯವಾಗಿ ಹುಬ್ಬು, ಕೆನ್ನೆ, ತುಟಿಯ ಮೇಲ್ಭಾಗ, ಗದ್ದ, ಹಣೆ ಭಾಗಗಳು ಬಳಿ ಹೆಚ್ಚು ಕೂದಲು ಬೆಳೆಯುತ್ತದೆ. ಆದರೆ, ನಮ್ಮ ಮುಖವು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಮತ್ತು ಇಲ್ಲಿ ಕೂದಲನ್ನು ವ್ಯಾಕ್ಸಿಂಗ್ ಮಾಡುವುದರಿಂದ ಮುಖಕ್ಕೆ ಹಾನಿಯಾಗುವ ಸಾಧ್ಯತೆಯೂ ಇದೆ.

    ಮುಖದ ಕೂದಲು ವ್ಯಾಕ್ಸಿಂಗ್ ಮಾಡುವುದು

    ಕೆಲವರು ಮುಖದ ಮೇಲೆ ವ್ಯಾಕ್ಸಿಂಗ್ ಮಾಡುವುದು ಕೂದಲು ತೆಗೆಯಲು ಸರಿಯಾದ ಮಾರ್ಗವಲ್ಲ ಎಂದು ಹೇಳುತ್ತಾರೆ. ಆದರೂ ಸಹ ಇತ್ತೀಚಿನ ದಿನಗಳಲ್ಲಿ ಮುಖದ ವ್ಯಾಕ್ಸಿಂಗ್ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.

    ಮುಖದ ಮೇಲೆ ಕಾಣಿಸಿಕೊಳ್ಳುವ ಬೇಡದ ಕೂದಲು ಮುಖದ ಅಂದವನ್ನು ಹಾಳು ಮಾಡುತ್ತದೆ ಎಂದು ಕೆಲವರ ನಂಬಿಕೆ. ಈ ಕೂದಲನ್ನು ತೊಡೆದು ಹಾಕಲು ಮಹಿಳೆಯರಿಗೆ ಕೇವಲ ಎರಡು ಆಯ್ಕೆಗಳಿವೆ. ಮುಖ ವ್ಯಾಕ್ಸಿಂಗ್ ಮತ್ತು ಲೇಸರ್ ಚಿಕಿತ್ಸೆ. ಲೇಸರ್ ಚಿಕಿತ್ಸೆಯು ದುಬಾರಿಯಾಗಿದೆ. ಹಾಗಾಗಿ ಮಹಿಳೆಯರು ಫೇಸ್ ವ್ಯಾಕ್ಸಿಂಗ್ ವಿಧಾನವನ್ನು ಆರಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!

    ಫೇಸ್ ವ್ಯಾಕ್ಸಿಂಗ್ ಸಮಯದಲ್ಲಿ ಜಾಗ್ರತೆ ವಹಿಸಿ

    ಮುಖದ ವ್ಯಾಕ್ಸಿಂಗ್ ಹಾಗೂ ದೇಹದ ಬೇರೆ ಭಾಗಕ್ಕೆ ವ್ಯಾಕ್ಸಿಂಗ್ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಸೌಂದರ್ಯ ತಜ್ಞೆ ಭಾರತಿ ತನೇಜಾ. ಫೇಸ್ ವ್ಯಾಕ್ಸಿಂಗ್ ಸಮಯದಲ್ಲಿ ಏನಾದರೂ ಸ್ವಲ್ಪ ಎಡವಿದರೂ ನಿಮ್ಮ ಮುಖ ಹಾಳು ಮಾಡುತ್ತದೆ. ಹಾಗಾಗಿ ವ್ಯಾಕ್ಸಿಂಗ್ ಮಾಡುವ ಮೊದಲು, ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದು ತುಂಬಾ ಮುಖ್ಯ.

    ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಮುಖದ ವ್ಯಾಕ್ಸಿಂಗ್ ಅನ್ನು ನೀವೇ ಮಾಡಿಕೊಳ್ಳಬೇಡಿ. ಮುಖದ ಚರ್ಮವು ಎಡವಿದರೂ ಸುಟ್ಟು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಯಾವಾಗಲೂ ಹೆಚ್ಚು ಜಾಗ್ರತೆ ವಹಿಸಿ.

    ಚರ್ಮಕ್ಕೆ ಅನುಗುಣವಾಗಿ ಫೇಸ್ ವ್ಯಾಕ್ಸಿಂಗ್ ಮಾಡಿ

    - ನಿಮ್ಮ ಚರ್ಮಕ್ಕೆ ಅನುಗುಣವಾಗಿ ಫೇಸ್ ವ್ಯಾಕ್ಸ್ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಪ್ರತಿಯೊಬ್ಬ ಮಹಿಳೆಯ ಚರ್ಮದ ಪ್ರಕಾರವು ಸಾಕಷ್ಟು ವಿಭಿನ್ನವಾಗಿರುತ್ತದೆ.

    - ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾದ ಒಳ್ಳೆಯ ಉತ್ಪನ್ನಗಳನ್ನು ಬಳಕೆ ಮಾಡಿ.

    - ಫೇಸ್ ವ್ಯಾಕ್ಸಿಂಗ್ ಮಾಡುವ ಮೊದಲು, ಶುದ್ಧ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ.

    - ಸ್ಕ್ರಬ್ ಅಥವಾ ಬ್ಲೀಚ್ ಮಾಡಿದ ನಂತರ ಮುಖದ ವ್ಯಾಕ್ಸಿಂಗ್ ಮಾಡಲು ಮರೆಯಬೇಡಿ. ನೀವು ಮೊದಲು ಸ್ಕ್ರಬ್ ಅಥವಾ ಬ್ಲೀಚ್ ಮಾಡಿದ್ದರೆ, ನಂತರ 12 ಗಂಟೆಗಳ ನಂತರ ಫೇಸ್ ವ್ಯಾಕ್ಸಿಂಗ್ ಮಾಡಿ.

    - ನೀವು ಮುಖದ ವ್ಯಾಕ್ಸಿಂಗ್ ಮಾಡಿದ್ದರೆ, ನಂತರ 12 ಗಂಟೆಗಳ ನಂತರ ಸ್ಕ್ರಬ್ ಅಥವಾ ಬ್ಲೀಚ್ ಮಾಡಿ.

    - ಕೂದಲು ಬೆಳವಣಿಗೆಯ ಮಾದರಿಯನ್ನು ಅರ್ಥ ಮಾಡಿಕೊಂಡ ನಂತರವೇ ವ್ಯಾಕ್ಸಿಂಗ್ ಮಾಡಬೇಕು. ಅನಗತ್ಯ ಕೂದಲಿನ ಬೆಳವಣಿಗೆ ಕಡಿಮೆಯಿದ್ದರೆ, ಥ್ರೆಡ್ ಮಾಡುವುದು ಸೂಕ್ತ.

    ಇದನ್ನೂ ಓದಿ: ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

    - ವ್ಯಾಕ್ಸಿಂಗ್ ಮಾಡುವಾಗ ದಿಕ್ಕನ್ನು ನೆನಪಿಡಿ. ತುಂಬಾ ಜರ್ಕಿಯಾಗಿ ಎಳೆಯಬೇಡಿ.

    - ಮುಖವನ್ನು ವ್ಯಾಕ್ಸಿಂಗ್ ಮಾಡಿದ ನಂತರ, ರಂಧ್ರಗಳನ್ನು ಮುಚ್ಚಲು ಐಸಿಂಗ್ ಬಳಸಿ. ಅದರ ನಂತರ ಮಾಯಿಶ್ಚರೈಸರ್ ಮತ್ತು ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ.
    Published by:renukadariyannavar
    First published: